spot_img
Wednesday, June 19, 2024
spot_imgspot_img
spot_img
spot_img

ಕೃಷಿ ಬದುಕಿಗೆ ಖುಷಿ ಕೊಟ್ಟ ಡ್ರ್ಯಾಗನ್ ಹಣ್ಣು: ಬಂಟ್ವಾಳದ ಈ ದಂಪತಿಯ ಮೊಗದಲ್ಲಿ ಸಿಹಿ ತಂದ ಡ್ರ್ಯಾಗನ್

ಕಂಬದ ಸುತ್ತ ಜಡೆಯಂತೆ ಇಳಿದ ಹಸಿರು ಬೀಳುಗಳು.. ಅದರ ನಡುವೆ ನೇತಾಡುವ ಕೆಂಪು ಕೆಂಪಾದ ಹಣ್ಣುಗಳು ಈ ಹಣ್ಣಿನ ಬಗ್ಗೆ ಇತ್ತೇಚೆಗಿನ ದಿನಗಳಲ್ಲಿ ಬಹಳಷ್ಟು ಮಂದಿ ತಿಳಿದಿರಬಹುದು. ಆದರೆ ಅದರ ರುಚಿ ನೋಡಿದವರು ಹೆಚ್ಚು ಮಂದಿ ಇರಲಾರರು.
ಇದೊಂದು ವಿದೇಶಿ ಹಣ್ಣು. ಈಗಷ್ಟೇ ಕೃಷಿಕರ ಜಮೀನುಗಳನ್ನು ಪ್ರವೇಶಿಸಿದೆ. ನೆಲ-ಜಲ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ ಹಣ್ಣು ಪ್ರಿಯರನ್ನು ಆಕರ್ಷಿಸುತ್ತಿವೆ. ಇದೇ ಡ್ರ‍್ಯಾಗನ್ ಫ್ರೂಟ್. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹಣ್ಣನ್ನು ರೈತರು ಬೆಳೆಯಲಾರಂಭಿಸಿದ್ದಾರೆ. ಅಲ್ಲದೆ ಉತ್ತಮ ಇಳುವರಿ ಹಾಗೂ ಒಳ್ಳೆಯ ಆದಾಯವನ್ನು ಪಡೆಯುತ್ತಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಲೊರೆಟ್ಟೊ ಸಮೀಪದ ಕುಪ್ರಾಡಿಯ ಒಲಿವರ್ ಡಿಸೋಜ ಹಾಗೂ ಲೀನಾ ಗೊನ್ಸಾಲ್ವಿಸ್ ದಂಪತಿಯ ಮೊಗದಲ್ಲಿ ಈ ಹಣ್ಣು ಸಂತಸ ತಂದಿದೆ.

ಒಲಿವರ್ ಮತ್ತು ಲೀನ ಅವರು ಏಳು ಎಕರೆ ಭೂಮಿಯನ್ನು ಹೊಂದಿದ್ದು ಇತ್ತೀಚೆಗೆ ಡ್ರ‍್ಯಾಗನ್ ಫ್ರುಟ್ ಅವರನ್ನು ಆಕರ್ಷಿಸಿತ್ತು. ಅದರ ಬಗ್ಗೆ ಕುತೂಹಲ ಹೆಚ್ಚಾಯಿತು. ಸಮೀಪದಲ್ಲಿರುವ ರಾಯಿಯ ಭೂಮಿಕಾ ನರ್ಸರಿಯಿಂದ ಮೂರು ಗಿಡಗಳನ್ನು ತಂದು ನೆಟ್ಟಿದ್ದರು. ಉತ್ತಮವಾಗಿ ಬೆಳೆದು ಒಂದೇ ವರ್ಷದಲ್ಲಿ ಹೂವು, ಕಾಯಿ, ಹಣ್ಣುಗಳನ್ನು ನೀಡಲಾರಂಭಿಸಿತು. ಮತ್ತಷ್ಟು ಗಿಡ ನೆಡುವ ಮನಸ್ಸಾಯಿತು. ತೋಟದ ಸಮೀಪವೇ ಇನ್ನೂರಕ್ಕೂ ಹೆಚ್ಚು ಗಿಡಗಳನ್ನು ತಂದು ನೆಟ್ಟರು. ಮೊದಲ ವರ್ಷದಲ್ಲಿ ಹಣ್ಣು ಬಿಟ್ಟಿತು. ಆರಂಭದಲ್ಲಿ ಸುತ್ತಮುತ್ತಲಿನವರಿಗೆ ನೀಡ ಸಂಭ್ರಮಪಟ್ಟರು. ಮತ್ತೆ ಈ ಹಣ್ಣಿಗೆ ಬೇಡಿಕೆಗಳು ಬರಲಾರಂಭಿಸಿದವು.

 ನಾಟಿ: ಈ ಗಿಡಗಳನ್ನು ಗಿಡದಿಂದ ಗಿಡಕ್ಕೆ ೮ ಅಡಿ ಅಂತರ ಹಾಗೂ ಸಾಲಿನಿಂದ ಸಾಲಿಗೆ 1೦ ಅಡಿ ಅಂತರವಿಟ್ಟು ನಾಟಿ ಮಾಡಲಾಗಿದೆ. ಆಧಾರವಾಗಿ ಸಿಮೆಂಟ್ ಕಂಬಗಳನ್ನು ಬಳಸಿಕೊಳ್ಳಲಾಗಿದೆ. ಸಂಪೂರ್ಣವಾಗಿ ಸಾವಯವದಲ್ಲೇ ಈ ಹಣ್ಣನ್ನು ಬೆಳೆಯುತ್ತಿದ್ದಾರೆ. ಮರಳು, ತೆಂಗಿನ ನಾರು-ಪುಡಿ, ಸಿಪ್ಪೆ ಸುಡುಮಣ್ಣು ಹಾಕಿ ನಾಟಿ ಮಾಡಿದ್ದಾರೆ. ಕುರಿ ಗೊಬ್ಬರ, ಕೋಳಿ ಗೊಬ್ಬರ ಈ ಗಿಡಗಳಿಗೆ ಪೋಷಕಾಂಶವಾಗಿ ವರ್ಷದಲ್ಲಿ ಎರಡು ಮೂರು ಬಾರಿ ನೀಡುತ್ತಿದ್ದಾರೆ. ನೀರು ಹೆಚ್ಚು ಬೇಕಾಗಿಲ್ಲ. ಸರಿಯಾಗಿ ಬಿಸಿಲು, ಗಾಳಿ ಬೆಳಕು ಬೀಳುವಲ್ಲಿ ಅಧಿಕ ಇಳುವರಿ, ನೆರಳಿರುವಲ್ಲಿ ಕಡಿಮೆ ಫಸಲು. ಒಂದು ಗಿಡದಲ್ಲಿ 3-4 ಕೆಜಿ ಹಣ್ಣು ಬರುತ್ತದೆ. ಮಾರ್ಚ್ ನಿಂದ ಅಕ್ಟೋಬರ್‌ವರೆಗೆ ಸುಮಾರು ೭ ಕೊಯ್ಲು ಮಾಡಬಹುದು. ಎನ್ನುತ್ತಾರೆ ಒಲಿವರ್

ಮಾರುಕಟ್ಟೆ ಸಮಸ್ಯೆ ಇಲ್ಲ
ಹಣ್ಣು ಸ್ವಲ್ಪ ಸಿಹಿ, ಸ್ವಲ್ಪ ಹುಳಿ. ರುಚಿಕರವಾದ ಹಣ್ಣು. ಹೊರಗೆ ಗುಲಾಬಿ ಬಣ್ಣದಿಂದ ಆಕರ್ಷಕ. ಒಳಗೆ ಬಿಳಿ, ಕೆಂಪು, ಹಳದಿ ಬೇರೆ ಬೇರೆ ವಿಧದ ಬಣ್ಣ. ಕಪ್ಪು ಬೀಜಗಳು. ದೇಹಕ್ಕೆ ಬೇಕಾದ ಜೀವಸತ್ವಗಳು ಮತ್ತು ಖನಿಜಗಳು ಈ ಹಣ್ಣಿನಲ್ಲಿ ಹೇರಳವಾಗಿದ್ದು ಕ್ಯಾನ್ಸರ್, ಮಧುಮೇಹ, ಹೃದಯ ರೋಗಗಳನ್ನು ಗುಣಪಡಿಸುವ ಗುಣಗಳಿವೆ ಎನ್ನಲಾಗುತ್ತಿದೆ. ನಾವು ಕಳೆದ ವರ್ಷ 1ಕ್ವಿಂಟಾಲಿಗಿಂತಲೂ ಹೆಚ್ಚು ಮಾರಾಟ ಮಾಡಿದ್ದೇವೆ. ಈ ವರ್ಷ ಇನ್ನೂ ಜಾಸ್ತಿ ಸಿಗಬಹುದು. ಸ್ಥಳೀಯವಾಗಿ ೧೫೦ರೂವಿನಂತೆ ಮಾರಾಟ ಮಾಡಿದ್ದೇವೆ. ಬೇಡಿಕೆ ಇರುವ ಹಣ್ಣು. ಪೋಷಣೆ ಹೆಚ್ಚು ಬೇಕಾಗಿಲ್ಲ ನೀರು ಕಡಿಮೆ ಸಾಕಾಗುತ್ತದೆ ಎನ್ನುತ್ತಾರೆ ಲೀನಾ ಗೊನ್ಸಾಲ್ವಿಸ್

ಇವರ ತೋಟದಲ್ಲಿ ಇವಿಷ್ಟೇ ಅಲ್ಲ. ರಾಂಬುಟಾನ್, ಚಂದ್ರ ಬಕ್ಕೆ ಹಾಗೂ ವಿದೇಶಿ ಹಲಸಿನ ಹಣ್ಣು, ಗಳು ಇವೆ ವಿವಿಧ ಹಣ್ಣಿನ ಗಿಡಗಳು ಅವರ ಕೃಷಿ ಕ್ಷೇತ್ರದಲ್ಲಿವೆ. ಇವರಿಗೆ ಅಡಿಕೆ ಪ್ರಧಾನ ಬೆಳೆ ಇನ್ನೂ ಎರಡು ಸಾವಿರಕ್ಕೂ ಹೆಚ್ಚು ಇವರ ತೋಟಗಳಲ್ಲಿ ತೆಂಗು ಕಾಳುಮೆಣಸು ಬಾಳೆ ಇವರ ಉಪ-ಉತ್ಪನ್ನಗಳು. ಒಲಿವರ್ ಡಿಸೋಜ ಅವರು ಐಟಿ ಮುಗಿಸಿದನಂತರ ಮಸ್ಕತಿ ನಲ್ಲಿ ಕೆಲವರ್ಷ ಉದ್ಯೋಗದಲ್ಲಿದ್ದರು ಮರಳಿ ಊರಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡರು .ಒಟ್ಟಾರೆಯಾಗಿ ಡ್ರ್ಯಾಗನ್ ಹಣ್ಣು ಇವರ ಬದುಕಿಗೊಂದು ಖುಷಿ ತಂದಿದೆ.

-ರಾಧಾಕೃಷ್ಣ ತೊಡಿಕಾನ

ಚಿತ್ರ-ರಾಮ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group