spot_img
Tuesday, December 3, 2024
spot_imgspot_img
spot_img
spot_img

ದೇಶೀಯ ಗೋ ಉತ್ಪನ್ನಗಳಿಂದ ಔಷಧ ತಯಾರಿಸಿ ಸೈ ಎನ್ನಿಸಿಕೊಂಡ ಕೃಷಿಕ

-ರಾಧಾಕೃಷ್ಣ ತೊಡಿಕಾನ

ದೇಶೀಯ ಗೋವುಗಳನ್ನು ಸಾಕಿ ಸಲಹಿ ಅದರ ಅರ್ಕ, ಸಗಣಿ, ಹಾಲು ಅಲ್ಲದೆ ೩೨ ಗಿಡಮೂಲಿಕೆಗಳನ್ನು ಹಾಗೂ ಸಾಂಬಾರು ಪದಾರ್ಥಗಳನ್ನು ಬಳಸಿಕೊಂಡು ವಿವಿಧ ಔಷಧಗಳನ್ನು ತಯಾರಿಸಿ ಗೌಡಪ್ಪ ಗೌಡರು ಯಶಸ್ಸು ಕಂಡಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮುಳ್ಳಹಳ್ಳಿ ಗ್ರಾಮದ ಗೌಡಪ್ಪ ಗೌಡ ಈಶ್ವರ ಗೌಡ ಪಾಟೀಲ್ ಓರ್ವ ರೈತ. ಒಣ ಬೇಸಾಯ ನಂಬಿ ಬದುಕು ಕಟ್ಟಲು ಆರಂಭಿಸಿದವರು. ಒಣ ಬೇಸಾಯವಾದುದರಿಂದ ಹೆಚ್ಚು ಆದಾಯ ನಿರೀಕ್ಷಿಸುವಂತಿರಲಿಲ್ಲ. ಮಳೆ ಬಂದರೆ ಬೆಳೆ, ಬೆಳೆಯಾದರೆ ಒಂದಿಷ್ಟು ಆದಾಯ. ನಿಶ್ಚಿತವಾದ ಬೇರೆ ಆದಾಯ ಮೂಲಗಳಿರಲಿಲ್ಲ. ಒಣ ಭೂಮಿಯನ್ನು ಬೇಸಾಯಕ್ಕಾಗಿ ಗುತ್ತಿಗೆ ನೀಡಿದರು.

ಕೃಷಿಗೆ ಪೂರಕವಾಗಿ ಆಕಳುಗಳಿದ್ದವು. ದೇಶೀಯವಾದ ತಳಿ ಹಳ್ಳಿಕಾರ್ ಶ್ರಮಿಕ ವರ್ಗಕ್ಕೆ ಸೇರಿದವು. ಹೋರಿಗಳಿಗೆ, ಉಳುಮೆ ಹಾಗೂ ಗಾಡಿಗಳಿಗೆ ಹೆಚ್ಚು ಉಪಯುಕ್ತವಾಗಿದ್ದವು. ಹೈನುಗಾರಿಕೆಗೆ ಅವುಗಳನ್ನು ನೆಚ್ಚಿಕೊಳ್ಳುವಂತಿರಲಿಲ್ಲ. ಹೋರಿಗಳನ್ನು ಮಾರಾಟ ಮಾಡಿದರೂ ಅಂಗವೈಕಲತೆ ಹೊಂದಿದ ಕರುವನ್ನು ಉಳಿಸಿಕೊಂಡರು. ಅದರಿಂದಲೇ ಮತ್ತೆ ವೃದ್ಧಿಸಿದ ದೇಶಿಯ ಆಕಳುಗಳಿಂದ ದೊರಕುವ ಹಾಲು, ಗಂಜಲ, ಸಗಣಿಯಿಂದಲೇ ಗೋಉತ್ಪನ್ನಗಳ ತಯಾರಿಗೆ ಮನಸ್ಸು ಮಾಡಿದರು. ಹುಬ್ಬಳ್ಳಿಯಲ್ಲಿ ರಾಮಚಂದ್ರ ಮಠದ ಶ್ರೀಗಳ ಶಿಷ್ಯರಾದ ದತ್ತಾತ್ರೇಯ ಭಟ್ ಅವರನ್ನು ಭೇಟಿಯಾದ ಪಾಟೀಲರು ಅವರಲ್ಲಿ ಗೋ ಉತ್ಪನ್ನಗಳ ತಯಾರಿ ಕುರಿತು ಮಾಹಿತಿ ಮಾರ್ಗದರ್ಶನ ಪಡೆದುಕೊಂಡರು. ಆನಂತರ ಈಶ್ವರ ದೇಶೀ ಗೋ ಸೇವಾ ಮತ್ತು ಆರ್ಗಾನಿಕ್ ಸೆಂಟರ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.

ಕಳೆದ ಎಂಟು ವರ್ಷಗಳಿಂದ ಆಕಳುಗಳ ಸಂರಕ್ಷಣೆಯೊಂದಿಗೆ ಅದರ ಉತ್ಪನ್ನಗಳ ತಯಾರಿಯಲ್ಲಿ ತೊಡಗಿಕೊಂಡಿರುವ ಪಾಟೀಲರು ಮೊದಲು ಆರಂಭಿಸಿದ್ದು ಗೋ ಅರ್ಕ ತಯಾರಿ. ಎರಡು ವಿಧದ ಅರ್ಕ ತಯಾರಿಸಿದ್ದರು. ಆನಂತರ ಗೋ ಅರ್ಕ ಮತ್ತು ಗಿಡಮೂಲಿಕೆಯನ್ನು ಬಳಸಿಕೊಂಡು ಬೇರೆ ಬೇರೆ ಔಷಧಿಗಳನ್ನು ತಯಾರಿಸಿದ್ದಾರೆ.

ಅವುಗಳಲ್ಲಿ ಪ್ರಮುಖವಾದದ್ದು “ಕೋಲ್ಡ್ ಕ್ಯಾಚ್” ಕೊರೊನಾ ಸಂದರ್ಭದಲ್ಲಿ ಈ ಔಷಧಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು. ಅವರಿಗೆ ಪ್ರಸಿದ್ಧಿಯನ್ನು ತಂದಿತ್ತು. ದೇಶೀ ಆಕಳ ಗೋ ಮೂತ್ರ ಮತ್ತು ಔಷಧೀಯ ಸಸ್ಯಗಳ ಮಿಶ್ರಣದಿಂದ ತಯಾರಿಸಲಾದ “ಕೋಲ್ಡ್ ಕ್ಯಾಚ್” ಶ್ವಾಸಕೋಶದ ಸಮಸ್ಯೆ, ಉಸಿರಾಟದ ತೊಂದರೆ, ನೆಗಡಿ, ಕಫ, ತಲೆನೋವು, ಅಲರ್ಜಿ, ಸೀನು ಮೊದಲಾದುವುಗಳನ್ನು ಕಡಿಮೆ ಮಾಡುವ ಶಕ್ತಿಯನ್ನು  ಹೊಂದಿತ್ತು. ಕರೋನ ಬಾಧೆ ಕಾಣಿಸಿಕೊಂಡ ಹಲವಾರು ಮಂದಿ ಈ ಔಷಧಿಯಿಂದ ಗುಣಮುಖರಾದರು. ಆಸ್ಪತ್ರೆಗೆ ಓಡಾಟ, ಗೃಹ ಬಂಧನಗಳಿಂದ ಸುಲಭವಾಗಿ ಮುಕ್ತಿ ಹೊಂದಿದರು.

ಊರಿನವರು ಈ ಔಷಧಿಯನ್ನು ಸೇವಿಸಿ ನಿಶ್ಚಿಂತೆಯಿAದ ಓಡಾಡಿದ್ದರು. ಕೊರೋನಾ ಅವರಿಂದ ದೂರವಾಗಿತ್ತು. ಇದನ್ನು ಮನಗಂಡ ಅಲ್ಲಿಯ ತಹಶೀಲ್ದಾರರು ಈ ಔಷಧಿ ತಯಾರಿಸಿದ ಗೌಡಪ್ಪನವರ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಈಗಲೂ ಶೀತ, ಕೆಮ್ಮು, ಉಸಿರಾಟದ ಸಮಸ್ಯೆಯಿರುವವರಿಗೆ ”ಕೋಲ್ಡ್ ಕ್ಯಾಚ್” ಅತೀ ಹೆಚ್ಚು ಪರಿಣಾಮಕಾರಿಯಾಗಿದೆ.

ಘಮಘಮಿಸುವ ಸುಗಂಧ ದ್ರವ್ಯ

ಪರಿಮಳಯುಕ್ತ ಸುಗಂಧ ದ್ರವ್ಯ ಮನ ಸೆಳೆಯದಿರುವುದು ಕಡಿಮೆ. ಮಾರುಕಟ್ಟೆಯಲ್ಲಿರುವ ಬಹುತೇಕ ಸುಗಂಧ ದ್ರವ್ಯಗಳಲ್ಲಿ ರಾಸಾಯನಿಕದ ಲೇಪವಿಲ್ಲದೆ ಇರುವುದಿಲ್ಲ. ಆದರೆ ಗೌಡಪ್ಪ ಅವರು ತಯಾರಿಸಿದ “ಕೃಷ್ಣ ತುಳಸಿ ಸುಗಂಧ ದ್ರವ್ಯ” ಗೋ ಅರ್ಕ ಮತ್ತು ಪ್ರಕೃತಿದತ್ತವಾದ ಗಿಡಮೂಲಿಕೆಗಳಿಂದ. ಈ ಸುಗಂಧ ದ್ರವ್ಯವು ಬಹಳಷ್ಟು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಎಂದು ಪಾಟೀಲರು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಒಮ್ಮೆ ಖರೀದಿಸಿದ ಗ್ರಾಹಕರು ಅದರ ಸುವಾಸನೆಗೆ ಮನಸೋತು ಮತ್ತೆ ಮತ್ತೆ ಕೊಂಡುಕೊಂಡಿದ್ದಾರೆ.

ದೇಹದ ಕೊಬ್ಬು ಮತ್ತು ತೂಕವನ್ನು ಕಡಿಮೆ ಮಾಡಲು ಇತರ ಔಷಧಿಗಳ ಮೊರೆ ಹೋಗಬೇಕಾಗಿಲ್ಲ. ಚುಚ್ಚು ಮದ್ದಾಗಲಿ, ಪಥ್ಯವಾಗಲಿ ಯಾವುದೂ ಬೇಕಾಗಿಲ್ಲ. ಗೋ ಅರ್ಕ ಮತ್ತು ಗಿಡಮೂಲಿಕೆಯ ಔಷಧಿ “ಸ್ಲಿಮ್ ಅರ್ಕ” ಶರೀದ ಕೊಬ್ಬು ನಿವಾರಿಸುತ್ತದೆ. ತೂಕವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ನೋವು ನಿವಾರಕ ಮುಲಾಮು. ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕೂ ಇವರಲ್ಲಿ ಮದ್ದಿದೆ. “ಅಶ್ವಗಂಧ ಸ್ಪೆಷಲ್” ಗಜಕರ್ಣ, ಸೋರಿಯಾಸಿಸ್, ಚರ್ಮರೋಗ ಗುಣಪಡಿಸುವ ಔಷಧವಿದೆ. ದೂಪ, ಸೊಳ್ಳೆ ಬತ್ತಿ, ಸಾಮ್ರಾಣಿ ಆಕಳ ಭರಣಿ ಸೇರಿದಂತೆ ಸುಮಾರು 1೦ ಬಗೆಯ ಉತ್ಪನ್ನಗಳನ್ನು ಅವರು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಸುಮಾರು 35-4೦,೦೦೦ ಮಂದಿ ಗ್ರಾಹಕರನ್ನು ಹೊಂದಿರುವುದಾಗಿ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ದೇಶೀಯ ಆಕಳನ್ನು ಉಳಿಸುವ ಉದ್ದೇಶದಿಂದ ಹಾಗೂ ಇಂತಹ ಉತ್ಪನ್ನಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಸರಕಾರದ ಬೆಂಬಲ ಹಾಗೂ ಸಹಕಾರ ಬೇಕು. ರೈತರೂ ಕೂಡಾ ನೈಸರ್ಗಿಕವಾದ ಈ ಉತ್ಪನ್ನಗಳನ್ನು ಕೊಳ್ಳುವ ಮೂಲಕ ದೇಶೀ ಆಕಳನ್ನು ಉಳಿಸಿಕೊಳ್ಳಲು ಸಹಕರಿಸಬಹುದು. ಕಿರು ಉದ್ಯಮವಾಗಿ ರೂಪಿಸಿಕೊಳ್ಳಬಹುದು ಎನ್ನುತ್ತಾರೆ ಗೌಡಪ್ಪರವರು. ಗೋವುಗಳು ಕೃಷಿಪೂರಕವಷ್ಟೇ ಅಲ್ಲ; ಅವುಗಳ ಉಪ ಉತ್ಪನ್ನಗಳು ನಾನಾ ವಿಧದಿಂದ ಸಹಕಾರಿ. ನಾಡಿನಾದ್ಯಂತ ತಮ್ಮ ಗೋ ಉತ್ಪನ್ನಗಳ ಪ್ರದರ್ಶನ ಮತ್ತು ಜಾಗೃತಿ ಮೂಡಿಸುವ ಇಚ್ಛೆ ವ್ಯಕ್ತಪಡಿಸುತ್ತಾರೆ.

ಇದೊಂದು ಸೇವಾ ಮಾಧ್ಯಮವೆಂದು ಪರಿಗಣಿಸಿ ಜನರ ಕೈಗೆಟಕುವ ದರದಲ್ಲಿ ಔಷಧಿಯನ್ನು ನೀಡುತ್ತಿದ್ದೇನೆ. ಹುಬ್ಬಳ್ಳಿ-ಧಾರವಾಡದ ಅಂಗಡಿಗಳಲ್ಲಿ ತಾನು ತಯಾರಿಸುವ ಔಷಧಿಗಳು ಲಭ್ಯವಿವೆ. ಕರ್ನಾಟಕದ ಎಲ್ಲಾ ಕಡೆ ಈ ಉತ್ಪನ್ನಗಳನ್ನು ಬಳಸುವ ಗ್ರಾಹಕರಿದ್ದಾರೆ. ಎಂದು ಹೇಳುತ್ತಾರೆ. ಇವರು ಹೆಚ್ಚು ನೆಚ್ಚಿಕೊಂಡಿರುವುದು ನೇರಾ ಮಾರಾಟ ವ್ಯವಸ್ಥೆ. ಕೊರಿಯರ್ ಮೂಲಕ ಕಳುಹಿಸಿ ಕೊಡುತ್ತಾರೆ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಹೆಚ್ಚಾಗಿ ಮಾರುಕಟ್ಟೆ ಮಾಡುವ ಅವರಿಗೆ ಒಮ್ಮೆ ಈ ಉತ್ಪನ್ನಗಳನ್ನು ಬಳಸಿದ ಗ್ರಾಹಕರೇ ಮತ್ತೆ ಮುಂದುವರಿಯುತ್ತಾರೆ.

ರಾಮಚಂದ್ರ ಮಠದ ಶ್ರೀಗಳ ಶಿಷ್ಯರಾದ ದತ್ತಾತ್ರೇಯ ಭಟ್, ದೇಶಪಾಂಡೆ ಪೌಂಡೇಶನ್‌ನ ಗುರುರಾಜ ದೇಶಪಾಂಡೆ, ಉತ್ತರ ಕರ್ನಾಟಕದ ವೇದ ಮಹಿಳಾ ಸಂಘದ ಅಧ್ಯಕ್ಷ ರತೀ ಶ್ರೀನಿವಾಸನ್ ಮೊದಲಾದವರು ತನಗೆ ನೀಡಿದ ಸಹಕಾರವನ್ನು ಅವರು ಸ್ಮರಿಸಿಕೊಳ್ಳುತ್ತಾರೆ.

ಮಾಹಿತಿಗೆ ಮೊಬೈಲ್ : ೭೦೨೨೮೭೭೯೧೫

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group