spot_img
Saturday, July 27, 2024
spot_imgspot_img
spot_img
spot_img

ದೇಶದ ಹೈನುಗಾರಿಕೆ ಉಧ್ಯಮದ ಒಂದು ಅವಲೋಕನ

ದೇಶದ ಕೃಷಿ ಆರ್ಥಿಕ ಆದಾಯದಲ್ಲಿ, ಹೈನುಗಾರಿಕೆ ಪ್ರಾಮುಖ್ಯ ಪಾತ್ರವನ್ನು ವಹಿಸಿ, ಗ್ರಾಮೀಣ ಭಾರತದ ಆರ್ಥಿಕ ಜೀವನಾಡಿಯಾಗಿದೆ. ಹೈನುಗಾರಿಕೆ ಆಹಾರ ಉತ್ಪನ್ನಗಳಿಗೆ ಹಾಗೂ ಕೃಷಿ ಚಟುವಟಿಕೆಗೆ ಮೂಲ ವಸ್ತುವಾಗಿ ಉಪಯೋಗವಾಗಿ ದೇಶದ ಪ್ರಜೆಗಳ ಆರೋಗ್ಯ ಹಾಗೂ ಕೃಷಿ ಉತ್ಪನ್ನಗಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಸಾವಯವ ಕೃಷಿ ಪದ್ದತಿಯಲ್ಲಿ ಹೈನುಗಾರಿಕೆಯ ಉತ್ಪನ್ನಗಳು ಮೂಲ ವಸ್ತುವಾಗಿ ಉಪಯೋಗವಾಗಿ ದೇಶದ ಪ್ರಜೆಗಳ ಆರೋಗ್ಯದ ರಕ್ಷಣೆಯಲ್ಲಿ ಮುಂಚೂಣಿಯಲ್ಲಿ ಇದ್ದು ತನ್ನ ಕೆಲಸವನ್ನು ಮಾಡುತ್ತದೆ.

ಹೈನುಗಾರಿಕೆಯ ಚರಿತ್ರೆಯನ್ನು ಅವಲೋಕಿಸಿದಾಗ ಹಿಂದೆ ಉತ್ಪಾದನೆ ಕೊರತೆಯ ಸನ್ನಿವೇಶ ಇದ್ದು, ಹಾಗೂ ಆಂತರಿಕವಾಗಿ ಹೈನುಗಾರಿಕೆಯ ಉಪಯೋಗ ಕೂಡಾ ಆರ್ಥಿಕವಾಗಿ ಸಮರ್ಥರಿಗೆ ಮಾತ್ರ ಲಭ್ಯವಾಗುತ್ತಿತ್ತು. ಆದರೆ ಸುಧಾರಿತ ಭಾರತದಲ್ಲಿ ಈ ಅಂಶಗಳು ಬದಲಾಗಿ, ಈಗ ಅಧಿಕ ಉತ್ಪಾದನೆ ಹಾಗೂ ಹೆಚ್ಚು ಉಪಯೋಗವಾಗುತ್ತಿದೆ. ಇದು ಭಾರತದ ಕೃಷಿ ರಂಗಕ್ಕೆ ಆರೋಗ್ಯಕರವಾದ ಕೃಷಿ ಉತ್ಪನ್ನಗಳನ್ನು ನೀಡಿ ಪ್ರಜೆಗಳ ಆರೋಗ್ಯದ ಕಾಳಜಿಯನ್ನು ಕೂಡಾ ಮಾಡುತ್ತಿದೆ. ದೇಶದ ಸರಕಾರಗಳ ಆರೋಗ್ಯ ನೀತಿಯಂತೆ ವಿದ್ಯಾರ್ಥಿಗಳಿಗೆ ಹಾಲಿನ ಉತ್ಪನ್ನವನ್ನು ನೀಡಿ, ಅವರ ಆರೋಗ್ಯದ ಬುನಾದಿಯನ್ನು ಸುದೃಡಗೊಳಿಸುತ್ತದೆ. ಪ್ರಜೆಗಳು ಕೂಡಾ ಹೆಚ್ಚು ಹೆಚ್ಚು ಹಾಲಿನ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ಆರೋಗ್ಯವಂತ ಭಾರತವನ್ನು ನಿರ್ಮಾಣ ಮಾಡುವುದರಲ್ಲಿ ಮುಖ್ಯ ಭೂಮಿಕೆಯನ್ನು ನಿರ್ವಹಿಸುತ್ತದೆ.

ಹೈನುಗಾರಿಕೆಯು ಈಗ ಭಾರತದ ಅಂತರಿಕ ಆದಾಯದ ಮೂಲವಾಗಿ ಉಳಿದಿಲ್ಲ. ನಮ್ಮ ಉತ್ಪನ್ನಗಳು ಈಗ ಪರದೇಶಗಳಿಗೆÀ ನಿರ್ಯಾತವನ್ನು ಮಾಡಿ, ವಿದೇಶಿ ವಿನಿಮಯ ಸಂಪಾದನೆಯಲ್ಲಿ ಪಾಲುಗೊಂಡು ದೇಶದ ವಿದೇಶಿ ವಿನಿಮಯ ಭಂಡಾರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.

ಈಗ ಭಾರತದ ಹೈನುಗಾರಿಕೆ ಉತ್ಪನ್ನಗಳು, ತನ್ನ ಪ್ರಜೆಗಳ ಬೇಡಿಕೆಯನ್ನು ಹೆಚ್ಚು ಕಡಿಮೆ ನಿರ್ವಹಿಸುವುದರಲ್ಲಿ ಸಮರ್ಥವಾಗಿದೆ. ಅಂದಾಜು ಪ್ರಕಾರ ಈಗ ದೇಶದ ಒಟ್ಟು ಉತ್ಪಾದನೆ ೫೪ ದಶಲಕ್ಷ ಟನ್ ಇದ್ದು, ಇದರಲ್ಲಿ ನಮ್ಮ ಆಂತರಿಕ ಉಪಯೋಗಕ್ಕೆ ಹಾಗೂ ಸ್ವಲ್ಪ ನಿರ್ಯಾತಕ್ಕೆ ಬಳಕೆಯಾಗುತ್ತಿದೆ. ಈ ವರ್ಷ ಮಂಡಿಸಿದ ಆಯವ್ಯಯ ಪಟ್ಟಿಯಲ್ಲಿ, ಭಾರತ ಸರಕಾರವು ಹಾಲಿನ ಉತ್ಪಾದನೆಯನ್ನು ಪ್ರಸ್ತುತ ೫೪ ದಶಲಕ್ಷ ಟನ್‌ನಿಂದ ೨೦೨೫ ಕ್ಕೆ ೧೦೮ ದಶಲಕ್ಷ ಟನ್‌ಗೆ ಎರಿಸುವ ಗುರಿಯನ್ನು ನೀಡಲಾಗಿದೆ. ಹಾಗೂ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಮಾಡಲಾಗಿದೆ. ಈ ಉದ್ಯಮದಲ್ಲಿ ನಮ್ಮ ದೇಶದ ರೈತರು ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಈ ಗುರಿ ಮುಟ್ಟುವ ಬಗ್ಗೆ ಯಾವುದೇ ಕಷ್ಟಕರ ಕೆಲಸ ಅಲ್ಲವೆಂದು ತಿಳಿಯಬಹುದು.

ಅರ್ಥಶಾಸ್ತçದ ನಿಯಮದಂತೆ ಉತ್ಪಾದನೆ, ಬೇಡಿಕೆ ಹಾಗೂ ದರ ಇವುಗಳು ಆರ್ಥಿಕ ಉತ್ಪಾದನೆ ಯಾ ಆದಾಯದ ಮೇಲೆ ನೇರ ಪರಿಣಾಮವನ್ನು ನೀಡುತ್ತದೆ. ಜಾಸ್ತಿ ಉತ್ಪಾದನೆಯಾದರೆ ಬೇಡಿಕೆ ಇಲ್ಲದೇ ದರ ಕುಸಿತದ ಸಂಭವ ಕೂಡಾ ಆಗಬಹುದು. ಈ ಅಪಾಯವನ್ನು ತಪ್ಪಿಸುವ ಸಲುವಾಗಿ, ನಾವು ಸೂಕ್ತ ವಿದೇಶಿ ಮಾರುಕಟ್ಟೆ, ಕಡಿಮೆ ಉತ್ಪಾದನಾ ವೆಚ್ಚ, ಸುಧಾರಿತ ಉತ್ಪಾದನಾ ವ್ಯವಸ್ಥೆ, ಹೆಚ್ಚು ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳಿಗೆ ಒತ್ತುಕೊಟ್ಟು ಆಂತರಿಕ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಇದರ ಮಾರಾಟಕ್ಕೆ ಯೋಜನೆಯನ್ನು ಹಾಕಿ, ದರ ಇಳಿತ ಹಾಗೂ ನಷ್ಟದ ಅಪಾಯವನ್ನು ತಪ್ಪಿಸಿ ಭಾರತದ ರೈತರ ಆದಾಯ ಹೆಚ್ಚುವರಿಗೆ ಒತ್ತುಕೊಡಬೇಕು. ಈ ಬಗ್ಗೆ ಉತ್ತಮ ಅಂತರಾಷ್ಟಿçÃಯ ಮಟ್ಟದ ಮಾನದಂಡದ ಗುಣಮಟ್ಟ ಹಾಗೂ ಉತ್ಪಾದನಾ ವ್ಯವಸ್ಥೆಯನ್ನು ಅಳವಡಿಸಿ, ನಮ್ಮ ಹೈನುಗಾರಿಕೆ ಉತ್ಪನ್ನಗಳು ಜಾಗತಿಕ ಮಟ್ಟದ ವ್ಯಾಪಾರದ ಮುದ್ರೆಯಾಗಿ ಮೂಡಿಬರಬೇಕು. ನಾವು ಈಗ ಹೆಚ್ಚು ಕಡಿಮೆ ಏಷ್ಯಾ ಖಂಡದ ರಾಷ್ಟçಗಳಿಗೆ ಮಾತ್ರ ನಿರ್ಯಾತವನ್ನು ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ನಿರ್ಧಾರಗಳನ್ನು ಭಾರತ ಸರಕಾರ ತೆಗೆದುಕೊಂಡು, ಜಾಗತಿಕವಾಗಿ ನಮ್ಮ ಹೈನುಗಾರಿಕೆ ಉತ್ಪನ್ನಗಳು ವ್ಯಾಪಾರ ಸಂಕೇತವಾಗಿ ಮೂಡಿಬರುವಂತೆ ಮಾಡಬೇಕು.

ನಮ್ಮ ದೇಶದ ಹೈನುಗಾರಿಕೆಯನ್ನು ಅವಲೋಕಿಸಿದಾಗ ಈ ಉದ್ಯಮ ಸಹಕಾರಿ ರಂಗದ ಅಡಿಯಲ್ಲಿ, ದೊಡ್ಡ ದೊಡ್ಡ ಉದ್ದಿಮೆದಾರರ ಮುಂದಾಳತ್ವದಲ್ಲಿ ಹಾಗೂ ಖಾಸಗಿ ರಂಗದ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಪ್ರವೃತ್ತವಾಗಿವೆ. ಅಂಕಿ ಅಂಶಗಳ ಆಧಾರದ ಪ್ರಕಾರ ಸರಾಸರಿ ದಿನದ ಹಾಲಿನ ಉತ್ಪಾದನೆಯು ದೊಡ್ಡ ಅಂಶ ಸಹಕಾರಿ ವ್ಯವಸ್ಥೆಗಳಾದ ಅಮೂಲ್, ಮದರ್ ಡೈರಿ, ವಿರ್ಕಾ ಮತ್ತು ಇತರ ಕೆಲವು ವ್ಯವಸ್ಥೆಗಳಿಗೆ ಹೋಗುತ್ತಿದೆ. ಇದರಲ್ಲಿ ಕೆನೆ ತೆಗೆದ ಹಾಲು ಹುಡಿ (SಏIಓಓಇಆ ಒIಐಏ PಔWಆಇಖ) ಕೂಡಾ ಸೇರಿದ್ದು ಮಾರುಕಟ್ಟೆಯಲ್ಲಿ ಪೂರಕವಾಗಿ ಸ್ಪಂದಿಸುತ್ತಿದೆ. ಮತ್ತು ರೈತರಿಗೆ ಉತ್ತೇಜನಕಾರಿಯಾಗಿದೆ.

ಈ ಬಗ್ಗೆ ನಾವು ಉದಾಹರಣೆಯಾಗಿ ಹೇಳುವುದಾದರೆ ಭಾರತದ ಸಹಕಾರಿ ರಂಗ ಕೂಡಾ ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ಕರ್ನಾಟಕ ಸರಕಾರದ ಅಡಿಯಲ್ಲಿ ಬರುವ ಹಾಲು ಉತ್ಪಾದಕರ ಸಹಕಾರಿ ಸಂಘ ಈ ಕ್ಷೇತ್ರದಲ್ಲಿ ಒಂದು ಮಾದರಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಇತರ ಕೆಲವು ರಾಜ್ಯ ಸರಕಾರಗಳ ಹಾಲು ಉತ್ಪಾದಕರ ಸಂಘಗಳು ಕೂಡಾ ಉತ್ತಮ ಕೆಲಸವನ್ನು ಮಾಡಿ, ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ.

ಕೆಲವು ಸಹಕಾರ ಹಾಲು ಉತ್ಪಾದಕರ ಸಂಘಗಳ ಬಗ್ಗೆ ಹೇಳುವುದಾದರೆ, ಇವು ಬರೇ ಉತ್ಪಾದಿಸಿದ ಹಾಲಿನ ಮಾರಾಟ ವ್ಯವಸ್ಥೆಯಲ್ಲಿ ಮಾತ್ರ ತೊಡಗಿಕೊಳ್ಳದೆ, ಈ ಉದ್ದಿಮೆಯ ಅಡಿಯಲ್ಲಿ ರೈತರ ನಾಯಕತ್ವ ಅಭಿವೃದ್ಧಿ, ಪಶು ಸಂಪತ್ತಿಗೆ ಬರುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ, ಮಾಹಿತಿ, ರೋಗನಿರೋಧಕ ಬಳಕೆ, ವಂಶಾಭಿವೃದ್ಧಿ, ಮೌಲ್ಯಾಧಾರಿತ ಉತ್ಪಾದನ ವ್ಯವಸ್ಥೆ, ಸಾವಯವ ಗೊಬ್ಬರವಾಗಿ ಪರಿವರ್ತನೆ ಮಾಡಿ ತಮ್ಮ ಇತರ ಕೃಷಿ ವ್ಯವಸ್ಥೆಗೆ ಮೂಲ ಗೊಬ್ಬರವಾಗಿ ಉಪಯೋಗಿಸಿ ಅಧಿಕ ವರಮಾನ ಪಡೆಯುವ ಬಗ್ಗೆ ತಿಳುವಳಿಕೆ, ಸ್ವಚ್ಛತೆ ಅಭಿಯಾನ, ರೈತರ ಆರೋಗ್ಯದ ಬಗ್ಗೆ ತಿಳುವಳಿಕೆ, ಸರಕಾರದ ಸವಲತ್ತುಗಳ ಬಗ್ಗೆ ಅರಿವು, ಪಶು ಸಂಪತ್ತಿಗೆ ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸುವಿಕೆ ಹಾಗೂ ಸಮಯೋಚಿತ ಆರೋಗ್ಯ ವ್ಯವಸ್ಥೆಯನ್ನು ಕೂಡಾ ನಿರ್ವಹಿಸಿ ರೈತ ಪರವಾಗಿ ಕೆಲಸ ಮಾಡುತ್ತಿದೆ.

ಆಂತರಿಕ ಮಾರುಕಟ್ಟೆ / ಉತ್ಪಾದನೆ ವ್ಯವಸ್ಥೆಯಲ್ಲಿ ಬಹುರಾಷ್ಟಿçÃಯ ಕಂಪೆನಿಗಳಾದ ನೆಸ್ಲೆ, ಕ್ರಾಷ್ಟ್ ಫುಡ್ಸ್, ಬ್ರಿಟಾನಿಯಾ ಮತ್ತು ಇತರ ಕೆಲವು ಕಂಪೆನಿಗಳು ಹಾಲು ಉತ್ಪನ್ನದ ಮುಖ್ಯ ಗ್ರಾಹಕರು. ಈ ಕಂಪೆನಿಗಳು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮೂಲ ವಸ್ತುವಾಗಿ ಉಪಯೋಗಿಸಿ, ಭಾರತದ ಹೈನುಗಾರಿಕೆ ರಂಗಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡುತ್ತಾರೆ.

ಹಾಲಿನ ಉತ್ಪಾದನೆಯ ಬಗ್ಗೆ ಚಿಂತನೆ ಮಾಡುವಾಗ ಚಳಿಗಾಲದಲ್ಲಿ ಹಾಲಿನ ಉತ್ಪಾದನೆ ಏರಿಕೆಯನ್ನು ಕಾಣುತ್ತಿದ್ದು, ಅಕ್ಟೋಬರ್‌ನಿಂದ ಮಾರ್ಚ್ ತನಕ ಏರುಮುಖದಲ್ಲಿ ಇದ್ದು, ಈ ತಿಂಗಳುಗಳಲ್ಲಿ ಶೇಖರಣೆಗೆ ಒತ್ತು ಕೊಟ್ಟು ಉತ್ಪಾದನೆಯನ್ನು ಸಮತೋಲನದಲ್ಲಿ ಕಾಪಾಡುವುದು, ಕೂಡಾ ವ್ಯಾಪಾರ ಯೋಜನೆಯ ನೀತಿಯಾಗಿದೆ. ಮಾರುಕಟ್ಟೆ ವiತ್ತು ಉತ್ಪಾದನಾ ಸಮತೋಲನ ಯಾವುದೇ ಉದ್ಯಮದಲ್ಲಿ ಮುಖ್ಯ ಅಂಶವಾಗಿದೆ ಮತ್ತು ಮಾರುಕಟ್ಟೆ ವ್ಯವಸ್ಥೆಗಳು ಸಕ್ರೀಯವಾಗಿರುವಂತೆ ಮಾಡುತ್ತದೆ.

ಭಾರತದ ಕೃಷಿ ರಂಗದಲ್ಲಿ ಹೈನುಗಾರಿಕೆ ಒಂದು ಮುಖ್ಯ ಆರ್ಥಿಕ ಅಂಶವಾಗಿ ಮೂಡಿಬಂದಿದ್ದು, ಇದು ನಮ್ಮ ರೈತರ ಆರ್ಥಿಕ ಶಕ್ತಿಗೆ ಒತ್ತು ಕೊಟ್ಟು, ದೇಶದ ಪ್ರಜೆಗಳ ಆರೋಗ್ಯ ಮಟ್ಟವನ್ನು ಏರಿಸುವುದರಲ್ಲಿ ಮುಖ್ಯ ಭೂಮಿಕೆಯನ್ನು ನಿರ್ವಹಿಸುತ್ತದೆ. ರೈತರು ಕೂಡಾ ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿ, ಈ ಉದ್ಯಮದ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿ, ವ್ಯವಸ್ಥೆಯಲ್ಲಿ ಬರುವ ಅಪಾಯವನ್ನು ಪರಿಣಾಮಕಾರಿಯಾಗಿ ಎದುರಿಸಿ, ತಮ್ಮ ಮತ್ತು ದೇಶದ ಆರ್ಥಿಕ ಶಕ್ತಿಗೆ ತಮ್ಮದೇ ಕೊಡುಗೆಯನ್ನು ನೀಡುವಲ್ಲಿ ಶಕ್ತರಾಗುತ್ತಾರೆ.

ಜಯರಾಮ ರೈ ನುಳಿಯಾಲು

ನುಳಿಯಾಲು ಫರ‍್ಮ್ಸ್ – ಸಂಪ್ಯ

ಕುರಿಯ ಗ್ರಾಮ ಮತ್ತು ಅಂಚೆ

ಪುತ್ತೂರು ತಾಲೂಕು ೫೭೪೨೧೦

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group