ನವಜಾತ ಕಾರ್ಕಳ
ವಿಶ್ವದ ಹಾಲು ಉತ್ಪಾದಕ ರಾಷ್ಟ್ರಗಳಲ್ಲಿ ಭಾರತ ಪ್ರಮುಖವಾದದ್ದು. ಕೃಷಿಯೇ ಬದುಕಿನ ಜೀವಾಳವಾದ ಈ ದೇಶದಲ್ಲಿ ಪಶುಪಾಲನೆ ಕೃಷಿಗೆ ಪೂರಕ ಪರಂಪರಾಗತವಾಗಿ ಬಂದಿದೆ. ಹಾಲು ಅದರ ಉತ್ಪನ್ನಗಳು ಒಂದೆಡೆಯಾದರೆ ಕೃಷಿಗೆ ಬೇಕಾದ ಗೊಬ್ಬರ ದನಸಾಕಾಣೆಯಿಂದಲೇ ದೊರೆಯುತ್ತಿತ್ತು. ಈಗ ಇವಿಷ್ಟೇ ಪಶುಪಾಲನೆಗೆ ಕಾರಣವಲ್ಲ. ಈಗ ಹೈನುಗಾರಿಕೆಯ ದೃಷ್ಟಿ ಬದಲಾಗಿದೆ. ಆರ್ಥಿಕತೆಯ ಚಿಂತನೆ ಮೆತ್ತಿಕೊಂಡಿದೆ. ಗ್ರಾಮೀಣ ಭಾಗದ ಆರ್ಥಿಕತೆಗೆ ಚೈತನ್ಯ ಮೂಡಿಸಿದೆ. ಕೃಷಿ ಚಟುವಟಿಕೆಯಿಂದ ಬರುವ ಆದಾಯಕ್ಕೆ ಹೆಚ್ಚುವರಿ ಆದಾಯವಾಗಿ ಹೈನುಗಾರಿಕೆಯಿಂದ ಬರುತ್ತಿದೆ. ಸಾಮಾಜಿಕ, ಆರ್ಥಿಕ ಶಕ್ತಿಯನ್ನು ಹೆಚ್ಚಿಸಿದೆ.
ಜಾನುವಾರು ಸಾಕಾಣೆಯಲ್ಲಿ ಪಶುಗಳ ಆಹಾರ ಪ್ರಮುಖವಾದದ್ದು. ಪೌಷ್ಠಿಕಾಂಶವುಳ್ಳ ಉತ್ತಮ ಆಹಾರ ನೀಡುವುದರಿಂದ ಗುಣಮಟ್ಟದ ಹಾಲು ಉತ್ಪಾದನೆಗೆ ಅನುಕೂಲ. ಜಾನುವಾರುಗಳ ಬೆಳವಣಿಗೆ, ನಿರ್ವಹಣೆಗೂ ಸಹಕಾರಿ. ಹಿಂದೆ ತಮ್ಮ ಕೃಷಿ ಭೂಮಿಯಲ್ಲಿ ಸಿಗುವಂತಹ ಹಸಿರು ಹುಲ್ಲು ಹಾಗೂ ಗೋಮಾಳಗಳು, ಬೆಟ್ಟಗುಡ್ಡಗಳು ಅವುಗಳ ಆಹಾರದ ಮೂಲ ತಾಣವಾಗಿದ್ದವು. ಹಾಲು ಉತ್ಪಾದನೆ ಉದ್ಯೋಗ, ಆದಾಯ, ಉದ್ಯಮವಾಗಿ ಬೆಳೆದು ಬಂದ ಹಾಗೆಯೇ ಅವುಗಳಿಗೆ ಪೋಷಕಾಂಶ ಭರಿತವಾದ, ಸಮತೋಲಿತವಾದ ಆಹಾರ ಅಗತ್ಯವೂ ಹೆಚ್ಚಾಯಿತು. ಇದನ್ನು ಮನಗಂಡ ದೊಡ್ಡ ದೊಡ್ಡ ಅಂತರಾಷ್ಟ್ರೀಯ ಕಂಪನಿಗಳು ಪಶು ಆಹಾರವನ್ನು ತಯಾರಿಸಿಕೊಡಲು ಮುಂದಾದವು.
ಕರ್ನಾಟಕ ರಾಜ್ಯದಲ್ಲಿ ಪಶ ಆಹಾರ ತಯಾರಿ ಘಟಕಗಳು ಹಲವಿವೆ. ಅವುಗಳಲ್ಲಿ ಪ್ರಮುಖವಾದುದು ಅನನ್ಯ ಫೀಡ್ಸ್. ಹೈನುಗಾರರ ಮನ ಮನೆ ಗೆದ್ದ ಪಶು ಆಹಾರ. ಹುಬ್ಬಳ್ಳಿಯಲ್ಲಿ ಘಟಕವನ್ನು ಹೊಂದಿ ನಿರಂತರ ಸುಮಾರು ೨೫ ವರ್ಷಗಳಿಂದ ಹೈನುಗಾರು ಕೇಳಿದ ಹಾಗೂ ಹೇಳಿದ ಪಶು ಆಹಾರವನ್ನು ತಯಾರಿಸುತ್ತಾ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಚೆಂಡೆ ಬ್ರಾಂಡಿನ ಈ ಪಶು ಆಹಾರವು ಪ್ರಾರಂಭವಾದ ದಿನದಿಂದ ಇಂದಿನವರೆಗೂ ಉತ್ತಮ ಗುಣಮಟ್ಟವನ್ನು ಕಾಪಾಡುತ್ತಾ ಬಂದಿದೆ. ಈ ಯಶಸ್ಸಿನ ನಂತರ ಸಂಸ್ಥೆಯ ಮುಖ್ಯಸ್ಥರಾದ ಗೋವಿಂದ ಭಟ್ ಅವರಲ್ಲಿ ಏನಾದರೂ ಹೊಸತನ್ನು ಹೈನುಗಾರರಿಗೆ ಪರಿಚಯಿಸಬೇಕೆಂಬ ಹಂಬಲವಿತ್ತು
ಅವರ ಆಶಯಕ್ಕೆ ಬೆಂಬಲವಾಗಿ ನಿಂತವರು ಅವರ ಪುತ್ರಿ ಅನನ್ಯ ಭಟ್. ಎಮ್‌ಬಿಎ ಪದವೀಧರೆಯಾಗಿರುವ ಅನನ್ಯ ಭಟ್ ಅವರು ಬೇರೆ ಕಂಪೆನಿಗಳ ಉದ್ಯೋಗವರಸಿ ಹೋಗಲಿಲ್ಲ. ತನ್ನದಾದ ಸಂಸ್ಥೆಯನ್ನು ಕಟ್ಟಿ ತಂದೆಯಂತೆ ತಾನೂ ಇತರರಿಗೆ ಉದ್ಯೋಗದಾತೆಯಾಗಬೇಕೆಂಬ ಕನಸು ಕಂಡವರು. ಈ ಹಿನ್ನಲೆಯಲ್ಲಿ ಹುಟ್ಟಿಕೊಂಡದ್ದೇ ಅನನ್ಯ ಫಡ್ ಫಾರ್ಮ್ಸ
ಭಾರತದಲ್ಲಿ ಪ್ರಥಮ
ಹೈನುಗಾರರ ನಂಬಿಕೆ ಹಾಗೂ ವಿಶ್ವಾರ್ಸಹವಾದ ಪಶು ಆಹಾರ ರೈತರು ಬಯಸಿದ ರೀತಿಯಲ್ಲಿ ತಯಾರಿಸಿಕೊಡುವ ವಿಶಿಷ್ಠವಾದ ಪರಿಕಲ್ಪನೆಯನ್ನು ಅನನ್ಯ ಫಾರ್ಮ್ ಪುಡ್ಸ್ ಸಂಸ್ಥೆಯು ರೂಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶದಲ್ಲಿರುವ ಪಾಂಡವರ ಕಲ್ಲು ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಹಳ್ಳಿ. ಬಡಗ ಕಜೆಕಾರು ಗ್ರಾಮದ ಪಾಂಡವಕಲ್ಲು ಬಳಿಯ ಕೊಮ್ಮಿನಡ್ಕದಲ್ಲಿ ಹೊಸದಾಗಿ ಆರಂಭವಾದ ಅನನ್ಯ ಪಾರ್ಮ್ಸ್ ಪುಡ್ಸ್ ರೈತ ಹಿತ ಪಶು ಆಹಾರ ತಯಾರಿಯನ್ನು ಪರಿಚಯಿಸಿದೆ.
ಪ್ರತಿಯೊಬ್ಬ ಹೈನುಗಾರರು ತಮ್ಮ ಹಸುವಿಗೆ ಗುಣಮಟ್ಟದ ಪಶು ಆಹಾರವನ್ನು ಕೊಟ್ಟು ಅದಕ್ಕೆ ಪ್ರತಿಫಲವಾಗಿ ಉತ್ತಮ ಗುಣಮಟ್ಟದ ಹಾಲು ಪಡೆಯಬೇಕು ಎಂಬ ಆಶಯವಲ್ಲದೆ ಉತ್ತಮ ಆರೋಗ್ಯವನ್ನು ಹೊಂದಿರಬೇಕು. ಅದಕ್ಕಾಗಿ ಒಳ್ಳೆಯ ಕಚ್ಚಾ ವಸ್ತುಗಳನ್ನು ತಂದು ತಮ್ಮ ಉಗ್ರಾಣದಲ್ಲಿ ಇರಿಸಿ ಅದನ್ನು ಹೈನುಗಾರರ ಎದುರಿಗೆ ಪುಡಿ ಮಾಡಿ ಯಂತ್ರೋಪಕರಣದ ಮೂಲಕ ಮಿಶ್ರ ಮಾಡಿ ಕೊಡಲಾಗುತ್ತದೆ.
ತಮ್ಮ ತಯಾರಿ ಘಟಕವನ್ನು ಯಾವುದೇ ಹೈನುಗಾರರಿಗೆ ತೆರೆದಿಡುವ ಮೂಲಕ ಅವರಿಗೆ ತಮ್ಮ ಆಯ್ಕೆಗೆ ಪೂರ್ಣ ಸ್ವಾತಂತ್ರ‍್ಯ ನೀಡಿದೆ. ಯಾವ ಯಾವ ಕಚ್ಛಾ ವಸ್ತುಗಳು ಎಷ್ಟು ಬೇಕೋ ಅಷ್ಟು ಕಚ್ಛಾ ವಸ್ತುಗಳು ಅವರ ಎದುರಿಗೆ ತಯಾರಿಸಿ ಕೊಡುವ ಅಪೂರ್ವ ವ್ಯವಸ್ಥೆ. ಇದರಿಂದ ಯಾವುದೇ ಕಳಪೆ ಮಟ್ಟದ ಕಚ್ಚಾವಸ್ತುಗಳನ್ನು ಸೇರಿಸಿ ಪಶು ಆಹಾರ ತಯಾರಿಕೆಗೆ ವಿರಾಮ ಬೀಳಬಹುದು. ಹಾಗೂ ಹೈನುಗಾರರು ರೋಗ ರಹಿತ ಪಶುಗಳನ್ನು ಹೊಂದಬಹುದು. ಎಂಬ ಆಶಯ ಸಂಸ್ಥೆಯ ಮಾಲಕಿ ಅನನ್ಯ ಭಟ್ ಅವರದ್ದು.
ಪಶು ಆಹಾರದ ಬೆಲೆ ಜಾಸ್ತಿಯಾದರೂ ದೊರಕುವ ಉತ್ತಮ ಗುಣಮಟ್ಟದ ಪಶು ಆಹಾರವು ಪಶುಗಳನ್ನು ರೋಗ ರಹಿತವಾಗಿ ಮಾಡುವುದು. ಅಲ್ಲದೆ ಉತ್ತಮ ಗುಣಮಟ್ಟದ ಹಾಲನ್ನು ಪಡೆಯಬಹುದು. ಹೈನುಗಾರರು ಈ ಸೌಲಭ್ಯವನ್ನು ಪಡೆದುಕೊಂಡು ಕಲಬೆರಕೆಯಿಂದ ಮುಕ್ತವಾಗಬಹುದು. ತಮ್ಮ ಎಲ್ಲಾ ಪಶು ಆಹಾರಗಳು ಚಂಡೆ ಬ್ರಾಂಡಿನಲ್ಲಿ ಮಾತ್ರ ಲಭ್ಯ ಎನ್ನುತ್ತಾರೆ ಗೋವಿಂದ ಭಟ್
ಮಾಹಿತಿಗೆ : ಅನನ್ಯ ಫಾರ್ಮ್ಸ್ ಫುಡ್, ಪಾಂಡವರಕಲ್ಲು, ಬಡಗ ಕಜೆಕಾರು ಅಂಚೆ, ಬಂಟ್ವಾಳ ತಾಲೂಕು ದ.ಕ
ಮೊ : 9448367645, 9901526825