spot_img
Tuesday, September 17, 2024
spot_imgspot_img
spot_img
spot_img

ಲೋಳೆಸರದ ಕುರಿತು ತಿಳಿದುಕೊಳ್ಳೋಣ !

-ಪುಷ್ಪಾ ಎಸ್. ಗೋರೆ ಕಾಳಾದೆ ದುರ್ಗಾ

ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೆ ಈ ಸಸ್ಯ ಉಪಯೋಗಕ್ಕೆ ಬರುತ್ತದೆ, ಈ ಸಸ್ಯ ಮನೆಮದ್ದಿಗೆ ನೆರವಾಗುತ್ತದೆ ಇದನ್ನು ಹಲವು ಔಷಧಗಳಲ್ಲಿಯೂ, ಸೌಂದರ್ಯ ವರ್ಧಕವಾಗಿಯೂ ಬಳಸುತ್ತಾರೆ. ಇದು ತಂಪು ಗುಣವನ್ನು ಹೊಂದಿದೆ ಲೋಳೆಸರವು ಎಲ್ಲಾ ಪ್ರದೇಶಗಳಲ್ಲೂ ಯಾವುದೇ ವಾತಾವರಣದಲ್ಲೂ ಬೆಳೆಯಬಲ್ಲ ಸಸ್ಯ ಇದರ ಎಲೆಯನ್ನು ಮುರಿದಾಗ ಲೋಳೆಯಂತಹ ಅಂಟು ದ್ರವ ಒಸರುವುದರಿಂದ ಇದಕ್ಕೆ ಲೋಳೆಸರ ಎಂದು ಹೆಸರು ಬಂದಿದೆ. ಇದಕ್ಕೆ ಕುಮಾರಿ, ಘೃತಕುಮಾರಿ, ಅಲೋವೆರಾ ಎಂಬ ಹೆಸರಿನಿಂದಲೂ ಕರೆಯುತ್ತಾರೆ

ಇದು ನೋವು ಮತ್ತು ಊತಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ತುರಿಕೆಯನ್ನು ಕಡಿಮೆ ಮಾಡುತ್ತದೆ. ಎಂತಹದೆ ಗಾಯವಿರಲಿ, ಹೊಟ್ಟೆ ನೋವು, ಮಲಬದ್ಧತೆ, ಮೂಲವ್ಯಾಧಿ, ಕೂದಲು ಉದುರುವಿಕೆ, ಒಣ ಚರ್ಮ ಇವುಗಳನ್ನು ಶಮನ ಹಾಗೂ ನಿವಾರಣೆಯಲ್ಲಿ ಉತ್ತಮವಾಗಿ ಪರಿಹಾರ ನೀಡುತ್ತದೆ. ಲೋಳೆಸರವನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸುವುದರಿಂದ ಮನೆ ಮಂದಿಗೆ ತುಂಬಾ ಒಳ್ಳೆಯದೆಂದು ಜನರ ನಂಬಿಕೆ

ಉಪಯೋಗಗಳು ಹೀಗಿವೆ:

ಬಿಲಿನ ತಾಪದಿಂದ ಚರ್ಮ ಸುಟಿದ್ದರೆ ಇದರ ರಸ ಲೇಪನ ಇದು ತುಂಬಾ ಪರಿಣಾಮಕಾರಿ. ಇದು ಅತ್ಯುತ್ತಮ ಮಾಯಿಶ್ಚರೈಸರ್ ಆಗಿ ಸಹಾಯ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಲೋಳೆಸರದ ರಸವನ್ನು ಪ್ರತಿದಿನ ಸೇವಿಸುವುದರಿಂದ ಅಸ್ತಮ ಕಾಯಿಲೆಯನ್ನು ತಡೆಗಟ್ಟಬಹುದು. ಅನೇಕ ತೊಂದರೆಗಳಿಗೆ ಇದು ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.

ತಲೆಹೊಟ್ಟು ಚರ್ಮದ ಕಾಯಿಲೆಗಳಲ್ಲಿ ಇದರ ರಸವನ್ನು ಹಚ್ಚಿದರೆ ಬೇಗನೆ ಗುಣವಾಗುತ್ತದೆ. ಕೈಕಾಲುಗಳಲ್ಲಿ ಉಂಟಾಗುವ ಉಳುಕು ನೋವು, ಸಂಧಿ ನೋವುಗಳ ನಿವಾರಣೆಗೆ ಪರಿಣಾಮಕಾರಿ.

ಉರಿ ಊತ, ಹಸಿ ಗಾಯಗಳಿಗೆ ಇದರ ರಸ ಹಚ್ಚಿದರೆ ಬೇಗನೆ ಗುಣವಾಗುತ್ತದೆ. ಸೇವನೆ ಮಲಬದ್ಧತೆಗೆ ರಾಮಬಾಣ.

ಪ್ರತಿದಿನ ಖಾಲಿ ಹೊಟ್ಟೆಗೆ ಇದರ ರಸವನ್ನು ಸೇವಿಸಬೇಕು. ಉರಿ ಮೂತ್ರದ ತೊಂದರೆಯಿರುವವರು ಲೋಳೆಸರದ ರಸವನ್ನು ಒಂದು ವಾರ ಸೇವಿಸಿದರೆ ಪರಿಣಾಮಕಾರಿ. ಋತುಸ್ರಾವದ ತೊಂದರೆ ಹೊಟ್ಟೆ ನೋವಿಗೆ ಇದರ ತಿರುಳನ್ನು ಕಲ್ಲು ಸಕ್ಕರೆ ಜೊತೆ ಸೇವಿಸಬೇಕು.

ಇದರ ರಸವನ್ನು ಮುಖಕ್ಕೆ ಹಚ್ಚಿದರೆ ಮುಖವು ಕಾಂತಿಯುತವಾಗಿ ಸುಕ್ಕುಗಳು ಇಲ್ಲದಂತಾಗುತ್ತದೆ. ಮೊಡವೆ ಗುಳ್ಳೆಗಳು ಕಮ್ಮಿಯಾಗುತ್ತವೆ. ಅಂಗಾಲಿಗೆ ಚುಚ್ಚಿದ ಮುಳ್ಳು ತೆಗೆದ ಬಳಿಕ ಆ ಜಾಗಕ್ಕೆ ಲೋಳೆಸರದ ರಸವನ್ನ ಹಚ್ಚಿಕೊಂಡರೆ ನೋವು ಉರಿ ಕಮ್ಮಿಯಾಗುತ್ತದೆ.

ಕಣ್ಣು ಉರಿ ಬಂದರೆ ಇದರ ಎಲೆಯನ್ನು ತೊಳೆದು ಬದಿಯ ಮುಳ್ಳುಗಳನ್ನು ತೆಗೆದು ತುಂಡು ಮಾಡಿ ನಡುವಿನ ದಪ್ಪ ತಿರುಳನ್ನು ಕಣ್ಣುಗಳ ಮೇಲೆ ಇಟ್ಟು ಅರ್ಧ ಗಂಟೆ ಮಲಗಿದರೆ ಕಣ್ಣು ಉರಿ ಕಮ್ಮಿಯಾಗುತ್ತದೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group