spot_img
Saturday, July 27, 2024
spot_imgspot_img
spot_img
spot_img

ಶ್ರಮಿಕನಿಗೆ ಆದಾಯ ತಂದಿತು ಈ ಹಡೀಲು ಭೂಮಿ!:ಕೃಷ್ಣ ಮರಕಲ ಯಶೋಗಾಥೆ

ಊಟ… ಉಪಹಾರ…. ಯಾವುದೇ ಇರಲಿ. ಅಲ್ಲಿ ತರಕಾರಿಯ ಸಾಂಬಾರ್, ಪದಾರ್ಥ, ಪಲ್ಯ ವೈವಿದ್ಯತೆಯ ಸ್ವಾದ ಇದ್ದೇ ಇರುತ್ತದೆ. ತರಕಾರಿಯ ಬಳಕೆಯಿಂದ ಜೀವಸತ್ವಗಳನ್ನು ತುಂಬಿಕೊಂಡ ವಿವಿಧ ಪೋಷಕಾಂಶಗಳು ದೊರೆತರೆ ಆರೋಗ್ಯ ವರ್ಧನೆಯ ಔಷಧೀಯ ಗುಣಗಳೂ ಅದರಲ್ಲಿವೆ. ಅಷ್ಟೇ ಅಲ್ಲ; ಸೊಪ್ಪು, ತರಕಾರಿಗಳು, ಗೆಡ್ಡೆ-ಗೆಣಸುಗಳು ಬೆಳೆಗಾರರಿಂದ ಗ್ರಾಹಕರನ್ನು ತಲುಪುವವರೆಗೆ ಹಲವಾರು ಮಂದಿಗೆ ಜೀವನ ಕಟ್ಟಿಕೊಟ್ಟಿದೆ. ಉದ್ಯೋಗ ನೀಡಿದೆ.

ನನಗೊಂದಿಷ್ಟು ಭೂಮಿ ಇದ್ದಿದ್ದರೆ ಕೃಷಿ-ತರಕಾರಿ ಮಾಡಬಹುದಿತ್ತು. ಎಂದು ಭೂಮಿ ಇಲ್ಲದವರು ಅಸಹಾಯಕತೆ ತೋಡಿಕೊಳ್ಳವುದುಂಟು. ತನ್ನದಾದ ಕೃಷಿ ಭೂಮಿ ಇಲ್ಲದಿದ್ದರೇನಂತೆ ಬೇರೆಯವರ ಭೂಮಿ ಸಿಕ್ಕಿದರೂ ಸಾಕು, ತಾನು ಸಾಧನೆ ಮಾಡಿ ತೋರಿಸುವೆ ಎಂಬ ಛಲದಿಂದ ಕೃಷಿ ಮಾಡುವ; ಬಿತ್ತಿ ಬೆಳೆಯುವ ಅತಿ ಸಣ್ಣ ಶ್ರಮಿಕ ಕೃಷಿಕರಿದ್ದಾರೆ. ಅಂತಹ ಕೃಷಿಕರಲ್ಲಿ ಸಾಸ್ತಾನದ ಪಾಂಡೇಶ್ವರ ನಿವಾಸಿ ಕೃಷ್ಣ ಮರಕಾಲ ಗಮನ ಸೆಳೆಯುತ್ತಾರೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಬಳಿಯ ಪಾಂಡೇಶ್ವರದ ಕೃಷ್ಣ ಮರಕಲ ಅವರು ತನ್ನಲ್ಲಿ ಹೆಚ್ಚು ಭೂಮಿ ಇಲ್ಲದಿದ್ದರೂ ಕೃಷಿ ಮಾಡದೆ ಬಿಟ್ಟಿದ್ದ ಬೇರೆಯವರ ಪಾಳು ಭೂಮಿಯಲ್ಲಿ ಹಸಿರು ಬಿತ್ತಿದವರು. ಕೈ ತುಂಬ ದುಡಿಮೆಯಿಂದ ಬದುಕಿನ ಬುತ್ತಿ ಕಟ್ಟಿಕೊಂಡವರು.  ಕೃಷ್ಣ ಮರಕಲರು ಮೀನುಗಾರಿಕೆಯ ದೋಣಿಯಲ್ಲಿ ಕೆಲಸ ಮಾಡಿಕೊಂಡಿದ್ದವರು. ಕೃಷಿಯೊಂದನ್ನೇ ನೆಚ್ಚಿಕೊಂಡು ಜೀವನ ನಿರ್ವಹಿಸುವಷ್ಟು ಕೃಷಿ ಭೂಮಿ ಅವರ ಪಾಲಿಗೆ ಇರಲಿಲ.್ಲ ಮನೆಯ ಬಳಿ ಇದ್ದ ಜಾಗದಲ್ಲಿ ಹೆಚ್ಚೇನು ಮಾಡುವ ಹಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಅವರ ಕೃಷಿ ಆಸಕ್ತಿಗೆ ನೀರೆರೆದು ಪೋಷಿಸಿದವರು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ. ಆ ಪರಿಸರದಲ್ಲಿ ಹುಟ್ಟಿಕೊಂಡ ಯೋಜನೆಯ ರಕ್ತೇಶ್ವರಿ ಸ್ವಸಹಾಯ ಸಂಘದಲ್ಲಿ ಕೃಷ್ಣರವರ ಪುತ್ರ ಸತೀಶ್ ಸದಸ್ಯರಾದರು. ಯೋಜನೆಯ ಸಂಪರ್ಕ ಆದ ನಂತರ ಕೃಷ್ಣರವರ ಬದುಕಿನ ಚಿತ್ರಣ ಮೆಲ್ಲ ಮೆಲ್ಲನೆ ಬದಲಾವಣೆಯ ಹಾದಿ ಹಿಡಿಯಿತು. ಶ್ರಮಜೀವಿಯಾದ ಕೃಷ್ಣ ಮರಕಲರಲ್ಲಿ ಕೃಷಿ ಮಾಡಬೇಕೆಂಬ ತುಡಿತ, ಛಲ ಹೆಚ್ಚಾಯಿತು

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನಲ್ಲಿ ಯೋಜನೆ ವತಿಯಿಂದ ಹಡೀಲು ಭೂಮಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕೃಷ್ಣ ಅವರ ಮನೆ ಸಮೀಪ ಕೃಷಿ ಮಾಡದೆ ಹಡೀಲು ಬಿಟ್ಟ ಸುಮಾರು ಐದು ಎಕ್ರೆ ಭೂಮಿಯಿತ್ತು. ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ ಹಾಗೂ ಪ್ರೋತ್ಸಾಹದಿಂದ ಕೃಷ್ಣ ಅವರ ಕೃಷಿ ಮಾಡುವ ಕನಸು ನೆನಸಾಯಿತು. ಹಡೀಲಿನ ಭೂಮಿ ಹಸುರಾಯಿತು. ಹೊಸ ಚೈತನ್ಯ ಪಡೆದುಕೊಂಡಿತು.

ಆಧರಿಸಿದ ಭತ್ತ ಆಸರೆಯಾದ ತರಕಾರಿ

ಆರಂಭದಲ್ಲಿ ಭತ್ತದ ಕೃಷಿಗೆ ಮುಂದಾದ ಕೃಷ್ಣರಿಗೆ ಯೋಜನೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಾಂತ್ರಿಕರಣದ ಭತ್ತದ ಬೇಸಾಯ ಆರಂಭಿಸಿದರು. ಭೂಮಿ ಹದಗೊಳಿಸುವುದು, ಬಿತ್ತನೆ, ನಾಟಿ, ಕಟಾವು, ಒಕ್ಕಣೆ, ಭತ್ತ ಬೇರ್ಪಡಿಸುವುದಲ್ಲದೆ ಬೈಹುಲ್ಲಿನ ಪಿಂಡಿ (ಉಂಡೆ/ಬೇಲ್) ಮಾಡುವಲ್ಲಿಯವರೆಗೆ ಯಂತ್ರವನ್ನೇ ಬಳಸಿಕೊಂಡರು. ಇದರಿಂದ ಕ್ಲಪ್ತಕಾಲಕ್ಕೆ ಕೃಷಿ ಕೆಲಸ ಕಾರ್ಯಗಳು ನಡೆಸಲು ಅನುಕೂಲವಾಯಿತ್ತಲ್ಲದೆ. ಹಣಕಾಸಿನಲ್ಲೂ ಉಳಿತಾಯವಾಯಿತು. ಯಾಂತ್ರೀಕರಣದಿಂದ ಎಕರೆಯೊಂದಕ್ಕೆ ೧೦-೧೨ ಸಾವಿರ ಖರ್ಚುವೆಚ್ಚಗಳಾದರೆ ಎಕರೆಗೆ ೨೫ ರಿಂದ ೩೦ ಕ್ವಿಂಟಾಲ್‌ವರೆಗೆ ಭತ್ತ ಇಳುವರಿಯೂ ದೊರೆಯಿತು ಎನ್ನುತ್ತಾರೆ ಕೃಷ್ಣ. ಯೋಜನೆಯ ವತಿಯಿಂದಲೇ ಮಾರುಕಟ್ಟೆ ವ್ಯವಸ್ಥೆ ಮಾಡಲಾಯಿತು. ಉತ್ತಮ ದರವೂ ಲಭಿಸಿತು. ಅವರ ಆಸಕ್ತಿ ಭತ್ತ ಬೆಳೆಯಲ್ಲಷ್ಟೇ ಸೀಮಿತವಾಗಲಿಲ್ಲ. ಮುಂಗಾರು ಬೆಳೆಯ ನಂತರ ಭೂಮಿಯನ್ನು ಬರಿದೇ ಬಿಡದೆ ತರಕಾರಿ ಬೆಳೆಯುತ್ತ ಗಮನ ಹರಿಸಿದರು

ತೊಂಡೆ, ಬೆಂಡೆ, ಅಲಸಂಡೆ, ಮೆಣಸು, ಗೆಣಸು, ಹೆಸರು, ಕರಬೂಜ, ಕಲ್ಲಂಗಡಿ, ಅವಡೆ ಹೀಗೆ ಸಾಲು ಸಾಲು ತರಕಾರಿಗಳು. ಅಲ್ಲಿ ಬೆಳೆದು ನಿಂತಿವೆ. ಸುಮಾರು ೨೮ ಸೆಂಟ್ಸö್ನಲ್ಲಿ ಅಲಸಂಡೆ ಬೆಳೆದಿದ್ದಾರೆ. ಪ್ರತಿದಿನ ಇದರಿಂದ ೨೦ ರಿಂದ ೫೦ ಕೆಜಿ ವರೆಗೂ ಮಾರಾಟ ಮಾಡುತ್ತರೆ. ೨೦ ಸೆಂಟ್ಸ್ನಲ್ಲಿ ಬೆಂಡೆ ಬೆಳೆದರೆ ಪ್ರತಿದಿನ ೨೦-೨೫ಕೆಜಿ ಕೊಯ್ಲು ಮಾಡುತ್ತಾರೆ. ತೊಂಡೆಕಾಯಿ ೨೦-೨೫ ಸೆಂಟ್ಸö್ನಲ್ಲಿ ಬೆಳೆದಿದ್ದು, ಒಂದುವರೆ ಎಕರೆಯಲ್ಲಿ ಕಲ್ಲಂಗಡಿಯಿದೆ. ಇದಲ್ಲದೆ ಗೆಣಸು, ಮೆಣಸು, ಸೌತೆಕಾಯಿ, ಇಬ್ಬುಳ, ಕರಬೂಜಾ, ಹೆಸರು ಬೆಳೆದಿದ್ದಾರೆ. ಬೆಳೆದ ತರಕಾರಿಯನ್ನು ಸಮೀಪದ ಸಾಲಿಗ್ರಾಮಕ್ಕೆ ಅವರೇ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಉತ್ತಮ ದರ ಸಿಗುತ್ತಿದೆ ಒಳ್ಳೆಯ ಆದಾಯವು ಇದೆ. ಹೆಚ್ಚು ಮಳೆಯಿಂದ ಕೆಲವೊಮ್ಮೆ ಬೆಳೆ ಹಾನಿಯಾದದ್ದೂ ಇದೆ. ಎನ್ನುತ್ತಾರೆ ಕೃಷ್ಣ

ಹೈನುಗಾರಿಕೆ ಕೈ ಹಿಡಿಯಿತು:

ಪಶು ಆಹಾರದ ದರ ಹೆಚ್ಚಳದ ನಂತರ ಬಹಳಷ್ಟು ಮಂದಿ ಹೈನುಗಾರಿಕೆಯಿಂದ ದೂರ ಸರಿದರೂ ಕೃಷ್ಣ ಮರಕಲ ಮತ್ತು ಪದ್ದು ದಂಪತಿ ಹೈನುಗಾರಿಕೆಯನ್ನು ಬಿಟ್ಟಿಲ್ಲ. ಮಿಶ್ರತಳಿಯ ಮೂರು ನಾಲ್ಕು ದನಗಳಿವೆ. ಒಂದು ಹಾಲು ಕರೆಯುವ ಹಸುವಿದೆ. ಪ್ರತಿದಿನ ೧೦ ಲೀಟರ್ ಹಾಲನ್ನು ಸಮೀಪದ ಕೈನಬೆಟ್ಟು ಹಾಲಿನ ಸಂಘಕ್ಕೆ ನೀಡುತ್ತಾ ಬಂದಿದ್ದಾರೆ. ಭತ್ತದ ಕೃಷಿ ಹಾಗೂ ತರಕಾರಿ ಬೆಳೆಗೆ ಬೇಕಾದ ಗೊಬ್ಬರ ಈ ದನಗಳಿಂದಲೇ ಲಭ್ಯವಾಗುತ್ತದೆ. ಗೋಬರ್ ಗ್ಯಾಸ್ ಇರುವುದರಿಂದ ಅಡುಗೆಗೆ ಗ್ಯಾಸ್ ಸಮಸ್ಯೆ ತಲೆದೋರುವುದಿಲ್ಲ.

ಸ್ವಾವಲಂಬನೆ ಸ್ವಉದ್ಯೋಗ
ಮನಸ್ಸಿದ್ದರೆ ಮಾರ್ಗವಿದೆ. ಆಸಕ್ತಿಯಿದ್ದರೆ ಉದ್ಯೋಗವಿದೆ. ಕೃಷ್ಣ ಅವರ ಕುಟುಂಬ ಮನೆಯಲ್ಲಿ ತಂಪು ಪಾನೀಯಗಳನ್ನು ತಯಾರಿಸಿ ಮಾರುಕಟ್ಟೆಗೆ ಒದಗಿಸುತ್ತಾರೆ. ಬಾಳೆಹಣ್ಣು, ಬಾದಾಮಿ, ದ್ರಾಕ್ಷಿಯಿಂದ ತಂಪು ಪಾನೀಯಗಳನ್ನು ತಯಾರಿಸಿ ಅಂಗಡಿಗಳಿಗೆ ಸರಬರಾಜು ಮಾಡುತ್ತಾರೆ. ಇವರ ಪುತ್ರರಾದ ಸಂತೋಷ ಮತ್ತು ಸತೀಶ ತಂಪು ಪಾನೀಯ ವ್ಯವಹಾರದಲ್ಲಿ ತೊಡಗಿರುವುದಲ್ಲದೆ ಸಂತೋಷ ಬಾರ್ಕೂರಿನಲ್ಲಿ, ಸತೀಶ ಅವರಿಗೆ ಚೇಂಪಿಯಲ್ಲಿ ಫಾಸ್ಟ್ ಫುಡ್ ಅಂಗಡಿಯಿದೆ. ಇದರಿಂದ ಸ್ವಾವಲಂಬನೆಯ ಉದ್ಯೋಗ ಸಾಧ್ಯವಾಗಿದೆ. ಯೋಜನೆಯಿಂದ ನೆರವು ಪಡೆದು ನಮ್ಮ ಕುಟುಂಬವು ಆರ್ಥಿಕ ಸುಧಾರಣೆಯನ್ನು ಕಂಡಿದೆ. ಗೌರವಯುತ ಜೀವನ ನಡೆಸಲು ಅನುಕೂಲವಾಗಿದೆ ಎನ್ನುತ್ತಾರೆ ಕೃಷ್ಣ ಮತ್ತು ಪದ್ದು ದಂಪತಿ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group