spot_img
Saturday, April 25, 2026
spot_imgspot_img

ಕೃಷಿಕರ ಹೊಲದಲ್ಲಿ ಸದ್ದು ಮಾಡುತ್ತಿದೆ ಬೀಜ ಮತ್ತು ಗೊಬ್ಬರ ಏಕಕಾಲದಲ್ಲಿ ಬಿತ್ತನೆ ಯಂತ್ರ

ಕೃಷಿ ಕ್ಷೇತ್ರ ಇತ್ತೀಚೆಗೆ ಯಾಂತ್ರಿಕರಣದತ್ತ ಹೆಚ್ಚು ಹೆಚ್ಚು ವಾಲುತಿದೆ. ಕೃಷಿ ಕಾರ್ಮಿಕರ ಸಮಸ್ಯೆ ಒಂದೆಡೆಯಾದರೆ ಇತರ ಕಾರಣಗಳು ಹಲವು ಇವೆ. ನವೀನ ಮಾದರಿಯ ಯಂತ್ರಗಳು ರೈತರ ಹೊಲಗದ್ದೆಗಳಲ್ಲಿ ಸದ್ದು ಮಾಡುತ್ತಿವೆ.

ಕಳೆದ 8೦ ವರ್ಷಗಳಿಂದ ಕೃಷಿ ಯಂತ್ರೋಪಕರಣ ತಯಾರಿಯಲ್ಲಿ ತೊಡಗಿಸಿಕೊಂಡು ಕೃಷಿಕರ ಮನೆಗೆದ್ದ ಅಣ್ಣಿಗೇರಿಯ ಬಿಸ್ಮಿಲ್ಲಾ ಆಗ್ರೋ ಇಂಪ್ಲ್ಮೆಂಟ್ಸ್ ಸಂಸ್ಥೆಯು ಕೃಷಿಗೆ ಪೂರಕವಾದ ಹೊಸ ಹೊಸ ಯಂತ್ರಗಳನ್ನು ಪರಿಚಯುಸುತ್ತಲೇ ಈ ಸಂಸ್ಥೆಯ ಇತ್ತೀಚೆಗಿನ ಆವಿಷ್ಕಾರವೆಂದರೆ ಗೊಬ್ಬರ ಮತ್ತು ಬೀಜ ಏಕಕಾಲದಲ್ಲಿ ಬಿತ್ತನೆ ಮಾಡುವಂತಹ ಯಂತ್ರ. ಬಿತ್ತನೆಯ ಈ ಕೂರಿಗೆಯಲ್ಲಿ ಅಜವಾನದಿಂದ ಬೆಳ್ಳುಳ್ಳಿಯ ವರೆಗೆ ಎಲ್ಲಾ ರೀತಿಯ ಬೀಜಗಳನ್ನು ಬಿತ್ತನೆ ಮಾಡಬಹುದು. ಜೊತೆಗೆ ಬೇಕಾದ ಪ್ರಮಾಣದಲ್ಲಿ ಗೊಬ್ಬರವನ್ನು ನೀಡಬಹುದು. ಮೂರು ಮಂದಿ ಕೂಲಿಕಾರ್ಮಿಕರು ಒಂದು ಗಂಟೆಯಲ್ಲಿ ಮಾಡಬಹುದಾದ ಕೆಲಸವನ್ನು ಈ ಯಂತ್ರ ಒಂದು ಗಂಟೆಯಲ್ಲಿ ಮಾಡುತ್ತದೆ.

ಈ ಉಪಕರಣದ ತಂತ್ರಜ್ಞಾನ ಹಾಗೂ ಅನುಕೂಲತೆಗಳನ್ನು, ಸಾಧಕ ಬಾಧಕಗಳನ್ನು ಹೊಲದಲ್ಲಿ ಪರೀಕ್ಷಿಸಿದ ನಂತರವೆ ಮಾರುಕಟ್ಟೆಗೆ ಸಂಸ್ಥೆ ಪರಿಚಯಿಸಿದೆ. ಈ ಕೂರಿಗೆಯ ಬಳಕೆಯಿಂದ ರೈತರ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಕೂಲಿಕಾರ್ಮಿಕರ ಸಮಸ್ಯೆ ನಿವಾರಣೆಯಾಗುತ್ತದೆ.

ಬೀಜ ಮತ್ತು ಗೊಬ್ಬರ ಕೊನೆಯ ಕಾಳಿನವರೆಗೂ ಬಿತ್ತನೆ ಮಾಡಬಹುದಾಗಿದೆ. ಹಾಗೂ ಬಿತ್ತನೆ ಮುಗಿದ ನಂತರ ಕೂರಿಗೆ ಡಬ್ಬಿಯಲ್ಲಿ ಉಳಿದ ಬೀಜ ಗೊಬ್ಬರ ಸ್ವಲ್ಪವೂ ಉಳಿಯದಂತೆ ಹೊರಬರುವ ವ್ಯವಸ್ಥೆಯಿದೆ. ಹೈಡ್ರೋಲಿಕ್ ಪಂಪು ವ್ಯವಸ್ಥೆಯು ಉಪಕರಣದಲ್ಲಿ ರೈತರ ಸುರಕ್ಷತೆಗೆ ಆದ್ಯತೆ ನೀಡಿದೆ. ಕೆಸರಿನಲ್ಲಿ ಮತ್ತು ಒಣ ಬೇಸಾಯದಲ್ಲೂ ಬಿತ್ತುವ ಟ್ರ‍್ಯಾಕ್ಟರ್ ಕೂರಿಗೆಯನ್ನು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಯದು.

ಮಾಹಿತಿಗೆ :90089286, 9739231911

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group