ಕೃಷಿಬಿಂಬ ಸುದ್ದಿ: ಈ ಸಲದ ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ, ಕರ್ನಾಟಕ ಭೂ ಕಂದಾಯ ಕಾಯ್ದೆ 1964 (ಕರ್ನಾಟಕ ಕಾಯ್ದೆ 12, 1964) ಕಲಂ 95ಕ್ಕೆ ತಿದ್ದುಪಡಿ ತರುವ ವಿಧೇಯಕವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಸಭೆಯಲ್ಲಿ ಮಂಡಿಸಿದರು. ಈ ಮಸೂದೆಯಡಿಯಲ್ಲಿ ಯಾವುದೇ ಕೃಷಿ ಭೂಮಿಯನ್ನು ಹೊಂದಿರುವವರು ಅಂತಹ ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಬೇರೆ ಉದ್ದೇಶಕ್ಕೆ ಬಳಸಲು ಬಯಸಿದರೆ ಮತ್ತು ಅಂತಹ ಭೂಮಿ ಮಾಸ್ಟರ್ ಪ್ಲಾನ್ ಪ್ರಕಟಿಸದ ಸ್ಥಳೀಯ ಯೋಜನಾ ಪ್ರದೇಶದ ಹೊರಗಿದ್ದರೆ, ಅರ್ಜಿದಾರರು ಭೂ ಪರಿವರ್ತನೆಗಾಗಿ ಅರ್ಜಿಯ ಜೊತೆ ಅಫಿಡವಿಟ್ ನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಆಡಳಿತ ಮಂಡಳಿಯ ಒತ್ತಡವಿಲ್ಲದೆ ನಿಷ್ಪಕ್ಷಪಾತವಾಗಿ ರೈತರು ಮತ್ತು ಹಾಲು ಉತ್ಪಾದಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಇದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳಿಗೆ ಸಹಾಯ ಮಾಡುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳೊಳಗೆ ಜಿಲ್ಲಾಧಿಕಾರಿಗಳು ನಿರ್ಧರಿಸದಿದ್ದರೆ, ಬದಲಾವಣೆಗೆ ಅನುಮೋದನೆಯನ್ನು ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ಯಾವುದೇ ವರ್ಗದ ಸಹಕಾರಿ ಸಂಘಗಳಿಗೆ ನೌಕರರ ಸಾಮಾನ್ಯ ವರ್ಗವನ್ನು ರೂಪಿಸಲು ಸಹಕಾರಿಯಾಗುವ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆಯನ್ನು ನಿನ್ನೆ ಸದನದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಂಡಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಣ ದುರ್ಬಳಕೆ ಪ್ರಕರಣಗಳಿಗೆ ಇದರಿಂದ ಕಡಿವಾಣ ಹಾಕಬಹುದು.