- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

ಬಸಳೆ ಕೃಷಿಯಲ್ಲೇ ಬದುಕಿನ ಖುಷಿ: ಹಿರಿಯ ಕೃಷಿಕ ವಾಸುದೇವ ಪ್ರಭುಗಳ ಯಶಸ್ಸಿನ ಕತೆ

ಬರಹ-ರಾಧಾಕೃಷ್ಣ ತೊಡಿಕಾನ -ಪ್ರಸಾದ್ ಶೆಣೈ ಕಾರ್ಕಳ

ಅಲ್ಲಿ ಬಿಳಿ ಬೆಂಡೆಕಾಯಿಗಳನ್ನು ರಾಶಿ ಹಾಕಲಾಗಿತ್ತು. ಬೆಂಡೆಯನ್ನು ನೋಡಿದ ಗ್ರಾಹಕರೊಬ್ಬರು, “ಬೆಂಡೆ ಕಿಲೋಕ್ಕೆ ಎಷ್ಟು?” ಎಂದು ಕೇಳಿದರು. ಆದರೆ, ಮಾರಾಟಕ್ಕೆಂದು ತಂದಿದ್ದ ಬೆಂಡೆಕಾಯಿಗಳೆಲ್ಲ ಕೆಲವೇ ಗಂಟೆಗಳಲ್ಲಿ ಮಾರಾಟವಾಗಿದ್ದು, ಎಲ್ಲಾ ಖಾಲಿಯಾಗಿದೆ. ಅದನ್ನು ಕೊಂಡೊಯ್ಯವುದಕ್ಕೆ ತೆಗೆದಿರಿಸಿದ್ದು ಎಂದು ಮಾರಾಟಕ್ಕಿಟ್ಟವರು ಹೇಳಿದರು. ಇದನ್ನು ಕೇಳಿದ ಗ್ರಾಹಕರಿಗೆ ಸ್ವಲ್ಪ ನಿರಾಸೆಯಾಯಿತು.
ಅದೆಲ್ಲವನ್ನೂ ಗಮನಿಸುತ್ತಾ ನಿಂತಿದ್ದ ನನಗೆ ಅವರ ಬಗ್ಗೆ ಕುತೂಹಲ ಮೂಡಿತು. “ನೀವೇ ತರಕಾರಿ ಬೆಳೆದಿರುವುದೇ?” ಎಂದು ಪ್ರಶ್ನಿಸಿದೆ. ಅವರು, “ಹೌದು” ಎಂದರು. ಬೆಂಡೆಗಿಂತಲೂ ಹೆಚ್ಚಾಗಿ ಬಸಳೆ ಬೆಳೆಯುತ್ತೇನೆ. ತಂದಿದ್ದ ಬಸಳೆಯೂ ಸಂಪೂರ್ಣ ಮಾರಾಟವಾಗಿದೆ ಎಂದು ತಿಳಿಸಿದರು. ಅವರ ಬಸಳೆ ಕೃಷಿಯನ್ನು ನೋಡಬೇಕೆಂಬ ಆಸಕ್ತಿಯಿಂದ ಅವರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡೆ. ಆದರೆ, ಕಾರಣಾಂತರಗಳಿಂದ ಅವರನ್ನು ಭೇಟಿಯಾಗಲು ಬಹಳ ದಿನಗಳವರೆಗೆ ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಆ ವಿಚಾರ ಮರೆತೇ ಹೋಗಿತ್ತು.

ಇತ್ತೀಚೆಗೆ ನಾನು ಮತ್ತು ಪ್ರಸಾದ್ ಶೆಣೈ ಅವರು ಕೃಷಿಕರ ಸಂದರ್ಶನ ಮಾಡಲು ಯೋಚಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ನೆನಪಾದವರು ಬಸಳೆಯ ಪ್ರಭುಗಳು!
ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟು ಗ್ರಾಮದ ಮೈಕಾಳದಲ್ಲಿರುವ ವಾಸುದೇವ ಪ್ರಭು ಅವರನ್ನು ಹುಡುಕಿ ಹೊರೆಟೆವು. ಆದರೆ, ಹಳ್ಳಿಯಲ್ಲಿನ ಕವಲು ದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಉಂಟಾಯಿತು. ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರಲ್ಲಿ ವಾಸುದೇವ ಪ್ರಭುಗಳ ಮನೆಗೆ ದಾರಿ ವಿಚಾರಿಸಿದೆವು. ಹೆಸರು ಹೇಳಿದಾಗ ಅವರಿಗೆ ತಿಳಿಯಲಿಲ್ಲ. “ಬಸಳೆ ಬೆಳೆಯುತ್ತಾರಲ್ಲ…. ಎಂದಾಗ ತಕ್ಷಣ ಗುರುತಿಸಿ, ಇದೇ ರಸ್ತೆಯಲ್ಲಿ ಕೊನೆಯವರೆಗೆ ಹೋಗಿ ಬಲಕ್ಕೆ ತಿರುಗುವಂತೆ ದಾರಿ ತೋರಿಸಿದರು.

ಕಳೆದ 47 ವರ್ಷಗಳಿಂದ ಬಸಳೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಸಳೆ ಕೃಷಿಯ ಮೂಲಕವೇ ಊರಿನಲ್ಲಿ ಗುರುತಿಸಿಕೊಂಡಿರುವ ವಾಸುದೇವ ಪ್ರಭುಗಳಿಗೆ ಈಗ 76 ವರ್ಷ ವಯಸ್ಸು. ಇಳಿವಯಸ್ಸಿನಲ್ಲಿಯೂ ಕೃಷಿಯ ಮೇಲಿನ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಬಹುತೇಕ ತರಕಾರಿ ಕೃಷಿಯ ಕೆಲಸಗಳನ್ನು ತಾವೇ ನಿರ್ವಹಿಸುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕೆಲಸಗಾರರ ನೆರವು ಪಡೆಯುತ್ತಾರೆ.

ವಾಸುದೇವ ಪ್ರಭುಗಳು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಆದರೆ, ಉದ್ಯೋಗಕ್ಕಾಗಿ ಬೇರೆಡೆ ಅಲೆದಾಡುವ ಬದಲು ಕೃಷಿಯನ್ನೇ ತಮ್ಮ ಬದುಕಿನ ದಾರಿಯನ್ನಾಗಿ ಆಯ್ಕೆ ಮಾಡಿಕೊಂಡರು. ಶಾಲಾ-ಕಾಲೇಜು ದಿನಗಳಿಂದಲೇ ಅವರಿಗೆ ಕೃಷಿಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದರು. ಶಾಲಾ ದಿನಗಳಲ್ಲಿ ಒಂದು ಕ್ವಿಂಟಲ್ ಮೆಣಸು ಬೆಳೆದಿದ್ದ ಅವರು, ಮಾರುಕಟ್ಟೆಯಲ್ಲಿ ಅದಕ್ಕೆ ಹೆಚ್ಚಿನ ಬೆಲೆ ಸಿಗದಿದ್ದರೂ ಒಂದಿಷ್ಟು ಆದಾಯ ಗಳಿಸಿದ್ದರು. ಕೃಷಿಯಿಂದಲೂ ಹಣ ಸಂಪಾದಿಸಬಹುದು ಎಂಬ ಆತ್ಮವಿಶ್ವಾಸವನ್ನು ಮೂಡಿಸಿತ್ತು.

ಪರಂಪರೆಯಿಂದ ಬಂದ ಭತ್ತದ ಕೃಷಿಯ ಜೊತೆಗೆ 1980 ರಲ್ಲಿ ಬಸಳೆ ಬೆಳೆಯುವುದನ್ನು ಆರಂಭಿಸಿದ ಅವರು, ನಿರಂತರವಾಗಿ ಈ ಕೃಷಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬಸಳೆ ಕೃಷಿಯಲ್ಲಿನ ಅವರ ಅನುಭವ ಮತ್ತು ಸಾಧನೆಯಿಂದಾಗಿ ‘ಬಸಳೆ ಪ್ರಭು’ ಎಂದು ಗುರುತಿಸಿಕೊಂಡಿದ್ದಾರೆ
ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಬಸಳೆ ಬೆಳೆಯುತ್ತಿದ್ದ ಅವರಿಗೆ ದಿನಕಳೆದಂತೆ ಬೇಡಿಕೆ ಹೆಚ್ಚಾಯಿತು. ಇದೀಗ ಎರಡು-ಮೂರು ಗದ್ದೆಗಳಲ್ಲಿ ಸುಮಾರು 4೦೦ರಿಂದ 5೦೦ ಬಸಳೆ ಬುಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಒಂದು ಬಸಳೆ ಬುಡವನ್ನು ಸುಮಾರು ಒಂದು ವರ್ಷದವರೆಗೆ ಉಳಿಸಿಕೊಂಡು, ನಂತರ ಬೇರೆ ಜಾಗಕ್ಕೆ ಸ್ಥಳಾಂತರಿಸುತ್ತಾರೆ. ಎರಡು-ಮೂರು ಅಡಿ ಉದ್ದಕ್ಕೆ ಬೆಳೆದ ಬಸಳೆಯನ್ನು ವಾರಕ್ಕೊಮ್ಮೆ ಕೊಯ್ಲು ಮಾಡಿ ಹಿರಿಯಡ್ಕ ಸಂತೆಯಲ್ಲಿ ಮಾರಾಟ ಮಾಡುತ್ತಾರೆ.

ಬಸಳೆ ಗಿಡಗಳ ಉತ್ತಮ ಬೆಳವಣಿಗೆಗಾಗಿ ಹಟ್ಟಿಗೊಬ್ಬರ, ಕೋಳಿ ಗೊಬ್ಬರ, ಕುರಿ ಗೊಬ್ಬರ, ನೆಲಗಡಲೆ ಹಿಂಡಿ, ಕಹಿಬೇವಿನ ಮಿಶ್ರಣ ಮೊದಲಾದವುಗಳನ್ನು ಬಳಸುತ್ತಾರೆ. ಸಂಪೂರ್ಣ ಸಾವಯವ ಪದ್ಧತಿಯಲ್ಲದಿದ್ದರೂ ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಬೇಸಿಗೆ ಮತ್ತು ಮಳೆಗಾಲ ಎಂಬ ಎರಡು ಅವಧಿಗಳಲ್ಲಿ ಬಸಳೆ ಬೆಳೆಯುತ್ತಾರೆ. ಮಳೆಗಾಲದಲ್ಲಿ ದೊಡ್ಡ ಚಪ್ಪರ ನಿರ್ಮಿಸಿ, ಅದರ ಮೇಲೆ ಟಾರ್ಪಾಲಿನ್ ಹೊದಿಕೆ ಹಾಕಿ ಬಸಳೆ ಬೆಳೆಸುತ್ತಾರೆ. ಇದರಿಂದ ಮಳೆಯ ನೇರ ಹೊಡೆತದಿಂದ ಬಳ್ಳಿಗಳನ್ನು ರಕ್ಷಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಬಸಳೆ ಪಡೆಯಲು ಸಾಧ್ಯವಾಗುತ್ತದೆ. ಕುದಿ ಶ್ರೀನಿವಾಸ ಭಟ್ಟರು ಟಾರ್ಪಾಲು ಕೊಡುಗೆಯಾಗಿ ನೀಡಿರುವುದನ್ನು ನೆನಪಿಸಿಕೊಳ್ಳತ್ತಾರೆ.

ಎರಡು ಸಾಲುಗಳ ಮಧ್ಯೆ ಚಿಕ್ಕ ಚಪ್ಪರ ನಿರ್ಮಿಸುವ ಪದ್ಧತಿಯನ್ನೂ ಅಳವಡಿಸಿಕೊಂಡಿದ್ದಾರೆ. ಇದರಿಂದ ಬಸಳೆ ಬಳ್ಳಿಗಳು ವ್ಯವಸ್ಥಿತವಾಗಿ ಬೆಳೆಯುವುದರ ಜೊತೆಗೆ ಕೊಯ್ಲು ಮಾಡುವ ಕೆಲಸವೂ ಸುಲಭವಾಗುತ್ತದೆ. ಬಸಳೆಯ ಜೊತೆಗೆ ಬೆಂಡೆ, ಹಾಗಲಕಾಯಿ, ತೊಂಡೆಕಾಯಿ, ಸೋರೆಕಾಯಿ, ಹರಿವೆ ಮೊದಲಾದ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ.

ಕೃಷಿಯಲ್ಲಿ ಖುಷಿಯಿದೆ

“ತರಕಾರಿಯಾಗಲಿ, ಇತರ ಕೃಷಿಯಾಗಲಿ ಖುಷಿಯಿಂದ ಮಾಡಬೇಕು. ಕೃಷಿಯಲ್ಲಿ ಖುಷಿಯಿದೆ. ಬೆಳೆಗಾರನೇ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವವನಾಗಬೇಕು. ಆಗ ಮಾತ್ರ ಕೃಷಿಯಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯ” ಎನ್ನುತ್ತಾರೆ ವಾಸುದೇವ ಪ್ರಭುಗಳು.
ಕೃಷಿಯ ಬಗ್ಗೆ ಅವರಿಗಿರುವ ಪ್ರೀತಿ, ಆಸಕ್ತಿ ಮತ್ತು ನಿರಂತರ ಪರಿಶ್ರಮವೇ ಅವರ ಯಶಸ್ಸಿನ ಹಿಂದಿರುವ ಶಕ್ತಿ. ತರಕಾರಿ ಕೃಷಿಯಲ್ಲಿನ ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘವು ಅವರಿಗೆ ‘ಕೃಷಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಹಿರಿಯಡ್ಕದ ಹಲಸು ಮೇಳದಲ್ಲಿಯೂ ಅವರನ್ನು ಸನ್ಮಾನಿಸಲಾಗಿದೆ. ನಮ್ಮ ಬಿರುವೆರ್ ಸಂಘಟನೆ ಹಾಗೂ ಸೆರಕೇರ್ ಸಂಸ್ಥೆಯೂ ಅವರ ಕೃಷಿ ಸಾಧನೆಯನ್ನು ಗುರುತಿಸಿ ಗೌರವಿಸಿವೆ.

76ರ ವಯಸ್ಸಿನಲ್ಲಿಯೂ ಕೃಷಿ ಭೂಮಿಯಲ್ಲಿ ಉತ್ಸಾಹದಿಂದ ದುಡಿಯುತ್ತಾ, ಬಸಳೆ ಕೃಷಿಯ ಮೂಲಕ ಬದುಕಿನ ಖುಷಿ ಕಂಡುಕೊAಡಿರುವ ವಾಸುದೇವ ಪ್ರಭುಗಳು ಇಂದಿನ ಯುವಜನತೆಗೆ ಮಾದರಿ. ಕೃಷಿಯನ್ನು ಕೇವಲ ಉದ್ಯೋಗವಾಗಿ ನೋಡದೆ, ಅದನ್ನು ಪ್ರೀತಿಯಿಂದ ಮಾಡಿದರೆ ಬದುಕಿಗೆ ನೆಮ್ಮದಿ ಮತ್ತು ಆದಾಯ ಎರಡನ್ನೂ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೆಚ್ಚಿನ ಆದಾಯದ ನಿರೀಕ್ಷೆಯನ್ನು ಮಾಡಲಾಗದಿದ್ದರೂ ಭತ್ತದ ಕೃಷಿಯನ್ನು ಪ್ರಧಾನವಾಗಿಸಿಕೊಂಡು ಬಸಳೆ ಮತ್ತು ಇತರ ತರಕಾರಿ ಕೃಷಿಯ ಆದಾಯದಲ್ಲಿ ಸರಳ ಜೀವನ ಅವರಾಗಿದೆ. ಮಾಹಿತಿಗಾಗಿ:9972384372

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

spot_img