- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

ಕೃಷಿ ಉತ್ಪನ್ನಗಳ ಆಧಾರಿತ ದ್ರವ ಸಾಬೂನು “ಬಬಲ್”, ರೂಪುಗೊಂಡಿತು ಒಂದು ಸುಂದರ ಉದ್ಯಮ

ರಾಧಾಕೃಷ್ಣ ತೊಡಿಕಾನ, ಚಿತ್ರ : ರಾಮ್ ಅಜೆಕಾರ್

ಬಟ್ಟೆ ಸ್ವಚ್ಛಗೊಳಿಸುವುದರಿಂದ ಹಿಡಿದು ಸ್ನಾನದವರೆಗೆ ವಿವಿಧ ಉದ್ದೇಶಗಳಿಗಾಗಿ ನಾನಾ ಮಾದರಿಯ ಸಾಬೂನುಗಳು ಮಾರುಕಟ್ಟೆಯಲ್ಲಿವೆ. ಎಲ್ಲ ಸಾಬೂನುಗಳ ಮೂಲ ಉದ್ದೇಶ ಕೊಳೆಯನ್ನು ನಿವಾರಿಸುವುದೇ ಆದರೂ, ಅವುಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು, ಗುಣಲಕ್ಷಣಗಳು ಭಿನ್ನವಾಗಿರುತ್ತವೆ. ಆದರೆ ಮಹೇಶ್ ಕುಮಾರ್ ಪುಣ್ಚತ್ತೋಡಿ ಅವರು ತಯಾರಿಸುವ ದ್ರವರೂಪದ ಸಾಬೂನುಗಳು ಇತರ ಉತ್ಪನ್ನಗಳಿಗಿಂತ ವಿಭಿನ್ನವಾಗಿವೆ. ದ್ರವ ಸಾಬೂನು ತಯಾರಿಕೆಯ ರೀತಿ ಒಂದೇ ಆಗಿದ್ದರೂ, ಅದರಲ್ಲಿ ಬಳಸುವ ಕಚ್ಚಾವಸ್ತುಗಳು ಮಾತ್ರ ವಿಶೇಷವಾದವು. ಕೃಷಿಕರು ಉತ್ಪಾದಿಸುವ ತೆಂಗು, ಅಡಿಕೆ ಚೊಗರು, ಅರಸಿನ, ನಿಂಬೆ, ಕಾಡು ಉತ್ಪನ್ನಗಳಾದ ಶೀಗೆಕಾಯಿ, ಅಲೋವೆರಾ ಸೇರಿದಂತೆ ವಿವಿಧ ಗಿಡಮೂಲಿಕೆಗಳನ್ನು ಅದು ಒಳಗೊಂಡಿದೆ.

ಪುತ್ತೂರಿನ ಮಹೇಶ್ ಕುಮಾರ್ ಪುಣ್ಚತ್ತೋಡಿ ಅವರು ಗ್ರಾಮೀಣ ಪರಿಸರದಲ್ಲಿಯೇ ‘ವಿ ಮೇಡ್’ ಎಂಬ ಕಿರು ಉದ್ಯಮವನ್ನು ಹುಟ್ಟು ಹಾಕಿ ಅದರ ಮೂಲಕ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅಡಿಕೆ ಕೃಷಿಕರ ಹಿತ ಕಾಯುವ ಪ್ರತಿಷ್ಠಿತವಾದ ಕ್ಯಾಂಪ್ಕೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಅವರು, ಸುಮಾರು 35 ವರ್ಷಗಳ ಕಾಲ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಹೊಸತನದ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದ ಅವರು ಕಳೆದ 25 ವರ್ಷಗಳಿಂದ ದ್ರಬ ರೂಪದ ಸಾಬೂನು ತಯಾರಿಸಿ ಸ್ವಂತಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಅದರಿಂದಾದ ಅನುಭವ ಮತ್ತು ಪ್ರೇರಣೆಯಿಂದ ನಿವೃತ್ತಿಯ ನಂತರ ಕೃಷಿ ಉತ್ಪನ್ನಗಳನ್ನು ಆಧರಿಸಿ ಹೊಸ ಉದ್ಯಮ ಆರಂಭಿಸುವ ಆಲೋಚನೆ ಮೂಡಿತು.

ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಬಗೆಯ ಸಾಬೂನುಗಳು ಮತ್ತು ಶ್ಯಾಂಪುಗಳು ಲಭ್ಯವಿದೆ. ಅವರು ಕೃಷಿ ಉತ್ಪನ್ನಗಳನ್ನೇ ಬಳಸಿಕೊಂಡು ದ್ರವರೂಪದ ಸ್ವಚ್ಛತಾ ಉತ್ಪನ್ನಗಳನ್ನು ತಯಾರಿಸುವತ್ತ ಗಮನ ಹರಿಸಿದರು. ಅಡಿಕೆಯ ಉಪ ಉತ್ಪನ್ನವಾದ ಅಡಿಕೆ ಚೊಗರು, ಕೊಬ್ಬರಿ ಎಣ್ಣೆ ಹಾಗೂ ವಿವಿಧ ಗಿಡಮೂಲಿಕೆಗಳ ಸಾರವನ್ನು ಬಳಸಿಕೊಂಡು ದ್ರವರೂಪದ ಸಾಬೂನು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದರು.

2019 ರಲ್ಲಿ ‘ವಿ ಮೇಡ್’ ಸಂಸ್ಥೆಯನ್ನು ಆರಂಭಿಸಿದ ಅವರು ಮೊದಲು ತಯಾರಿಸಿದ್ದು ‘ಬಬಲ್ ಬಾತ್’ ಎಂಬ ಸ್ನಾನದ ದ್ರವ ಸಾಬೂನು. ಈ ಉತ್ಪನ್ನವನ್ನು ಗ್ರಾಹಕರಿಗೆ ಪರಿಚಯಿಸಿದಾಗ ದೊರೆತ ಉತ್ತಮ ಪ್ರತಿಕ್ರಿಯೆ ಅವರಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿತು. ತೆಂಗಿನೆಣ್ಣೆ, ಅಡಿಕೆ ಚೊಗರು ಹಾಗೂ ನೈಸರ್ಗಿಕ ಮೂಲದ ಇತರ ವಸ್ತುಗಳನ್ನು ಬಳಸಿ ತಯಾರಿಸಿದ ಈ ಉತ್ಪನ್ನಗಳಿಗೆ ಗ್ರಾಹಕರಿಂದ ಮೆಚ್ಚುಗೆ ವ್ಯಕ್ತವಾಯಿತು. ನಿಂಬೆ, ಗಂಧ, ಅಲೋವೆರಾ ಮತ್ತು ಅಡಿಕೆ ಚೊಗರುಗಳನ್ನು ಬಳಸಿ ನಾಲ್ಕು ವಿಧದ ಸ್ನಾನದ ದ್ರವ ಸಾಬೂನುಗಳನ್ನು ತಯಾರಿಸುತ್ತಿದ್ದಾರೆ.

ಇದಾದ ಬಳಿಕ ತಲೆಗೂದಲಿನ ಸ್ವಚ್ಛತೆ ಮತ್ತು ಆರೈಕೆಗಾಗಿ ‘ಬಬಲ್ ಕೇಶ’ ಎಂಬ ದ್ರವ ಶ್ಯಾಂಪೂವನ್ನು ಅಭಿವೃದ್ಧಿಪಡಿಸಿದರು. ತಲೆಗೂದಲಿನ ಆರೈಕೆ ಮತ್ತು ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗುವ ಉದ್ದೇಶದಿಂದ ಇದನ್ನು ತಯಾರಿಸಲಾಗಿದೆ. ಹಿಂದಿನ ತಲೆಮಾರುಗಳಿಂದಲೂ ಬಳಕೆಯಲ್ಲಿರುವ ಕಾಡು ಉತ್ಪನ್ನವಾದ ಶೀಗೆಕಾಯಿ ಮತ್ತು ಅರಸಿನ ಹಾಗೂ ಇತರ ಗಿಡಮೂಲಿಕೆಗಳನ್ನು ಇದರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಉತ್ಪನ್ನದಲ್ಲಿಯೂ ಎರಡು ಮಾದರಿಗಳಿವೆ.

ಹೊರಗೆ ಎಲ್ಲೆಲ್ಲೋ ಓಡಾಡಿ ಸುಸ್ತಾಗಿ ಬಂದಾಗ, ಬಿಸಿಲಿನ ಝಳಕ್ಕೆ ಬೆವರು ಸುರಿದು ಮುಖದ ಕಾಂತಿ ಕುಂದಿದಾಗ ಮುಖವನ್ನು ತೊಳೆದು ತಾಜಾತನ ಪಡೆಯಬೇಕೆಂಬ ಬಯಕೆ ಸಹಜ. ಇಂತಹ ಸಂದರ್ಭಗಳಲ್ಲಿ ಬಳಸಲು ‘ಬಬಲ್ ಫೇಸ್ ವಾಶ್’ ಅನ್ನು ಪರಿಚಯಿಸಿದ್ದಾರೆ. ಕೋಕಂ ಬೀಜದಿಂದ ತೆಗೆದ ಬೆಣ್ಣೆ, ಎಳೆಯ ಅಡಿಕೆ ಚೊಗರು, ಕೊಬ್ಬರಿ ಎಣ್ಣೆ ಹಾಗೂ ಗಿಡಮೂಲಿಕೆಗಳ ಮಿಶ್ರಣವನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಈ ಉತ್ಪನ್ನದಲ್ಲಿಯೂ ಎರಡು ಮಾದರಿಗಳಿವೆ.

ಚಿಕ್ಕ ಮಕ್ಕಳ ಸ್ನಾನಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ಕೆಲವು ಸಾಂಪ್ರದಾಯಿಕ ಪದ್ಧತಿಗಳಿವೆ. ಮಕ್ಕಳ ಎಳೆಯ ಚರ್ಮಕ್ಕೆ ಹಿತವಾಗುವ ನೈಸರ್ಗಿಕ ವಸ್ತುಗಳನ್ನು ಬಳಸುವ ಸಂಪ್ರದಾಯಕ್ಕೆ ಪೂರಕವಾಗಿ ಮಹೇಶ್ ಅವರು ‘ಬಬಲ್ ಕಿಡ್ಸ್’ ಎಂಬ ಮಕ್ಕಳ ಸ್ನಾನದ ದ್ರವ ಸಾಬೂನನ್ನು ತಯಾರಿಸಿದ್ದಾರೆ. ಕೋಕೋ ಬೀಜ ಮತ್ತು ಕೋಕಂ ಬೀಜಗಳಿಂದ ಸಂಸ್ಕರಿಸಿ ಪಡೆದ ಬೆಣ್ಣೆ ಹಾಗೂ ವಿವಿಧ ಗಿಡಮೂಲಿಕೆಗಳನ್ನು ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಇಷ್ಟಕ್ಕೇ ಸೀಮಿತವಾಗದೆ, ಮನೆ ಬಳಕೆಯ ವಿವಿಧ ಸ್ವಚ್ಛತಾ ಉತ್ಪನ್ನಗಳನ್ನೂ ತಯಾರಿಸುತ್ತಿದ್ದಾರೆ. ಪಾತ್ರೆ ಸೇರಿದಂತೆ ಹಲವು ವಸ್ತುಗಳನ್ನು ಸ್ವಚ್ಛಗೊಳಿಸಲು ‘ಬಬಲ್ ಡ್ರಾಪ್’ ಎಂಬ ಬಹುಪಯೋಗಿ ದ್ರವ ಸಾಬೂನು ಹಾಗೂ ಕೈ ತೊಳೆಯಲು ನಿಂಬೆ ಮತ್ತು ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ‘ಬಬಲ್ ಹ್ಯಾಂಡ್ ವಾಶ್’ ಮಾರುಕಟ್ಟೆಯಲ್ಲಿವೆ. ಪ್ರಾಣಿಗಳ ಮೈಮೇಲಿರುವ ಉಣ್ಣೆ ಮತ್ತು ಹೇನುಗಳ ನಿವಾರಣೆಗೆ ಮಜ್ಜಿಗೆ ಹುಲ್ಲು ಹಾಗೂ ಕಹಿಬೇವನ್ನು ಬಳಸಿ ಶ್ಯಾಂಪೂಗಳನ್ನು ತಯಾರಿಸಿದ್ದಾರೆ.

ಪ್ರಸ್ತುತ ಅವರ ಸಂಸ್ಥೆಯಲ್ಲಿ ಒಟ್ಟು 24 ವಿಧದ ಉತ್ಪನ್ನಗಳಿವೆ. ಇನ್ನೂ ಕೆಲವು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯೂ ಅವರಲ್ಲಿದೆ. ಮುಂದಿನ ದಿನಗಳಲ್ಲಿ ಅಡಿಕೆ ಆಧಾರಿತ ಮೌತ್ ವಾಶ್, ಹರ್ಬಲ್ ಟೂತ್‌ಪೇಸ್ಟ್ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆಗೆ ಗಮನ ಹರಿಸುವುದಾಗಿ ಅವರು ಹೇಳುತ್ತಾರೆ. ಅಷ್ಟೇ ಅಲ್ಲದೆ, ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಅನುಕೂಲವಾಗುವ ದ್ರವ ಉತ್ಪನ್ನವೊಂದನ್ನು ತಯಾರಿಸುವ ಆಲೋಚನೆಯೂ ಅವರಲ್ಲಿದೆ. ಇವರೊಂದಿಗೆ ಪತ್ನಿ ಗೀತಾ ಭಟ್ ಉತ್ಪನ್ನ ತಯಾರಿ ಮತ್ತು ಮಾರಾಟದಲ್ಲಿ ಕೈಜೋಡಿಸಿದರೆ ಪುತ್ರ ಪ್ರತೀಕ್ ಡಿಜಿಟಲ್ ರೂಪದ ಎಲ್ಲಾ ಕೆಲಸಗಳಲ್ಲಿ ಭಾಗಿಯಾಯಾಗುತ್ತಾರೆ.

ತಮ್ಮ ಉದ್ಯಮದ ಮೂಲಕ ಈಗಾಗಲೇ ಮೂವರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಮಹೇಶ್ ಕುಮಾರ್, ಉತ್ಪನ್ನಗಳ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಸ್ಥಳೀಯ ರೈತರಿಂದಲೇ ಖರೀದಿಸುತ್ತಾರೆ. ಇದರಿಂದ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳಿಗೆ ಹೆಚ್ಚುವರಿ ಮಾರುಕಟ್ಟೆ ದೊರೆಯುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿಯೇ ಉದ್ಯೋಗ ಸೃಷ್ಟಿಗೂ ಅವಕಾಶವಾಗುತ್ತಿದೆ. ಹೆಚ್ಚಿನ ಮಾಹಿತಿಗೆ: 9448770585

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

spot_img