- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

ಜೇನುಗೂಡಿಗೆ ದಾರಿ ತೋರುವ ಹಕ್ಕಿ ಮತ್ತು ಮನುಷ್ಯರ ಸಹಕಾರದ ವಿಸ್ಮಯ

ಬರಹ-ಅಡ್ಡೂರು ಕೃಷ್ಣ ರಾವ್ 

ಹಕ್ಕಿ ಮತ್ತು ಮನುಷ್ಯರ ಸಹಕಾರದ ವಿಸ್ಮಯದ ವಿದ್ಯಮಾನ ಇದು. ಆಗ್ನೇಯ ಆಫ್ರಿಕಾದ ಒಂದು ಬುಡಕಟ್ಟಿನ ಜನರು ಒಂದು ಜಾತಿಯ ಹಕ್ಕಿಯ ಜೊತೆಗೂಡಿ, ಹಕ್ಕಿಯ ಚಿರ್ಪ್ ಚಿರ್ಪ್ ಮತ್ತು ತಮ್ಮ ವಿಶಿಷ್ಟ ಧ್ವನಿಗಳ ಮೂಲಕ ಪರಸ್ಪರ ಸಂಭಾಷಿಸುತ್ತಾ ಜೇನುಗೂಡುಗಳನ್ನು ಪತ್ತೆ ಹಚ್ಚುತ್ತಾರೆ ಎಂದರೆ ನಂಬಲು ಸಾಧ್ಯವೇ? ಎತ್ತರದ ಮರಗಳಲ್ಲಿರುವ, ಸುಲಭದಲ್ಲಿ ಪತ್ತೆಯಾಗದ ಜೇನುಗೂಡುಗಳಿಗೆ ಆ ಹಕ್ಕಿಗಳು ಮನುಷ್ಯರಿಗೆ ದಾರಿ ತೋರಿಸುತ್ತವೆ. ಬುಡಕಟ್ಟಿನ ಜನರು ಸರಸರನೆ ಮರವೇರಿ, ಆ ಜೇನುಗೂಡುಗಳನ್ನು ತೆಗೆದು, ಜೇನನ್ನು ಸಂಗ್ರಹಿಸಿ, ಜೇನು ಮೇಣವನ್ನು ಹಕ್ಕಿಗಳಿಗೆ ನೀಡುತ್ತಾರೆ. ಈ ರೀತಿಯಲ್ಲಿ ಪರಸ್ಪರ ಸಹಕಾರದ “ಬೇಟೆ”ಯಿಂದ ಇಬ್ಬರಿಗೂ ಲಾಭ!

ಆಫ್ರಿಕಾದ ಮೊಜಾಂಬಿಕ್ ದೇಶದ “ಯೋ” ಬುಡಕಟ್ಟಿನ ಜನರು ಮತ್ತು ಜೇನು ಮಾರ್ಗದರ್ಶಿ ಹಕ್ಕಿ (ಪಕ್ಷಿಶಾಸ್ತ್ರೀಯ ಹೆಸರು: ಇಂಡಿಕೇಟರ್ ಇಂಡಿಕೇಟರ್) ನಡುವಣ ಕುತೂಹಲಕಾರಿ ಸಹಕಾರದ ವಿದ್ಯಮಾನ ಇದು. ಯುನೈಟೆಡ್ ಕಿಂಗ್-ಡಮ್ ದೇಶದ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಕ್ಲಾರೆ ಸ್ಪೊಟ್ಟಿಸ್-ವುಡೆ ಎಂಬ ಹಕ್ಕಿ ಸಂಶೋಧಕಿ ಮತ್ತು ಮೂವರು ಸಹವರ್ತಿಗಳು ಈ ವಿದ್ಯಮಾನವನ್ನು ದಾಖಲಿಸಿದ್ದಾರೆ. ಅವರು ಇದರ ಬಗ್ಗೆ ವಿಜ್ಞಾನ ನಿಯತಕಾಲಿಕ “ಸೈನ್ಸ್”ನಲ್ಲಿ ಲೇಖನ ಪ್ರಕಟಿಸಿದ್ದಾರೆ.

ಈ ವಿದ್ಯಮಾನದ ವಿಶೇಷತೆ ಏನೆಂದರೆ ಜೇನು “ಬೇಟೆ”ಗಾಗಿ ಸಹಯೋಗವನ್ನು ಹಕ್ಕಿ ಅಥವಾ ಮನುಷ್ಯರು ಶುರು ಮಾಡಬಲ್ಲರು. ಹಕ್ಕಿಗಳು ತಾವಾಗಿಯೇ ಒಂದು ಜೇನು ಗೂಡನ್ನು ಪತ್ತೆ ಮಾಡಿದರೆ, ತಮ್ಮ ವಿಶಿಷ್ಟ ಚಿರ್ಪ್ ಚಿರ್ಪ್ ಉಲಿಯ ಮೂಲಕ ಹತ್ತಿರದಲ್ಲಿರುವ ಬುಡಕಟ್ಟು ವ್ಯಕ್ತಿಯ ಗಮನ ಸೆಳೆದು, ಮರದಿಂದ ಮರಕ್ಕೆ ಹಾರುತ್ತಾ ಆತನನ್ನು ಜೇನು ಗೂಡು ಇರುವ ಮರಕ್ಕೆ ಕರೆದೊಯ್ಯುತ್ತವೆ. ಹಾಗೆಯೇ, ತನಗೆ ಜೇನು ಬೇಕೆನಿಸಿದಾಗ “ಯೋ” ಬುಡಕಟ್ಟಿನ ವ್ಯಕ್ತಿ ಹತ್ತಿರದಲ್ಲಿರುವ ಜೇನು ಮಾರ್ಗದರ್ಶಿ ಹಕ್ಕಿಗಳ ಸಹಾಯ ಪಡೆಯಬಲ್ಲ – ಶತಮಾನಗಳ ಕಾಲದಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿರುವ ಒಂದು ವಿಶಿಷ್ಟ ಕರೆಯ ಧ್ವನಿ ಹೊರಡಿಸುವ ಮೂಲಕ!

ಸಾಕುಪ್ರಾಣಿಗಳಾದ ನಾಯಿ, ಬೆಕ್ಕು, ಕುದುರೆ, ದನಗಳು, ಎತ್ತುಗಳು ಮತ್ತು ಗಿಳಿ, ಪಾರಿವಾಳ ಇಂತಹ ಹಕ್ಕಿಗಳಿಗೆ ಮಾನವ ತರಬೇತಿ ನೀಡಿ ಆ ಪ್ರಾಣಿ-ಪಕ್ಷಿಗಳನ್ನು ಪಳಗಿಸುತ್ತಾನೆ. ಆದರೆ, ಮೊಜಾಂಬಿಕ್ ದೇಶದ ಈ ಹಕ್ಕಿಗಳಿಗೆ ಈ ಕೆಲಸಕ್ಕೆ ಯಾರೂ  ತರಬೇತಿ ನೀಡುವುದಿಲ್ಲ.

“ಯೋ” ಬುಡಕಟ್ಟಿನ ವ್ಯಕ್ತಿಗಳು ಜೇನು ಮಾರ್ಗದರ್ಶಿ ಹಕ್ಕಿಗಳನ್ನು ಕರೆಯಲಿಕ್ಕಾಗಿ ಬಳಸುವ ಧ್ವನಿಗೆ ಮಾತ್ರ ಈ ಹಕ್ಕಿಗಳು ಪ್ರತಿಕ್ರಿಯೆ ತೋರುತ್ತವೆ ಎಂಬುದನ್ನು ಆ ಸಂಶೋಧಕಿ ಪ್ರಯೋಗದ ಮೂಲಕ ಖಚಿತಪಡಿಸಿದ್ದಾರೆ. ಆ ಧ್ವನಿ ಸುಮಾರಿಗೆ “ಬ್ರರ್-ಹಮ್” ಎಂಬಂತೆ ಕೇಳಿಸುತ್ತದೆ. ಪ್ರಯೋಗಕ್ಕೆ ಸಹಕರಿಸಿದ ಬುಡಕಟ್ಟು ವ್ಯಕ್ತಿಗಳಿಗೆ ಒಂದು ಪುಟ್ಟ ಧ್ವನಿವರ್ಧಕ ಕೊಡಲಾಯಿತು. ಅದರಿಂದ ಹೊರಹೊಮ್ಮುವ ಧ್ವನಿ ಏಕರೂಪವಾಗಿತ್ತು. ಅದರ ಮೂಲಕ ಜೇನು ಮಾರ್ಗದರ್ಶಿ ಹಕ್ಕಿಗಳನ್ನು ಕರೆದಾಗ, ಈ ಹಕ್ಕಿಗಳು ಜೇನುಗೂಡನ್ನು ತೋರಿಸುವ ಸಾಧ್ಯತೆ ಮೂರು ಪಟ್ಟು ಹೆಚ್ಚಾಯಿತು! (ಇತರ ಧ್ವನಿಗಳಿಗೆ ಈ ಹಕ್ಕಿಗಳ ಪ್ರತಿಕ್ರಿಯೆಗಳಿಗೆ ಹೋಲಿಸಿದಾಗ.)

“ಯೋ” ಬುಡಕಟ್ಟಿನ ವ್ಯಕ್ತಿಗಳು ಆ ನಿರ್ದಿಷ್ಟ ಧ್ವನಿ ಹೊರಡಿಸಿದಾಗ ಜೇನು ಮಾರ್ಗದರ್ಶಿ ಹಕ್ಕಿಗಳು ಆತನಿಗೆ ಏನು ಬೇಕಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡು, ಸಮರ್ಪಕವಾದ ಪ್ರತಿಕ್ರಿಯೆ ತೋರುತ್ತವೆ. ಅಂದರೆ, ಸಾಕುಪ್ರಾಣಿಗಳು ಮಾತ್ರ ತೋರಿಸುವ ವರ್ತನೆಯನ್ನು ಯಾವುದೇ ತರಬೇತಿ ಇಲ್ಲದಿದ್ದರೂ ಈ ಹಕ್ಕಿಗಳು ತೋರಿಸುತ್ತವೆ! ಇಂತಹ ವರ್ತನೆಯ ಇನ್ನೊಂದು ಉದಾಹರಣೆ ಡಾಲ್ಫಿನ್-ಗಳಲ್ಲಿ ಮಾತ್ರ ಕಂಡು ಬರುತ್ತದೆ. ಬೇಟೆಗೆ ಸಹಕರಿಸಲಿಕ್ಕಾಗಿ ಡಾಲ್ಫಿನ್-ಗಳನ್ನು ಮನುಷ್ಯರು ಕರೆದಾಗ ಅವು ಸಮರ್ಪಕ ಪ್ರತಿಕ್ರಿಯೆ ತೋರಿದ ವಿದ್ಯಮಾನದ ಬಗ್ಗೆ ಹಲವು ವರದಿಗಳು ದಾಖಲಾಗಿವೆ.

ಜೇನು ಮಾರ್ಗದರ್ಶಿ ಹಕ್ಕಿಗಳ ಮರಿಗಳು “ಯೋ” ಬುಡಕಟ್ಟು ವ್ಯಕ್ತಿಗಳ ನಿರ್ದಿಷ್ಟ ಧ್ವನಿಗೆ ಪ್ರತಿಕ್ರಿಯೆ ತೋರಲು ಹೇಗೆ ಕಲಿಯುತ್ತವೆ ಎಂಬುದು ಇಂದಿಗೂ ನಿಗೂಢ. ಯಾಕೆಂದರೆ, ನಮ್ಮ ದೇಶದ ಕೋಗಿಲೆಗಳಂತೆ ಜೇನು ಮಾರ್ಗದರ್ಶಿ ಹಕ್ಕಿಗಳು ಬೇರೆ ಹಕ್ಕಿಗಳ ಗೂಡಿನಲ್ಲಿ ಕಪಟತನದಿಂದ ತಮ್ಮ ಮೊಟ್ಟೆಗಳನ್ನಿಡುತ್ತವೆ. ಆ ಬೇರೆ ಹಕ್ಕಿಗಳು ಇವುಗಳ ಮರಿಗಳನ್ನು ಸಾಕುತ್ತವೆ. ಹಾಗಾಗಿ, ಮರಿ ಹಕ್ಕಿಗಳು ಮನುಷ್ಯರೊಂದಿಗೆ ಹೇಗೆ ವರ್ತಿಸಬೇಕೆಂಬ ಆ ವರ್ತನೆಯನ್ನು ತಮ್ಮ ತಂದೆ-ತಾಯಿ ಹಕ್ಕಿಗಳಿಂದ ಕಲಿಯುತ್ತವೆ ಎನ್ನಲು ಸಾಧ್ಯವಿಲ್ಲ.

“ನೀವು ಜೇನು ಮಾರ್ಗದರ್ಶಿ ಹಕ್ಕಿಗಳನ್ನು ಜೇನು ಬೇಟೆಗಾಗಿ ಕರೆಯಲು ಅದೇ ನಿರ್ದಿಷ್ಟ ಧ್ವನಿಯನ್ನು ಯಾಕೆ ಬಳಸುತ್ತೀರಿ?” ಎಂದು “ಯೋ” ಬುಡಕಟ್ಟು ಜನರನ್ನು ಸಂಶೋಧಕಿ ಪ್ರಶ್ನಿಸಿದಳು. ಅವರ ಉತ್ತರ, “ನಾನು ಇದನ್ನು ನನ್ನ ತಂದೆಯಿಂದ ಕಲಿತೆ ಮತ್ತು ಆ ಹಕ್ಕಿಗಳನ್ನು ಕರೆಯಲು ಇದುವೇ ಅತ್ಯುತ್ತಮ ವಿಧಾನ.” ಇದರ ಅರ್ಥವೇನೆಂದರೆ, ಹಲವು ಶತಮಾನಗಳ ಕಾಲ, ತಲೆಮಾರಿನಿಂದ ತಲೆಮಾರಿಗೆ ಈ ಕೌಶಲ್ಯ ದಾಟಿ ಬಂದಿದೆ. ಅಂತೂ ನಮ್ಮ ಭೂಮಿಯಲ್ಲಿ ಇತರ ಜೀವಿಗಳೊಂದಿಗೆ ಸಹಬಾಳ್ವೆಯ ಮಗದೊಂದು ಅದ್ಭುತ ವಿದ್ಯಮಾನ ಹಕ್ಕಿ ಮತ್ತು ಮಾನವರ ಸಹಕಾರದ ಈ ಜೇನು ಬೇಟೆ.

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

spot_img