spot_img
Tuesday, October 20, 2026
spot_imgspot_img
- Advertisement -spot_img

ನಾಟಿ ಔಷಧಿಗೆ ಗಿಡಮೂಲಿಕೆಗಳೇ ಸಂಪತ್ತು: ನಾಟಿ ವೈದ್ಯೆ ಉಷಾ ಶೆಟ್ಟಿ ಅವರ ಯಶೋಗಾಥೆ

ಬರಹ- ರಾಧಾಕೃಷ್ಣ ತೊಡಿಕಾನ

ನಮ್ಮ ಸುತ್ತಮುತ್ತಲಿನ ಹಸಿರು ಗಿಡಗಳು, ಮರಗಳು, ಬಳ್ಳಿಗಳು ಪ್ರಕೃತಿಯ ಅಮೂಲ್ಯ ಕೊಡುಗೆಗಳು. ಅವುಗಳಲ್ಲಿರುವ ಔಷಧೀಯ ಗುಣಗಳ ಅರಿವಿಲ್ಲದೆ ಹಲವು ಸಸ್ಯಗಳನ್ನು ನಾವು ಕಳೆಗಿಡಗಳೆಂದು ಭಾವಿಸುವುದುಂಟು. ಆದರೆ ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು, ಋಷಿ ಮುನಿಗಳು ಗಿಡಮೂಲಿಕೆಗಳಲ್ಲಿರುವ ಔಷಧೀಯ ಮೌಲ್ಯವನ್ನು ಗುರುತಿಸಿ, ಅವುಗಳನ್ನು ಚಿಕಿತ್ಸೆಯಲ್ಲಿ ಬಳಸಿಕೊಂಡರು. ಈಗ

ಗಿಡಮೂಲಿಕೆಗಳ ಔಷಧಿ ನೀಡುತ್ತಿರುವವರು ಕಡಿಮೆಯಾಗುತ್ತಿದ್ದರೂ ನಾಟಿ ಔಷಧ ಪದ್ಧತಿ ಅಲ್ಲಲ್ಲಿ ಜೀವಂತವಾಗಿದೆ. ಗಿಡಮೂಲಿಕೆ ಆಧಾರಿತ ಔಷಧಿಗಳನ್ನು ತಯಾರಿಸಿ ನೀಡುತ್ತಿರುವ ನಾಟಿ ವೈದ್ಯರು ಇದ್ದಾರೆ. ಅಂತಹವರಲ್ಲಿ ಉಷಾ ಶೆಟ್ಟಿಯವರೂ ಒಬ್ಬರು.

ಉಷಾ ಶೆಟ್ಟಿಯವರು ಕಳೆದ ಸುಮಾರು 20 ವರ್ಷಗಳಿಂದ ಗಿಡಮೂಲಿಕೆ ಆಧಾರಿತ ನಾಟಿ ಔಷಧಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಅದು ಅವರ ವೃತ್ತಿ ಮತ್ತು ಪ್ರವ್ರತ್ತಿ. ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ವಿವಿಧ ಔಷಧೀಯ ಸಸ್ಯಗಳ ಬೇರು, ಎಲೆ, ಕಾಂಡ ಸೇರಿದಂತೆ ಅಗತ್ಯ ಭಾಗಗಳನ್ನು ಆಯ್ದುಕೊಂಡು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.

ಬೆನ್ನು ನೋವು, ಸೊಂಟ ನೋವು ಹಾಗೂ ಗಂಟು ನೋವು ಮುಂತಾದ ಸಮಸ್ಯೆಗಳಿಗೆ ಬಳಸುವ ಔಷಧಿಗಳನ್ನು ಅವರು ತಯಾರಿಸುತ್ತಿದ್ದು ಔಷಧೀಯ ಗುಣವುಳ್ಳ ತೆಂಗಿನ ಎಣ್ಣೆ ಹಾಗೂ ವಿವಿಧ ಗಿಡಮೂಲಿಕೆಗಳು ಇವರ ನಾಟಿ ಔಷಧ ತಯಾರಿಕೆಯ ಪ್ರಮುಖ ಅಂಶಗಳಾಗಿವೆ. ಕುಟುಂಬದ ಹಿರಿಯರು ಹಿಂದಿನಿಂದ ನಾಟಿ ಔಷಧಿಗಳನ್ನು ನೀಡುತ್ತಿದ್ದುದು ಅವರಿಗೆ ಪ್ರೇರಣೆಯಾಯಿತು.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಡುಬೆಳ್ಳೆಯಲ್ಲಿರುವ ಉಷಾ ಅವರು ಮೊದಲು ಕೇಶವರ್ಧಕ ತೈಲವನ್ನು ತಯಾರಿಸುವುದರತ್ತ ಗಮನಹರಿಸಿದರು. ‘ನಿಸರ್ಗ ಆಯುರ್ವೇದಿಕ್ ತೈಲ’ ಎಂಬ ಹೆಸರಿನಲ್ಲಿ ತಯಾರಿಸಿದ ಈ ತೈಲವು ಕೂದಲಿನ ಆರೈಕೆಯ ಉತ್ಪನ್ನವಾಗಿ ಪರಿಚಿತವಾಯಿತು. ಕೂದಲು ಉದುರುವಿಕೆಯನ್ನು ತಡೆಯುವುದಲ್ಲದೆ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಉಷಾ ಶೆಟ್ಟಿ ಹೇಳುತ್ತಾರೆ. ಆನಂತರ ಗಿಡಮೂಲಿಕೆ ಆಧಾರಿತ ಉತ್ಪನ್ನಗಳ ಸಂಖ್ಯೆ ಹೆಚ್ಚಾಯಿತು. ಶಕ್ತಿವರ್ಧಕ ನೆಲ್ಲಿಕಾಯಿ ಸಿರಪ್ ‘ಪುಷ್ಪಾಮೃತ’

ಬೀಡು ನೋವಿನ ಎಣ್ಣೆ, ಅಮೃತ ನೋವಿನ ಎಣ್ಣೆ, ರಸಸಾಗರ ಚೂರ್ಣ, ನೆರಳು ಆಯುರ್ವೇದಿಕ್ ತೈಲ, ಸೌಂದರ್ಯ ಕಾಂಪ್ಲೆಕ್ಸನ್ ಲೋಷನ್, ಆರೋಗ್ಯ ಆಯುರ್ವೇದಿಕ್ ಚೂರ್ಣ, ಕೊಲೆಸ್ಟ್ರಾಲ್ ಮಾತ್ರೆಗಳು, ಮೃದುಲ್ ಆಯಿಲ್, ದೇಹ ತೂಕ ಕಡಿಮೆ ಮಾಡುವ ಔಷಧಿ, ಚರ್ಮದ ಸೋಂಕುಗಳ ನಿವಾರಣೆ ಸೇರಿದಂತೆ ಸುಮಾರು ಹತ್ತು ವಿಧದ ನಾಟಿ ಔಷಧಿಗಳನ್ನು ತಯಾರಿಸುತ್ತಾರೆ.

ಔಷಧ ತಯಾರಿಕೆಗೆ ಬೇಕಾಗುವ ಗಿಡಮೂಲಿಕೆಗಳನ್ನು ಸುತ್ತಮುತ್ತಲಿನ ಪರಿಸರದಲ್ಲಿರುವ ಸಸ್ಯಸಂಪತ್ತಿನಿಂದಲೇ ಆಯ್ದುಕೊಳ್ಳುತ್ತಾರೆ. ಕೆಲವು ಗಿಡಮೂಲಿಕೆಗಳನ್ನು ಸಂಗ್ರಾಹಕರಿಂದ ಪಡೆದುಕೊಳ್ಳುವುದರ ಜೊತೆಗೆ, ಅಗತ್ಯವಿರುವ ವಸ್ತುಗಳನ್ನು ಆಯುರ್ವೇದ ಔಷಧ ಅಂಗಡಿಗಳಿಂದಲೂ ಖರೀದಿಸುತ್ತಾರೆ. ಉಷಾ ಶೆಟ್ಟಿಯವರು ತಯಾರಿಸುವ ಗಿಡಮೂಲಿಕೆ ಆಧಾರಿತ ಉತ್ಪನ್ನಗಳಿಗೆ ರಾಜ್ಯದ ವಿವಿಧ ಭಾಗಗಳಲ್ಲಷ್ಟೇ ಅಲ್ಲದೆ ಉತ್ತರ ಪ್ರದೇಶ, ಜಾರ್ಖಂಡ್, ಮುಂಬೈ ಸೇರಿದಂತೆ ಇತರ ರಾಜ್ಯಗಳಲ್ಲಿ ಕೂಡಾ ಗ್ರಾಹಕರಿದ್ದಾರೆ. ಊರಿನವರಾಗಿದ್ದು ಉದ್ಯೋಗ ನಿಮಿತ್ತ ವಿದೇಶದಲ್ಲಿರುವ ಕೆಲವರು ಗಿಡಮೂಲಿಕೆಯ ಉತ್ಪನ್ನಗಳನ್ನು ಖರೀದಿಸಿದ್ದಾರೆ ಎಂದು ಅವರು ಹೇಳುತ್ತಾರೆ.

ಕೃಷಿಮೇಳಗಳು, ವಸ್ತುಪ್ರದರ್ಶನಗಳಲ್ಲೂ ಮಾರಾಟ

ಆಸಕ್ತರು ಕೆಲವೊಮ್ಮೆ ನೇರವಾಗಿ ಮನೆಗೆ ಬಂದು ತಮ್ಮ ಸಮಸ್ಯೆಗಳನ್ನು ವಿವರಿಸಿ ಔಷಧಿಗಳನ್ನು ಪಡೆದುಕೊಳ್ಳುತ್ತಾರೆ. ಕೃಷಿ ಮೇಳಗಳು, ವಸ್ತುಪ್ರದರ್ಶನಗಳಲ್ಲಿನ ಮಳಿಗೆಗಳ ಮೂಲಕವೂ ಅವರು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಒಮ್ಮೆ ಉತ್ಪನ್ನಗಳನ್ನು ಬಳಸಿದವರು ತಮ್ಮ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಪರಿಚಯದ ಮೂಲಕ ಮೂಲಿಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಉಷಾ ಶೆಟ್ಟಿ ನೆನಪಿಸಿಕೊಳ್ಳುತ್ತಾರೆ.

ಹಿಂದೆ ಗಿಡಮೂಲಿಕೆಗಳನ್ನು ಬಿಸಿಲಿನಲ್ಲಿ ಒಣಗಿಸಬೇಕಾಗಿದ್ದರಿಂದ ಮಳೆಗಾಲದಲ್ಲಿ ಔಷಧ ತಯಾರಿಸುವುದು ಕಷ್ಟವಾಗುತ್ತಿತ್ತು. ಆದರೆ ಇದೀಗ ಡ್ರಯರ್ ವ್ಯವಸ್ಥೆ ಇರುವುದರಿಂದ ಈ ಸಮಸ್ಯೆ ನಿವಾರಣೆಯಾಗಿದೆ. ಅಗತ್ಯವಿರುವ ಗಿಡಮೂಲಿಕೆಗಳನ್ನು ಸಂಗ್ರಹಿಸಿ, ಅವುಗಳನ್ನು ಡ್ರಯರ್ ಮೂಲಕ ಒಣಗಿಸಿ ಬೇಕಾದಾಗ ಔಷಧ ತಯಾರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಹೀಗಾಗಿ ಋತುಮಾನಕ್ಕೆ ಅನುಗುಣವಾಗಿ ಔಷಧ ತಯಾರಿಕೆಯಲ್ಲಿ ಎದುರಾಗುತ್ತಿದ್ದ ತೊಂದರೆ ಕಡಿಮೆಯಾಗಿದೆ. ಪ್ರಕೃತಿಯಲ್ಲಿನ ಸಸ್ಯಸಂಪತ್ತಿನ ಔಷಧೀಯ ಗುಣಗಳನ್ನು ಅರಿತು, ಹಿರಿಯರಿಂದ ಬಂದ ಜ್ಞಾನವನ್ನು ಬಳಸಿಕೊಂಡು ನಾಟಿ ಔಷಧ ಪರಂಪರೆಯೊಂದನ್ನು ಉಳಿಸಿಕೊಳ್ಳುವ ಪ್ರಯತ್ನ ಅವರದ್ದಾಗಿದೆ

ಮಾಹಿತಿಗಾಗಿ:8496912812

ಈ ಲೇಖನಗಳನ್ನೂ ಓದಿ

- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group