spot_img
Friday, October 18, 2024
spot_imgspot_img
spot_img
spot_img

ಕೃಷಿಕರ ಶ್ರಮ ಕಡಿಮೆ ಮಾಡುತ್ತದೆ ಈ ಬಿತ್ತನೆಯಂತ್ರ!

ಕೃಷಿಯಲ್ಲಿ ಬೀಜ ಬಿತ್ತನೆಯೂ ಪ್ರಾಮುಖ್ಯವಾದುದು. ಕೈ ಚಾಲಿತ ಯಂತ್ರಗಳು ಹಾಗೂ ಯಾಂತ್ರಿಕ ಬಿತ್ತನೆ ಯಂತ್ರಗಳು ಸಾಕಷ್ಟು ಮಾರುಕಟ್ಟೆಯಲ್ಲಿವೆ. ದೊಡ್ಡ ದೊಡ್ಡ ಹಿಡುವಳಿದಾರರಿಗೆ ದೊಡ್ಡ ಮಾದರಿಯ ಯಂತ್ರಗಳು ಅವಶ್ಯಕವಿದೆ. ಆದರೆ ಸಣ್ಣ ಮತ್ತು ಅತೀ ಸಣ್ಣ ಕೃಷಿಕರಿಗೆ ಅಂತಹ ಯಂತ್ರಗಳು ದುಬಾರಿಯಾಗಬಹುದು. ಅಂತವರಿಗೆ ಸಣ್ಣ ಸಣ್ಣ ಕೈ ಚಾಲಿತ ಯಂತ್ರಗಳೇ ಅನುಕೂಲಕರ.

ಇತ್ತ್ತೀಚೆಗೆ ಧಾರವಾಡದಲ್ಲಿ ಕೃಷಿ ಮೇಳದಲ್ಲಿ ಸರಳ ಹಾಗೂ ಸುಲಭ ಸಾಧ್ಯವಾದ ಸಣ್ಣ ಬಿತ್ತನೆ ಬೀಜದ ಯಂತ್ರಗಳಿದ್ದವು. ಅವುಗಳಲ್ಲಿ ಮಹಾರಾಷ್ಟçದ ಬುಲ್ದಾನ ಜಿಲ್ಲೆಯ ಮಲ್ಕಾಪುರದ ವಿಧಿವಿಹಾನ್ ಅಗ್ರೋ ಸಂಸ್ಥೆಯು ತಯಾರಿಸಿದ ಬಿತ್ತನೆ ಬೀಜದ ಯಂತ್ರವು ರೈತರು ಆಸಕ್ತಿಯಿಂದ ನೋಡುವಂತೆ ಮಾಡಿತು. ಸ್ಟೀಲ್ ಹಾಗೂ ಮುರಿದು ಹೋಗದ ಪ್ಲಾಸ್ಟಿಕ್ ಬಳಸಿ ಬಿತ್ತನೆ ಬೀಜದ ಕೈಚಾಲಿತ ಯಂತ್ರ. ಕೆಲಸಗಾರರನ್ನು ನೆಚ್ಚಿಕೊಳ್ಳಬೇಕಾಗಿಲ್ಲ. ರೈತರು ತಾವೇ ಬಿತ್ತನೆ ಬೀಜ ಬಿತ್ತಿಕೊಳ್ಳಬಹುದು. ಅಥವಾ ಮನೆಯ ಸದಸ್ಯರೆ ಈ ಕೆಲಸಗಳನ್ನು ಮಾಡಬಹುದು.

ಹತ್ತ, ಸೋಯಾಬೀನ್, ಮೆಕ್ಕೆಜೋಳ, ತೊಗರಿ, ನೆಲಗಡಲೆ, ಉದ್ದು, ಹೆಸರು, ರಾಗಿ, ಜೋಳ, ಬಟಾಣಿ, ಸೂರ್ಯಕಾಂತಿ, ಮತ್ತಿತರ ಬೀಜಗಳನ್ನು ಸುಲಭವಾಗಿ ಬಿತ್ತಬಹುದು. ಕಾರ್ಮಿಕರ ವೆಚ್ಚಗಳನ್ನು ಉಳಿಸಿಕೊಳ್ಳಬಹುದು. ಅದರಂತೆ ತರಕಾರಿ ಬೀಜ ಬಿತ್ತನೆಯ ಸರಳ ಯಂತ್ರವೂ ಅವರಲಿದೆ. ೧,೩,೬ ಸಾಲು ಬಿತ್ತನೆಯನ್ನು ಹೊಲದಲ್ಲಿ ಅಥವಾ ನರ್ಸರಿಗಳಲ್ಲಿ ಬಿತ್ತನೆ ಮಡಬಹುದು. ಈರುಳ್ಳಿ, ಕೊತ್ತಂಬರಿ, ಎಲೆ ಕೋಸು, ಹೂಕೋಸು, ಮೆಂತೆ, ಮೂಲಂಗಿ, ಕ್ಯಾರೆಟ್, ಬೀಟ್ರೂಟ್, ಸೌತೆಕಾಯಿ, ಅಜವಾನ ಮೊದಲಾದ ಬೀಜಗಳನ್ನು ಬಿತ್ತಲು ಅನುಕೂಲವಾದ ಸಾಧನ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group