ಅಲ್ಲಿ ಬಗೆ ಬಗೆಯ ಹೂಗಳು ಅರಳಿ ನಳನಳಿಸುತ್ತಿದ್ದವು. ಹೂವಿನಿಂದಲೇ ಮೂಡಿಬಂದ ಕಲಾಕೃತಿಗಳು,ಹಣ್ಣು ತರಕಾರಿಗಳಿಂದ ದೈವದೇವರ, ಮಹಾನ್ ಸಾಧಕರ ಪ್ರಾಣಿ ಪಕ್ಷಿಗಳ ಪ್ರತಿ ಕೃತಿಗಳು ವೀಕ್ಷಕರನ್ನು ಮನ ಸೋಲುವಂತೆ ಮಾಡಿದ್ದವು.
ಉಡುಪಿಯ ದೊಡ್ಡಣಗುಡ್ಡೆ ಬಳಿಯಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನವು ಬಣ್ಣ ಬಣ್ಣದ ಪುಷ್ಪ ಲೋಕವನ್ನೆ ತೆರೆದಿರಿಸಿತು. ಹಲವಾರು ಜಾತಿಯ ಹೂವು ತುಂಬಿದ ಗಿಡಗಳು ಕಣ್ಮನ ಸೆಳೆದವು.
ಕಲ್ಲಂಗಡಿ ಹಣ್ಣಿನಲ್ಲಿ ದೇವರು ಮೂರ್ತಿ ವೆತ್ತು ನಿಂತರೆ ಮಹಾನ್ ಸಾಧಕರ ಪ್ರತಿಚಿತ್ರಗಳು,ತರಕಾರಿಯಲ್ಲಿ ಪ್ರಾಣಿ ಪಕ್ಷಿಗಳ ಕಲಾ ಕೃತಿಗಳು ಮೂಡಿ ಬಂದಿದ್ದವು ಹಾಗಲಕಾಯಿಯಿಂದ ಮೈದಳೆದ ಮೊಸಳೆ ಹಾಗೂ ಬದನೆ ಸಿಹಿಗುಂಬಳ ,ಕ್ಯಾಬೇಜ್ಗಳಿಂದ ರಚಿತವಾದ ಕೃತಿಗಳು ಬಹಳ ಮಂದಿಯನ್ನು ಆಕರ್ಷಿಸಿದವು ಹೂವಿನಿಂದ ನವಿಲು, ಅಳಿಲು ಅಲ್ಲದೆ ವಿವಿಧ ಕಲಾಕೃತಿಗಳು ಮನದ ಮೂಲೆಯಲ್ಲಿ ಮನೆ ಮಾಡಿದವು.
ಉಡುಪಿ ಜಿಲ್ಲೆಯಲ್ಲಿ ಕೃಷಿಕರು ಬೆಳೆದ ಹಣ್ಣು,ತರಕಾರಿ,ಗೆಡ್ಡೆ ಗೆಣಸು, ಬಾಳೆಗೊನೆ, ವಿವಿಧ ತಳಿಯ ಅಡಿಕೆ, ತೆಂಗು ಪ್ರದರ್ಶನದಲ್ಲಿ ಇದ್ದವು. ಇಲಾಖೆಯ ಮಾಹಿತಿ ಮಳಿಗೆಗಳು ಸಾವಯುವ ಉತ್ಪನ್ನಗಳು,ತರಕಾರಿ ಬೀಜ, ದೇಶೀಯ,ವಿದೇಶಿಯ ಹಣ್ಣಿನ ಗಿಡಗಳು ಹೂವಿನ ಗಿಡಗಳು ಹಾಗೂ ಇತರೆ ಮಳಿಗೆಗಳು ಜನರನ್ನು ಆಕರ್ಷಿಸಿದವು