spot_img
Thursday, November 21, 2024
spot_imgspot_img
spot_img
spot_img

“ಸರ್ಪಗಂಧ”, “ಗರುಡ ಪಾತಾಳ”ದ ಬಗ್ಗೆ ಒಂದಷ್ಟು ತಿಳ್ಕೊಳ್ಳಿ!

ಕನ್ನಡದಲ್ಲಿ ಗರುಡ ಪಾತಾಳ ಎಂಬ ಹೆಸರಿನಲ್ಲಿರುವ ಗಿಡವು ಸಂಸ್ಕೃತದಲ್ಲಿ ‘ಸರ್ಪಗಂಧ’ ಎಂಬ ಹೆಸರಿಂದ ಆಯುರ್ವೇದದಲ್ಲಿಯೂ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಇದರ ಬೇರಿಗೆ ಬಹಳ ಅಂತರಾಷ್ಟ್ರೀಯ ಬೇಡಿಕೆ ಇರುವ ಕಾರಣ ಇದನ್ನು ಕಾಡಿನಿಂದ, ಅದರ ಸುತ್ತಮುತ್ತಲಿನ ಜಾಗದಿಂದ ಕಿತ್ತು ತಂದು ವಿದೇಶಕ್ಕೆ ಕಳ್ಳತನದಿಂದ ಸಾಗಿಸಿ ದುಡ್ಡು ಪಡೆಯುತ್ತಾರೆ. ಇದರಿಂದಾಗಿ ‘ಗರುಡಪಾತಾಳ’ ಗಿಡವು ನಾಶದಂಚಿನ ಸಸ್ಯಗಳಲ್ಲಿ ಒಂದಾಗಿದೆ.

ಮುಖ್ಯವಾಗಿ ಪಶ್ಚಿಮ ಘಟ್ಟದ ಸುತ್ತಮುತ್ತಲಿರುವ ಈ ಗಿಡಕ್ಕೆ ಸೊಂದರ ಹೂಗೊಂಚಲು, ಬಿಳಿ ಎಸಳು, ಮತ್ತು ಕೆಂಪಾಗಿ ಕಪ್ಪು ಬೀಜಗಳು ಉಂಟಾಗಿ ಸುಂದರವಾಗಿ ಕಾಣುತ್ತದೆ. ಇದನ್ನು ಗಾರ್ಡನ್‌ನಲ್ಲೂ ನೆಡಬಹುದು. ಸುಮಾರು ಒಂದು ಅಡಿ ಎತ್ತರ ಅಷ್ಟೇ ಅಗಲದಲ್ಲಿ ಗೆಲ್ಲುಗಳು ಬರುತ್ತವೆ. ಬೇರು, ಮಾನಸಿಕ ತೊಂದರೆ, ಜ್ವರ, ಮಲೇರಿಯಾ, ಹೆರಿಗೆ ನೋವು, ಹೊಟ್ಟೆನೋವು, ಹಾವು ಕಡಿತ, ಮೂತ್ರದ ತೊಂದರೆ, ನರದೌರ್ಬಲ್ಯ ಮೊದಲಾದ ನೋವುಗಳಿಗೆ ಶಮನವಾಗುವುದರಿಂದ ವಿದೇಶದಲ್ಲಿ ಇದರದ್ದೇ ಆದ ಮದ್ದು ತಯಾರಿಸಿ ಮಾರಲಾಗುತ್ತದೆ.

ಸುಮಾರು 25 ವರ್ಷಗಳ ಹಿಂದೆ ಇದರ ಬೇರು ಸಿಗದೆ ಇದರ ಬೇರಿನೊಟ್ಟಿಗೆ ಬೇರೆ ಗಿಡದ ಬೇರುಗಳನ್ನು ಸೇರಿಸಿ ಕಳ್ಳತನದಿಂದ ಮಾರುತ್ತಿದ್ದು, ಇದು ಅವರಿಗೆ ಗೊತ್ತಾಗಿ ಮಿಶ್ರಣ ಮಾಡಿದ ಬೇರು ಯಾವುದು ಎಂದು ಕಂಡುಹಿಡಿದಾಗ ಆ ಬೇರು ‘ಸದಾಪುಷ್ಪ’ ನಿತ್ಯಪುಷ್ಪ ದ ಬೇರೆಂದು ಗೊತ್ತಾಗಿ ಅದರ ಪ್ರಯೋಗ ಮಾಡಿ ನೋಡಿದಾಗ ಸದಾಪುಷ್ಪದ ಬೇರು ಗರುಡ ಪಾತಾಳ ಬೇರಿಗಿಂತ ಉತ್ತಮವೆಂದು ಕಂಡುಹಿಡಿದು ‘ಸದಾಪುಷ್ಪದ’ ಬೇರನ್ನೇ ಮದ್ದಿಗೆ ಬಳಸಲು ಆರಂಭಿಸಿದರು. ಈಗ ಸದಾಪುಷ್ಪಗಳನ್ನೇ ಬೆಳೆಸಿ ಅದರ ಬೇರನ್ನೇ ಉಪಯೋಗಿಸುವುದರಿಂದ ಗರುಡ ಪಾತಾಳ (ಸರ್ಪಗಂಧ) ಗಿಡಗಳು ಉಳಿಯುತ್ತಾ ಬಂದಿದೆ. ಇದರ ಬೀಜಗಳಿಂದ ಸಸಿಗಳನ್ನು ಮಾಡಬಹುದು.

ಇಂಗ್ಲೀಷ್ ನಲ್ಲಿ Small Moon Plant, ಕನ್ನಡದಲ್ಲಿ ಪಾತಾಳಗರುಡ, ಗರುಡಪಾತಾಳ, ಸರ್ಪಗಂಧ, ಸಂಸ್ಕೃತದಲ್ಲಿ ನಾಗಸುಗಂಧ, ಸರ್ಪಗಂಧ, ಎಂಬ ಹೆಸರಿದ್ದು ಸಸ್ಯಶಾಸ್ತ್ರದಲ್ಲಿ Rauvolfia serpentina ಎಂದಿದ್ದು ಕುಟುಂಬ APOCYNACEAE ಗೆ ಸೇರಿದೆ.

ಬರಹ-ಎಂ.ದಿನೇಶ ನಾಯಕ್, ಸಸ್ಯಶ್ಯಾಮಲ ವಿಟ್ಲ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group