spot_img
Tuesday, December 3, 2024
spot_imgspot_img
spot_img
spot_img

ಅಡಿಕೆಯಿಂದ ಸಾಬೂನು, ಹಲ್ಲುಜ್ಜುವ ಪುಡಿ ತಯಾರಿಸಿ ಸೈ ಎನ್ನಿಸಿದ ಬೆಳ್ತಂಗಡಿಯ ರವಿರಾಜ್!

ಅಡಿಕೆ ಈಗ ಬಹು ಚರ್ಚೆಯಲ್ಲಿದೆ. ವಿದೇಶದಿಂದ ಆಮದು ಒಂದೆಡೆಯಾದರೆ ಅಡಿಕೆ ತೋಟಗಳು ವಿಸ್ತರಿಸಿಕೊಳ್ಳುತ್ತಿರುವುದು ಮತ್ತೊಂದೆಡೆ ಮುಂದಿನ ದಿನಗಳಲ್ಲಿ ದರ ಕುಸಿತವಾಗಬಹುದೆಂಬ ಆತಂಕ. ಈನಡುವೆ ಅಡಿಕೆ ಬಳಕೆಯ ಹೆಚ್ಚಿನ ಸಾಧ್ಯತೆ ಹಾಗೂ ಉಪಯೋಗಗಳ ಕುರಿತು ಹೊಸ ಪ್ರಯೋಗಗಳು ನಡೆಯುತ್ತಿವೆ.

ಅಡಿಕೆ ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಬಳೆಕೆ ಯಲ್ಲಿದೆ. ಅಡಿಕೆ ಹಲವು ಖಾಯಿಲೆಗಳಿಗೆ ಔಷಧಿ ಮಾತ್ರವಲ್ಲ ರಾಮಭಾಣ, ಅಡಿಕೆಯ ನಿರಂತರ ಬಳಕೆ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಇದರಿಂದ ಔಷಧಿ ಉದ್ಯಮಕ್ಕೆ ಹೊಡೆತವೇ ಹೊರತು ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ, ಅಡಿಕೆಯಲ್ಲಿ ಅದ್ಭುತ ಔಷಧೀ ಗುಣಗಳಿವೆ. ಈ ಸಾಧ್ಯತೆಯನ್ನು ಅರಿತು, ಅಡಿಕೆಯಿಂದ ಹೊಸ ಉತ್ಪನ್ನಗಳನ್ನು ತಯಾರಿಸಿ ಯಶಸ್ಸನ್ನು ಕಂಡವರಲ್ಲಿ ರವಿರಾಜ್ ಕೂಡ ಒಬ್ಬರು.

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಲಿಗೂಡು ಸಮೀಪದ ಮಧುವನದ ರವಿರಾಜ್ ಅವರು ಪೇಟೆ ಪಟ್ಟಣಗಳತ್ತ ಉದ್ಯೋಗವರಸಿ ಹೋಗದೆ ಹಳ್ಳಿಯಿಲ್ಲಿದ್ದುಕೊಂಡೇ ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದವರು. ತಮ್ಮ ಮನೆಯಲ್ಲೇ ಕೃಷಿ ಉತ್ಪನ್ನಗಳಿಗೆ ಪೂರಕವಾದ ಸಣ್ಣ ಉದ್ಯಮ ಆರಂಭಸುವತ್ತ ಗಮನ ಹರಿಸಿದರು. ಆಗ ಆರಂಭವಾದುದೇ ಸೋಪು ತಯಾರಿ ಉದ್ಯಮ. ಶುರುವಿನಲ್ಲಿ ಅರಸಿನ ಮತ್ತು ತೆಂಗಿನೆಣ್ಣೆ ಉಪಯೋಗಿಸಿ ತಯಾರಿಸಿದ ಸೋಪನ್ನು ಸ್ವಂತಕ್ಕೆ ಬಳಸಿದ್ದಲ್ಲದೆ ಇತರರಿಗೂ ನೀಡಿದಾಗ ಉತ್ತಮ ಪ್ರತಿಕ್ರಿಯೆ ದೊರೆಯಿತು. ಈ ಸೋಪು ಉಪಯೋಗಿಸಿ ಫಲಕಾರಿ ಆದ ನಂತರ ಕೆಲವು ಜನರು ನನಗೂ ಬೇಕು ಎಂದು ಹಣ ನೀಡಿ ಖರೀದಿಸಿದರು. ಕ್ರಮೇಣ ಬೇಡಿಕೆ ಜಾಸ್ತಿಯಾಯಿತು. ಕೊರೋನ ಟೈಮಲ್ಲಿ ಸ್ವಲ್ಪವೇ ಮಾರಾಟ ಆಗುತಿತ್ತು. ಈಗ ಜನರಿಗೆ ಇದರ ಉಪಯುಕ್ತತೆ ಅರಿವಾಗಿದೆ. ಮುಂಬೈ, ಗೋವಾ, ಬೆಂಗಳೂರಿನಲ್ಲೂ ಈ ಸೋಪಿಗೆ ಬೇಡಿಕೆಯಿದೆ.

  ಅಡಿಕೆಯಿಂದ ಸಾಬೂನು

ಇದಾದ ನಂತರ ಅಡಿಕೆಯಿಂದಲೂ ಸಾಬೂನು ತಯಾರಿಕಗೆ ಮುಂದಾದರು. ಹವ್ಯಾ ಹೆಸರಿನಲ್ಲಿ ಅಡಿಕೆಯಿಂದ ಸ್ನಾನದ ಸಾಬೂನನ್ನು ತಯಾರಿಸಿದರು. ಔಷಧಿಯುಕ್ತವಾದ ಅಡಿಕೆ ಸಾಬೂನು ಮಾರುಕಟ್ಟೆಯಲ್ಲಿ ತನ್ನದಾದ ಛಾಪು ಮೂಡಿಸಿದೆ. ಶುದ್ಧವಾದ ತೆಂಗಿನೆಣ್ಣೆಯನ್ನು ಬಳಸಿಕೊಂಡು ಅಡಿಕೆಯ ಸ್ನಾನದ ಸಾಬೂನು ತಯಾರಿಸಲಾಗುತ್ತದೆ. ಇದಲ್ಲದೆ ಅಡಿಕೆಯಿಂದ ಹಲ್ಲುಜ್ಜುವ ಪುಡಿಯನ್ನು ತಯಾರು ಮಾಡುತ್ತಿದ್ದಾರೆ. ಅಡಿಕೆಯನ್ನು ಸುಟ್ಟು ಮಾಡುವ ಉತ್ಪನ್ನ ಚಾರ್ಕೋಲ್ ಟೂತ್ ಪೌಡರ್

ಅಡಿಕೆ ಚಾರ್ಕೋಲ್ ಬಳಸಿ ಬಾಯೊಳಗೆ ಆದ ಸುಟ್ಟ ಗಾಯಗಳನ್ನು ಗುಣಪಡಿಸಬಹದಾಗಿದೆ. ಯಾವುದೇ ರಾಸಾಯಿನಿಕ ಮುಲಾಮುಗಳ ಆವಶ್ಯಕತೆಯಿಲ್ಲ ಎನ್ನತ್ತಾರೆ ರವಿರಾಜ್ ಮತ್ತು ಅವರ ಪತ್ನಿ ಅಕ್ಷತಾ ಈ ಉತ್ಪನ್ನಗಳ ತಯಾರಿಯಲ್ಲಿ ತಂದೆ, ತಾಯಿ ಮನೆಮಂದಿಯೆಲ್ಲಾ ಕೈ ಜೋಡಿಸುತ್ತಾರೆ. ಫೇಸ್ ವಾಶ್ ಮೊದಲಾದುವುಗಳು ,ಮುಖದಲ್ಲಿರುವ ಕಲೆ ,ಚಿಕ್ಕ ಚಿಕ್ಕ ಬೊಬ್ಬೆ, ಮೊಡವೆಗಳಗೆ ತಡೆಗೆ ಅರಸಿನದಿಂದ ಮಾಡಿದ ಫೇಶವಾಶ್ ಉತ್ತಮವಾದುದು.

ಕೆಲವೊಮ್ಮೆ ಜನರು ತಾವು ಸ್ನಾನ ಮಾಡಲು ಬಳಸುವ ಸಾಬೂನನ್ನು ಅದರ ಬೆಲೆಯ ಆಧಾರದ ಮೇಲೆ ಕೊಂಡುಕೊಳ್ಳುತ್ತಾರೆ ಕೆಲವರು ಬೆಲೆ ಜಾಸ್ತಿ ಇದ್ದರೆ ಅದು ಒಳ್ಳೆ ಸಾಬೂನು ಎಂದು ಕೊಂಡು ಕೊಂಡರೆ , ಇನ್ನೂ ಕೆಲವರು ಈ ಸಾಬೂನಿನ ಬೆಲೆ ಕಡಿಮೆ ಇದೆ ನಮ್ಮ ಬಜೆಟ್‌ಗೆ ಸರಿಹೋಗುತ್ತದೆ ಎಂದು ಕೊಂಡುಕೊಳ್ಳುತ್ತಾರೆ. ಆದರೆ ಈ ರೀತಿಯ ಆಲೋಚನೆಯು ಸರಿಯಲ್ಲ ಸಾಮಾನ್ಯವಾಗಿ ಅದರಲ್ಲಿರುವ ಪದರ‍್ಥಗಳ ಆಧಾರದ ಮೇಲೆ ಸಾಬೂನು ಆಯ್ಕೆ ಮಾಡುವುದು ಹೆಚ್ಚು ಮುಖ್ಯವೆಂದು ಪರಿಗಣಿಸಲು ಆಗುತ್ತದೆಯಾದರೂ, ಇದರ‍್ಥ, ಆರೋಗ್ಯಕರ ರ‍್ಮವನ್ನು ಸ್ವಚ್ಛ ಗೊಳಿಸುವ ಮತ್ತು ಬೆಂಬಲಿಸುವ ಪದರ‍್ಥಗಳೊಂದಿಗೆ ಸಾಬೂನು ಆಯ್ಕೆ ಮಾಡುವುದು. ಸೋಪ್ ಹೆಚ್ಚಾಗಿ ಲವಣಯುಕ್ತ ಅಥವಾ ಕ್ಷಾರೀಯವಾಗಿದ್ದು, ಸಸ್ಯಜನ್ಯ ಎಣ್ಣೆ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ಅಥವಾ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಅನ್ನು ಒಳಗೊಂಡಿರುತ್ತದೆ.

ಸಾಬೂನು ನಿರಂತರವಾಗಿ ಬಳಸುವುದರಿಂದ ನಮ್ಮ ಚರ್ಮ ಪಿಹೆಚ್ ಅನ್ನು ಕಡಿಮೆ ಮಾಡಬಹುದು, ಅಂದರೆ ಒಣ ಚರ್ಮ ಹೊಂದಿರುವವರು ಸೋಪ್ ಮುಕ್ತ ಕ್ಲೆನ್ಸರ್ ಬಳಸಬೇಕು, ಈ ಮಧ್ಯೆ ಎಣ್ಣೆಯುಕ್ತ ಚರ್ಮದವರು ಔಷಧೀಯ ಸೋಪ್ ಅನ್ನು ಬಳಸಬೇಕು, ಇದರಲ್ಲಿ ಸ್ಯಾಲಿಸಿಲಿಕ್, ಸಿಟ್ರಿಕ್ ಆಮ್ಲವಿದೆ. ನಮ್ಮಲ್ಲಿ ಹೆಚ್ಚಿನವರು, ಸ್ನಾನದ ಸಾಬೂನು ಆರಿಸುವಾಗ, ಇದು ನಮ್ಮ ಚರ್ಮದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಗಮನಹರಿಸೋದಿಲ್ಲ.

ಸೋಪ್ ಎಂದರೇನು?

ಸಾಬೂನು ಸಪೋನಿಫಿಕೇಶನ್ ಎಂಬ ರಾಸಾಯನಿಕ ಪ್ರಕ್ರಿಯೆಯನ್ನು ಬಳಸಿ ಅಭಿವೃದ್ಧಿಪಡಿಸಿದ ಗಟ್ಟಿಯಾದ ರಾಸಾಯನಿಕ ವಸ್ತುವಾಗಿದೆ. ಇದು ರಾಸಾಯನಿಕ ಕ್ರಿಯೆಯಾಗಿದ್ದು, ಸೋಡಿಯಂ ಹೈಡ್ರಾಕ್ಸೈಡ್ (ಓಚಿಔಊ), ಕ್ಷಾರ, ಸಸ್ಯಜನ್ಯ ಎಣ್ಣೆಗಳು ಅಥವಾ ಪ್ರಾಣಿಗಳ ಕೊಬ್ಬುಗಳು ಅಥವಾ ಎರಡರಲ್ಲಿರುವ ಕೊಬ್ಬಿನಾಮ್ಲಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಅನ್ನು ಸಹ ಬಳಸಲಾಗುತ್ತದೆ.

ಸಾಬೂನುಗಳ ಶುದ್ಧೀಕರಣ ಕ್ರಿಯೆಯ ವೈಜ್ಞಾನಿಕ ವಿವರಣೆ

ಕೊಳಕು ಸಾಮಾನ್ಯವಾಗಿ ತೈಲ ಆಧಾರಿತವಾಗಿದೆ ಎಂದು ನಾವು ಕಂಡುಕೊಳ್ಳುತ್ತೇವೆ. ಕೇವಲ ನೀರಿನಿಂದ ಕೊಳೆ ತೆಗೆಯುವುದು ಕಷ್ಟ. ಜಲೀಯ ದ್ರಾವಣದಲ್ಲಿ ಮೈಕೆಲ್‌ಗಳನ್ನು ರಚಿಸಲು ಸಾಬೂನುಗಳನ್ನು ಬಳಸಲಾಗುತ್ತದೆ. ಈ ಸೂಕ್ಷ್ಮ ರಚನೆಗಳನ್ನು ಸಸ್ಯಜನ್ಯ ಎಣ್ಣೆಗಳು ಅಥವಾ ಪ್ರಾಣಿಗಳ ಕೊಬ್ಬಿನ ಕೊಬ್ಬಿನಾಮ್ಲಗಳ ಸೋಡಿಯಂ ಅಥವಾ ಪೊಟ್ಯಾಸಿಯಮ್ ಲವಣಗಳಿಂದ ರಚಿಸಲಾಗಿದೆ.

ಈ ಮೈಕೆಲ್‌ಗಳು ಹೈಡ್ರೋಫಿಲಿಕ್ (ಪೋಲಾರ್) ಮತ್ತು ಹೈಡ್ರೋಫೋಬಿಕ್ (ಧ್ರುವೀಯವಲ್ಲದ) ತುದಿಗಳನ್ನು ಹೊಂದಿರುತ್ತವೆ. ಅವರು ಜಲೀಯ ದ್ರಾವಣದಲ್ಲಿ ಎಮಲ್ಷನ್ ಅನ್ನು ರಚಿಸುತ್ತಾರೆ, ಅಲ್ಲಿ ಧ್ರುವೀಯವಲ್ಲದ ತುದಿಗಳು ಅವುಗಳೊಳಗಿನ ಎಣ್ಣೆಯುಕ್ತ ಕೊಳೆಯನ್ನು ಸಣ್ಣ ಗೋಳಗಳನ್ನು ರೂಪಿಸುತ್ತವೆ. ಇತರ ಧ್ರುವೀಯ ತುದಿಗಳು ನೀರಿನ ಅಣುಗಳಿಗೆ ಅಂಟಿಕೊಂಡಿರುತ್ತವೆ. ಆದ್ದರಿಂದ, ಈ ಸೂಕ್ಷ್ಮಗೋಳಗಳ ಕರ‍್ಗಳು ತೊಳೆದ ಮೇಲ್ಮೈಗಳಿಂದ ತೆಗೆದ ಕೊಳೆಯನ್ನು ಹೊಂದಿರುತ್ತವೆ. ಕೈಗಾರಿಕೆಗಳಲ್ಲಿ ಬಳಸುವ ಸಾಬೂನು ಉತ್ಪಾದನಾ ಪ್ರಕ್ರಿಯೆಯು ಸಪೋನಿಫಿಕೇಶನ್‌ನ ಅದೇ ವೈಜ್ಞಾನಿಕ ತತ್ವವನ್ನು ಅನುಸರಿಸುತ್ತದೆ .

ಯಾವುದೇ ಬಿಸಿನೆಸ್ನಲ್ಲಿ ಒಮ್ಮೆಲೇ ಮೇಲೆ ಬರಲು ಸಾಧ್ಯವಿಲ್ಲ.ನಿಧಾನಕ್ಕೆ ಉತ್ಪನ್ನವನ್ನು ಗುರುತಿಸಿ ಅದರಿಂದ ಉಪಯೋಗ ಆದಾಗ ಜನರಿಗೆ ಉಪಯುಕ್ತವಾಗುತ್ತದೆ. ನಂತರ ಅದರ ಬೇಡಿಕೆ ಜಾಸ್ತಿ ಆಗುತ್ತಾ ಹೋಗುತ್ತದೆ. ಎನ್ನುತ್ತಾರೆ ರವಿರಾಜ್. ಅಡಿಕೆ ಸಾಬೂನು ಬೆಲೆ 6೦ ರೂಪಾಯಿ. ಪ್ರದರ್ಶನ ಮಳಿಗೆಗಳಲ್ಲಿ ಹೆಚ್ಚು ಮಾರಾಟ ಕಂಡಿವೆ ಮೊ:   7760545001

  • ಆಶಾ ನೂಜಿ
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group