spot_img
Saturday, July 27, 2024
spot_imgspot_img
spot_img
spot_img

ಆಹಾರ ಸಂಸ್ಕರಣ ಉದ್ಯಮದಲ್ಲಿದೆ ಭಾರೀ ಲಾಭ:ಇಲ್ಲಿದೆ ಒಂದಷ್ಟು ಮಾಹಿತಿ

ಭಾರತದ ಆಹಾರ ಸಂಸ್ಕರಣ ಉದ್ಯಮವು ವಿಶ್ವದ ಅತಿ ದೊಡ್ಡ ಉದ್ಯಮವಾಗಿದೆ. ಆಹಾರ ಸಂಸ್ಕರಣ ಉದ್ಯಮದ ೨೦೨೫-೨೬ರ ವೇಳೆಗೆ ೫೩೫ ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಕೇಂದ್ರ ಸರಕಾರವು ಆಹಾರ ಸಂಸ್ಕರಣೆಗೆ ಕೊಡಮಾಡಿರುವ ನೂರು ಲಕ್ಷ ಕೋಟಿ ರೂಗಳ (ಒಂದು ಟ್ರಿಲಿಯನ್ ಡಾಲರ್) ಮತ್ತು ಗ್ರಾಮೀಣ ಅರ್ಥವ್ಯವಸ್ಥೆಯ ಅಭಿವೃದ್ಧಿಗೆ ಕೊಡಮಾಡುವ ೨೫ಲಕ್ಷ ಕೋಟಿ ರೂಗಳ ಕೊಡುಗೆಗಳು ಆಹಾರ ಸಂಸ್ಕರಣ ಉದ್ಯಮದ ಉನ್ನತಿಗೆ ಕಾರಣವಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಯು ಬೆಳೆಗಾರರಿಂದ ಬಳಕೆದಾರನ ವರೆಗೆ ದಕ್ಷ ಪೂರೈಕೆ ವ್ಯವಸ್ಥೆಯ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಯೋಜನೆಯಾಗಿದೆ. ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತ ಅಭಿಯಾನದಲ್ಲಿ ಅತಿ ಸಣ್ಣ ಆಹಾರ ಸಂಸ್ಕರಣ ಉದ್ಯಮಗಳಿಗೆ ಅಥವಾ ಫಾರ್ಮೇಶನ್ ಆಫ್ ಮೈಕ್ರೋ ಪ್ರೊಸೆಸಿಂಗ್ ಎಂಟರ್ಪ್ರೈಸಸ್ ಯೋಜನೆಗಳಿಗೆ ಕೇಂದ್ರ ಸರಕಾರವು ಹತ್ತು ಸಾವಿರ ಕೋಟಿ ರೂಗಳನ್ನು ಒದಗಿಸಿದೆ. ಇದರ ಜೊತೆಗೆ ೪.೧೮ ಬಿಲಿಯನ್ ಡಾಲರ್ ವಿದೇಶಿ ನೆರವು ನೇರ ಬಂಡವಾಳವನ್ನು ಭಾರತದ ಆಹಾರ ಸಂಸ್ಕರಣ ಉದ್ಯಮವು ೨೦೧೪ ಏಪ್ರಿಲ್‌ನಿಂದ ಮಾರ್ಚ್ ೨೦೨೦ರ ಅವಧಿಯಲ್ಲಿ ಆಕರ್ಷಿಸಿದೆ. ವಿಶ್ವದ ಜನಸಂಖ್ಯೆ ಏರಿದಂತೆ ಭಾರತದ ಆಹಾರ ಉತ್ಪನ್ನಗಳಿಗೆ ಬೇಡಿಕೆ ಇರುತ್ತಲೇ ಇರುತ್ತದೆ

ಖಾಸಗಿ ಉದ್ಯಮದ ವ್ಯಾಖ್ಯೆ
ಖಾಸಗಿ ವಲಯವು ರಾಷ್ಟ್ರದ ಅರ್ಥವ್ಯವಸ್ಥೆಯ ಭಾಗವಾಗಿದೆ. ಇದನ್ನು ನಾಗರಿಕರ ವಲಯ ಎಂದು ಕರೆಯಲಾಗುತ್ತದೆ. ಇದು ಪ್ರಮುಖ ಉದ್ಯೋಗದಾತ ವಲಯವಾಗಿದೆ. ಸಾರ್ವಜನಿಕ ವಲಯ ರಾಜ್ಯದ ಮಾಲೀಕತ್ವವನ್ನು ಹೊಂದಿದ್ದರೆ ಲಾಭ ಗಳಿಕೆಯ ಉದ್ದೇಶದಿಂದ ಖಾಸಗಿ ವ್ಯಕ್ತಿ, ಸಂಸ್ಥೆ, ಪಾಲುದಾರಿಕೆ ಸಂಘಟನೆಗಳು ಮತ್ತು ಖಾಸಗಿ ಮಾಲಿಕತ್ವ ಹೊಂದಿರುವ ವಲಯ ಎಂದು ಖಾಸಗಿ ವಲಯದ ವ್ಯಾಖೆಯನ್ನು ಮಾಡಬಹುದಾಗಿದೆ

ಮಹತ್ವ
ಒಟ್ಟು ಉದ್ಯಮಗಳಲ್ಲಿ ಆಹಾರ ಸಂಸ್ಕರಣ ಉದ್ಯಮವು ಶೇಕಡಾ ೧೫.೫೫ರಷ್ಟು ಪಾಲನ್ನು ಹೊಂದಿದೆ ಒಟ್ಟು ಕಾರ್ಮಿಕರಲ್ಲಿ ಶೇ.೧೧.೩೬ ರಷ್ಟು ಭಾಗವನ್ನು ಹೊಂದಿದೆ. ಉತ್ಪಾದನೆಯಲ್ಲಿ ಶೇಕಡಾ ೧೪.೮೯ ಭಾಗವನ್ನು ಹೊಂದಿದೆ. ಮತ್ತು ಕಾರ್ಯನಿರತ ಉದ್ಯಮಗಳ ಶೇಕಡ ೧೬.೭೮ ರಷ್ಟು ಪಾಲನ್ನು ಹೊಂದಿವೆ. ಆಹಾರ ಸಂಸ್ಕರಣ ಉದ್ಯಮವು ೨೫೮ ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪಿದೆ. ಉತ್ಪಾದನೆ ಉಪಭೋಗ ರಫ್ತುಗಳಲ್ಲಿ ೫ನೇ ದೊಡ್ಡ ಕೈಗಾರಿಕೆಯಾಗಿದೆ. ಭಾರತದ ಜೆಡಿಪಿಯ ಕೈಗಾರಿಕಾ ವಲಯದ ಪಾಲಿನ ಶೇಕಡಾ ೧೪ರಷ್ಟು ಭಾಗವನ್ನು ಆಹಾರ ಸಂಸ್ಕರಣ ಉದ್ಯಮ ಹೊಂದಿದೆ
ಆಹಾರ ಸಂಸ್ಕರಣ ಉದ್ಯಮವು ತೊಡಗಿಸಿಕೊಂಡಿರುವ ಕ್ಷೇತ್ರಗಳು

೧.ಹೈನುಗಾರಿಕೆ ೨.ಹಣ್ಣು ಮತ್ತು ತರಕಾರಿ ೩.ಕೋಳಿ ಮತ್ತು ಮಾಂಸ ಸಂಸ್ಕರಣೆ ೪.ಮೀನುಗಾರಿಕೆ ೫.ಆಹಾರದ ಚಿಲ್ಲರೆ ವ್ಯವಹಾರ ಸಂಸ್ಕರಣದಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಉದ್ಯಮಗಳು ಇಂತಹ ಖಾಸಗಿ ಉದ್ಯಮಗಳು ಒಟ್ಟು ೮೮ ಇದ್ದು ಇವುಗಳಲ್ಲಿ ಪ್ರಮುಖ ಹತ್ತು ಉದ್ಯಮಗಳು ಈ ಕೆಳಗಿನಂತಿದೆ

ಆಹಾರ ಸಂಸ್ಕರಣ ಉದ್ಯಮಕ್ಕೆ ಇರುವ ಅನುಕೂಲತೆಗಳು
೧.ಹೆಚ್ಚಿನ ಆದಾಯದಿಂದ ಜೀವನ ವಿಧಾನ ಮತ್ತು ಆಹಾರ ಪದ್ಧತಿಗಳು ಬದಲಾವಣೆ, ದೇಶದೊಳಗೆ ಹೆಚ್ಚು ಸಂಸ್ಕರಿಸಿದ ಆಹಾರ ಬೇಡಿಕೆ ಹೆಚ್ಚಳ
೨.ದೊಡ್ಡ ಪಶು ಸಂಪತ್ತು, ಹೆಚ್ಚಿನ ಕೃಷಿ ಉತ್ಪಾದನೆ, ಬೆಳೆಗಳ ವೈವಿಧ್ಯತೆ, ಜಲಸಾರಿಗೆ, ಅತಿ ಉದ್ದವಾದ ಸಮುದ್ರ ಮಾರ್ಗ ಮತ್ತು ಹೆಚ್ಚುತ್ತಿರುವ ಸಾಗರೋತ್ಪನ್ನಗಳ ಉತ್ಪಾದನೆ
೩.ವಿಶ್ವದ ಆರ್ಥಿಕತೆಯೊಂದಿಗೆ ನಿಕಟತೆ ಮತ್ತು ಆಮದು ರಾಷ್ಟ್ರಗಳ ಬಂದರಿನ ಸಾಮಿಪ್ಯ
೪.ಸರಕಾರದ ಸಕಾರಾತ್ಮಕ ಭರವಸೆ ಮತ್ತು ಶಾಸನಗಳ ಬೆಂಬಲ

ಆಹಾರ ಸಂಸ್ಕರಣ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳು
೧ದುರ್ಬಲ ಪೂರೈಕೆ ಸರಪಳಿ: ಕೊಯಿಲು ನಂತರದ ಹೆಚ್ಚಿನ ನಷ್ಟ, ಹೆಚ್ಚು ಉತ್ಪಾದನಾ ವೆಚ್ಚ, ಹಂಗಾಮಿನ ಬೆಳೆ ಪದ್ಧತಿ, ಹಣ್ಣು-ತರಕಾರಿಗಳ ತೀವ್ರ ನಶಿಸಿಹೋಗುವ ಗುಣ ಮತ್ತು ಉತ್ಪನ್ನಗಳ ವೈವಿಧ್ಯತೆ ಕಾರಣ ಪೂರೈಕೆ ಸರಪಳಿ ದುರ್ಬಲಗೊಂಡಿದೆ
೨.ರಫ್ತಿಗೆ ಮೂಲಭೂತ ಸೌಕರ್ಯದ ಕೊರತೆಗಳು: ರಫ್ತು ಉದ್ಯಮಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ
೩.ಕೊಯ್ದು ನಂತರದ ನಷ್ಟ: ಸಂಗ್ರಹಣಾ ಸಾಮರ್ಥ್ಯದ ಕೊರತೆಯ ಕಾರಣದಿಂದ ಶೇಕಡ ೩೦ರಷ್ಟು ಕೊಯ್ಲು ನಂತರ ನಷ್ಟ ಸಂಭವಿಸುತ್ತದೆ.
೪.ನುರಿತ ಕಾರ್ಯಕರ್ತರ ಕೊರತೆ: ಆಹಾರ ಸಂಸ್ಕರಣೆಯು ನುರಿತ ಕೃಷಿ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ
೫.ಗುಣಮಟ್ಟದ ದೃಢೀಕರಣ ಸೌಲಭ್ಯಗಳ ಕೊರತೆ: ಭಾರತದಲ್ಲಿ ಪ್ರಾಥಮಿಕ ಗುಣಮಟ್ಟದ ಧೃಡೀಕರಣಗಳ ಸೌಲಭ್ಯಗಳ ಕೊರತೆ ಇದೆ. ಆಹಾರ ಉದ್ಯಮಗಳ ವಿಸ್ತಾರವನ್ನು ಗಮನಿಸಿದಾಗ ಪ್ರಯೋಗಾಲಯ, ನುರಿತ ಕೆಲಸಗಾರರ ಕೊರತೆ ಹಾಗೂ ಗುಣಮಟ್ಟದ ಪ್ರಮಾಣಿಕರಣ ಸಂಸ್ಥೆಗಳ ಕೊರತೆ ಇದೆ

ಆಹಾರ ಉತ್ಪನ್ನಗಳ ರಫ್ತು
ಭಾರತವು ಕೃಷಿ, ತೋಟಗಾರಿಕೆ ಸೇರಿದಂತೆ ಸಿದ್ಧ ಆಹಾರ ಉತ್ಪನ್ನಗಳನ್ನು ನೂರಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಈಶಾನ್ಯ ಮಧ್ಯಪೂರ್ವ ಏಷ್ಯಾ, ಸಾರ್ಕ್ ದೇಶಗಳು ಹಾಗೂ ಯುರೋಪಿಯನ್ ಯೂನಿಯನ್‌ಗೆ ಭಾರತದ ಆಹಾರ ಉತ್ಪನ್ನಗಳು ರಫ್ತಾಗುತ್ತವೆ. ಭಾರತದ ಆಹಾರ ಸಂಸ್ಕರಣ ಉತ್ಪನ್ನಗಳ ಮೌಲ್ಯ ೨೦೧೮-೨೦೧೯ರಲ್ಲಿ ೩೮.೪೯ ಮಿಲಿಯನ್ ಡಾಲರ್ ಆಗಿತ್ತು. ವ್ಯಾಪಾರದಲ್ಲಿ ಶೇಕಡ ೨ಕ್ಕಿಂತ ಹೆಚ್ಚಾಗಿದೆ.೨೦೧೯-೨೦ರಲ್ಲಿ ಒಣ ಸಂಸ್ಕರಿತ ತರಕಾರಿ ಮತ್ತು ಮಾವಿನ ತಿರುಳು ಸೇರಿ ಒಟ್ಟಾರೆ ಮೌಲ್ಯ ೧೭೩.೪೯ ಅಮೆರಿಕನ್ ಮಿಲಿಯನ್ ಡಾಲರ್ ಅಥವಾ ೧೨೪೧.೨೧ ಕೋಟಿ ರೂ. ಆಗಿದೆ.

ರಫ್ತಾಗುವ ಹಣ್ಣು ಮತ್ತು ತರಕಾರಿ
ಭಾರತದ ವೈವಿಧ್ಯಮಯ ಹವಮಾನ ಪರಿಸ್ಥಿತಿಯ ಕಾರಣ ವೈವಿಧ್ಯಮಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಭಾರತವು ವಿಶ್ವದ ಅತಿ ದೊಡ್ಡ ತರಕಾರಿ ಉತ್ಪಾದಕ ರಾಷ್ಟ್ರವಾಗಿದೆ. ವಿಶ್ವದ ಒಟ್ಟು ಉತ್ಪಾದನೆಯಲ್ಲಿ ಭಾರತದ ಉತ್ಪಾದನೆಯ ಪ್ರಮಾಣ ಶೇಕಡ ೧೫ರಷ್ಟು ಇದೆ. ತರಕಾರಿಗಳಲಿ ಶುಂಠಿ ಪ್ರಥಮ ಸ್ಥಾನದಲ್ಲಿದೆ ಎರಡನೇ ಸ್ಥಾನದಲ್ಲಿ ಆಲೂಗಡ್ಡೆ, ಈರುಳ್ಳಿ, ಬದನೆ, ಹೂಕೋಸು ಕೆಂಪು ಮೂಲಂಗಿಗಳು ಬರುತ್ತವೆ. ಭಾರತದಲ್ಲಿ ಬಾಳೆಹಣ್ಣಿನ ಉತ್ಪಾದನೆಯ ಶೇಕಡಾ ೨೫ರಷ್ಟು, ಪಪ್ಪಾಯಿ ಶೇ.೪೩.೬ ಮತ್ತು ಮಾವು ಶೇ. ೪೦.೪ ಉತ್ಪಾದನೆಯಾಗುತ್ತಿದೆ ಭಾರತದ ಸಂಸ್ಕರಿಸಿದ ಹಣ್ಣು ಮತ್ತು ತರಕಾರಿ ಚಿಲ್ಲರೆ ಮಾರಾಟ ಮಾರಾಟವು ಶೇಕಡಾ ೧೨ರಷ್ಟು ಮೌಲ್ಯವರ್ಧನೆ ಕಂಡಿದೆ. ೨೦೧೮-೧೯ರಲ್ಲಿ ಭಾರತದ ಹಣ್ಣು ಮತ್ತು ತರಕಾರಿಗಳ ರಫ್ತು ಮೌಲ್ಯ ೧೪೬೯.೩೩ ಮಿಲಿಯನ್ ಡಾಲರ್ ಅಥವಾ ೧೦೭೩೬. ೯೩ ಕೋಟಿ ರೂ ಆಗಿತ್ತು. ಆಹಾರ ಸಂಸ್ಕರಣ ಉದ್ಯಮಗಳ ಸಚಿವಾಲಯ ಭಾರತದಲ್ಲಿ ಆಹಾರ ಸಂಸ್ಕರಣ ಉದ್ದಿಮೆಗಳ ಉತ್ತೇಜನಕ್ಕಾಗಿ ಆಹಾರ ಸಂಸ್ಕರಣ ಉದ್ಯಮಗಳ ಸಚಿವಾಲಯವನ್ನು ಜುಲೈ ೧೯೮೮ರಲ್ಲಿ ಸ್ಥಾಪಿಸಲಾಯಿತು ಕೋಳಿ, ಮಾಂಸ, ಮೊಟ್ಟೆ, ಮೀನು, ಹಣ್ಣು ಮತ್ತು ತರಕಾರಿಗಳು ಮತ್ತು ಸಂಸ್ಕರಣೆಗೆ ಸಚಿವಾಲಯವು ಪ್ರೋತ್ಸಾಹ ನೀಡುತ್ತದೆ. ಬ್ರೆಡ್ಡು, ಎಣ್ಣೆಬೀಜಗಳು ಉಪಾಹಾರಗಳು, ಬಿಸ್ಕತ್, ಪ್ರೊಟೀನ್ ಮತ್ತು ಇತರ ಪೋಷಕಾಂಶಗಳು ಬಿಯರ್ ಮತ್ತು ಆಲ್ಕೋಹಾಲ್ ಅಭಿವೃದ್ಧಿ ಮತ್ತು ನಿಯಂತ್ರಿಸುವುದೇ ಸಚಿವಾಲಯದ ಪ್ರಮುಖ ಉದ್ದೇಶವಾಗಿದೆ

ಆಹಾರ ಸಂಸ್ಕರಣ ನೀತಿ
ಆಹಾರ ಸಂಸ್ಕರಣ ಉದ್ಯಮಗಳ ಸಚಿವಾಲಯ ಬಂಡವಾಳ ಹೂಡಿಕೆ ಮತ್ತು ವ್ಯಾಪಾರ ಅಭಿವೃದ್ಧಿಗಾಗಿ ಆಕರ್ಷಕ ವಾತಾವರಣವನ್ನು ಕಲ್ಪಿಸಲು ಒಂದು ರಾಷ್ಟ್ರೀಯ ಆಹಾರ ಸಮಿತಿಯನ್ನು ರಚಿಸಿತು. ಈ ನೀತಿಯ ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ
೧.ಸಂಸ್ಕರಣ ಉದ್ದಿಮೆಗಳ ಸುಗಮ ಬೆಳಬಣಿಗೆಯ ಮಾರ್ಗಸೂಚಿ ರಚನೆ ೨.ಆಹಾರ ಸುರಕ್ಷತೆ ಮತ್ತು ಪೌಷ್ಠಿಕತೆ ಕಾಯ್ದು ಕೊಳ್ಳುವುದು. ೩.೨೦೧೮ರ ರಫ್ತು ನೀತಿಯೊದಿಗೆ ಆಹಾರ ಸಂಸ್ಕರಣ ಉತ್ಪನ್ನಗಳ ರಫ್ತನ್ನು ಸಂಯೋಜಿಸುವುದು ೪.ರೈತರ ಆದಾಯವನ್ನು ದ್ವಿಗುಣಗೊಳಿಸಿ ರೈತರ ಬಲವರ್ಧನೆ ಮಾಡುವುದು
ಆಹಾರ ಸಂಸ್ಕರಣ ನೀತಿಯ ಗುರಿ: ಮುಂದಿನ ೧೫ ವರ್ಷಗಳಲ್ಲಿ ಅಂದರೆ ೨೦೩೪-೩೫ರ ವೇಳೆಗೆ ಆರು ಪಟ್ಟು ಹೆಚ್ಚಿನ ಬಂಡವಾಳವನ್ನು ಆಕರ್ಷಿಸಿ ಉತ್ಪಾದನೆ ಮತ್ತು ಉದ್ಯಮ ಹಾಗೂ ಉದ್ಯೋಗಗಳನ್ನು ಹೆಚ್ಚಿಸುವ ಗುರಿ ಹೊಂದಿದೆ

ಸರಕಾರದ ಪ್ರೋತ್ಸಾಹ: ಫಾರಂ ಗೇಟ್ ಅಥವಾ ಕೃಷಿ ಹೆಬ್ಬಾಗಿಲ ಕಾರ್ಯಗಳಾದ ವಿಂಗಡಣೆ, ವರ್ಗೀಕರಣ, ಪೂರ್ವ ಶೀತಲೀಕರಣ ಮತ್ತು ಪ್ಯಾಕೆಜಿಂಗ್ ಸೌಲಭ್ಯಗಳೊಂದಿಗೆ ಕೃಷಿಕರು, ಸಂಸ್ಕರಣ ಉದ್ಯಮಗಳು ಹಾಗೂ ಪೂರಕ ಯೋಜನೆಗಳನ್ನು ಜೋಡಿಸಲು ಸರಕಾರವು ಕಾರ್ಯಕ್ರಮವನ್ನು ರೂಪಿಸಿದೆ. ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಕೃಷಿ ಆಹಾರ ಸಹಕಾರಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ನೀಡಲಾಗುತ್ತದೆ. ಇದರಿಂದ ಉದ್ದಿಮೆಗಳಿಗೆ ಕಚ್ಚಾವಸ್ತುಗಳು ಲಭ್ಯವಾಗಿ ರೈತರ ಆದಾಯ ಹೆಚ್ಚುತ್ತದೆ ಯೋಜನೆಯು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಪೂರಕ ಯೋಜನೆಗಳೊಂದಿಗೆ ಮತ್ತು ಅವುಗಳ ಸಮನ್ವಯದೊಂದಿಗೆ ಜಾರಿಯಾಗುತ್ತದೆ

ಹಾರ ಉದ್ಯಮಗಳು: ಕೇಂದ್ರ ಸರಕಾರವು ಆಹಾರ ಉದ್ಯಾನವನ್ನು ನಿರ್ಮಿಸಲು ಆರ್ಥಿಕ ಸಹಾಯವನ್ನು ನೀಡುತ್ತದೆ. ರಾಜ್ಯಗಳು ಆದ್ಯತೆಯ ಮೇಲೆ ಭೂಮಿಯನ್ನು ಹಂಚಿಕೆ ಮಾಡುತ್ತವೆ. ತಮ್ಮ ಸಂಪನ್ಮೂಲಗಳಿಂದಲೇ ಆಹಾರ ಉದ್ಯಾನಗಳನ್ನು ಸ್ಥಾಪಿಸಲು ಉತ್ತೇಜನ ನೀಡುತ್ತದೆ. ರಾಜ್ಯ ಸರಕಾರಗಳು ಬಂಡವಾಳ ಹೂಡಿಕೆಯ ಸಹಾಯಧನ ಸ್ಟಾö್ಯಂಪ್ ಡ್ಯೂಟಿಯ ವಿನಾಯತಿ, ಪರಿವರ್ತನ ಶುಲ್ಕದ ವಿನಾಯಿತಿಗಳನ್ನು ನೀಡುತ್ತವೆ

ಶೈತ್ಯಾಗಾರಗಳ ನಿರ್ಮಾಣ: ರಾಷ್ಟ್ರೀಯ ತೋಟಗಾರಿಕಾ ಮಂಡಳಿ(ಓಊಃ), ರಾಷ್ಟ್ರೀಯ ತೋಟಗಾರಿಕಾ ಮಿಷನ್ (ಓಊಒ) ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ(ಓಅಆಅ)ಗಳ ಶೈತ್ಯಾಗಾರ ನಿರ್ಮಾಣಕ್ಕೆ ನೆರವು ನೀಡುತ್ತವೆ. ಭಾರತದ ಆಹಾರ ಸಂಸ್ಕರಣಾ ಸಚಿವಾಲಯವೂ ಯೋಜನೆಗಳ ಸಮನ್ವಯದೊಂದಿಗೆ ಉದ್ದಿಮೆಗಳ ಸ್ಥಾಪನೆ ನೆರವು ನೀಡುತ್ತದೆ. ಜೊತೆಗೆ ಖಾಸಗಿ ಶೈತ್ಯಾಗಾರಗಳು ನಿರ್ಮಾಣಕ್ಕೂ ಕೇಂದ್ರ ಸರಕಾರ ನೆರವು ನೀಡುತ್ತದೆ

ಕೃಷಿ ಉತ್ಪಾದನೆ ಗುಂಪುಗಳ ರಚನೆ: ಆಧುನಿಕ ತಂತ್ರಜ್ಞಾನ ಸುಧಾರಿತ ಬೆಳೆ ಪದ್ಧತಿಗಳು ಮತ್ತು ಸಂಸ್ಕರಣ ಯೋಗ್ಯ ತಳಿಗಳನ್ನು ಕೃಷಿ ಉತ್ಪಾದನೆ ಗುಂಪುಗಳಲ್ಲಿ ಪರಿಚಯಿಸಬಹುದಾಗಿದೆ ಮೌಲ್ಯ ಸರಪಳಿಯನ್ನು ಕೃಷಿ ಉತ್ಪಾದನೆ ಮತ್ತು ಸಂಸ್ಕರಣೆ ಉದ್ಯಮಗಳನ್ನು ಜೋಡಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸಬಹುದಾಗಿದೆ ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ: ಹಣ್ಣು ಮತ್ತು ತರಕಾರಿ ಸಂಸ್ಕರಣೆ ಉದ್ಯಮಗಳು ಹಂಗಾಮಿನ ಉದ್ಯಮಗಳಾಗಿ ಇದ್ದು ಅವುಗಳು ಕಾರ್ಯನಿರ್ವಹಿಸುವ ಅವಧಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತಿದೆ ಉಳಿದ ಅವಧಿಗೆ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ರಾಜ್ಯ ಸರಕಾರಗಳು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಉಗ್ರಾಣ ನಿರ್ಮಾಣ ಶೈತ್ಯಾಗಾರ ನಿರ್ಮಾಣಗಳಿಗೆ ವಿದ್ಯುತ್ ಶುಲ್ಕದ ಸಹಾಯಧನ ಹಾಗೂ ರಿಯಾಯಿತಿಗಳನ್ನು ನೀಡುತ್ತವೆ. ನವೀಕರಿಸಬಹುದಾದ ಶಕ್ತಿ, ಸೌರಶಕ್ತಿಯ ಶೈತ್ಯಾಲಯಗಳ ನಿರ್ಮಾಣಕ್ಕೆ ಆರ್ಥಿಕ ಸಹಾಯಧನವನ್ನು ಕೇಂದ್ರ ಸರಕಾರ ನೀಡುತ್ತದೆ

ಬಡ್ಡಿಯ ರಿಯಾಯಿತಿ: ಎಂ.ಎಸ್.ಎ.ಇ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಅಂದರೆ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಆಹಾರ ಸಂಸ್ಕರಣ ಉದ್ಯಮಿಗಳಿಗೆ ಹೂಡುವ ಬಂಡವಾಳ ಹಾಗೂ ಕಾರ್ಯನಿರತ ಬಂಡವಾಳಗಳ ಮೇಲೆ ಬಡ್ಡಿಗೆ ಸಹಾಯಧನ ನೀಡಿ ಬಂಡವಾಳ ಹೂಡಿಕೆಯಲ್ಲಿ ವೆಚ್ಚ ಕಡಿಮೆ ಮಾಡಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಸರಕಾರವು ನೆರವಾಗುತ್ತದೆ

ಆರ್ಥಿಕ ನೆರವು
ಕೇಂದ್ರ ಸರಕಾರವು ಆಹಾರ ಸಂಸ್ಕರಣ ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ .ಶೇಕಡ ನೂರರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ನಬಾರ್ಡ್ ಮೂಲಕ ಇಂತಹ ಉದ್ಯಮಗಳಿಗೆ ನೆರವು ನೀಡಲು ಎರಡು ಸಾವಿರ ಕೋಟಿ ರೂಗಳ ಸಾಲ ಯೋಜನೆ ರೂಪಿಸಲಾಗಿದೆ. ಸಂಸ್ಕರಣ ಉದ್ಯಮವನ್ನು ಅಂದರೆ ನೀಡುವ ಪ್ರಧಾನ ವಲಯವನ್ನಾಗಿ ಪರಿಗಣಿಸಲಾಗುತ್ತದೆ. ಐದು ವರ್ಷಗಳವರೆಗೆ ಸಂಸ್ಕರಣ ಉದ್ಯಮಗಳಿಗೆ ಆದಾಯ ತೆರಿಗೆ ವಿನಾಯತಿ ಬಂಡವಾಳ ಹೂಡಿಕೆ ಮೇಲೆ ಶೇಕಡ ನೂರರಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತದೆ.೫ ವರ್ಷಗಳ ವರೆಗೆ ಆಹಾರ ಸಂಸ್ಕರಣ ಉದ್ಯಮಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಮುಂದಿನ ೫ ವರ್ಷಗಳಿಗೆ ಕಡಿಮೆ ದರದ ಆದಾಯ ತೆರಿಗೆ, ರಿಯಾಯಿತಿ ದರದ ಆಮದು ಸುಂಕ, ಸಸ್ಯ ಮತ್ತು ಯಂತ್ರೋಪಕರಣಗಳಿಗೆ ಮತ್ತು ಆಮದಾಗುವ ಕಚ್ಚಾ ಉತ್ಪನ್ನಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ

೧.ಗ್ರಾಹಕರ -ಖರೀದಿದಾರರ ಸಭೆ ಖರೀದಿದಾರರ ಸಂಪರ್ಕ ಏರ್ಪಡಿಸುವ ಕಾರ್ಯಕ್ರಮ, ಬ್ರ‍್ಯಾಂಡಿಂಗ್ ಕುರಿತು ಸಮಾಲೋಚನೆ ಏರ್ಪಡಿಸಲು ನೆರವು ನೀಡಲಾಗುತ್ತದೆ
೨.ಆಹಾರಮೇಳಗಳ ಸಂಘಟನೆ, ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವುದು, ವಾಣಿಜ್ಯ ಪ್ರದರ್ಶನಗಳಲ್ಲಿ ಭಾಗವಹಿಸಿದ ಕೆಲವು ವಿದೇಶಿ ವ್ಯಾಪಾರ ನೀತಿಗೆ ಅನುಗುಣವಾಗಿ ಕೃಷಿ ಮತ್ತು ಆಹಾರ ಸಂಸ್ಕರಣೆ ಗೆ ಸಮಾನ ಮಾನ್ಯತೆ ನೀಡುವುದು

೩.ಸಂಶೋಧಿತ ಆಹಾರ ಉತ್ಪನ್ನಗಳು, ಸಾಂಪ್ರದಾಯಿಕ ಆಹಾರ , ಉತ್ಪನ್ನಗಳು ಮತ್ತು ಇತರ ಪ್ರಮುಖ ಉತ್ಪನ್ನಗಳಿಗೆ ಬ್ರಾಂಡ್ ಇಂಡಿಯಾ ಉತ್ತೇಜಿಸುವುದು

೫.ಗ್ರಾಹಕ ಅನುಭವ ಕೇಂದ್ರಗಳ ಸ್ಥಾಪನೆ ಸಾಂಪ್ರದಾಯಿಕ ಉತ್ಪನ್ನಗಳು ಮತ್ತು ಜನಾಂಗೀಯ ಉತ್ಪನ್ನಗಳನ್ನು ಟೇಸ್ಟಿ ಇಂಡಿಯಾ ಹೆಸರಿನಲ್ಲಿ ಜನಪ್ರಿಯಗೊಳಿಸಬಹುದು

೬. ಹೊಸ ಮಾರುಕಟ್ಟೆಗಳ ಶೋಧನೆ ಮತ್ತು ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳಲ್ಲಿ ಪೈಪೋಟಿ ಹೆಚ್ಚಿಸಲು ಪೇಟೆ ಜ್ಞಾನವನ್ನು ಬಲಪಡಿಸುವುದು, ಮೌಲ್ಯವರ್ಧಿತ ಉತ್ಪನ್ನಗಳಿಗೆ ರಫ್ತು ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಉತ್ತೇಜನ ನೀಡುವುದು

ಆಹಾರ ಸಂಸ್ಕರಣೆಯೂ ರೈತ ಗ್ರಾಹಕ ಮತ್ತು ಉದ್ಯಮಗಳ ನಡುವೆ ಸಂಪರ್ಕ ಏರ್ಪಡಿಸಿ ಗ್ರಾಮೀಣ ಭಾರತದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಕೇಂದ್ರ ಸರಕಾರ ಸಂಸ್ಕರಣ ಉದ್ಯಮ ನೀತಿಯು ರೈತರ ಆದಾಯವನ್ನು ಹೆಚ್ಚಿಸಿ ಕೊಯ್ಲು ನಂತರದ ನಷ್ಟವನ್ನು ತಪ್ಪಿಸುತ್ತದೆ ಮೌಲ್ಯವರ್ಧನೆಯ ಪ್ರೋತ್ಸಾಹಿಸಿ ಬೆಳೆ ವೈವಿಧ್ಯತೆ ಹೆಚ್ಚಿಸುತ್ತದೆ. ಕೇಂದ್ರ ಸರಕಾರವು ಆಹಾರ ಸಂಸ್ಕರಣೆಯ ಉದ್ದಿಮೆ ಪ್ರೋತ್ಸಾಹಿಸಲು ಕೃಷಿ ಮಾರಾಟ ಶಾಸನದಲ್ಲಿ ಮಾರ್ಪಾಟು, ಆಹಾರ ಕಾನೂನುಗಳ ಪುನರ್ ವಿಮರ್ಶೆ( ಎನೆಹ್)ಕಾರ್ಯಕ್ರಮಗಳ ಅನುಷ್ಠಾನ ಮುಂತಾದ ಕಾರ್ಯಕ್ರಮಗಳನ್ನು ಕೈಗೊಂಡಿದೆ.

ಮೆಗಾ ಆಹಾg ಉದ್ಯಾಮವನ್ನು ಸಂಗ್ರಹಣೆ ,ಸಂಸ್ಕರಣೆ, ದಾಸ್ತಾನು ಮತ್ತು ಸಾಗಾಣೆ ವ್ಯವಸ್ಥೆಗಳೊಂದಿಗೆ ಸ್ಥಾಪಿಸಲು ಪ್ರೋತ್ಸಾಹ ನೀಡುತ್ತದೆ. ಭಾರತದಲ್ಲಿ ಸಂಸ್ಕರಣೆ ಶೇಕಡಾ ೧೦ರಷ್ಟು ಮಾತ್ರ ಬೆಳೆದಿದೆ. ಅದರಿಂದ ಸರಕಾರದ ಉತ್ತೇಜನಗಳನ್ನು ಉಪಯೋಗಿಸಿ ಆಹಾರ ಸಂಸ್ಕರಣ ಉದ್ದಿಮೆಯ ಅಭಿವೃದ್ಧಿಗೊಂಡರೆ ಆದಾಯ ಹೆಚ್ಚಿ ಗ್ರಾಮೀಣೆ ಆರ್ಥಿಕತೆಯು ಹಾಗೂ ಜಿಡಿಪಿಯಲ್ಲಿ ಕೃಷಿಯ ಪಾಲು ಹೆಚ್ಚಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಾಗುತ್ತದೆ.

ಡಾ. ಜಿ ಶರಶ್ಚಂದ್ರ ರಾನಡೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group