spot_img
Tuesday, September 17, 2024
spot_imgspot_img
spot_img
spot_img

ಅಡಿಕೆ ತೋಟಕ್ಕೆ ಸೀರೆಯ ಮುಚ್ಚಿಗೆ!:ಸೀರೆಯನ್ನು ಹೀಗೂ ಉಪಯೋಗಿಸಬಹುದು

*ಗಣಪತಿ ಹಾಸ್ಪುರ

ಮಲೆನಾಡಿನ ಅಡಿಕೆ ಬೆಳೆಗಾರ ತನ್ನ ಕೃಷಿಭೂಮಿಯ ಅಭಿವೃದ್ಧಿ ಗಾಗಿ ಸದಾ ಒಂದಿಲ್ಲೊಂದು ಸರಳ ಉಪಾಯವನ್ನು ಕಂಡುಕೊಳ್ಳುವಲ್ಲಿ ಎತ್ತಿದ ಕೈ. ಈ ಮಾತಿಗೆ ಚಿತ್ರ ದಲ್ಲಿ ಕಾಣುವ ಸೀರೆಯ ಮುಚ್ಚಿಗೆಯೇ ತಾಜಾ ನಿದರ್ಶನ. ಹೊಸ ತೋಟಕ್ಕೆ ತರತರದ ಬಣ್ಣದ ಸೀರೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಹಾಕಿರುವುದು ಎಲ್ಲರನ್ನು ಆಕರ್ಷಿಸುತ್ತಿದೆ.

ಸಾಮಾನ್ಯವಾಗಿ ಮಲೆನಾಡಿನ ತೋಟಿಗರು ಅಡಿಕೆ ಫಸಲು ಕೊಯ್ದ ನಂತರ ತೋಟಕ್ಕೆ ಹೊಸ ಮಣ್ಣು ಹಾಕಿಕೊಳ್ಳುವುದೋ, ನಿತಗಟ್ಟು ಹಾಕುವುದೋ, ಭಿನ್ನ ಬರಣ ಮಾಡಿಕೊಳ್ಳುವ ಕೆಲಸವೋ, ಕಾಲುವೆ ತಗ್ಗಿಸುವುದೋ…..ಹೀಗೆ ಯಾವುದಾದರೂ ಒಂದು ದೊಡ್ಡ ಕೆಲಸ ಮಾಡಿಸಿಕೊಳ್ಳುವುದ್ರಲ್ಲಿ ತಲ್ಲೀನ ಆಗಿರುತ್ತಾರೆ. ಜೊತೆಗೆ,ಮಳೆಗಾಲ ಶುರುವಾಗುವ ಮೊದಲೇ ತೋಟಕ್ಕೆ ವ್ಯವಸ್ಥಿತವಾದ ಮುಚ್ಚಿಗೆ ಮಾಡಲು ಅಣಿಯಾಗುತ್ತಾನೆ. ಬಹುತೇಕ ಅಡಿಕೆ ಬೆಳೆಗಾರರು ತಮ್ಮ ಬೆಟ್ಟದಿಂದ ಒಣ ಏಲೆ ( ದಕರು) , ಬ್ಯಾಣದಿಂದ ಕರಡವನ್ನು ಮುಚ್ಚಿಗೆ ಮಾಡುವ ಕ್ರಮ , ಪದ್ದತಿ ತಲೆತಲಾತಂರದಿಂದ ನಡೆದುಕೊಂಡು ಬಂದಿದ್ದಾರೆ. ಈ ಮುಚ್ಚಿ ಗೆ ಮಾಡಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳು ಇವೆ. ಮಣ್ಣಿನ ಸವಕಳಿ ತಪ್ಪುತ್ತದೆ. ಅನಾವಶ್ಯಕ ಬೆಳೆಯುವ ಗಿಡಗಂಟಿಗಳನ್ನು ಹುಟ್ಟುವುದನ್ನು ತಡೆಯಲು ಮುಚ್ಚಿಗೆ ಅತ್ಯವಶ್ಯಕ. ಅಲ್ಲದೇ, ತೋಟದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕಾರಿ.

ಇಗೀನ ಹೈಟೆಕ್ , ಸುಧಾರಿತ ಪದ್ದತಿಯಲ್ಲಿ ಮಳೆಗಾಲದ ಸಮಯದಲ್ಲಿ ಕಾಲುವೆ ಹಿಸಿಯಬಾರದು , ಬರಣದಲ್ಲಿ ಗಿಡಗಂಟಿ ಬೆಳೆಯುವುದನ್ನು ತಡೆಯಲು ಕೆಲವರು ಪ್ಲಾಸ್ಟಿಕ ಗಳನ್ನು ಹಾಕಿದರೇ, ಇನ್ನು ಕೆಲವರು ಸೀರೆಯನ್ನು ಸಹಾ ಬಳಕೆ ಮಾಡಿಕೊಳ್ತಾ ಇರುವುದು ಈಗ ಸಾಮಾನ್ಯವಾಗಿದೆ.

ಬಹುಪಯೋಗಿ ಸೀರೆ

ಹೆಂಗಳೆಯರು ಧರಿಸುವ ಸೀರೆ/ ಸಾರಿ ಈಗ ಕೇವಲ ಅವರ ಉಡುಗೆ, ತೊಡಿಗೆಗೆ ಮಾತ್ರ ಬಳಕೆ ಆಗುತ್ತಿಲ್ಲ. ಕೃಷಿಕರ ಹಲವಾರು ಕಾರ್ಯಗಳಿಗೆ ಉಪಯೋಗ ಆಗುತ್ತಿದೆ. ಸೀರೆಯನ್ನು ಚಿಕ್ಕದಾಗಿ ಕಟ್ಟುಮಾಡಿಕೊಂಡರೇ ಬೇಲಿ ಕಟ್ಟಲು, ಕಾಳು ಮೆಣಸಿನ ಬಳ್ಳಿಗೆ ಕಟ್ನ ಹಾಕಲು ಬಳಸಲಾಗುತ್ತಿದೆ. ಇನ್ನು ಮಳೆಗಾಲದ ಸಮಯದಲ್ಲಿ ಕೃಷಿಕರು ತೋಟದ ಕಾಲುವೆಗೆ, ಬರಣಕ್ಕೆ ಮುಚ್ಚಲು ಉಪಯೋಗ ಮಾಡಿದರೇ, ಬೇಸಿಗೆಯ ದಿನದಲ್ಲಿ ಅಡಿಕೆ ಸಸಿಗಳಿಗೆ ಬೀಸಿಲಿನ ತಡೆಗೂ ಈ ಸೀರೆಯನ್ನು ವ್ಯವಸ್ಥಿತವಾಗಿ ಬಳಸಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ಭತ್ತದ ಪೈರು ಬಂದಾಗ ಕಾಡುಪ್ರಾಣಿಗಳನ್ನು ತಡೆಗಟ್ಟುವ ಸಲುವಾಗಿ ಈ ಸಾರಿಯೇ ಬೇಲಿಯಾಗಿ ರೂಪ ಪಡೆದುಕೊಳ್ಳುತ್ತವೆ. ಒಟ್ಟಾರೇ, ಮಲೆನಾಡಿನ ಅಡಿಕೆ ಬೆಳೆಗಾರ ತನ್ನ ಉತ್ಪನ್ನ ಉಳಿಸಿಕೊಳ್ಳಲು, ಉತ್ತಮವಾದ ಅಡಿಕೆ ಭೂಮಿಯಲ್ಲಿ ಕಳೆ ತಡೆಗಟ್ಟಲು ಮತ್ತು ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ನಿಯಂತ್ರಿಸಲು ಸುಲಭದಲ್ಲಿ ಸಿಗುವ, ಕಡಿಮೆ ವೆಚ್ಚವಾಗುವ ಬಣ್ಣಬಣ್ಣದ ಸೀರೆಗಳನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group