ಉಡುಪಿ ಜಿಲ್ಲಾ ಕೃಷಿಕ ಸಂಘ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಈಸಿ ಲೈಪ್ ಎಂಟರ್ ಪ್ರೈಸಸ್, ಎಸ್.ಆರ್.ಕೆ ಲ್ಯಾಡರ್ಸ್ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 8ರಂದು ಉಡುಪಿಯ ಕುಂಜಿಬೆಟ್ಟಿನಲ್ಲಿರುವ ಶ್ರೀ ಶಾರದಾ ಮಂಟಪದಲ್ಲಿ ರೈತ ಸಮಾವೇಶವು ನಡೆಯಲಿದೆ.
ಈ ಸಮಾವೇಶದಲ್ಲಿ ಕೃಷಿಗೆ ಸಂಬಂಧಿಸಿದ ಮೂರು ಗೋಷ್ಠಿಗಳು ನಡೆಯಲಿವೆ. ವೈಜ್ಞಾನಿಕ ಅಡಿಕೆ ಬೇಸಾಯ, ಆರೋಗ್ಯ ನಿಮ್ಮದಿಗಾಗಿ ಕೃಷಿ, ಲಾಭದಾಯಕ ಕೃಷಿಗೆ ವಿವಿಧ ತಂತ್ರಜ್ಞಾನಗಳು, ಬತ್ತದ ಇಳುವರಿ ಹೆಚ್ಚಿಸುವ ವಿಧಾನಗಳು, ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು, ಕೃಷಿ ವಿದ್ಯುತ್ ಬಳಕೆದಾರರ ಮಾಹಿತಿ, ಆಹಾರ ಪದ್ಧತಿ ಮತ್ತು ಮಧುಮೇಹ ಮೊದಲಾದ ವಿಷಯಗಳ ಕುರಿತು ತಜ್ಞರು ವಿಚಾರ ಮಂಡಿಸಲಿದ್ದಾರೆ
ಮಾಹಿತಿಗೆ 9686866940, 9448107705, 9844 29 5967