spot_img
Thursday, December 4, 2025
spot_imgspot_img
spot_img

ನ.27 ರಿಂದ ಡಿಸೆಂಬರ್ 1, ಉಡುಪಿಯಲ್ಲಿ ಸ್ವದೇಶಿ ಮೇಳ

ಉಡುಪಿ: ಆತ್ಮ ನಿರ್ಭರ ಭಾರತ-ಸ್ವದೇಶಿ ಸಂಕಲ್ಪ ಅಭಿಯಾನದ ಅಂಗವಾಗಿ ಬೃಹತ್ ಸ್ವದೇಶಿ ಮೇಳವು ನವೆಂಬರ್ 27ರಿಂದ ದಶಂಬರ 1ರವರೆಗೆ ಉಡುಪಿಯ ದೊಡ್ಡಣ್ಣಗುಡ್ಡೆ ತೋಟಗಾರಿಕಾ ಇಲಾಖೆಯ ರೈತ ಸೇವಾ ಕೇಂದ್ರದಲ್ಲಿ ನಡೆಯಲಿದೆ. ಸ್ವದೇಶಿ ಕೃಷಿ, ಗುಡಿಕೈಗಾರಿಕೆ ಕೌಶಲ, ಆಹಾರ, ನರ್ಸರಿ ಪ್ರದರ್ಶನ ಮತ್ತು ಮಾರಾಟವನ್ನು ಈ ಮೇಳದಲ್ಲಿ ಆಯೋಜಿಸಲಾಗಿದೆ
ಗುಡಿ ಕೈಗಾರಿಕೆ ಪ್ರಾತ್ಯಕ್ಷಿಕೆ ಮಳಿಗೆ, ಸ್ವಉದ್ಯೋಗ ಉದ್ಯಮಗಳನ್ನು ಆರಂಭಿಸಲು ಮತ್ತು ಅಭಿವೃದ್ಧಿಪಡಿಸಲು ಸರಕಾರದ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಮಾರ್ಗದರ್ಶನ, ಸ್ವದೇಶಿ ಸಂಕಲ್ಪ ಅಭಿಯಾನ, ಜಾಗೃತಿ, ಅರ್ಹ ಸಣ್ಣ ವ್ಯಾಪಾರಿಗಳಿಗೆ ಮತ್ತು ಕುಶಲಕರ್ಮಿಗಳಿಗೆ ಅಭಿನಂದನೆ ಮೊದಲಾದ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group