spot_img
Friday, March 13, 2026
spot_imgspot_img
spot_img

ಆರೋಗ್ಯಕ್ಕೆ ಶಕ್ತಿ ಕೊಡುವ ಈ ಕದಂಬ ಮರ ನಿಮ್ಮಲ್ಲಿದೆಯೇ: ಕದಂಬ ಮರದ ಆಸಕ್ತಿಕರ ಸಂಗತಿಗಳು ನಿಮಗೆ ತಿಳಿದಿರಲಿ

-ಸಂತೋಷ್‌ರಾವ್ ಪೆರ್ಮುಡ
ಪ್ರಕೃತಿಯಲ್ಲಿ ಲಭ್ಯವಿರುವ ಹಲವು ಮರಗಳನ್ನು ಪವಿತ್ರ ಮರಗಳೆಂದು ಗುರುತಿಸಿದ್ದಾರೆ.ಏಕೆಂದರೆ ಅವು ಪುರಾಣ, ಧರ್ಮ ಮತ್ತು ಜಾನಪದದ ಜೊತೆಗೆ ನಂಟನ್ನು ಹೊಂದಿದ್ದು,  ಇದು ಶ್ರೀಕೃಷ್ಣನಿಗೆ ಸಂಬಂಧಿಸಿದ ಮರವಾಗಿದೆ. ಈ ಹೂವು ‘ಶತಾಭಿಷಾ’ ನಕ್ಷತ್ರವನ್ನು ಪ್ರತಿನಿಧಿಸುತ್ತದೆ. ಕದಂಬ ವೃಕ್ಷವುದಕ್ಷಿಣ ಭಾರತದಲ್ಲಿ ಸಹ್ಯಾದ್ರಿ ತಪ್ಪಲಲ್ಲಿ ಸಾಮಾನ್ಯವಾಗಿ ಕಾಣಿಸುವ ವೃಕ್ಷವಾಗಿದ್ದು, ತಾಳಗುಂದ ಶಾಸನದ ಪ್ರಕಾರ ಬನವಾಸಿಯ ಕದಂಬರ ಕಾಲದಲ್ಲಿಇದನ್ನು ಪವಿತ್ರ ವೃಕ್ಷವೆಂದು ಕರೆಯಲಾಗುತ್ತಿತ್ತು.ಇದು ದಕ್ಷಿಣ ಮತ್ತುಆಗ್ನೇಯ ಏಷ್ಯಾದ ನಿತ್ಯಹರಿದ್ವರ್ಣ ಉಷ್ಣವಲಯದಲ್ಲಿ ಕಂಡುಬರುವ ಮರವಾಗಿದೆ. ಇದನ್ನು ಪುಷ್ಪಗಳ ರಾಜ ಎಂದೂ ಕರೆಯುತ್ತಾರೆ.
        
ಮಾರ್ಚ್ ತಿಂಗಳಲ್ಲಿ ಮೊಗ್ಗಾಗಿ ಮೇ-ಜೂನ್ ತಿಂಗಳಲ್ಲಿ ಇದು ಹೂ ಬಿಟ್ಟು, ಜೂನ್‌ಜುಲೈ ತಿಂಗಳಲ್ಲಿ ಹಣ್ಣುಗಳಾಗುತ್ತವೆ. ಕೆಂಪು ಮತ್ತು ಕಿತ್ತಳೆ ಮಿಶ್ರಿತ ಬಂಗಾರದ ಉಂಡೆ ಮತ್ತು ಬ್ಯಾಡ್ಮಿಂಟನ್‌ ಚೆಂಡಿನಂತೆ ಕಾಣುವ ಈ ಹೂವುಗಳಿಗೆ ಸಾವಿರಾರು ಜೇನು ನೊಣಗಳು ಮುತ್ತಿಕೊಂಡು ಮಕರಂಧ ಹೀರುತ್ತವೆ. ಡಿಸೆಂಬರ್ ತಿಂಗಳಲ್ಲಿ ಈ ಹೂವುಗಳು ಹಣ್ಣಾಗಿ ತಿನ್ನಲು ರುಚಿಯಾಗಿರುತ್ತದೆ.ಕದಂಬ ವೃಕ್ಷವು ಸುಮಾರು 45 ಅಡಿಗಳಷ್ಟು ಎತ್ತರಕ್ಕೂ ಬೆಳೆಯಬಲ್ಲದು. ಇದು ವೇಗವಾಗಿ ಬೆಳೆಯುತ್ತಾ ವಿಶಾಲವಾಗಿ ಹರಡುವ ಗೆಲ್ಲುಗಳನ್ನು ಹೊಂದಿರುತ್ತದೆ. ಈ ಗಿಡವು ನಾಟಿ ಮಾಡಿದ ಮೊದಲ 6-8 ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತದೆ. ಕಾಂಡವು 100-160 ಸೆಂ.ಮೀ ವ್ಯಾಸವನ್ನು ಹೊಂದಿದ್ದು, ಎಲೆಗಳು 13-32 ಸೆಂ.ಮೀ ಉದ್ದವಿರುತ್ತವೆ. ಈ ಮರವು 4-5 ವರ್ಷ ವಯಸ್ಸಿಗೆ ಸಾಮಾನ್ಯವಾಗಿ ಹೂಬಿಡಲು ಪ್ರಾರಂಭಿಸುತ್ತದೆ.
ನೂರಾರು ವರ್ಷ ಬದುಕಬಲ್ಲ ಈ ಮರ ಅಗಲವಾದ ಮತ್ತು ಗಾಢ ಹಸಿರು ಎಲೆಗಳು ಇರುವುದರಿಂದ ಪರಿಸರವನ್ನು ತಂಪಾಗಿಇಡಬಲ್ಲದು.ಇದರ ಹೂವುಗಳು ಬ್ಯಾಡ್ಮಿಂಟನ್‌ ಚೆಂಡನ್ನು ಹೋಲುವ ಬಂಗಾರ ಬಣ್ಣವನ್ನು ಹೊಂದಿದ್ದು, ಇದೊಂದು ಪುಷ್ಪಮಂಜರಿ ಎಂದರೂ ತಪ್ಪಾಗದು.
ಈ ಹೂವಿನಿಂದ ವಿಶೇಷವಾದ‘ಸುರೆ’ (ಪಾನೀಯ)ಯನ್ನು ತಯಾರಿಸಬಹುದು ಎನ್ನುತ್ತಾರೆ ಹಿರಿಯರು. ಊರೊಂದರಲ್ಲಿ ನೂರಕ್ಕೂ ಹೆಚ್ಚು ಈ ವೃಕ್ಷಗಳಿದ್ದರೆ ಅಲ್ಲಿಗೆ ಯಾವುದೇ ಸಾಂಕ್ರಾಮಿಕ ರೋಗಗಳು ಸುಳಿಯದು.
ಈ ಮರವನ್ನು ಇದರ ಸುಂದರ ಹೂಗಳ ಕಾರಣಕ್ಕೆ ಉದ್ಯಾನವನ ಮತ್ತು ರಸ್ತೆಗಳ ಪಕ್ಕಗಳಲ್ಲಿ ಬೆಳೆಸುತ್ತಾರೆ. ಇದರ ತೊಗಟೆ ಬೂದು ಬಣ್ಣವಿದ್ದು, ನಯವಾಗಿರುತ್ತದೆ. ತೊಗಟೆಯ ಒಳಭಾಗದ ಹಳದಿ ಮಿಶ್ರಿತ ಕಂದು ಬಣ್ಣವಿದ್ದು, ವಯಸ್ಸಾದ ಮರದತೊಗಟೆ ಉದ್ದವಾಗಿ ಸೀಳಿ ಚಚ್ಚೌಕ ಬಿಲ್ಲೆಗಳಾಗಿ ಉದುರುತ್ತದೆ. ಇದರ ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿರುತ್ತವೆ. ಇದು ಹೂಬಿಟ್ಟ ನಂತರ ಹೂವುಗಳು ಚಿನ್ನದ ಬಣ್ಣ ತಾಳುತ್ತವೆ. ಇದರ ಹಣ್ಣುಗಳು ಸಣ್ಣದಾದ ಬೀಜಗಳನ್ನು ಒಳಗೊಂಡ ಸಂಪುಟದಂತೆಇರುತ್ತದೆ.ಇದರ ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡಬಹುದಾಗಿದ್ದು, ಇದರ ಹಣ್ಣುಗಳು ರುಚಿಯಾಗಿ ಇರುವುದರಿಂದ ಇದನ್ನುತಿನ್ನಬಹುದು.
ಇದರ ಹೂವುಗಳು ಸುಮಾರು 5.5 ಸೆಂ.ಮೀ ವ್ಯಾಸದದಟ್ಟವಾದ, ಗೋಳಾಕಾರದಲ್ಲಿ ಇರುತ್ತವೆ. ಕದಂಬದ ಹಣ್ಣುಗಳು ಚಿಕ್ಕದಾದ, ತಿರುಳಿರುವ ಕ್ಯಾಪ್ಸೂಲ್‌ಗಳಂತೆ ಇದ್ದು, ಸುಮಾರು 8೦೦೦ ಬೀಜಗಳನ್ನು ಒಳಗೊಂಡು ತಿರುಳಿರುವ ಹಳದಿ-ಕಿತ್ತಳೆ ಬಣ್ಣದಲ್ಲಿರುತ್ತದೆ. ಹಣ್ಣುಗಳು ಬಲಿತಾಗ ಹಣ್ಣಿನಿಂದ ಬೀಜಗಳು ಬೇರ್ಪಟ್ಟು ನಂತರ ಅವು ಗಾಳಿ ಅಥವಾ ಮಳೆಯಿಂದ ಚದುರಿ ಬೇರೆಡೆ ಬೀಜ ಪ್ರಸರಣಗೊಂಡು ಮತ್ತೆ ಮಣ್ಣಿಗೆ ಸೇರಿ ಮೊಳಕೆ ಒಡೆದುಗಿಡವಾಗಿ ಮರವಾಗುತ್ತದೆ.ಬಂಗಾರದ ಬಣ್ಣದ ಈ ಹೂವಿನ ಮಧ್ಯದಲ್ಲಿ ಬಿಳಿ ಬಣ್ಣದ ದಳಗಳಿದ್ದು, ಮರದ ಬುಡದಿಂದಲೇ ದಟ್ಟವಾದ ಕೊಂಬೆಗಳಿರುತ್ತವೆ. ಕೊಂಬೆಗಳು ಹಳತಾದಂತೆ ಕೊಂಬೆಗಳನ್ನು ಬೀಳಿಸುತ್ತದೆ. ಕೊಂಬೆಗಳು ತುಂಡಾಗಿ ಬಿದ್ದಕೊಂಬೆಯಜಾಗದಲ್ಲೆಲ್ಲಾ ಕಣ್ಣುಗಳ ಆಕಾರಕಾಣಿಸುವುದರಿಂದ ಇದನ್ನು‘ಮಧ್ಯಾರಂಭಿ’ಎಂದೂ ಕರೆಯುತ್ತಾರೆ.
ಅಲ್ಲದೇ ಈ ಹೂವು ಮಧ್ಯದಿಂದ ಆರಂಭವಾಗುತ್ತದೆ. ಚಿಟ್ಟೆಯ ಲಾರ್ವಾಗಳು, ಬ್ರಷ್-ಪಾದದಚಿಟ್ಟೆ ಮತ್ತು ಆತ್ರೋðಸ್ಚಿಸ್ಟಾ ಹಿಲರಾಲಿಸ್, ಪತಂಗ, ಈ ಹೂವಿನ ಮಕರಂದವನ್ನು ಹೀರಿ ಹೂವುಗಳ ಪರಾಗಸ್ಪರ್ಶಮಾಡುತ್ತವೆ.ಇದರ ಒಂದು ಹೂವಿನಲ್ಲಿ ಸುಮಾರು 360 ದಳಗಳಿದ್ದು, ಇದರ ಹೂವು ಕಾಯಿ ಹಣ್ಣು ಬೀಜ ಎಲ್ಲವೂ ಒಂದೇ ಆಗಿರುತ್ತದೆ. ಇದರಹೂವು ಉದುರಿಸುಮಾರು 360 ದಳಗಳು ಬಿದ್ದಾಗಅಷ್ಟು ಬೀಜಗಳಾಗಿ ಗಿಡವಾಗುವ ಸಾಧ್ಯತೆಯಿರುತ್ತದೆ.
ಇದರ ಹೂವುಗಳನ್ನು ಸುಗಂಧ ದ್ರವ್ಯತಯಾರಿಕೆ, ಅಲಂಕಾರಿಕ ಸಸ್ಯವಾಗಿ ಮತ್ತುಕಾಗದದ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಇದರ ಕಾಂಡ ಬಹಳ ಮೃದುವಾಗಿದ್ದು 70-80 ರ ದಶಕಗಳಲ್ಲಿ ಬೆಂಕಿಕಡ್ಡಿ ತಯಾರಿಸಲು ಇದರ ಕಾಂಡವನ್ನೇ ಬಳಸುತ್ತಿದ್ದರು. ಬೆಂಕಿ ಪೊಟ್ಟಣ ತಯಾರಿಕೆ ಮತ್ತು ಪ್ಯಾಕಿಂಗ್ ಪಟ್ಟಿಗೆಗಳ ತಯಾರಿಕೆ ಕಾರ್ಖಾನೆಗಳಿಗಾಗಿ ಅಂದು ಕದಂಬ ವೃಕ್ಗಗಳ ಮಾರಣಹೋಮವೇ ನಡೆದು ಇಂದು ಈ ಮರಗಳು ಅಪರೂಪ ಆಗಿದೆ.ಒಂದು ವೇಳೆ ಎಲ್ಲೆಡೆ ಕದಂಬ ವೃಕ್ಷಗಳು ಇದ್ದಿದ್ದರೆ ಬಹುಷಃ ನಮ್ಮ ದೇಶಕ್ಕೆ ಕೊರೋನಾ ರೋಗವೇ ಬರುತ್ತಿರಲಿಲ್ಲ ಎಂದು ಆಯುರ್ವೇದ ಶಾಸ್ತ್ರಜ್ಞರು ಹೇಳುತ್ತಾರೆ.ಆದ್ದರಿಂದ ಪ್ರತೀ ಮನೆಯ ಮುಂದೆ ಕನಿಷ್ಟ ಒಂದಾದರೂ ಕದಂಬ ವೃಕ್ಷವಿರಬೇಕು ಎಂದು ಹಿರಿಯರು ಹೇಳುತ್ತಾರೆ.
ಕದಂಬ ವೃಕ್ಷದ ಔಷಧೀಯ ಗುಣಗಳು:
• ಈ ವೃಕ್ಷವುದೇಹದ ಗಾಯಗಳನ್ನು ಪವಾಡದಂತೆ ಗುಣಪಡಿಸುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದು, ಈ ಸಸ್ಯದಿಂದ ತಯಾರಿಸಿದ ಕಷಾಯವು ಗಾಯಗಳು  ಕೂಡಲೇ ವಾಸಿಯಾಗುವಂತೆ ಮಾಡುತ್ತದೆ.
• ಈ ವೃಕ್ಷದಲ್ಲಿಆಯುರ್ವೇದ ಗುಣಗಳಿರುವುದರಿಂದ ದೇಹದ ನೋವು ಮತ್ತುಉರಿಯೂತವನ್ನು ಶಮನ ಮಾಡುತ್ತದೆ. ಅಲ್ಲದೇ ಇದರ ಎಲೆಗಳನ್ನು ಊತದ ಅಂಗಗಳಿಗೆ ಕಟ್ಟಿದರೆ ಊತ ಕಡಿಮೆಯಾಗುತ್ತದೆ.
• ಈ ಮರದ ತಿರುಳನ್ನು ಚರ್ಮದ ರೋಗಗಳಿಗೆ ಔಷಧಿಯಾಗಿ ಆಂಟಿ ಮೈಕ್ರೊಬಿಯಲ್‌ಏಜೆಂಟ್ ಆಗಿ ಪೇಸ್ಟ್ ಮಾಡಿ ಬಳಸಲಾಹುತ್ತದೆ. ಈ ಮರದ ಸಾರದಲ್ಲಿ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಗುಣವಿದೆ.
• ಈ ವೃಕ್ಷದ ಕಾಂಡದ ತೊಗಟೆಯಿಂದ ಕೊರೋನಾಕ್ಕೆ ಔಷಧಿಯನ್ನೂ ತಯಾರಿಸಬಹುದು ಎಂದು ಆಯುರ್ವೇದ ಪಂಡಿತರು ಹೇಳುತ್ತಾರೆ.
• ಅಮ್ಮ, ಸಿಡುಬು, ಪ್ಲೇಗ್, ಮಲೇರಿಯಾ, ಕಾಲರಾ ಇತ್ಯಾದಿ ಸಾಂಕ್ರಾಮಿಕ ರೋಗಗಳಿಗೆ ಚರಕ ಮತ್ತು ಶುಶ್ರುತ ವೈದ್ಯಪದ್ಧತಿಗಳಲ್ಲಿ ಕದಂಬ ಪುಷ್ಪವನ್ನುಔಷಧವಾಗಿ ಬಳಸುತ್ತಿದ್ದರೆಂಬ ಉಲ್ಲೇಖವಿದೆ.
• ಈ ವೃಕ್ಷವು ಎಲುಬು ಮತ್ತು ಸ್ನಾಯುಗಳ ಸಮಸ್ಯೆಗೆರಾಮಬಾಣವಾಗಿದ್ದು, ಇದು ಸಂಧಿವಾತ, ಸ್ನಾಯುಗಳ ಬಿಗಿತ ಮತ್ತು ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಈ ಮರವು ಸಿಲಿಮರಿನ್, ಎಪಿಜೆನಿನ್, ಡೈಡ್ಜಿನ್ ಮತ್ತು ಜೆನಿಸ್ಟೀನ್ ಮುಂತಾದ ಹಲವು ಫ್ಲೇವನಾಯ್ಡ್ ಅಂಶಗಳನ್ನು ಹೊಂದಿದೆ.
• ಬಾಯಿಯ ಹುಣ್ಣು ಅಥವಾ ವಸಡು ಉರಿಯೂತಕ್ಕೆ ಚಿಕಿತ್ಸೆ ನೀಡಲು ಈ ಸಸ್ಯದ ಕಷಾಯ ಬಳಸುತ್ತಾರೆ.
• ಕದಂಬ ಹಣ್ಣಿನ ತಾಜಾರಸ ವನ್ನು ಸೇವಿಸಿದಲ್ಲಿ ಹಾಲುಣಿಸುವ ಮಹಿಳೆಯರಲ್ಲಿ ಎದೆಹಾಲು ಹೆಚ್ಚಿಸುತ್ತದೆ.
• ಕದಂಬ ಎಲೆ ಮತ್ತುಅದರ ತೊಗಟೆ ಅಥವಾ ಕಾಂಡದಿಂದ ತಯಾರಿಸಿದ ಪೇಸ್ಟ್ ನೋವು ಅಥವಾ ಕೀಟ ಕಡಿತದಿಂದ ಉಂಟಾಗುವ ಯಾವುದೇ ತುರಿಕೆಗೆ ರಾಮಬಾಣ.
• ಕದಂಬ ಮರದ ತೊಗಟೆಯ ಕಷಾಯವು ಭೇದಿ ಮತ್ತು ಕೊಲೈಟಿಸ್‌ಗೆ ಉತ್ತಮ ಔಷಧಿ.
• ಕದಂಬದ ತೊಗಟೆಯ ಸಿಪ್ಪೆಯಿಂದ ತಯಾರಿಸಿದ ರಸವನ್ನು ಜೀರಿಗೆ ಮತ್ತು ಸಕ್ಕರೆಯೊಂದಿಗೆ ಬೆರೆಸಿದಾಗ ವಾಂತಿಯನ್ನು ನಿವಾರಿಸುತ್ತದೆ.
ಇಷ್ಟೆಲ್ಲಾ, ಉಪಯೋಗ ಇರುವ ಈ ಮರವನ್ನು ನಮ್ಮ ಜಮೀನಿನ ಬದುವಿನಲ್ಲಿ ಬೆಳೆಸಿದರೆ ಉತ್ತಮ. ಜಮೀನಿನಲ್ಲಿ ಕೇವಲ ನಮಗೆ ಲಾಭ ತರುವ ಮರಗಳಿದ್ದರಷ್ಟೇ ಸಾಲದು, ಬದಲಿಗೆ ಭೂಮಿಯನ್ನು ತುಸು ತಂಪಾಗಿಡುವ ಮತ್ತು ಸಕಲ ಜೀವಜಗತ್ತಿಗೆ ಉಚಿತವಾಗಿ ಪ್ರಾಣಾಮ್ಲವನ್ನು ನೀಡುವ ಇಂತಹ ವಿಭಿನ್ನ ಮರಗಳ ಸಂಖ್ಯೆ ಹೆಚ್ಚಬೇಕು. ಪರಿಸರವನ್ನು ರಕ್ಷಿಸಬಲ್ಲ ಇಂತಹ ವಿಶಿಷ್ಟ ಮತ್ತು ವಿಭಿನ್ನ ಕಲ್ಪವೃಕ್ಷಗಳನ್ನು ಬೆಳೆಸುವುದರ ಬಗ್ಗೆ ನಾವು ಗಮನ ಕೊಡುವುದು ಅತಿ ಅನಿವಾರ್ಯ ಮತ್ತುಅಗತ್ಯ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group