spot_img
Friday, October 18, 2024
spot_imgspot_img
spot_img
spot_img

ಶಂಖಪುಷ್ಪದ ಈ ಪ್ರಯೋಜನಗಳ ಬಗ್ಗೆ ಗೊತ್ತಾದ್ರೆ ಅಬ್ಬಾ ಅಂತೀರಿ!

ಜ್ವರ, ಚಳಿ, ನೆಗಡಿ, ಕೆಮ್ಮು, ಕಫ ಕಟ್ಟುವುದು, ಬಳಲಿಕೆ, ಅಜೀರ್ಣ, ಆಯಾಸ, ಮೈಕೈನೋವು ಇವೆಲ್ಲ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಗಳು. ನಗರವಾಸಿಗಳು ವಿಶೇಷವಾಗಿ ರೆಪ್ರಿಜರೇಟರ್ ಏಸಿಗಳನ್ನು ಬಳಸುತ್ತಾರೆ. ಮೊಸರು, ಮಜ್ಜಿಗೆ, ಹಣ್ಣು, ಹಣ್ಣಿನ ರಸಗಳನ್ನು ರೆಫ್ರಿಜಿರೇಟರಿನಲ್ಲಿಟ್ಟು ಕೆಲವು ದಿನಗಳ ನಂತರ ಸೇವಿಸುವುದರಿಂದ ಕಫ ಕಟ್ಟುವ, ಮೂಗಿನಲ್ಲಿ ನೀರು ಸುರಿಯುವ, ತಲೆನೋವು, ಅರೆತಲೆನೋವು, ಬರುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.

ರೆಪ್ರಿಜರೇಟರ್‌ನಲ್ಲಿಡುವ ತಿನ್ನುವ ವಸ್ತುಗಳು ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ಬೆಳವಣಿಗೆಗೆ ಸಹಕಾರಿಯಾಗಿರುವುದರಿಂದ ಸಣ್ಣಪುಟ್ಟ ರೋಗಗಳು ನಂತರ ಮಾರಣಾಂತಿಕ ರೋಗವಾಗಿ ಪರಿವರ್ತನೆಯಾಗುವ ಸಾಧ್ಯತೆಯ ಬಗ್ಗೆ ಆರೋಗ್ಯ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಕ್ರಿಮಿನಾಶಕಗಳು, ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಜನರು ತಿನ್ನುವ ಆಹಾರ ಧಾನ್ಯಗಳು ಹಣ್ಣು-ಹಂಪಲುಗಳು ತರಕಾರಿಗಳು ವಿಷಮಯವಾಗಿ ಜನರ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ.

ಈ ಒಂದಷ್ಟು ವಿಚಾರಗಳು ನಿಮಗೆ ಗೊತ್ತಿರಲೇಬೇಕು:
ಪಚನ ಕ್ರಿಯೆಗಳು ತೊಂದರೆಗಳಿಗೆ ಸಿಕ್ಕಿಹಾಕಿಕೊಂಡಿವೆ.. ಜ್ವರ ಹಾಗೂ ಮೇಲೆ ತಿಳಿಸಿದ ಯಾವುದೇ ರೀತಿಯ ರೋಗಗಳು ಬರದಂತಾಗಲು ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು. ನಾವು ತೆಗೆದುಕೊಳ್ಳುವ ಆಹಾರ ಉತ್ಪನ್ನಗಳಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಜನರು ಉತ್ತಮ, ಬಿಸಿ ಹಾಗೂ ತಾಜಾ ಊಟ ಮಾಡಬೇಕು. ರೆಫ್ರ‍್ರಿಜರೇಟರ್ ತಂಗಳು ತಿಂದರೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಒಳ್ಳೆಯ ಸುಖೋಷ್ಣದ ನೀರು ಕುಡಿಯಬೇಕು. ಕೈಗಳು, ಮೂಗು, ಹಲ್ಲುಗಳು, ನಾಲಗೆ, ಗಂಟಲು, ಬಾಯಿ ಸದಾ ಸ್ವಚ್ಛವಾಗಿಟ್ಟು ಮಾಡಿಟ್ಟುಕೊಳ್ಳಬೇಕು. ಮೂಗಿನ ಗೊಣ್ಣೆ, ಸಿಂಬಳ, ಗಂಟಲ ಕಫ ಸಾವಿರಾರು ಬಾರಿ ಬಂದರೂ ಹೊರ ಹೊರ ಹಾಕಬೇಕು. ಸೊರ್ ಎಂದು ಎಳೆದುಕೊಂಡು ಐಸ್‌ಕ್ರೀಮಿನಂತೆ ನುಂಗಬಾರದು ಸಿಂಬಳ, ಕಫದಲ್ಲಿ ಧೂಳು, ರೋಗಾಣುಗಳು, ವೈರಾಣುಗಳು ಇರುತ್ತವೆ
ಶುದ್ಧವಾದ ಗಾಳಿ ಬೆಳಕು ಮನೆಯಲ್ಲಿರಬೇಕು. ಊದಿನ ಕಡ್ಡಿಗಳನ್ನು ದೇವರಿಗೆ ಹಚ್ಚಿಟ್ಟು ಕಿಟಕಿ-ಬಾಗಿಲುಗಳನ್ನು ಮುಚ್ಚಬಾರದು. ವಾಯು ಸಂಚಾರ ಬಿಸಿಲಿನಲ್ಲಿ ಓಡಾಟ ಒಳ್ಳೆಯದು.

ದೇಹ ಮತ್ತು ಮನಸ್ಸು ಸದಾ ಶುದ್ಧವಾಗಿರಬೇಕು, ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಿಕೊಳ್ಳಬೇಕು. ಯುಕ್ತ ವ್ಯಾಯಾಮ ದೇಹಕ್ಕೆ ಬೇಕು. ಜ್ಞಾನ, ವಿಜ್ಞಾನ ಮತ್ತು ತತ್ವಜ್ಞನ ಜನರಲ್ಲಿ ಇರಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸ್ಥಳೀಯವಾಗಿ ದೊರೆಯುವ ಹಣ್ಣು, ತರಕಾರಿ, ಸೊಪ್ಪುಗಳನ್ನು ಸೇವಿಸಬೇಕು ದೂರದಿಂದ ಬರುವಾಗ ಸೇಬು ಹಣ್ಣು ಸೋಂಕಿಗೆ ಒಳಗಾಗಿ ರೋಗಾಣುಗಳನ್ನು ವೈರಾಣುಗಳನ್ನು ಒಳಗೊಳ್ಳುವ ಸಂಭವವನ್ನು ಅಲ್ಲಗೆಳೆಯಲಾಗದು. ಅಂತ ಸೇಬು ಹಣ್ಣನ್ನು ತಿಂದರೆ ಅನೇಕ ಸಮಸ್ಯೆಗಳು ಉಂಟಾಗಬಹುದು. ಸ್ಥಳೀಯವಾಗಿ ದೊರೆಯುವ ಸೊಪ್ಪುಗಳ ಕಷಾಯ ಬಹಳ ಒಳ್ಳೆಯದು.

ಕಷಾಯವು ರಕ್ತಕ್ಕೆ ಚೈತನ್ಯ ಕೊಡುತ್ತದೆ. ಸರಾಗ ಸಂಚಾರಕ್ಕೆ ಅನುಕೂಲವಾಗುತ್ತದೆ. ಫೈಟೋಕೆಮಿಕಲ್ಸ್, ಆಚಿಟಿ ಆಕ್ಸಿಯೊ ಡೆಂಟ್ಸ್, ಖನಿಜಗಳು ಮತ್ತು ಜೀವಸತ್ವಗಳು ಸುಲಭವಾಗಿ ಸೊಪ್ಪುಗಳ ಕಷಾಯದಿಂದ ದೊರೆಯುತ್ತದೆ. ಭೂಮಿ ತಾಯಿ ಕಷಾಯ ತಯಾರಿಸಲು ನಾನಾ ರೀತಿಯ ಸೊಪ್ಪು ಸೆದೆಗಳನ್ನು ಕೊಟ್ಟಿದ್ದಾಳೆ. ಜನರು ಅರಿತು ಅವುಗಳನ್ನು ಬಳಸಿಕೊಂಡು ಕಷಾಯ ಮಾಡಿಕೊಂಡು ಕುಡಿಯಬೇಕು. ಅಮೃತಬಳ್ಳಿ, ಲೋಳೆಸರ, ನೆಲನೆಲ್ಲಿ, ನೆಲಬೇವು, ಪುಂಡಿಸೊಪ್ಪು, ಅಗಸೆ ಸೊಪ್ಪು, ನಿಂಬೆ, ಮಾವು, ಹೇರಳೆ, ಪೇರಳೆ, ಹಾಲೇಸೊಪ್ಪು, ದೊಡ್ಡಪತ್ರೆ, ಬಿಲ್ವಪತ್ರೆ, ಬಜೆ, ಅರಸಿನದ ಎಲೆ, ನೆಲ್ಲಿ ಗಿಡದ ಸೊಪ್ಪು, ತುಳಸಿ, ಪಾರಿಜಾತ, ಮಧುನಾಶಿನಿ, ಬಸಳೆ, ಕನ್ನೆ, ಹೊನಗೊನೆ, ಶಂಖಪುಷ್ಪದಲ್ಲಿ ವಿವಿಧ ವಿಟಮಿನ್‌ಗಳು, ಖನಿಜಗಳು ವಿವಿಧ ತಿನ್ನುವ ಸೊಪ್ಪುಗಳಲ್ಲಿರುವಂತೆ ಇವೆ.

ಶಂಖಪುಷ್ಪದ ಉಪಯೋಗಗಳೇನು ಒಮ್ಮೆ ಕೇಳಿ:

ಕನ್ನಡದಲ್ಲಿ ಶಂಖಪುಷ್ಪಕ್ಕೆ ಹಲವಾರು ಹೆಸರುಗಳು ಇವೆ. ಕಂಠಿಸೊಪ್ಪು, ಕರ್ಣಿಕೆ, ಕಿರ್ಗುನ್ನೆ, ಗಿರಿಕನ್ನಿಕೆ, ವಿಷಕಂಠ ವಿಷಕಂಠಿ ಸೊಪ್ಪು, ಸಟುಗದ ಗಿಡ, ಸುಗತದ ಹಂಬು, ಸಂಸ್ಕೃತದಲ್ಲಿ ಅಪರಾಜಿತ, ಕ್ಷೀರಪುಷ್ಪ, ಗಿರಿ ಕರ್ಣಿಕಾ, ತುರಗಖುರ ಪ್ರತಿಮಾ ಪುಷ್ಟಿ, ಮಂಗಲ್ಯ ಪುಷ್ಟಿ, ಮಲವಿನಾಶಿನಿ ಮೇಧ್ಯ, ವನಮಾಲಿನಿ, ಸೂಕ್ಷ್ಮವಳ್ಳಿ ಶಂಖಪುಷ್ಟಿ ಎಂದು ಕರೆಯಲಾಗಿದೆ ಇಂಗ್ಲಿಷಿನಲ್ಲಿ ಬ್ಲೂ ಮೌಸ್ ಇಯರ್, ಕೌಂಚ್ ಪ್ಲವರ್ ಎನ್ನುತ್ತಾರೆ

ಶಂಖಪುಷ್ಪದಲ್ಲಿ ಕಬ್ಬಿಣ, ಕ್ಯಾಲ್ಸಿಯಂಗಳಿವೆ. ಪಾಲಿಫೆನೊಲ್ಸ್, ಫೇವೋನೊಯಿಡ್ಸ್, ವಿಟಮಿನ್ –ಇ ಮುಂತಾದುವುಗಳಿವೆ. ಶಂಕಪುಷ್ಪದ ಎಲೆ, ಕಾಂಡ, ಕಡ್ಡಿ, ಕಾಯಿ, ಹೂವು ಬೇರು, ಚಿಗುರು ಹೀಗೆ ಎಲ್ಲ ಭಾಗಗಳಲ್ಲಿಯೂ ಉಪಯೋಗ ಕರವಾದ ಸತ್ವಗಳಿವೆ.
ಸಿದ್ಧ ಪದ್ಧತಿಯ ಮೂಲಿಕಾ ವಿಜ್ಞಾನಿಗಳು ಶಂಖಪುಷ್ಪದ ಬಹಳಷ್ಟು ಉಪಯೋಗಗಳನ್ನು ಹೇಳಿದ್ದಾರೆ. ಪಕ್ಕೆ ಎಳೆತ, ಮೂರ್ಛೆರೋಗ, ನರಗಳ ಸೆಳೆತದಂತಹ ಸಮಸ್ಯೆಗಳನ್ನು ಈ ಮೂಲಿಕೆ ನಿವಾರಿಸುತ್ತದೆ. ಪ್ರಮೇಹ, ಮಧುಮೇಹಗಳಲ್ಲಿ ಇದು ಉಪಯುಕ್ತ. ಮೂತ್ರನಾಳವನ್ನು ಶುದ್ಧೀಕರಿಸಿ ಉರಿ ಇಲ್ಲದಂತೆ ಮಾಡುತ್ತದೆ. ಮೂತ್ರ ವಿಸರ್ಜನೆ ಸಲೀಸಾಗಿ ಹೋಗುವಂತೆ ಮಾಡುತ್ತದೆ.

ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಬಿಳುಪು ಹೋಗುವ ಸಮಸ್ಯೆ ಇದರಿಂದ ಪರಿಹಾರವಾಗುತ್ತದೆ. ಕೂದಲು ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಇದು ಕೊಡುತ್ತದೆ. ಕೂದಲು ಉದುರುವುದು, ಬೇಗ ಬಿಳಿಯಾಗುವುದನ್ನು ನಿಲ್ಲಿಸುತ್ತದೆ. ನೆಗಡಿ, ಕೆಮ್ಮು, ತಲೆನೋವು, ಸಮಸ್ಯೆಗಳಿಗೆ ಪರಿಹಾರ ಇದರಿಂದ ದೊರೆಯುತ್ತದೆ. ದೀರ್ಘಾಯುಸ್ಸಿಗೆ ಸಹಕಾರಿ. ಅಕಾಲ ವೃದ್ಧಾಪ್ಯ ಉಂಟಾಗುವುದಿಲ್ಲ. ತಂಗಳು, ಕೆಟ್ಟ ಆಹಾರ, ವಿವಿಧ ನೋವು, ಸಮಸ್ಯೆಗಳು, ಅಪೌಷ್ಟಿಕತೆ, ಬಂಧುಬಾಂಧವರ ಅಗಲಿಕೆ, ಹೇಳಿಕೊಳ್ಳಲಾರದ ಸಮಸ್ಯೆಗಳು ಮುಂತಾದ ಕಾರಣಗಳಿಂದ ಜನರು ಖಿನ್ನತೆ, ಸಂಕಟಗಳಿಗೆ ಒಳಗಾಗುವ ಸಮಸ್ಯೆಗಳಿಗೆ ಇದರ ಸೇವನೆಯಿಂದ ಒಳ್ಳೆಯದಾಗುತ್ತದೆ.

ಮುಪ್ಪು, ಮರೆವುಗಳಿಗೆ ಪರಿಹಾರ ದೊರೆಯುತ್ತದೆ. ಜ್ಞಾಪಕ ಶಕ್ತಿಯನ್ನು ಸುಸ್ಥಿಯಲ್ಲಿಡುತ್ತದೆ. ಬ್ರಾಹ್ಮಿ ಸರಿಸಮಾನವಾದ ಗಿಡಮೂಲಿಕೆಯಿದು. ರಕ್ತ ಸಂಚಾರ ಸುಗಮಗೊಳಿಸುತ್ತದೆ. ಹೃದಯಕ್ಕೆ ಶಕ್ತಿ ನೀಡುತ್ತದೆ. ಮೈಕೈ ನೋವಿಗೆ ಪರಿಹಾರವಿದೆ. ಒಟ್ಟಾರೆ ಚಳಿಗಾಲ, ಮಳೆಗಾಲ, ರಾತ್ರಿವೇಳೆ ಬಾಧಿಸುವ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಶಂಖಪುಷ್ಪ ಪರಿಹಾರ ನೀಡುತ್ತದೆ. ಅಡ್ಡಪರಿಣಾಮಗಳು ಇರುವುದಿಲ್ಲ.

ಬಸವರಾಜು ಮೈಸೂರು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group