ಬೆಂಗಳೂರು: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ತೋಟಗಾರಿಕಾ ಮಹಾವಿದ್ಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಸಸ್ಯ ಸಂತೆಯು ಜುಲೈ 11, 12, 13ರಂದು ಬೆಂಗಳೂರಿನ ಜಿಕೆವಿಕೆ ಬಳಿಯ ಯುಎಚ್ಎಸ್ ಆವರಣದಲ್ಲಿ ನಡೆಯಲಿದೆ
ಮೂರು ದಿನಗಳ ಕಾಲ ನಡೆಯಲಿರುವ ಈ ಸಸ್ಯ ಸಂತೆಯಲ್ಲಿ ಹಣ್ಣಿನ ಬೆಳೆಗಳ ಕಸಿ ಗಿಡಗಳು,ಸಸಿಗಳು ಹೂವು ಮತ್ತು ಅಲಂಕಾರಿಕ ಗಿಡಗಳು, ಔಷಧೀಯ ಮತ್ತು ಸುಗಂಧ ದ್ರವ್ಯಗಳ ಸಸ್ಯ, ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ, ಬೀಜ ಮತ್ತು ಗಾರ್ಡನ್ ಪರಿಕರಗಳು, ಸಾವಯವ ಪರಿಕರಗಳು ವೈವಿಧ್ಯಮಯ ತೋಟಗಾರಿಕಾ ಮಳಿಗೆಗಳು ಪ್ರದರ್ಶನ ಮತ್ತು ಮಾರಾಟದ ಸೌಲಭ್ಯವಿದೆ
ಬೆಂಗಳೂರು: ಜುಲೈ 11, 12, 13ರಂದು ಸಸ್ಯ ಸಂತೆ
