spot_img
Monday, May 19, 2025
spot_imgspot_img
spot_img

ಕಂಪೆನಿ ಉದ್ಯೋಗ ಬಿಟ್ಟು ಸ್ವದ್ಯೋಗದಲ್ಲಿ ಗೆದ್ದ ಯುವಕ

-ರಾಧಾಕೃಷ್ಣ ತೊಡಿಕಾನ

ಯುವಕರು ವಿದ್ಯಾಭ್ಯಾಸದ ನಂತರ ಉದ್ಯೋಗ ನಿಮಿತ್ತ ನಗರ ಸೇರಿಕೊಳ್ಳುವುದೇ ಹೆಚ್ಚು. ಯಾವುದೆ ಉದ್ಯೋಗವಾದರೂ ಸರಿ. ನಗರದ ಸೆಳೆತ ಅವರನ್ನು ಬಿಡುವುದಿಲ್ಲ. ಸಾಕಷ್ಟು ಕೃಷಿ ಭೂಮಿಯಿದ್ದರೂ ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಳ್ಳುವುದು ಕಡಿಮೆ. ಆದರೆ ಈಗ ಎಲ್ಲರೂ ಹಾಗಿಲ್ಲ. ಉದ್ಯೋಗದಲ್ಲಿದ್ದ ಕೆಲವಷ್ಟು ಮಂದಿಯಾದರೂ ಮರಳಿ ಊರಿಗೆ ಬಂದು ತಮ್ಮ ಕೃಷಿ ಹಾಗೂ ಗ್ರಾಮೀಣ ಉದ್ಯಮ ಸ್ವ ಉದ್ಯೋಗಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಕೆಲವೊಮ್ಮೆ ಸಾಬೂನು, ದ್ರಾವಣಗಳನ್ನು ಉಪಯೋಗಿಸಿದಾಗ ಕೆಲವರಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇವುಗಳಿಗೆ ಶುಭ್ರಕಗಳಲ್ಲಿರುವ ರಾಸಾಯನಿಕ ಸತ್ವಗಳು ಮುಖ್ಯವಾಗುತ್ತದೆ. ಇದನ್ನು ಮನಗಂಡು ತಮ್ಮ ಹಳ್ಳಿಯಲ್ಲಿ ಪರಿಸರ ಸಹ್ಯವಾದ ಕೊಳೆ ತೊಳೆಯುವ ದ್ರಾವಣಗಳನ್ನು ತಯಾರಿಕೆಯಲ್ಲಿ ತೊಡಗಿಸಿಕೊಂಡವರು ರಾಕೇಶ್ ಸಂತೆಕಟ್ಟೆ

ಮಣಿಪಾಲದ ಎಂಐಟಿಯಲ್ಲಿ ರಾಸಾಯನಿಕ ಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿದ ರಾಕೇಶ್ ಅವರು ಫಾರ್ಮಸ್ಯುಟಿಕಲ್ ಕಂಪೆನಿಯ ರಿಸರ್ಚ್ ಮತ್ತು ಡೆವಲಪ್ಮೆಂಟ್ ವಿಭಾಗದಲ್ಲಿ 10 ವರ್ಷಗಳ ಕಾಲ ಮಂಗಳೂರು, ಬೆಂಗಳೂರು ಮೊದಲಾದ ಕಡೆಗಳಲ್ಲಿ ಕೆಲಸ ಮಾಡಿದ್ದರು. ಎಲ್ಲರಂತೆ ನಗರ ಸೇರಿ ಉತ್ತಮ ಉದ್ಯೋಗವನ್ನು ಹೊಂದಿದ್ದರೂ ಅದು ಅವರಿಗೆ ತೃಪ್ತಿ ತಂದಿರಲಿಲ್ಲ. ನೌಕರಿ ಬಿಟ್ಟು ಮರಳಿ ಊರಿಗೆ ಬಂದರು. ಹೆಬ್ರಿ ಸಮೀಪದ ಸಂತೆಕಟ್ಟೆ ಬಳಿ ಸ್ವಂತದಾದ ಉದ್ಯಮ ಆರಂಭಿಸುವುದಕ್ಕೆ ಮನಮಾಡಿದರು. ಅವರ ಆಸಕ್ತಿಗೆ ಶಕ್ತಿ ತುಂಬಿದವರು ಅವರ ಪತ್ನಿ ಶ್ರೀಮತಿ ಅಶ್ವಿತಾ ರಾಕೇಶ್. ಶ್ರೀಮತಿ ಅಶ್ವಿತಾ ರಾಕೇಶ್ ಅವರು ವಾಣಿಜ್ಯ ಸ್ನಾತಕೋತ್ತರ ಪದವೀಧರೆ. ಎನ್‌ಇಟಿ ಹಾಗೂ ಎಸ್‌ಎಲ್‌ಇಟಿ ಉತ್ತೀರ್ಣರಾಗಿ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕಾರಾಗಿದ್ದಾರೆ.

ಇಬ್ಬರೂ ಸೇರಿ ದ್ವಾರಕಾ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಆರಂಭದಲ್ಲಿ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ತಯಾರು ಮಾಡಿದರೆ ಈಗ ಪರಿಸರ ಸ್ನೇಹಿ ಶುಭ್ರಕದ ದ್ರಾವಣ ತಯಾರಿ ಘಟಕ ಸ್ಥಾಪಿಸಿದ್ದಾರೆ.

ರಾಸಾಯನಿಕದಲ್ಲಿ ಬೇರೆ ಬೇರೆ ವಿಧಗಳಿವೆ. ಆರೋಗ್ಯಕರ ಮತ್ತು ಆರೋಗ್ಯಕ್ಕೆ ಹಾನಿಕಾರವಾದುದು ಇದೆ. ಆರೋಗ್ಯಕ್ಕೆ ಪೂರಕವಾದ ರಾಸಾಯನಿಕಗಳು ಔಷಧಿಗಳಲ್ಲಿ ಬಳಕೆಯಾಗುತ್ತವೆ. ಉಳಿದವು ಕೆಲವು ಕೀಟನಾಶಕಗಳಲ್ಲಿ ಉಪಯೋಗವಾಗುತ್ತದೆ. ಕೆಲವು ರಾಸಾಯನಿಕ ತ್ಯಾಜ್ಯಗಳು ನದಿ ನೀರು ಅಲ್ಲದೆ ಸಮುದ್ರ ನೀರನ್ನು ಸೇರಿ ಕಲುಷಿತಗೊಳಿಸಿ ಪರಿಸರಕ್ಕೆ ಹಾನಿಗೊಳಿಸಬಲ್ಲವು.

ಪರಿಸರಕ್ಕೆ ಹಾನಿಯಾಗದ ರಾಸಾಯನಿಕ ಬಳಕೆಯಿಂದ ಮಾಡಿದ ದ್ರಾವಣಗಳಲ್ಲಿ ದುಷ್ಪರಿಣಾಮಗಳು ತೀರಾ ಕಡಿಮೆ. ಅದೇ ಉದ್ದೇಶದಿಂದ ಪರಿಸರಕ್ಕೆ ಹಾಗೂ ಆರೋಗ್ಯಕ್ಕೆ ಅನುಕೂಲವಾದ ಶುಭ್ರಕಗಳನ್ನು ತಯಾರಿಸಲು ಮುಂದಾದೆವು ಎನ್ನುತ್ತಾರೆ ರಾಕೇಶ್.

“ರಿಶ್ ” ಎಂಬ ಬ್ರಾಂಡಿನ ಮೂಲಕ ಬಟ್ಟೆ, ನೆಲ, ಪಾತ್ರೆಗಳನ್ನು ಶುಭ್ರಗೊಳಿಸುವ ಜೈವಿಕ ವಿಘಟಕ ಮತ್ತು ಪರಿಸರ ಸ್ನೇಹಿ ದ್ರಾವಣಗಳನ್ನು ತಯಾರಿಸುತ್ತಿದ್ದು ಇವುಗಳಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಊರೂರು ಅಲೆದು ಸಂಘ-ಸಂಸ್ಥೆಗಳನ್ನು ಭೇಟಿಯಾಗಿ ತಮ್ಮ ಉತ್ಪನ್ನವನ್ನು ಮಾರುಕಟ್ಟೆ ಮಾಡಲು ಇಬ್ಬರೂ ಶ್ರಮಿಸಿದರು. ಈ ಅವಧಿಯಲ್ಲಿ ಕಷ್ಟನಷ್ಟ, ಅವಮಾನಗಳಿಗೆ ಗುರಿಯಾದರೂ ಎದೆಗುಂದದೆ ಮುನ್ನಡೆದ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಾ ಬಂದ ಹಿನ್ನಲೆಯಲ್ಲಿ ಈಗ ಸಾರ್ಥಕತೆಯ ಭಾವ ಮೂಡಿದೆ. ಕೃಷಿ ಮೇಳ, ವಸ್ತು ಪ್ರದರ್ಶನಗಳಲ್ಲದೆ ಸಾಮಾಜಿಕ ಜಾಲತಾಣದ ಮೂಲಕವೂ ಮಾರಾಟ ಮಾಡುತ್ತಿದ್ದಾರೆ.

ಕಳೆದ ಎರಡುವರೆ ವರ್ಷದ ಹಿಂದೆ ಆರಂಭಸಿದ “ರಿಶ್ ಹೋಮ್ ಕೇರ್ ಪ್ರಾಡೆಕ್ಟ್” ಈಗ ಗ್ರಾಹಕರ ನಂಬಿಕೆ ಗಳಿಸಿದೆ. ಮೂರು ವಿಧದ ದ್ರಾವಣ ತಯಾರಿಸುತ್ತಾರೆ. ಬಟ್ಟೆ ಶುಭ್ರತೆಗೆ ಮಿಷನ್ ಅಥವಾ ಬಕೆಟ್ ಯಾವುದೇ ಇರಲಿ. ಬಟ್ಟೆಯನ್ನು ನೆನೆಸಿಟ್ಟು ಸ್ವಚ್ಛಗೊಳಿಸಬಹುದು. ಕಿರಿಕಿರಿಯುಂಟು ಮಾಡುವ ಮತ್ತು ತೀವ್ರ ವ್ಯತಿರಿಕ್ತ ಪರಿಣಾಮ ಬೀರಬಲ್ಲ ರಾಸಾಯನಿಕಗಳಿಲ್ಲ. ನೆಲ ತೊಳೆಯುವ ದ್ರಾವಣಕ್ಕೆ ನಿಂಬೆ ಮತ್ತು ಗಂಧದ ಪರಿಮಳವಿದ್ದರೆ ಬಟ್ಟೆ ತೊಳೆಯುವ ದ್ರಾವಣಕ್ಕೆ ಎರಡು ಪರಿಮಳಗಳಿವೆ. ಪಾತ್ರೆ ತೊಳೆಯುವ ದ್ರಾವಣ ಲಿಂಬೆ ಪರಿಮಳದಲ್ಲಿದೆ.

ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ಉದ್ಯಮ ಆರಂಭಿಸಿ ಉತ್ಪನ್ನಗಳನ್ನು ಪೇಟೆ ಪಟ್ಟಣ್ಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಿರು ಉದ್ಯಮ, ಉತ್ಪನ್ನಗಳು ಗ್ರಾಮೀಣ ಪರಿಸರದಲ್ಲಿ ಆರಂಭವಾದರೆ ಅನುಕೂಲತೆಗಳು ಹೆಚ್ಚು. ಸುಗಂಧ ದ್ರವ್ಯ ಭರಿತ ಸ್ನಾನದ ಸಾಬೂನು ಮೊದಲಾದವುಗಳನ್ನು ಉತ್ಪಾದಿಸುವ ಯೋಜನೆ ಅವರಲ್ಲಿದೆ

ಮಾಹಿತಿಗೆ 9916558090

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group