spot_img
Tuesday, September 17, 2024
spot_imgspot_img
spot_img
spot_img

ಹರಿವೆ-ರಾಜಗಿರಿ ಸೊಪ್ಪಿನ ಸೋದರಿ ಗೊರ್ಜಿ ಸೊಪ್ಪು

-ಡಾ. ಎಂ.ಜಿ. ಬಸವರಾಜ ಮೈಸೂರು

ಮಳೆಗಾಲದಲ್ಲಿ ನಾನಾ ರೀತಿಯ ತಿನ್ನಲು ಉಣ್ಣಲು ಉಪಯೋಗಕ್ಕೆ ಬರುವ ನಾನಾ ರೀತಿಯ ನೈಸರ್ಗಿಕ ಸೊಪ್ಪುಗಳು ಎಲ್ಲೆಲ್ಲಿ ಅವಕಾಶವಿರುತ್ತದೆಯೋ ಅಲ್ಲಿ ಬೆಳೆಯುತ್ತವೆ. ಬಹು ಮುಖ್ಯವಾಗಿ ವಿವಿಧ ರೀತಿಯ ಪಕ್ಷಿಗಳು ಬೀಜ ಪ್ರಸಾರ ಮಾಡಿ ಈ ಸೊಪ್ಪುಗಳ ಬೆಳೆಯುವುದಕ್ಕೆ ಸಹಾಯ ಮಾಡುತ್ತವೆ. ಅಂತಹ ಸೊಪ್ಪುಗಳಲ್ಲಿ ಗೊರ್ಜಿ ಸೊಪ್ಪನ್ನು ಇಲ್ಲಿ ಹೆಸರಿಸಬಹುದು. ಹರಿವೆ ದಂಟು, ಕೆಂಪು ದಂಟು, ಹಸಿರು ದಂಟು, ಅಮರಂತಾಸ್ ಸೊಪ್ಪುವಿನ ರೂಪಾಂತರವಾಗಿ ಗೊರಜಿ ಸೊಪ್ಪು ಬೆಳೆಯುತ್ತದೆ. ವಿವಿಧ ರೀತಿಯ ಪಕ್ಷಿಗಳು ಅಮರಂತಾಸ್ ಕ್ರುಯೆಂಟಸ್, ಅಮರಂತಸ್ ಬ್ಲೀಟಮ್, ಅಮರಂತಾಸ್ ಡುಬಿಯಸ್, ತ್ರಿವರ್ಣ ಅಮರಂತಾಸ್ ಬೀಜಗಳನ್ನು ಆಹಾರವಾಗಿ ತಿಂದು ಬೇರೆ ಬೇರೆ ಕಡೆ ಹೋದಾಗ ಅಲ್ಲಿ ಇವು, ಬೀಜಗಳನ್ನು ತಮ್ಮ ಗೊಬ್ಬರ(ಹಿಕ್ಕೆ)ಯ ಮೂಲಕ ಪ್ರಸಾರಗೊಳಿಸುತ್ತವೆ. ವಿವಿಧ ಪ್ರದೇಶಗಳ ಹವಾಮಾನ, ಮಣ್ಣಿನ ಫಲವತ್ತತೆ, ಮಣ್ಣಿನ ವೈವಿಧ್ಯತೆ, ಮಳೆ ಬೀಳುವಿಕೆಯ ಆಧಾರದ ಮೇಲೆ ಈ ಹರಿವೆ ಜಾತಿಯ ಈ ಸೊಪ್ಪು ಬೆಳೆಯುತ್ತದೆ. ರೈತರು ತಮ್ಮ ರಾಗಿ, ಕಡಲೆ ಗಿಡ, ಒಣ ಭೂಮಿಯ ಮಿಶ್ರಬೆಳೆಗಳು, ತೋಟಗಳಲ್ಲಿ ಮಳೆಗಾಲದಲ್ಲಿ ಬೆಳೆದಾಗ ಈ ಸೊಪ್ಪಿನ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ತಾಜಾ ರುಚಿ, ಶುಚಿ ಹಾಗೂ ಸತ್ವ ಭರಿತ ಊಟ ತಿಂಡಿಗಳನ್ನು ಮಾಡಬಹುದು.

ತಿನ್ನಲು ಯೋಗ್ಯವಾದ ವಿವಿಧ ಸೊಪ್ಪುಗಳಲ್ಲಿ ಇರುವಂತೆ ಗೊರ್ಜಿ ಸೊಪ್ಪಿನಲ್ಲಿಯೂ ವಿಟಮಿನ್ ‘ಎ’ ಸಿಗುತ್ತದೆ ವಿಟಮಿನ್ ‘ಎ’ ಕೊರತೆಯಿಂದ ಆಗುವ ವಿವಿಧ ವ್ಯಾಧಿಗಳನ್ನು ನಿವಾರಿಸುವಲ್ಲಿ ಗೊರ್ಜಿ ಸೊಪ್ಪು ಸಹಾಯಮಾಡುತ್ತದೆ. ಬೆರಕೆ ಸೊಪ್ಪುಗಳ ಜೊತೆ ಗೊರ್ಜಿ ಸೊಪ್ಪು ಸೇರಿದಾಗ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ. ದೇಹ, ಮನಸ್ಸುಗಳಿಗೆ ಬೇಕಾದ ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ ಮುಂತಾದ ಖನಿಜಾಂಶಗಳು, ನಾರಿನ ಪದಾರ್ಥಗಳು ಸಿಗುತ್ತವೆ. ನಾರಿನ ಪದಾರ್ಥವು ಆಹಾರದ ಮೂಲಕ ಸೇರಿದಾಗ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಲು ಸಹಾಯವಾಗುತ್ತದೆ. ಗೊರ್ಜಿ ಸೊಪ್ಪಿನ ಕಷಾಯ ಕುಡಿಯುವುದರಿಂದ ಮೂತ್ರ ಪಿಂಡಗಳಿಗೆ ಚೈತನ್ಯ ದೊರೆಯುತ್ತದೆ.

ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ಪ್ರತಿ ಬಾರಿ ರೂಪಾಂತರಗೊಂಡು ಜನರಿಗೆ ರೋಗ ಸೃಷ್ಠಿಸುವ ವೈರಾಣಗಳನ್ನು ಹದ್ದುಬಸ್ತಿನಲ್ಲಿ ಇಡಲು ಗೊರ್ಜಿಸೊಪ್ಪು ಸಹಾಯಕಾರಿ. ಈ ಸೊಪ್ಪು ಮನುಷ್ಯರಿಗಷ್ಟೇ ಅಲ್ಲದೆ ದನ ಕರುಗಳಿಗೆ, ಕುರಿ ಮೇಕೆಗಳಿಗೆ ಉತ್ಕೃಷ್ಟ ಮೇವಾಗುತ್ತದೆ. ತರಾವರಿ ಮೇವು ತಿಂದಾಗ ಒಳ್ಳೆಯ ಹಾಲು ದೊರೆಯುತ್ತದೆ. ತೆಂಗು, ಅಡಿಕೆ, ಮಾವು ಮುಂತಾದ ಬೆಳೆಗಳಿÀಗೆ ಹಸಿರು ಗೊಬ್ಬರವಾಗಿ ಭೂಮಿಯ ಫಲವತ್ತುತೆ ಹೆಚ್ಚಾಗಲು ನೆರವಾಗುತ್ತದೆ. ಬೇಕಾದಷ್ಟು ಪ್ರಮಾಣದಲ್ಲಿ ಗೊರ್ಜಿ ಸೊಪ್ಪು ಮತ್ತು ಇತರೆ ಸೊಪ್ಪುಗಳಲ್ಲಿ ಇದ್ದಲ್ಲಿ ಪ್ರಧಾನ ಬೆಳೆಗಳಿಗೆ ಕ್ರಿಮಿ ಕೀಟಗಳ ಹಾವಳಿ ಇಲ್ಲದಂತಾಗುತ್ತದೆ. ಇದರಿಂದ ರೈತರಿಗೆ ಸಹಾಯವಾಗುತ್ತದೆ.

ಗೊಜಿ ಸೊಪ್ಪು ಉಚಿತ ನೈಸರ್ಗಿಕ ಆರೋಗ್ಯಕ್ಕೆ ಹಿತಕಾರಿ ಆಗಿರುವುದರಿಂದ ಆ ಋತುಮಾನದಲ್ಲಿ ದೊರೆತಾಗ ತಾವೂ ಉಪಯೋಗಿಸಿ ತಮ್ಮ ದನಕರುಗಳಿಗೆ ತಿನಿಸಬಹುದು.ಒಣಿಗಿಸಿ ಪುಡಿಮಾಡಿಕೊಂಡು ರೊಟ್ಟಿ, ಚಪಾತಿ, ದೋಸೆಗಳಿಗೆ ಸೇರಿಸಿಕೊಂಡು ತಿಂಡಿಯ ವೈವಿಧ್ಯತೆ ಮತ್ತು ಸತ್ವನ್ನು ಹೆಚ್ಚಿಸಿಕೊಳ್ಳಬಹುದು. ಗೊಜಿ ಸೊಪ್ಪು ಹದವಾದ ಎಳೆ ಸೊಪ್ಪು ಆಗಿದ್ದಾಗ ಸಾಂಬಾರ್, ತಿಳಿಸಾರು, ಪಲ್ಯಗಳನ್ನು ಮಾಡಿಕೊಂಡು ಉಣ್ಣಬಹುದು. ಕಷಾಯ ತಯಾರಿಸಿಕೊಂಡು ಕುಡಿಯಬಹುದು, ಮಾರಾಟಗಾರರು ತರುವ ವಿವಿಧ ಸೊಪ್ಪು, ತರಕಾರಿಗಳು ರಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ ಬೆಳೆದವುಗಳು ಆಗಿರುತ್ತವೆ.

ಬಹಳಷ್ಟು ಸಮಯಗಳಲ್ಲಿ ಮಾರಾಟವಾಗುವ ಸೊಪ್ಪು ತರಕಾರಿಗಳು ತಾಜಾ ಆಗಿರುವುದಿಲ್ಲ. ರುಚಿ ಹೊಂದಿರುವುದಿಲ್ಲ ಮತ್ತು ಶುಚಿಯಿಂದ ಕೂಡಿರುವುದಿಲ್ಲ. ಅವು ಗಳಲ್ಲಿ ಪೋಷಕಾಂಶದ ಗುಣಮಟ್ಟ ಕಡಿಮೆ ಇರುತ್ತದೆ. ವಿಷಕಾರಿ ಅಂಶಗಳಿAದ ಅವು ಬೆಳೆದು ಜನರಿಗೆ ರೋಗ ರೋಜಿನ ಹರಡುವುದರಲ್ಲಿ ತಮ್ಮದೇ ಆದ ರೀತಿಯಲ್ಲಿ ಕಾರಣವಾಗುತ್ತದೆ. ಆದುದರಿಂದ ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ನೂರಾರು ಪೌಷ್ಟಿಕ ಸೊಪ್ಪುಗಳು ದೊರೆಯುತ್ತವೆ. ಜನರು ಅವುಗಳ ಪ್ರಯೋಜನ ಪಡೆದುಕೊಂಡು ದುಬಾರಿ ವೈದ್ಯಕೀಯ ಚಿಕಿತ್ಸೆಗಳಿಂದ ದೂರ ಉಳಿಯಬಹುದು. ವಿವಿಧ ಸೋಂಕು ರೋಗಗಳಿಂದ ದೂರವಿರಬಹುದು. ಆರೋಗ್ಯ ಆಯಸ್ಸುಗಳನ್ನು ಹೆಚ್ಚಿಸಿಕೊಳ್ಳಬಹುದು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group