spot_img
Wednesday, November 27, 2024
spot_imgspot_img
spot_img
spot_img

ಪರಿಸರಕ್ಕಾಗಿ ನಾವು-ದ. ಕ. -ಉಡುಪಿ ಜಿಲ್ಲಾ ಘಟಕದ ಸಭೆ: ಪರಿಸರ ಮತ್ತು ಕೃಷಿಯ ಕುರಿತು ಚರ್ಚೆ!

ಕಿನ್ನಿಗೋಳಿ: ಪರಿಸರಕ್ಕಾಗಿ ನಾವು ಇದರ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸಂಯುಕ್ತ ಘಟಕದ ಮೊದಲ ಸಭೆ ಜನೆವರಿ 15, 2024 ರಂದು ಕಿನ್ನಿಗೋಳಿಯ ನೇಕಾರ ಸಂಘದ ಸಭಾ ಭವನದಲ್ಲಿ ನಡೆಯಿತು.

ಅತಿಯಾದ ಕೈಗಾರಿಕೀಕರಣ, ನಗರೀಕರಣ ಮತ್ತು ಬದಲಾದ ಜೀವನ ಶೈಲಿಯ ಪರಿಣಾಮ ಹವಾಗುಣ ವೈಪರೀತ್ಯದ ತುರ್ತು ಸಮಸ್ಯೆ ಎದುರಾಗಿದೆ, ಈಗ ನಾವು ಎಚ್ಚೆತ್ತುಕೊಂಡು ಪರಿಸರದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಜೀವ ಸಂಕುಲದ ಅಳಿವು ಇನ್ನು ಕೆಲವು ದಶಕಗಳಲ್ಲಿ ನಿಶ್ಚಿತ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಈ ದಿಸೆಯಲ್ಲಿ ಪರಿಸರ ಪರ ಕೆಲಸ ಮಾಡಲು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಪರಿಸರ ಕಾರ್ಯಕರ್ತರನ್ನು ಒಗ್ಗೂಡಿಸಿ ರಾಜ್ಯ ಮಟ್ಟದ ಒಕ್ಕೂಟ ಕಟ್ಟಲು ‘ಪರಿಸರಕ್ಕಾಗಿ ನಾವು’ ಎನ್ನುವ ರಾಜ್ಯ ಮಟ್ಟದ ಬಳಗ ರಚನೆಯಾಗಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲೂ ಅದರ ಉಪಘಟಕ ರಚಿಸಲಾಗಿದೆ.

ದ.ಕ. ಜಿಲ್ಲೆಯಿಂದ ಅಶ್ವಿನಿ ಭಟ್ ಮತ್ತು ಭುವನ್ ದೇವಾಡಿಗ ಹಾಗೂ ಉಡುಪಿ ಜಿಲ್ಲೆಯಿಂದ ಶ್ರೀ ಕುಮಾರ್ ಮತ್ತು ದೀಪ್ತಿ ಅವರು ರಾಜ್ಯ ಸಂಚಾಲನ ಸಮಿತಿಗೆ ಈಗಾಗಲೇ ಆಯ್ಕೆ ಆಗಿದ್ದಾರೆ. ಪರಿಸರಕ್ಕಾಗಿ ನಾವು ರಾಜ್ಯ ಬಳಗದ ಆರಂಭಿಕ ಸಮಿತಿಯ ಪರವಾಗಿ ಮಮತಾ ರೈ ಹಾಗೂ ಉಭಯ ಜಿಲ್ಲೆಗಳ ಅನೇಕ ಪ್ರಮುಖ ಪರಿಸರ ಕಾರ್ಯಕರ್ತರು ಉಪಸ್ಥಿತರಿದ್ದರು.

ಹವಾಗುಣ ವೈಪರೀತ್ಯ ದಿಂದ ಹಿಡಿದು ಉಭಯ ಜಿಲ್ಲೆಗಳನ್ನು ಕಾಡುತ್ತಿರುವ ಅತಿ ಮುಖ್ಯ ಪರಿಸರ, ಕೃಷಿ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಆಯ್ದ ಪರಿಸರ ಸಮಸ್ಯೆಗಳ ಪರಿಹಾರಕ್ಕಾಗಿ ಆಯಾ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಸಮಿತಿಗಳನ್ನು ರಚಿಸಿ ಕಾರ್ಯತಂತ್ರ ರೂಪಿಸಲು, ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಯೋಜನೆಗಳನ್ನು ರೂಪಿಸಲು ಹಾಗೂ ರಾಜ್ಯ ಮಟ್ಟದ “ಪರಿಸರಕ್ಕಾಗಿ ನಾವು ” ಬಳಗದ ಮಾರ್ಗದರ್ಶನದಂತೆ ಕೆಲಸ ಮಾಡಲು ನಿರ್ಧರಿಸಲಾಯಿತು. ಶ್ರೀಕುಮಾರ್ ಸ್ವಾಗತಿಸಿದರು. ಸಭೆಯಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಸರ ಮತ್ತು ಕೃಷಿಗಾಗಿ ದುಡಿಯುತ್ತಿರುವ ಆಸಕ್ತರು ಉಪಸ್ಥಿತರಿದ್ದರು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group