ಗ್ರಾಮೀಣ ಭಾಗದ ಅಕುಶಲ ಕೆಲಸ ಮಾಡುವ ಕುಟುಂಬಗಳ ಜೀವನೋಪಾಯದ ಸಂಪನ್ಮೂಲಗಳನ್ನು ಹೆಚ್ಚಿಸುವುದು, ಪ್ರತೀ ಕುಟುಂಬಕ್ಕೆ 1೦೦ ದಿನಗಳ ಉದ್ಯೋಗಾವಕಾಶವನ್ನು ನೀಡುವುದು, ಬಾಳಿಕೆ ಬರುವ ಉತ್ಪಾದನಾ ಶೀಲ ಆಸ್ತಿಗಳ ಸೃಜಿಸುವುದು ಮೊದಲಾದುವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ದೇಶಗಳಾಗಿವೆ. ಈ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳು, ತೋಟಗಾರಿಕಾ ಬೆಳೆಗಳ ಕೃಷಿಗೆ ಅನುಕೂಲವಾಗಲಿವೆ.
ಸಣ್ಣ ಮತ್ತು ಅತಿ ಸಣ್ಣ ರೈತರು, ಕೂಲಿ ಕಾರ್ಮಿಕರು, ಬಿಪಿಎಲ್ ಪಡಿತರ ಕುಟುಂಬಗಳು, ಭೂಸುಧಾರಣಾ ಫಲಾನುಭವಿಗಳು, ಪರಿಶಿಷ್ಟ ಜಾತಿ, ಪಂಗಡ, ಅಲೆಮಾರಿ, ಬುಡಕಟ್ಟು, ಅನುಸೂಚಿತ ಬುಡಕಟ್ಟು ಮತ್ತು ಪಾರಂಪಾರಿಕಾ ಅರಣ್ಯ ವಾಸಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಡಿಯಲ್ಲಿ ಕೃಷಿ ಹೊಂಡ, ತೆರೆದ ಬಾವಿ, ಕೊಳವೆಬಾವಿ ಜಲ ಮರುಪೂರಣ, ಅಲ್ಪ ಆಳದ ಬಾವಿ, ಜಮೀನು ಸಮತಟ್ಟು, ಕಂದಕ-ಬದು ನಿರ್ಮಾಣ, ಬಚ್ಚಲ ಗುಂಡಿ, ಪೌಷ್ಟಿಕ ತೋಟ, ದನದ ಕೊಟ್ಟಿಗೆ, ಆಡು /ಮೇಕೆ, ಕೋಳಿ, ಹಂದಿ ಶೆಡ್ಡುಗಳ ನಿರ್ಮಾಣ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಗಳಿಗೆ ಅವಕಾಶವಿದೆ.
ತೋಟಗಾರಿಕಾ ಬೆಳೆಗಳ ಕೃಷಿಗೆ ಈ ಯೋಜನೆಯಡಿ ಸೌಲಭ್ಯವಿದೆ. ಅಡಿಕೆ , ತೆಂಗು, ಗೇರು, ಕೊಕ್ಕೋ, ಕಾಳುಮೆಣಸು, ಬಾಳೆ, ನಿಂಬೆ, ಸೀಬೆ, ಪಪ್ಪಾಯಿ, ಮಾವು ಚಿಕ್ಕು, ದಾಳಿಂಬೆ, ಮುಸಂಬಿ, ಕಿತ್ತಳೆ, ಸೀತಾಫಲ, ನೆಲ್ಲಿ ,ಗುಲಾಬಿ, ಮಲ್ಲಿಗೆ, ದ್ರಾಕ್ಷಿ, ಕರಿಬೇವು,ಬಾಳೆ ರಾಂಬುಟಾನ್, ಡ್ರಾö್ಯಗನ್ ಫ್ರುಟ್, ರೇಷ್ಮೆ, ಹುಣಿಸೆ ಮೊದಲಾದ ಬೆಳೆಯನ್ನು ಈ ಯೋಜನೆಯಡಿ ಬೆಳೆಯಬಹುದಾಗಿದೆ.
ಆಯಾ ಪ್ರದೇಶದ ಗ್ರಾಮ ಪಂಚಾಯತುಗಳಲ್ಲಿ ಮಾಹಿತಿಯನ್ನು ಪಡೆಯಬಹುದು.