spot_img
Friday, October 18, 2024
spot_imgspot_img
spot_img
spot_img

ಸಿರಿಧಾನ್ಯಕ್ಕೆ ಬಂತು ಐಸಿರಿ: ವಿಶ್ವಮಟ್ಟದಲ್ಲಿ ಭಾರತೀಯ ಆಹಾರ ಪದ್ದತಿಗೆ ಖ್ಯಾತಿಯ ಗರಿ!

ವಿಶ್ವಸಂಸ್ಥೆಯು ಈ ವರ್ಷವನ್ನು ಅಂತರ್‌ರಾಷ್ಟೀಯ ಸಿರಿಧಾನ್ಯದ ವರ್ಷವೆಂದು ಘೋಷಿಸಿದೆ. ಸಿರಿಧಾನ್ಯಗಳು ವಿಶ್ವಮಟ್ಟದಲ್ಲಿ ಗುರುತಿಸುವ ಮತ್ತು ಅದರ ಮಹತ್ವವನ್ನು ಜಗತ್ತಿನಾದ್ಯಂತ ಸಾರಲು ಅನುಕೂಲವಾಗಲಿದೆ. ಸಿರಿಧಾನ್ಯದ ಕಡೆ ಕೇಂದ್ರದ ನಡೆಯೂ ಶ್ಲಾಘನೀಯವಾದುದು.

ಭಾರತೀಯ ಆಹಾರ ಪದ್ಧತಿಯಲ್ಲಿ ಸಿರಿ ಧಾನ್ಯಗಳಿಗೆ ಮಹತ್ವದ ಸ್ಥಾನವಿತ್ತು ಮತ್ತು ಅದರ ಮೌಲ್ಯವನ್ನು ಜನರು ಅರಿತ್ತಿದ್ದರು. ವ್ಯಾಪಾರ-ವ್ಯವಹಾರಕ್ಕಾಗಿ ಅಲ್ಲವಾದರೂ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳುವುದಕ್ಕೆ ಸಿರಿಧಾನ್ಯ ಬೆಳೆಯುತ್ತಿದ್ದರು. ಕಡಿಮೆ ನೀರು ಬೇಡುವ, ಹವಾಮಾನದ ಬದಲಾವಣೆಯನ್ನು ಸಹಿಸಿಕೊಳ್ಳುವ ತಾಕತ್ತು ಈ ಧಾನ್ಯಗಳಿಗಿದೆ. ಬಿತ್ತಿ ಬೆಳೆದವನಿಗೆ ಶಕ್ತಿ ತುಂಬಬಲ್ಲದು.
ಜೋಳ, ರಾಗಿ, ಸಜ್ಜೆ, ನವಣೆ, ಊದಲು, ಬರಗು, ಹಾರಕ, ಸಾಮೆ, ಕೊರಲೆ ಮೊದಲಾದ ಸಿರಿ ಧಾನ್ಯಗಳಲ್ಲಿ ಜೋಳ, ರಾಗಿ, ಸಜ್ಜೆ ಈಗಲೂ ಅನ್ನದ ಬಟ್ಟಲು ತುಂಬಿಕೊಂಡರೆ ಉಳಿದವು ಕೆಲವೇ ಕೆಲವು ಆಸಕ್ತ ಕೃಷಿಕರ ಕೃಷಿ ಭೂಮಿಯಲ್ಲಿ ಅಸ್ತಿತ್ವ ಪಡೆದುಕೊಂಡಿವೆ. ಸಿರಿಧಾನ್ಯಗಳ ಸ್ಥಾನಗಳನ್ನು ಭತ್ತ, ಗೋಧಿ ಪಲ್ಲಟಗೊಳಿಸಿದವು.

ಎಲ್ಲರ ಆಹಾರ ಧಾನ್ಯವಾಗಿದ್ದ ಸಿರಿ ಧಾನ್ಯಗಳು ಬಡವರ ಪಾಲಿನವು ಎಂಬ ವಾತಾವರಣ ನಿರ್ಮಾಣವಾಯಿತು. ಭತ್ತ, ಗೋಧಿಗೆ ದೊರೆತ ಮಹತ್ವದ  ಮುಂದೆ ಸಿರಿ ಧಾನ್ಯಗಳು ಮಂಕಾದವು. ಈಗ ಸಿರಿಧಾನ್ಯದ ಸಿರಿ ಏನೆಂಬುದು ತಡವಾಗಿಯಾದರೂ ಅರಿವಾಗತೊಡಗಿದೆ. ಬಡವರ ಬಟ್ಟಲಲ್ಲಿದ್ದ ಈ ಆಹಾರ ಧಾನ್ಯಗಳು ಈಗ ಸಿರಿವಂತರ ಕಣ್ಣಿಗೆ ಗೋಚರಿಸಲಾರಂಭಿಸಿದೆ.

ಕೇಂದ್ರ ಸರಕಾರ ಸಿರಿಧಾನ್ಯಗಳ ಬಗ್ಗೆ ಬಹಳಷ್ಟು ಉತೇಜನ ನೀಡುತ್ತಿದೆ. ಆದರೆ ಇವುಗಳನ್ನು ಬೆಳೆಯುವ ತಳಮಟ್ಟದ ರೈತರಿಗೆ ವಿಶ್ವಾಸ ತುಂಬುವ ಕೆಲಸವಾಗಬೇಕಿದೆ. ಇದಕ್ಕಾಗಿ ನೀಡುವ ಸೌಲಭ್ಯಗಳನ್ನು ಮನೆ ಬಾಗಿಲಿಗೇ ತಲುಪಿಸಿಸುವ ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಕೇಂದ್ರ, ರಾಜ್ಯ ಸರಕಾರಗಳು ಇನ್ನಷ್ಟು ಉದಾರ ನೀತಿಯನ್ನು ತೋರಬೇಕು. ಆಗ ಸಿರಿಧಾನ್ಯ ಕೃಷಿ ಮತ್ತು ಆಹಾರ ಉದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಮತ್ತಷ್ಟು ತೆರೆದುಕೊಳ್ಳಲಿದೆ. ಅಂತರರಾಷ್ಟೀಯ ಮಟ್ಟದಲ್ಲಿ ಬಳಕೆ ಹೆಚ್ಚಳವಾದರೆ ಉತ್ಪಾದಕನಿಂದ ಸಂಸ್ಕರಣೆ, ಆರೋದ್ಯಮದವರೆಗೆ ಹಲವಾರು ಕೈಗಳಿಗೆ ಉದ್ಯೋಗಾವಕಾಶಗಳು ದೊರೆಯಬಹುದು. ದೇಶದೊಳಗೂ ಈ ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸುಲಭವಾಗಿ ಕಂಡುಕೊಳ್ಳಬಹುದು. ಇದಲ್ಲದೆ ವಿಶ್ವ ಮಾರುಕಟ್ಟೆಯಲ್ಲೂ ಪ್ರಭುತ್ವ ಸಾಧಿಸಬಹುದು.

-ರಾಧಾಕೃಷ್ಣ ತೊಡಿಕಾನ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group