spot_img
Tuesday, September 8, 2026
spot_imgspot_img

ನೆನಪಿನ ಬುತ್ತಿ ಬಿಚ್ಚಿದ ಕುಂಟಲ ಹಣ್ಣು

ನೇರಳೆ ಹಣ್ಣು ಬೆಳೆಯುವ ಕೃಷಿಕರಿದ್ದಾರೆ, ಹಣ್ಣಿನ ಅಂಗಡಿಗಳಲ್ಲೂ ಸಾಕಷ್ಟು ಸಿಗುತ್ತದೆ.ಆದರೆ ಕುಂಟಲ(ಕುಂಟು ನೇರಳೆ) ಹಣ್ಣು ಪೇಟೆಯಲ್ಲಿ ಬೇಕೆಂದರೆ ಸಿಗಲಾರದು. ಅದನ್ನು ಸವಿಯಬೇಕೆಂದರೆ ಮಲೆನಾಡು ಅಥವಾ ಕರಾವಳಿ ಭಾಗದ ಹಳ್ಳಿಗಾಡುಗಳನ್ನು ಸುತ್ತಬೇಕು. ಹೊಳೆ, ತೊರೆ ಬದಿಗಳಲ್ಲಿ ಹುಡುಕಬೇಕು.

ಕುಂಟಾಲ ಎಂದಾಗ ಹಳ್ಳಿಯ ಮಕ್ಕಳ ಬಾಲ್ಯದ ದಿನಗಳ ನೆನಪಿನ ಪುಟ ತೆರೆದುಕೊಳ್ಳುತ್ತವೆ. ಕಾಡುದಾರಿಯಲ್ಲಿ ನಡೆದು ಶಾಲೆ ಸೇರುವ ಮಕ್ಕಳಿಗೆ ಸಿಗುವ ಕಾಡು ಹಣ್ಣುಗಳು ಹಲವು. ಕಾಡು ಮಾವಿನ ಹಣ್ಣು, ನೆಲ್ಲಿಕಾಯಿ, ಚೂರಿಹಣ್ಣು. ಜಂಪೆಹಣ್ಣು, ಜೀರಿಗೆ ಹಣ್ಣು, ಮುಗ್ಗೆರೆ ಕಾಯಿ, ಕೊಟ್ಟೆ ಹಣ್ಣು,  ಪುನರ್ಪುಳಿ, ಕುಂಟಲ ಹಣ್ಣು..ಹೀಗೆ ಹಲವು ಹಣ್ಣುಗಳು! ಇವುಗಳನ್ನೆಲ್ಲ ಕೊಯ್ದು ಹೆಕ್ಕಿ ತಿನ್ನುತ್ತಾ ಸಾಗುವ ಖುಷಿಯೇ ಅನನ್ಯವಾದುದು.

ಇತ್ತೀಚೆಗೆ ತೀರ ಗ್ರಾಮೀಣ ಭಾಗ ಭಾಗದ ಗುಡ್ಡಬೆಟ್ಟುಗಳ ಸೆರಗಿನಡಿಯಲ್ಲಿರುವ ಮಾಳದ ಕೃಷಿಕರ ಮನೆಗೆ ಹೋಗಿದ್ದಾಗ ಅವರ ತೋಟದ ಬದಿಯಲ್ಲಿದ್ದ ಕುಂಟಲ ಮರದ ತುಂಬಾ ನೀರು ಹಣ್ಣುಗಳು ಕಂಡವು. ಹಲವು ವರ್ಷಗಳ ನಂತರ ಕುಂಟಲ ಹಣ್ಣು ಸವಿದು ನಾಲಿಗೆಯನ್ನು ನೀಲಿ ಮಾಡಿಕೊಂಡೆ. ಬಾಲ್ಯದ ನೆನಪುಗಳು ಮರುಕಳಿಸಿತು.

-ಬರಹ : ರಾಧಾಕೃಷ್ಣ ತೊಡಿಕಾನ

ಚಿತ್ರ: ಚಂದ್ರನಾಥ ಬಜಗೋಳಿ

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group