spot_img
Sunday, September 8, 2024
spot_imgspot_img
spot_img
spot_img

ಹತ್ತಿ ಬೆಳೆಯ ಬೆನ್ನು ಹತ್ತಿ ಯಶಸ್ಸು ಕಂಡ ಪ್ರಗತಿಪರ ಕೃಷಿಕನ ಯಶೋಗಾಥೆ ಇದು!

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಕಳೆದ ೪೦ ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡು ೬೦ ವರ್ಷದ ಶರಣಪ್ಪ ಕಿರಸೂರ ಪ್ರಗತಿಪರ ಕೃಷಿಕರು. ಅವರ ೨೮ ಎಕರೆ ಭೂಮಿಯಲ್ಲಿ ೬ ಎಕರೆ ಹತ್ತಿ ಬೆಳೆಯುತ್ತಿದ್ದಾರೆ. ವಾಣಿಜ್ಯ ಹಾಗೂ ಬಹುಬೇಡಿಕೆಯ ಬೆಳೆಯಾದ ಹತ್ತಿ ಇವರ ಪ್ರಧಾನ ಬೆಳೆ. ಆದರೆ ಇವರು ಹತ್ತಿಯಷ್ಟನೇ ನೆಚ್ಚಿಕೊಂಡವರಲ್ಲ. ಬಹುಬೆಳೆ ಪದ್ಧತಿಯನ್ನು ಅನುಸರಿಸಿಕೊಂಡು ಬಂದವರು. ಅಕ್ಷರದ ಶಿಕ್ಷಣ ದೊರೆತ್ತಿಲ್ಲವಾದರೂ ಕೃಷಿಕ್ಷೇತ್ರದ ಅನುಭವ ಪಾಂಡಿತ್ಯ ದೊಡ್ಡದು. ಇವರನ್ನು ಡಾ. ಜಿ. ಶರಶ್ಚಂದ್ರ ರಾನಡೆಯವರು ಭೇಟಿಯಾದಾಗ  ನಡೆಸಿದ ಕೃಷಿ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಹತ್ತಿ ಕೃಷಿಯನ್ನು ಕೈಗೊಳ್ಳಲು ಕಾರಣವೇನು?

ವಿಜಯಪುರದಲ್ಲಿನ ಕಪ್ಪು ಮಣ್ಣು ಹೆಚ್ಚು ತೇವಾಂಶ ಹಿಡಿದುಕೊಳ್ಳುವ ಜಿಗುಟುಗುಣ ಹೊಂದಿದೆ. ಸಾಕಷ್ಟು ಸಾವಯುವ ಗೊಬ್ಬರವನ್ನು ಒದಗಿಸಿ ಮೇಲ್ಮಣ್ಣು ಒದಗಿಸಿ ಕೊಚ್ಚಿ ಹೋಗುವುದನ್ನು ತಡೆಯಲು ಮತ್ತು ಮಣ್ಣಿನ ಪದರದಲ್ಲಿ ಗಾಳಿ ಹರಿದಾಡುವಂತೆ ಈ ಮಣ್ಣಿನಲ್ಲಿ ಉಳುಮೆ ಮಾಡುವ ಅವಕಾಶವಿರುವುದರಿಂದ ಹಾಗೂ ವಿಜಯಪುರದ ಹವಾಗುಣ ಹತ್ತಿಯ ಬೆಳೆಗೆ ಅನುಕೂಲವಾಗಿರುವುದರಿಂದ ಪ್ರಧಾನವಾಗಿ ಹತ್ತಿ ಕೃಷಿಯನ್ನು ಮಾಡುತ್ತಿದ್ದೇನೆ

ಯಾವ ತಳಿಯನ್ನು ಬೆಳೆಯುತ್ತಿದ್ದೀರಿ ಮತ್ತು ಇದೇ ತಳಿಯನ್ನು ಯಾಕೆ ಆಯ್ಕೆ ಮಾಡಿಕೊಂಡಿರಿ?

ನಾನು ಜಾದವ್ ತಡಿಯನ್ನು ಕಲಿ ಹತ್ತಿಯನ್ನು ಬೆಳೆಯುತ್ತಿದ್ದೇನೆ ಜಗವು ತಳಿಯ ಕೃಷಿಗೆ ಖರ್ಚು ಕಡಿಮೆ ಆದಾಯ ಹೆಚ್ಚು ಜಾಗವು ಕಾಟನ್ ಕಂಪನಿಯ ವಿಜಯಪುರದಲ್ಲಿ 2009 ರಿಂದ ಎಪಿಎಂಸಿ ಪಂಗಡ ಹತ್ತಿರ ಸ್ಥಾಪನೆಗೊಂಡಿದ್ದು ಅದೇ ಕಂಪನಿಯವರು ಪೂರ್ಣ ಮಾಜಿ ಅಕ್ಕಿಯನ್ನು ಕೊಂಡುಕೊಳ್ಳುವುದರಿಂದ ನಾನು ಜಾದವ್ ಹತ್ತಿಯನ್ನು ಬೆಳೆಯುತ್ತಿದ್ದೇನೆ

ನೀವು ಹತ್ತಿ ಬೀಜದ ಬಿತ್ತನೆ ಹೇಗೆ ಮಾಡುತ್ತೀರಾ?

ನಾನು ಪದ್ಧತಿಯಿಂದ ನಾಟಿ ಪದ್ಧತಿಯಿಂದ ಹಂಗಾಮಿನ ಸದುಪಯೋಗವಾಗಿ ಸುಮ್ಮನೆ ಬೇಸಾಯ ಆಡಬೇಕು ಅನುಕೂಲವಾದರೂ ಈ ಪದ್ಧತಿಯಿಂದ ನಿಗದಿತ ಪ್ರಮಾಣದಲ್ಲಿ ಪ್ರತಿ ಶಕ್ತಿಯನ್ನು ಕಾಪಾಡಿಕೊಂಡು ಅದಕ್ಕೆ ಯಾರಿಸಲು ಅಕ್ರಮ ಆರಂಭವಾಗುವ 15 ರಿಂದ 2೦ ದಿನ ಉಚಿತವಾಗಿ ಒಂದು ಇಷ್ಟು ಒಂದು ಅನುಪಾತದಲ್ಲಿ ಮಣ್ಣು ಮತ್ತು ಕಲಿತು ಗೊಬ್ಬರ ತುಂಬಿ ಹಾಕಿ ಮಾಡಿದ ಹಾಗೆ ಮಾಡಿದ ಕ್ವಾಲಿಟಿ ಚೀಲದಲ್ಲಿ ಹತ್ತಿ ಬೀಜಗಳನ್ನು ಬಿತ್ತನೆ ಮಾಡಬೇಕು 25 ರಿಂದ 3೦ ದಿನಗಳ ಅವಧಿಯ ಸಸಿಗಳನ್ನು ಹದವಾದ ಮಳೆಯಾದ ತಕ್ಷಣ ಅಥವಾ ಮಳೆ ಇಲ್ಲದಿದ್ದಲ್ಲಿ ನೀರನ್ನು ಹಾಯಿಸಿ ಸಸಿಗಳನ್ನು 60*6೦ ಸೆ.ಮೀ ಅಥವಾ 6೦*6೦ ಸೆ.ಮೀ. ಅಂತರದಲ್ಲಿ ನಾಟಿ ಮಾಡುವುದರಿಂದ ಅಧಿಕ ಇಳುವರಿ ಪಡೆಯಬಹುದು.

 ಹತ್ತಿಯನ್ನು ಬೆಳೆಯಲು ಯಾವ ವಿಧಾನವನ್ನು ಅನುಸರಿಸುತ್ತೀರಿ?

ಒಣ ಮಣ್ಣಿನಲ್ಲಿ ಬಿತ್ತನೆಯನ್ನು ಶಿಫಾರಸ್ಸು ಮಾಡಿದ ಅಂತರದಲ್ಲಿ ಹಾರೆಯ ಸಹಾಯದಿಂದ ಆಳದ ಗುಣಿಗಳನ್ನು ತೆಗೆದು ಅದರಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರವನ್ನು ಹಾಕಿ ನಂತರ ಅರ್ಧ ಲೀಟರ್ ನೀರು ಹಾಕಬೇಕು. ಬೀಜವನ್ನು ಐದು ಸೆ.ಮೀ ಆಳದಲ್ಲಿ ಬಿತ್ತನೆ ಮಾಡಬೇಕು. ಮೇ ತಿಂಗಳ ಮೊದಲ ವಾರದಲ್ಲಿ ಬಿತ್ತಿದರೆ ಉತ್ತಮ.

ಹತ್ತಿ ಬೆಳೆಯಲು ಯಾವ ರಸ ಗೊಬ್ಬರ ಬಳಸುತ್ತೀರಿ?

ನಾನು ಬೆಳೆಯುತ್ತಿರುವುದು ಜಾಧವ್ ಎಂಬ ಹೈಬ್ರಿಡ್ ತಳಿ ಆದರೂ ತಿಪ್ಪೆ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ಬಳಸುತ್ತಿದ್ದೇನೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸುವುದಿಲ್ಲ.

ಯಾವ ರೀತಿ ನೀರಿನ ಸೌಲಭ್ಯ ಒದಗಿಸುತ್ತಿದ್ದೀರಿ?

ಹನಿ ನೀರಾವರಿ ಪದ್ಧತಿ ಅನುಸರಿಸುತ್ತೇನೆ. ಇದಕ್ಕಾಗಿ ಎರಡು ಲಕ್ಷ ರೂ ವೆಚ್ಚದಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದೇನೆ. ನಳಿಕೆಗಾಗಿ 5೦ಸಾವಿರ ವೆಚ್ಚ ಮಾಡಿರುತ್ತೇನೆ. ಈ ಪದ್ಧತಿಯಿಂದ ಶೇ.೫೦ರಷ್ಟು ನೀರಿನ ಉಳಿತಾಯ ಮಾಡಬಹುದು. ಹನಿ ನೀರಾವರಿ ಪದ್ಧತಿಯಿಂದ ಖರ್ಚು ಹೆಚ್ಚಾದರೂ ನೀರಿನ ಉಳಿತಾಯದಿಂದ ನೀರಾವರಿ ಕ್ಷೇತ್ರವನ್ನು ದ್ವಿಗುಣಗೊಳಿಸಿ ಇದರ ವೆಚ್ಚವನ್ನು 3-4 ವರ್ಷಗಳಲ್ಲಿ ಮರಳಿ ಪಡೆಯಬಹುದು. ಹನಿ ನೀರಾವರಿಯಿಂದ ವಿದ್ಯುತ್, ರಸಗೊಬ್ಬರ, ಕಾರ್ಮಿಕರ ಕೆಲಸಗಳ ವೆಚ್ಚ ಕಡಿಮೆಯಾಗುತ್ತದೆ

.ಹತ್ತಿ ಬೆಳೆಗೆ ತಗಲುವ ಖರ್ಚು-ವೆಚ್ಚ ಮತ್ತು ಆದಾಯ

ಹತ್ತಿ ಬೆಳೆಯಲು ಗೊಬ್ಬರಕ್ಕೆ 3,೦೦೦ರೂ ಕೀಟನಾಶಕಕ್ಕೆ ೩೦೦೦ರೂ ಖರ್ಚು ಮಾಡಿದರೆ ಬಿತ್ತನೆ ಬೀಜ, ನಾಟಿ ಹಾಗೂ ಇತರ ಖರ್ಚು ವೆಚ್ಚಗಳಿವೆ. ಹತ್ತಿಯಿಂದ ಪ್ರತೀ ಎಕರೆಗೆ 15೦೦-16೦೦ ಕೆಜಿ ಇಳುವರಿ ಬರುತ್ತಿದೆ. ಆರು ಎಕರೆಗೆ ಸುಮಾರು 9೦ ಸಾವಿರ ಆದಾಯ ಬರುತ್ತಿದೆ.

ಕೀಟಗಳ ಹಾವಳಿಯಿಂದ ಹತ್ತಿಯನ್ನು ಹೇಗೆ ರಕ್ಷಿಸುತ್ತೀರಿ?

25 ದಿನದ ಚೆಂಡು ಹೂವಿನ ಸಸಿಗಳನ್ನು ಅಥವಾ ಬೇಗ ಮಾಗುವ ತೊಗರಿ ತಳಿಯನ್ನು ಹೊಲದ ಸುತ್ತಲೂ ಹತ್ತಿಹೂ ಬಿಡುವ ಸಮಯದಲ್ಲಿ ನೆಟ್ಟು ಇವುಗಳ ಮೇಲೆ ಇಡುವ ತತ್ತಿಗಳನ್ನು ನಾಶಪಡಿಸಲು ತತ್ತಿನಾಶಕಗಳನ್ನು ಸಿಂಪಡಿಸುತ್ತೇನೆ. ಬೆಳೆಯ ಮೊದಲ ಹಂತದಲ್ಲಿ 6೦ ದಿನಗಳವರೆಗೆ ಕೀಟನಾಶಕಗಳನ್ನು ಸಿಂಪಡಿಸಲು ಕೈ ಚಾಲಿತ ಪಂಪುಗಳನ್ನು ಮತ್ತು ಪವರ್ ಸ್ಪೆçÃಯರ್‌ಗಳನ್ನು ಉಪಯೋಗಿಸುತ್ತೇನೆ

ಹತ್ತಿ ಕೊಯ್ಲು ಮತ್ತು ಇಳುವರಿ ಹಾಗೂ ಮಾರಾಟ

ಹತ್ತಿಯನ್ನು ಎಪ್ರಿಲ್-ಮೇ ತಿಂಗಳಲ್ಲಿ ಬಿತ್ತಿ ಡಿಸೆಂಬರ್- ಜನವರಿ ತಿಂಗಳಲ್ಲಿ ಕಟಾವು ಮಾಡುತ್ತೇನೆ. ಚಕ್ಕಡಿ ಅಥವಾ ಟ್ರಾö್ಯಕ್ಟರ್ ಮೂಲಕ ಹತ್ತಿಯನ್ನು ವಿಜಯಪುರ ಎಪಿಎಂಸಿ ಪ್ರಾಂಗಣಕ್ಕೆ ಒಯ್ದು ಮಾರುತ್ತೇನೆ. ದಲಾಲಿ ಮತ್ತು ತಾವು ನೀಡುವ ಹಣದ ಬಡ್ಡಿಯನ್ನು ಸೇರಿಸಿ ಖರ್ಚುವೆಚ್ಚ ಎಂದು 1೦೦ಕ್ಕೆ 1೦ರೂವಿನಂತೆ ವಸೂಲಿ ಮಾಡುತ್ತಾರೆ. ಇನ್ನು ಮಾರುಕಟ್ಟೆ ಶುಲ್ಕ ಅಸರಲ್ಲೇ ಸೇರಿ ಹೋಗುತ್ತದೆ. ಏ ದುಬಾರಿ ದಲಾಲಿ ಬಗ್ಗೆ ಎಪಿಎಮ್‌ಸಿ ಅಧಕಾರಿಗಳು ಕ್ರಮ ಕೈಗೊಳ್ಳಬೇಕು.

ಹತ್ತಿಯ ಜತೆ ಅಂತರ ಬೆಳೆಯಾಗಿ ಯಾವ ಯಾವ ಬೆಳೆಯನ್ನು ಬೆಳೆಯುತ್ತೀರಾ

ಹತ್ತಿಯ ಜೊತೆಗೆ ಐದು ಎಕರೆಯಲ್ಲಿ ಕಬ್ಬು, ಐದು ಎಕರೆಯಲ್ಲಿ ಸೂರ್ಯಪಾನ, ಐದು ಎಕರೆಯಲ್ಲಿ ಮೆಕ್ಕೆ ಜೋಳ ನಾಲ್ಕು, ಶೇಂಗಾ ಒಂದು ಎಕರೆ,ನವಣೆ 6ಎಕರೆ ಮತ್ತು ಬಾಳೆ 4 ಎಕರೆ ಬೆಳೆಯುತ್ತಿದ್ದೇನೆ

ಬೇರೆ ಯಾವ ವಾಣಿಜ್ಯ ಬೆಳೆಯನ್ನು ಬೆಳೆಯುತ್ತಿದ್ದೀರಿ

6 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯುತ್ತಿದ್ದು 2.50 ಲಕ್ಷ ಆದಾಯ ಬಂದಿದೆ. ಹುಣಿಸೆ ಮರಮತ್ತು ತೆಂಗಿನ ಮರಗಳೂ ಹೊಲದಲ್ಲಿವೆ. ಇದಲ್ಲದೆ ವಾಣಿಜ್ಯ ಹಾಗೂ ಆಹಾರ ಬೆಳೆಗಳ ಜೊತೆಗೆ ಮನೆಗೆ ಬೇಕಾಗುವ ಪಾಲಕ್, ಟೊಮೆಟೋ, ಬೆಳ್ಳುಳ್ಳಿ, ಕೊತ್ತಂಬರಿ, ಅತ್ತರಕಿಸೊಪ್ಪು, ಸೌತೆಕಾಯಿ, ಬೆಂಡೆಕಾಯಿ, ಹಸಿಮೆಣಸಿನಕಾಯಿ, ಚವಳಿಕಾಯಿಗಳನ್ನು ಬೆಳೆಯುತ್ತೇನೆ.

ಮುಂಗಾರು ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದ ಬೆಳೆ ಹಾನಿ ಆಗಿದೆಯಾ

ಹೌದು. ಸೂರ್ಯಕಾಂತಿ, ಮೆಕ್ಕೆಜೋಳ, ಈರುಳ್ಳಿ ಮತ್ತು ನವಣೆ ಬೆಳೆ ಹಾಳಾಗಿದೆ

ರಾಜ್ಯ ಸರಕಾರದ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಅನುಕೂಲವಾಗಿದೆಯಾ

ರಾಜ್ಯದ ಹೊಸ ಕೃಷಿ ಮಾರಾಟ ಕಾಯಿದೆಯಿಂದ ರೈತರಿಗೆ ತಮ್ಮ ಹೊಲದಲ್ಲಿ ಉತ್ಪನ್ನಗಳನ್ನು ಮಾರುವ ಅವಕಾಶ ಸಿಕ್ಕಿಎ. ಸಾಗಾಣಿಕೆ ವೆಚ್ಚ, ಕೂಲಿ, ಪ್ಯಾಕಿಂಗ್, ದಾಸ್ತಾನು, ವೆಚ್ಚ ಎಲ್ಲಾ ಉಳಿಯುತ್ತದೆ. ಮುಖ್ಯವಾಗಿ ದಲ್ಲಾಲರು ವಿಧಿಸುವ ಕಾನೂನು ಬಾಹಿರವಾದ ಅಂದರೆ ನೂರಕ್ಕೆ ಶೇಕಡ ಹತ್ತರ ದರದಿಂದ ಮುಕ್ತಿ ಸಿಗುತ್ತದೆ. ಈ ತಿದ್ದುಪಡಿ ರೈತರ ಪರವಾಗಿಯೇ ಇದೆ

ಸರಕಾರ ಅಥವಾ ಬ್ಯಾಂಕಿನಿಂದ ಯಾವುದಾದರೂ ಸೌಲಭ್ಯ ಪಡೆದಿದ್ದೀರಾ?

ಇಲ್ಲ; ನಾನು ಸ್ಥಳೀಯ ರೈತ ಸಂಘದ ಮುಖಂಡನಾಗಿದ್ದು ನನ್ನ ಜೊತೆಗಾರ ಅರ್ಹ ರೈತರಿಗೆ ಸೌಲಭ್ಯವನ್ನು ಕೊಡಿಸುತ್ತಿದ್ದೇನೆ. ನಾನು ಆರ್ಥಿಕ ಸಂಪನ್ಮೂಲವನ್ನು ಕೂಡಿಸಿಕೊಂಡು ಕೃಷಿ ಮಾಡುತ್ತಾ ಬಂದಿರುತ್ತೇನೆ. ತನ್ನ ಆದಾಯ, ಖರ್ಚುವೆಚ್ಚಗಳ ಮಿತಿಯಲ್ಲಿ ರೈತ ಕಾರ್ಯನಿರ್ವಹಿಸಿದರೆ ಸಾಲ ಮಾಡಬೇಕಾದ ಅವಶ್ಯಕತೆಯೇ ಬೀಳುವುದಿಲ್ಲ. ನಾನು ಯಾವುದೇ ಸಾಲ ಪಡೆದು ಕೃಷಿ ಮಾಡುತ್ತಿಲ್ಲ

ನೀವು ಕೃಷಿ ಇಲಾಖೆಯ ಮಾರ್ಗದರ್ಶನ ಪಡೆಯುತ್ತಿದ್ದೀರಾ?

ಇಲ್ಲ; ಕೃಷಿ ಇಲಾಖೆಯವರೇ ನನ್ನನ್ನು ಕರೆಸಿಕೊಂಡು ಮಾರ್ಗದರ್ಶನ ಪಡೆಯುತ್ತಿದ್ದಾರೆ. ನಾನೇ ನನ್ನ ಅನುಭವನ್ನು ಕೃಷಿ ಇಲಾಖೆಯವರಿಗೆ ನೀಡುತ್ತಿದ್ದೇನೆ.

ರೈತರಿಗೆ ನಿಮ್ಮ ಸಂದೇಶವೇನು?

ರೈತರು ಯಾವಾಗಲೂ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಆಗ ಒಂದು ಬೆಳೆಯಿಂದ ನಷ್ಟವಾದರೆ ಮತ್ತೊಂದು ಬೆಳೆಯಿಂದ ರೈತ ಸುಧಾರಿಸಿಕೊಳ್ಳಬಹುದು. ಆಹಾರ ಧಾನ್ಯ, ತೋಟಗಾರಿಕೆ ವಾಣಿಜ್ಯ ಬೆಳೆ, ತರಕಾರಿ ಬೆಳೆ, ಸಿರಿಧಾನ್ಯಗಳು ಹೀಗೆ ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ನನ್ನಂತೆ ರೈತರು ಸಾಲ ಮಾಡದೆ ಕೃಷಿ ಮಾಡಬಹುದು. ನಾನು ಕುರಿ, ಹಸುಗಳನ್ನು ಸಾಕಿದ್ದೇನೆ. ಕುರಿಗಳನ್ನು ಮಾರಿ ಆದಾಯ ಗಳಿಸುತ್ತೇನೆ. ಹಸುವಿನಿಂದ ಹಾಲು ಪಡೆದು ಮನೆಗೆ ಉಪಯೋಗಿಸಿ ಹೆಚ್ಚಾದುದನ್ನು ಮಾರುತ್ತಿದ್ದೇನೆ. ಈ ರೀತಿ ರೈತರು ಜಾಣ ಕೃಷಿಕರಾಗಿ ಜಾಣ ಮಾರಾಟಗಾರ ಆದರೆ ರೈತರು ತಾವು ಬೆಳೆದು ದೇಶವನ್ನೂ ಉಳಿಸಬಹುದು.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group