spot_img
Sunday, September 8, 2024
spot_imgspot_img
spot_img
spot_img

ಕಾರ್ಕಳ ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ

ಕಾರ್ಕಳ: ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲ್ಲೂಕು ಸಮಿತಿ ಮಾಸಿಕ ಸಭೆ ದಿನಾಂಕ ಜು.೧  ರಂದು ಸಂಘದ ಕಿಸಾನ್ ಸಂಘದ ಕಾರ್ಯಾಲಯದಲ್ಲಿ ಅಧ್ಯಕ್ಷರಾದ  ಗೋವಿಂದ ರಾಜ್ ಭಟ್ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ಭಟ್ ಇರ್ವತ್ತೂರು ಮಾತನಾಡಿ, ರಾಜ್ಯಮಟ್ಟದಲ್ಲಿ ಅಭ್ಯಾಸ ವರ್ಗಗಳು ನಡೆಯುತ್ತಿದ್ದು, ನಮ್ಮ ಜಿಲ್ಲೆಯಲ್ಲಿಯೂ ಅಭ್ಯಾಸವರ್ಗಗಳನ್ನು ನಡೆಸುವ ಉದ್ದೇಶವಿದೆ. ಆ ಪ್ರಕಾರ ಆಗಸ್ಟ್ ತಿಂಗಳಲ್ಲಿ ಕಾರ್ಕಳ ತಾಲೂಕಿನ ಅಭ್ಯಾಸವರ್ಗವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆ, ಪ್ರಾಂತ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸಿ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಕೃಷಿ ಪೂರಕ ಉತ್ಪನ್ನಗಳನ್ನು ಉತ್ಪಾದಿಸುವ ಸಂಸ್ಥೆಯ ಪ್ರತಿನಿಧಿಗಳು ಸಾವಯವ ಕೃಷಿ ಪದ್ಧತಿಗೆ ಪೂರಕವಾದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.

ಗೋವಿಂದರಾಜ ಭಟ್ ಮಾತನಾಡಿ, ಪ್ರಸಕ್ತ ನಮ್ಮ ಜಿಲ್ಲೆಯಲ್ಲಿ ವಾಡಿಕೆಗಿಂತ ವಿಪರೀತ ಕಡಿಮೆ ಮಳೆಯಾಗುತ್ತಿದೆ. ಅಲ್ಲದೆ ಮಳೆಗಾಲವು ತುಂಬಾ ತಡವಾಗಿ ಪ್ರಾರಂಭವಾದ ಕಾರಣ ಎಲ್ಲಾ ಕೃಷಿ ಚಟುವಟಿಕೆಗಳು ತೀವ್ರ ಹೊಡೆತ ಅನುಭವಿಸಿದೆ. ತೆಂಗಿನ ಕಾಯಿ ಬೆಲೆ ಪಾತಾಳಕ್ಕೆ ಕುಸಿದಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇರಿಸಿ ಜಿಲ್ಲೆಯ ರೈತರಿಗೆ ಒಂದು ವಿಶೇಷ ಪ್ಯಾಕೇಜನ್ನು ಸರಕಾರ ಘೋಷಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದವರಿಗೆ ರೈತರ ಸಮಸ್ಯೆಯ ವಿಸ್ತೃತ ವರದಿಯನ್ನು ನೀಡಲಾಗುವುದು ಎಂದರು.

ಈ ಸಭೆಯಲ್ಲಿ ಉಪಾಧ್ಯಕ್ಷರಾದ ಸುಂದರ ಶೆಟ್ಟಿ, ಖಜಾಂಚಿ ಹರೀಶ್ ಕಲ್ಯಾ, ಶೈಲೇಶ್ ಮರಾಠೆ ಈದು, ಕರುಣಾಕರ ಶೆಟ್ಟಿ ಬೋಳಾ,, ಗ್ರಾಮ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರ್ವಹಿಸಿದರು.

(ರಾಜ್ಯದೆಲ್ಲಡೆ ಇರುವ ಕೃಷಿ ಸಂಘ-ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮ, ಸಭೆ ಮೊದಲಾದ ಕಾರ್ಯಕ್ರಮಗಳ ಸುದ್ದಿಗಳನ್ನು ಕೃಷಿಬಿಂಬಕ್ಕೆ ಕಳುಹಿಸಿಕೊಡಿ. ಕೃಷಿಬಿಂಬ ಸುದ್ದಿ ಜಾಲತಾಣದಲ್ಲಿ ಪ್ರಕಟಿಸುತ್ತೇವೆ. ಸುದ್ದಿಯ ಜೊತೆಗೆ ಉತ್ತಮ ಗುಣಮಟ್ಟದ ಛಾಯಾಚಿತ್ರ ಕೂಡ ಇರಲಿ ವಾಟ್ಸಾಪ್ ಸಂಖ್ಯೆ-7483419099 ಇ-ಮೇಲ್[email protected])

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group