spot_img
Tuesday, September 17, 2024
spot_imgspot_img
spot_img
spot_img

ಅಡಿಕೆ ತೆಂಗು ಸುಲಿಯಲು ಇಲ್ಲಿವೆ ಸರಳ ಉಪಕರಣಗಳು

-ರಾಧಾಕೃಷ್ಣ ತೊಡಿಕಾನ

ಕೃಷಿಕರಿಗೆ ಕೃಷಿಕಾಯಕದಲ್ಲಿ ತೊಡಗಿಕೊಳ್ಳಲು ಕೃಷಿ ಯಂತ್ರೋಪಕರಣಗಳು ಅವಶ್ಯ. ಕೃಷಿಕಾರ್ಮಿಕರ ಕೊರತೆಯ ಈ ದಿನಗಳಲ್ಲಿ ಸಣ್ಣ ಸಣ್ಣ ಉಪಕರಣಗಳು ಹೆಚ್ಚು ಉಪಯುಕ್ತ. ಇದನ್ನು ಮನಗಂಡು ಹಲವರು ಸಣ್ಣಪುಟ್ಟ ಕೃಷಿ ಉಪಕರಣಗಳನ್ನು ತಯಾರಿಸಿದ್ದಾರೆ. ಹಳ್ಳಿ ಮೂಲೆಯಲ್ಲಿ ಇದ್ದುಕೊಂಡೇ   ರೈತರಿಗೆ ಉಪಯುಕ್ತವಾಗುವ ಉಪಕರಣಗಳನ್ನು ತಯಾರಿಸುತ್ತಿರುವವರಲ್ಲಿ ವೇಣೂರಿನ ಜಾನ್ ಡಿಸೋಜ ಪ್ರಮುಖರು

ಕಾಡುಪ್ರಾಣಿ ಮತ್ತು ಮಂಗಗಳನ್ನು ಬೆದರಿಸಿ ಓಡಿಸುವ ಮಾಸ್ಟರ್ ಗನ್, ಪಿಸ್ತೂಲು, ಸುಲಭವಾಗಿ ಅಡಿಕೆ ಮರವೇರಬಹುದಾದ ಟ್ರೀ ಸೈಕಲ್, ಹೊಗೆರಹಿತವಾದ ಒಲೆಗಳು, ಮೊದಲಾದವುಗಳಲ್ಲದೆ ಹಳೆಯ ಯಂತ್ರೋಪಕರಣಗಳಿಗೆ ಹೊಸ ರೂಪ ನೀಡಿ ಗಮನ ಸೆಳೆದವರು. ಈಗ ಮತ್ತೆರಡು ಹೊಸ ಉಪಕರಣಗಳನ್ನು ರೈತರಿಗೆ ಪರಿಚಯಿಸಿದ್ದಾರೆ.

ಅಡಿಕೆ ಸುಲಿಯುವ ಯಂತ್ರ

ಅಡಿಕೆ ಸುಲಿಯುವುದಕ್ಕೆ ಕೌಶಲ ಬೇಕು. ಅದಕ್ಕಾಗಿಯೇ ನುರಿತವರು ಇದ್ದಾರೆ. ಅಡಿಕೆ ಸುಲಿಯುವುದೇ ಅವರ ಕಾಯಕ. ಅಡಿಕೆಗೆ ಬೆಲೆ ಏರಿದರೆ ಕೂಡಲೇ ಸುಲಿದು ಮಾರಾಟ ಮಾಡಬೇಕು. ಏಕಕಾಲದಲ್ಲಿ ಎಲ್ಲರೂ ಅಡಿಕೆ ಸುಲಿಯುವ ತರಾತುರಿಯಲ್ಲಿರುವುದರಿಂದ ನುರಿತ ಕೆಲಸಗಾರರು ಒಮ್ಮೆಲೆ ಸಿಗುವುದು ಕಷ್ಟ. ಈ ಹಿನ್ನಲೆಯಲ್ಲಿ ಜಾನ್ ಡಿಸೋಜ ಅವರು ತನ್ನದಾದ ಚಿಂತನೆಯಲ್ಲಿ ಅಡಿಕೆ ಸುಲಿಯುವ ಸುಲಭ ಯಂತ್ರವನ್ನು ತಯಾರಿಸಿದ್ದಾರೆ.

ಕಬ್ಬಿಣದಿಂದ ತಯಾರಾದ ಇದಕ್ಕೆ ಸ್ಟೆöÊನ್‌ಲೆಸ್ ಸ್ಟೀಲಿನ ಬ್ಲೇಡುಗಳು. ಮರದ ಹಿಡಿಕೆ. ಅದಕ್ಕೆ ಉತ್ತಮ ಮರದ ತಳಕಟ್ಟು ಇದೆ. ಮಕ್ಕಳಿಂದ ವೃದ್ಧರವರೆಗೆ ಯಾರಾದರೂ ಸುಲಭವಾಗಿ ಅಡಿಕೆ ಸುಲಿಯಬಹುದು. ಸಣ್ಣ ಬೆಳೆಗಾರರಿಗೆ ಈ ಯಂತ್ರವೊAದಿದ್ದರೆ  ಹೆಚ್ಚು ಅನುಕೂಲ. ಕೆಲಸಗಾರರನ್ನು ಆವಲಂಭಿಸಬೇಕಿಲ್ಲ.  ಆರಂಭದಲ್ಲಿ ಸುಮಾರು 3೦ ಕೆಜಿ, ಅಭ್ಯಾಸವಾದ ನಂತರ ದಿನಕ್ಕೆ 7೦ ಕೆಜಿವರೆಗೂ ಇದರಲ್ಲಿ ಸುಲಿಯಬಹುದು. ಟೇಬಲ್ ಮೇಲಿರಿಸಿ ಅಥವಾ ಅಳವಡಿಸಿ ನಿಂತುಕೊAಡೇ ಸುಲಿಯಬಹುದು.  ನಿಂತು ಆಯಾಸವಾದರೆ ಕುಳಿತುಕೊಂಡು ಕೂಡಾ ಸುಲಿಯಬಹುದು. ಅಡಿಕೆ ಸುಲಿಯುವ ವೃತ್ತಿಪರರೂ ಬಳಸಿಕೊಳ್ಳಬಹುದು. ಜಾನ್ ಡಿಸೋಜ ಅವರು  ಈಗಾಗಲೇ ಬಹಳಷ್ಟು ಯಂತ್ರವನ್ನು ಮಾರಾಟ ಮಾಡಿದ್ದಾರೆ. ಇದರ ಬೆಲೆ 15೦೦ ರೂಪಾಯಿ. ಕಡಿಮೆ ದರದಲ್ಲಿ ರೈತರಿಗೆ ನೀಡುವುದರಿಂದ ಹೆಚ್ಚು  ಬೇಡಿಕೆಯೂ ಇದೆ. ದೀರ್ಘಾವಧಿಯವರೆಗೆ ಬಾಳಿಕೆ ಬರುತ್ತದೆ ಎನ್ನುತ್ತಾರೆ ಜಾನ್ ಡಿಸೋಜ

ತೆಂಗಿನಕಾಯಿ ಸುಲಿಯುವ ಯಂತ್ರ ಇದಲ್ಲದೆ ತೆಂಗಿನಕಾಯಿಯನ್ನು ಸುಲಿಯುವ ಸುಧಾರಿತ ಯಂತ್ರವನ್ನು ತಯಾರಿಸಿದ್ದಾರೆ. ಇದರಲ್ಲಿ ಯಂತ್ರದ ಸೀಟಿನ ಮೇಲೆ ಕುಳಿತು ಅದರ ಪೆಡಲ್ ತುಳಿದರೆ ಆಯಿತು. ಆರಾಮವಾಗಿ ತೆಂಗಿನಕಾಯಿ ಸುಲಿಯಲಾಗುತ್ತದೆ. ದಿನಕ್ಕೆ ಸುಮಾರು 7೦೦ವರೆಗೂ ಸುಲಿಯಬಹುದು. ಮಕ್ಕಳಿಂದ ಹಿರಿಯರ ವರೆಗೆ ಯಾರೂ ಬೇಕಾದರೂ ತ್ರಾಸವಿಲ್ಲದಂತೆ ಸುಲಿಯಬಹುದು. ಇದರ ಬೆಲೆ ರೂ. 2೦೦೦.

ಹಲಸಿನ ಉತ್ಪನ್ನಗಳನ್ನು ತಯಾರಿಸುವವರಿಗೆ ಹಲಸಿನ ಕಾಯಿಗಳನ್ನು ತುಂಡರಿಸಿ ಭಾಗಗಳನ್ನಾಗಿಸುವ ಉಪಕರಣಗಳನ್ನು ತಯಾರಿಸಿದ್ದಾರೆ. ಇದರ ಬೆಲೆ ರೂ. 3೦೦೦. “ಮಾಸ್ಟರ್” ಎಂಬ ಹೆಸರಿನಡಿಯಲ್ಲಿ ಈ ಉಪಕರಣಗಳು ಮಾರುಕಟ್ಟೆಯಲ್ಲೂ ಲಭ್ಯವಿದೆ. ಮಾಹಿತಿಗೆ ಮೊ. 9972267471

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group