spot_img
Friday, October 18, 2024
spot_imgspot_img
spot_img
spot_img

ಪಾರಂಪರಿಕ ಹಣ್ಣು, ಬೇಲದ ಹಣ್ಣು: ಬೇಲದ ಹಣ್ಣಿನ ಕೃಷಿಯಲ್ಲಿದೆ ಅಗಾಧ ಅವಕಾಶ!

ನಾವು ಸೇವಿಸುವ ಆಹಾರವು ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿದ್ದರೆ ರಕ್ತದೊತ್ತಡ, ಹೃದಯ ಸಮಸ್ಯೆ, ಲಕ್ವಾ, ಕ್ಯಾನ್ಸರ್, ಶೀತ, ಕೆಮ್ಮು, ನೆಗಡಿ, ಮೈ ಕೈ ನೋವು, ಜ್ವರ, ತಲೆನೋವು, ಬೊಜ್ಜು, ಹಲ್ಲಿನ ಸಮಸ್ಯೆ, ಕಣ್ಣು ನೋವು, ಕಿಡ್ನಿ ಸಮಸ್ಯೆ, ಚರ್ಮ ಸಮಸ್ಯೆ, ಅಜೀರ್ಣ, ಮಲಬದ್ಧತೆ, ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್, ಕಾಲು ಎಳೆತ, ಸುಸ್ತು, ತಲೆ ಸುತ್ತು ಮುಂತಾದ ಕಾಯಿಲೆಗಳಿಂದ ದೂರವಿರಲು ಆರೋಗ್ಯವನ್ನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ ಎಂಬುದು ವಿದ್ಯಾವಂತರಿಗೆ, ಅನುಭವಸ್ಥರಿಗೆ ತಿಳಿದ ವಿಷಯವೇ ಆಗಿದೆ. ಎಚ್ಚರಿಕೆಯ ವಿಷಯವೆಂದರೆ ಹಣ್ಣುಗಳು ತಾಜಾ ಆಗಿರಬೇಕು. ಕೀಟನಾಶಕಗಳ ಅಂಶವಿರಬಾರದು ಮತ್ತು ಫ್ರಿಜ್ಜಿನಲ್ಲಿ ಇಟ್ಟಿರಬಾರದು. ಎಲ್ಲಾ ತರಹದ ಹಣ್ಣುಗಳು ತಮ್ಮವೇ ಆದಂತಹ ವಿಶಿಷ್ಟವಾದ ರೋಗಗಳನ್ನು ನಿಯಂತ್ರಿಸುವ ಶಕ್ತಿಯನ್ನು ಒಳಗೊಂಡಿರುತ್ತದೆ. ವಿವಿಧ ರೀತಿಯ ಜೀವಸತ್ವಗಳನ್ನು ಖನಿಜಾಂಶಗಳನ್ನು ಆಂಟಿ-ಆಕ್ಸಿಡೆಂಟ್‌ಗಳನ್ನು, ಫೈಟೋರಸಾಯನಿಕಗಳನ್ನು ಒಳಗೊಂಡಿರುತ್ತವೆ. ಆಯಾ ಋತುಮಾನದ ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು. ಅಂತಹ ಹಣ್ಣುಗಳಲ್ಲಿ ಬೇಲದ ಹಣ್ಣನ್ನು ಇಲ್ಲಿ ಹೆಸರಿಸಬಹುದು. ಬೇಲದ ಹಣ್ಣು ಶುದ್ಧ ಬೆಲ್ಲ ದೊಂದಿಗೆ ಒಳ್ಳೆಯ ಸಂಯೋಜನೆ ಆಗುತ್ತದೆ

ಬೇಲದ ಹಣ್ಣಿನ ಮೂಲ ಭಾರತ ದೇಶವಾಗಿದೆ. Wood Apple, Elephant Apple, Monkey Fruit  ಎಂದು ಇಂಗ್ಲೀಷಿನಲ್ಲಿ ಕರೆಯುತ್ತಾರೆ. ಬೇಸಿಗೆಯಲ್ಲಿ ತೊಟ್ಟು ಕಳಚಿ ಬೇಲದ ಹಣ್ಣುಗಳು ಕೆಳಕ್ಕೆ ಬೀಳುತ್ತವೆ. ಸಸ್ಯಹಾರಿ ಪ್ರಾಣಿಗಳಲ್ಲಿ ಬಲಶಾಲಿಯಾದ ಆನೆಗಳಿಗೆ ಬೇಲದ ಹಣ್ಣು ಎಂದರೆ ಬಹಳ ಇಷ್ಟ. ಆದ್ದರಿಂದ ಇದನ್ನು ಎಲಿಫೆಂಟ್ ಆ್ಯಪಲ್ ಎಂದು ಕರೆಯುತ್ತಾರೆ. ಬೇಲದ ಹಣ್ಣುಗಳ ಮರ ದೊಡ್ಡದಾಗಿರುತ್ತದೆ. ಎತ್ತರಕ್ಕೆ ಬೆಳೆಯುತ್ತದೆ. ಸೇಬು ಹಣ್ಣಿನಲ್ಲಿರುವಂತೆ ಅನೇಕ ಪೋಷಕಾಂಶಗಳು, ಖನಿಜಾಂಶಗಳು, ಉತ್ಕರ್ಷ ನಿರೋಧಕಗಳು ಈ ಹೆಣ್ಣಿನಲ್ಲಿರುತ್ತವೆ. ಪಾಸ್ಫೋರಸ್, ಸೋಡಿಯಂ, ಪೊಟ್ಯಾಶಿಯಂ, ಮ್ಯಾಂಗನೀಸ್, ವಿಟಮಿನ್-ಸಿ ಗಳನ್ನು ಬೇಲದ ಹಣ್ಣು ಒಳಗೊಂಡಿರುತ್ತದೆ. ಲಿಮೊನಿಯಾ ಅಸಿಡೆಸ್ಸಿಮಾ ಎಂಬುದು ಇದರ ವೈಜ್ಞಾನಿಕ ಹೆಸರು. ರುಟೇಶಿಯಾ ಕುಟುಂಬಕ್ಕೆ ಇದು ಸೇರಿದೆ.

ಬೇಲ ಹಣ್ಣಾದಾಗ ತೊಟ್ಟಿನ ಬಳಿ  ಅಂಟು ಬರುತ್ತದೆ. ಆಕರ್ಷಣೀಯ ಸುವಾಸನೆ ಬರುತ್ತದೆ. ಇದನ್ನು ಫಂಕಿಸ್ಮೆಲ್ ಎಂದು ಕರೆಯುತ್ತಾರೆ. ಶುದ್ಧವಾದ ಬೆಲ್ಲ ಮತ್ತು ಬೇಲದ ಹಣ್ಣಿನ ತಿರುಳು ಬಳಸಿ ಪಾನಕ ತಯಾರಿಸಿ ಕುಡಿಯುತ್ತಾರೆ. ಈ ಪಾನಕಕ್ಕೆ ಸ್ವಲ್ಪ ಕಾಳುಮೆಣಸು, ಉಪ್ಪು, ಏಲಕ್ಕಿ, ಕೆಲವರು ಆರೋಗ್ಯ ದೃಷ್ಟಿಯಿಂದ ಬಳಸುತ್ತಾರೆ. ಬೇಲದ ಹಣ್ಣನ್ನು ಮಧುಮೇಹಿಗಳ ಮಿತ್ರ ಎಂದು ಕರೆಯುತ್ತಾರೆ. ಮೇದೋಜ್ಜೀರಕ ಗ್ರಂಥಿಯ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್ ರಸವನ್ನು ಉತ್ಪಾದಿಸಿ ಬಿಡುಗಡೆ ಮಾಡಲು ಸಹಾಯ ಮಾಡುವುದರಿಂದ ಮಧುಮೇಹ ಕಾಯಿಲೆಗೆ ತಡೆಗೋಡೆಯು ಆಗುವ ಕೆಲಸವನ್ನು ಬೇಲದ ಹಣ್ಣು ಮಾಡುತ್ತದೆ. ಕಾರಣ ಬೇಲದ ಹಣ್ಣು ವಿಟಮಿನ್ ‘ಸಿ ಕಣಜವಾಗಿದೆ. ಫಿರೋನಿಯಂ ಬೆಂಕವನ್ನು ಹೊಂದಿz.É ಬೇಲದ ಹಣ್ಣನ್ನು ಋತುಮಾನದಲ್ಲಿ ತಿನ್ನುವುದರಿಂದ ಹೃದಯ ಸಂಬAಧದ ಸಮಸ್ಯೆಗಳು ನಿವಾರಣೆಯಾಗಲು ಸಹಾಯಕವಾಗುತ್ತದೆ. ಬೇಲದ ಹಣ್ಣಿನ ಪಾನಕವು ಬೆಲ್ಲ, ಜೇನುತುಪ್ಪ ಏಲಕ್ಕಿಗಳನ್ನು ಒಳಗೊಂಡಿದ್ದು ದ್ರವ ರೂಪದಲ್ಲಿರುವುದರಿಂದ ರಕ್ತದ ಕೊಲೆಸ್ಟ್ರಾಲನ್ನು ಕರಗಿಸಿ ರಕ್ತವನ್ನು ತಿಳಿಗೊಳಿಸುವುದರಿಂದ ರಕ್ತ ಸಂಚಾರ ಸುಗಮವಾಗಿ ನಡೆದು ಹೃದಯದ ಕಾರ್ಯವನ್ನು ಹಗುರ ಗೊಳಿಸುತ್ತದೆ, ಹೃದಯಘಾತದ ಸಂಭವನೀಯತೆಯನ್ನು ಕಡಿಮೆಗೊಳಿಸುತ್ತದೆ.

ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು, ಮಾವಿನ ಹಣ್ಣಿನಂತೆ ಬೇಲದ ಹಣ್ಣು ಜನರಿಗೆ ಬೇಸಿಗೆಯ ಮಿತ್ರನಾಗಿದೆ. ಬೇಸಿಗೆಯ ಬೇಗೆಗೆ ಕೆಲಸದ ಮೇಲೆ ಹೊರಗಡೆ ಹೋದಾಗ ಬಿಸಿಲಾಘಾತವಾಗಿ ಗೊಂದಲ, ಬದಲಾದ ಮಾನಸಿಕ ಸ್ಥಿತಿ ಮತ್ತು ಅಸ್ಪಷ್ಟ ಉಚ್ಚಾರಣೆಯ ಸಮಸ್ಯೆಗಳು, ಬಳಲಿಕೆಯೂ ಉಂಟಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರವನ್ನು ಬೇಲದ ಹಣ್ಣು ಒದಗಿಸುತ್ತz.É ದೇಹಕ್ಕೆ, ಮೆದುಳಿಗೆ ತಕ್ಷಣವೇ ಪೋಷಣೆ ಒದಗಿಸಿ ಮಾನಸಿಕ ಮತ್ತು ದೈಹಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಜೀವ ಸತ್ವಗಳಿಂದ ಕೂಡಿದ ಬೇಲದ ಹಣ್ಣಿನ ಪಾನಕವು ದ್ರವ ರೂಪದಲ್ಲಿರುವುದರಿಂದ ದೇಹಕ್ಕೆ ಸಾಕಷ್ಟು ನೀರನ್ನು ಒದಗಿಸಿ ನಿರ್ಜಲತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಬೇಲದ ಹಣ್ಣಿನ ಪಾನಕವು ಕಿಡ್ನಿಗಳ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ಜೀವಸತ್ವಗಳು, ಖನಿಜಾಂಶಗಳು, ಪೈಟೋ ರಾಸಾಯನಿಕಗಳು, ಮೂತ್ರಜನಕಾಂಗ, ಮೂತ್ರನಾಳಗಳನ್ನು ಶುಭ್ರಗೊಳಿಸಲು ಶಕ್ತಿದಾಯಕವಾಗಿದೆ. ನಾನಾ ಕಾಯಿಲೆಗಳಿಗೆ ಈಗಾಗಲೇ ವಿವಿಧ ಮಾತ್ರೆಗಳನ್ನು ನುಂಗಿ ಆ ಮಾತ್ರೆಗಳು ಚೆನ್ನಾಗಿ ಕರಗಿ ಹೊರಗೆ ಹೋಗದೆ ಅಲ್ಲಲ್ಲಿ ಉಳಿದುಕೊಂಡಿದ್ದರೆ ಬಹಳಷ್ಟು ಅಡ್ಡ ಪರಿಣಾಮಗಳನ್ನು ಉಂಟು ಮಾಡಿ ತೊಂದರೆ ಕೊಡುತ್ತವೆ. ಈ ಹಣ್ಣಿನ ಪಾನಕ ಮಾತ್ರೆ ಮದ್ದುಗಳ ಉಳಿಕೆಗಳನ್ನು ಕರಗಿಸಿ ಹೊರಹೋಗುವಂತೆ ಮಾಡಿ ದೇಹವನ್ನು ಶುದ್ಧಿಗೊಳಿಸುತ್ತದೆ

ಖಾರದ ಚಟ್ನಿ, ಮೆಣಸಿನ ಕಾಯಿ ಬೋಂಡ, ಕರಿದ ಪದಾರ್ಥಗಳು, ಪಾಕೆಟ್ ತಿನಿಸುಗಳು, ಫ್ರಿಜ್ಜಿನಲ್ಲಿ ಇಟ್ಟ ತಂಗಳು ಪದಾರ್ಥಗಳು, ತಂಪು ಪಾನೀಯಗಳಿಂದ ಅಸಿಡಿಟಿ, ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆಗಳು ಉಂಟಾಗಿ ನೊಂದ ಜನರು ಮಾತ್ರೆ ಮದ್ದುಗಳಿಗೆ ಮರೆಹೋಗಿ ಬಾಂಡಲಿಯಿAದ ಬೆಂಕಿಗೆ ಬಿದ್ದಂತೆ ನಾನಾ ಸಮಸ್ಯೆಗಳಿಂದ ಸತತವಾಗಿ ಬಳಲುತ್ತಾರೆ. ಕೆಟ್ಟ ಆಹಾರಗಳನ್ನು ಬಿಡಬೇಕು. ಸೀಸನ್ ಹಣ್ಣಾದ ಬೇಲದ ಹಣ್ಣು ಮತ್ತು ಶುಚಿ-ರುಚಿ ತಾಜಾ ಪೋಷಕಾಂಶಯುಕ್ತ ತಿನಿಸುಗಳನ್ನು, ಆಹಾರಗಳನ್ನು, ಪಾನೀಯಗಳನ್ನು ಸೇವಿಸಬೇಕು. ಇದರಿಂದ ಹೊಟ್ಟೆಯ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ

ಬೇಲದ ಗಿಡ ರೈತರ ಸಮಗ್ರ ಕೃಷಿಗೆ, ಬಹುಪದರದ ಕೃಷಿಗೆ ಬಹಳಷ್ಟು ನೆರವಾಗುತ್ತದೆ. ರೈತರು ತಮ್ಮ ಜಮೀನುಗಳ ಸುತ್ತ ಬೇಲದ ಗಿಡಗಳನ್ನು ನೆಡಬೇಕು. ಇದರ ಎಲೆ, ಕಾಂಡ, ಕಡ್ಡಿ, ಹೂವು, ಕಾಯಿ, ಹಣ್ಣು ಎಲ್ಲವೂ ಪ್ರಯೋಜನಕಾರಿಯಾಗಿವೆ. ಕ್ಷಾಮ-ಡಾಮರುಗಳು ಬಂದರೂ ಬಗ್ಗದೆ ಫಲವನ್ನು ನೀಡುವ ಶಕ್ತಿಯನ್ನು ಬೇಲದ ಮರ ಹೊಂದಿz.É ಬೇಲದ ಹಣ್ಣನ್ನು ರೈತರು ತಿನ್ನುವುದರ ಜೊತೆಗೆ ಲಾಭದಾಯಕ ಬೆಲೆಗೆ ಮಾರಾಟ ಮಾಡಿ ಹಣ ಗಳಿಕೆ ಮಾಡಬಹುದು. ಎಲೆಗಳು ಗೊಬ್ಬರವಾಗುತ್ತದೆ. ಹಸಿರು ಎಲೆಗಳು ಪಶು ಪ್ರಾಣಿಗಳಿಗೆ ತರಾವರಿ ಮೇವು ಆಗುತ್ತದೆ. ಒಣಗಿದ ಕೊಂಬೆಗಳು ಉರುವಲಾಗಿ ಬೂದಿ ಗೊಬ್ಬರ ಕೊಡುತ್ತವೆ. ಭೂಮಿಯನ್ನು ಬೇರುಗಳು ಸಡಿಲಗೊಳಿಸಿ ರೈತ ಮಿತ್ರ ಎರೆಹುಳು ಮುಂತಾದ ಭೂಮಿ ಜೀವಿಗಳು ಓಡಾಡಿಕೊಂಡು ಭೂಮಿಯ ಫಲವತ್ತತೆ ಹೆಚ್ಚಿಸುತ್ತದೆ. ಬೇಲದ ಗಿಡ ಮರವಾಗಿ ಬಲಿತಂತೆ ಶಕ್ತಿಶಾಲಿ ಮರ ಮಟ್ಟು ಆಗುತ್ತದೆ. ಜೀವ ಜಗತ್ತಿಗೆ ಅಪರಿಮಿತ ಪ್ರಮಾಣದಲ್ಲಿ ಆಮ್ಲಜನಕ ದೊರೆಯುತ್ತದೆ ಸುತ್ತಮುತ್ತಲ ವಾತಾವರಣ ತಂಪಾಗಿರುತ್ತದೆ. ಕೆಲವು ಬೇಲದ ಗಿಡಗಳು ವರ್ಷಪೂರ್ತಿ ಹಣ್ಣನ್ನು ಉದುರಿಸುತ್ತವೆ

-ಡಾ. ಬಸವರಾಜ್ ಮೈಸೂರು

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group