spot_img
Thursday, July 3, 2025
spot_imgspot_img
spot_img

ಉದ್ಯೋಗ ತೊರೆದು ಜೇನು ಕೃಷಿಯಲ್ಲಿ ತೊಡಗಿದ ಯುವಕ, ಬಾಲ್ಯದ ಆಸಕ್ತಿಯೇ ಜೇನು ಸಾಕಾಣೆಗೆ ಪ್ರೇರಣೆ

* ರಾಧಾಕೃಷ್ಣ ತೊಡಿಕಾನ
ಜೇನು  ಅಂದ ಕೂಡಲೇ ಮರದ ಕೊಂಬೆಗಳ ಮೇಲೆ ಗೆರೆಸೆಯೆಂತೆ ನೇತಾಡುವ ಎರಿಗಳು. ಅದನ್ನು ಮುತ್ತಿಕೊಂಡ ಜೇನು ನೊಣಗಳು ಮರದ ಪೊಟರೆಯಲ್ಲೋ ನೆಲದ ಸಂದಿಗೊಂದಿಯೊಳಗೆ ಆಶ್ರಯಪಡೆದು ಕಲಾತ್ಮಕವಾದ ಜೇನ್ಮನೆಗಳು,  ಜೇನಿನ ಹುಟ್ಟಿನಿಂದ ಹನಿ ಹನಿಯಾಗಿ ಜಿನುಗುವ ಜೇನ ಹನಿಗಳು ಕಣ್ಣ ಮುಂದೆ ನಿಲ್ಲುತ್ತದೆ. 
ಈಗ ಜೇನು ಹುಡುಕಿಕೊಂಡು ಕಾಡುಗುಡ್ಡ ಅಲೆಯಬೇಕಾಗಿಲ್ಲ. ಮನಸ್ಸು ಮಾಡಿದರೆ ಸಾಕು; ಮನೆಯ ಅಂಗಳದಲ್ಲಿ ಹಾಗೂ ತಮ್ಮ ಪರಿಸರದಲ್ಲಿ ಜೇನು ಕೃಷಿ ಆರಂಭಿಸಬಹುದು. ಜಮೀನಿಲ್ಲ ಎಂದು ಕೊರಗಬೇಕಾಗಿಲ್ಲ. ದೊಡ್ಡ ಬಂಡವಾಳದ ಚಿಂತೆಯಿಲ್ಲ. ಉದ್ಯೋಗದಲ್ಲಿರುವವರು, ಇಲ್ಲದವರು, ನಿವೃತ್ತರು ಯಾರೂ ಬೇಕಾದರೂ  ಜೇನು ಸಾಕಾಣಿಕೆಯನ್ನು ಮಾಡಬಹುದು. ಸ್ವ ಉದ್ಯೋಗ, ಸ್ವಾವಲಂಬನೆಯ ಬದುಕುಕಟ್ಟಿಕೊಳ್ಳಲು ಯುವ ಜನರಿಗೂ ಸಹಕಾರಿ. ಮಲೆನಾಡು, ಅರೆ ಮಲೆನಾಡು ಬಯಲು ಸೀಮೆ ಎಲ್ಲೇ ಇರಲಿ ಪರಿಸರಕ್ಕೆ ಪೂರಕವಾಗಿ ಜೇನು ವ್ಯವಸಾಯ ಮಾಡಬಹುದು. ಜೇನು ಕೃಷಿ ಇತ್ತೀಚೆಗಿನ ದಿನಗಳಲ್ಲಿ ಉದ್ದಿಮೆಯಾಗಿ ಮಾರ್ಪಡುತ್ತಿದೆ. ಉನ್ನತ ವ್ಯಾಸಂಗ ಮಾಡಿಕೊಂಡವರು,  ಉದ್ಯೋಗ ಮಾಡುತ್ತಿದ್ದವರು ಅದನ್ನೆಲ್ಲ ಬಿಟ್ಟು ಜೇನು ಕೃಷಿಗೆ ಅಂಟಿಕೊಂಡು ಅಚ್ಚರಿ ಮೂಡಿಸಿದ್ದಾರೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿಯ ಅಶ್ವಿನ್ ಕುಮಾರ್ ಸಿಕ್ವೇರಾ ಇಂತಹದ್ದೇ ಸಾಹಸಕ್ಕೆ ಕೈಹಾಕಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. 
ಕೃಷಿಕ ಕುಟುಂಬದವರಾದ ಅಶ್ವಿನ್ ಕುಮಾರ್ ಸಿಕ್ವೇರಾ ಅವರಿಗೆ ಜೇನು ಸಾಕಣೆಯ ಆಕರ್ಷಣೆ ಒಮ್ಮಿಂದೊಮ್ಮೆಗೆ ಹುಟ್ಟಿದ್ದೇನೋ ಅಲ್ಲ. ಅವರು ಪ್ರೌಢಶಾಲೆಯಲ್ಲಿದ್ದಾಗ  ಪಠ್ಯೇತರ ಚಟುವಟಿಕೆಗೆ ಪೂರಕವಾಗಿ ಎನ್.ಎಸ್.ಎಸ್, ಎನ್‌ಸಿಸಿ, ಗ್ರಾಹಕ ಕ್ಲಬ್‌ನಂತೆ ಜೇನು  ಕ್ಲಬ್ ಇತ್ತು. ಜೇನು ಕೃಷಿ ಮಾಡುತ್ತಿದ್ದ ಅಧ್ಯಾಪಕರು ಶಾಲೆಯಲ್ಲಿದ್ದರು. ನಾಲ್ಕೈದು ಜೇನುಪೆಟ್ಟಿಗೆ ಶಾಲೆ ಆವರಣದಲ್ಲಿತ್ತು. ಅಧ್ಯಾಪಕರಾದ ಕೃಷ್ಣ ಭಟ್, ಕೊರಗ ಭಂಡಾರಿ, ರಾಧಾಕೃಷ್ಣ ಕೋಡಿ ಮತ್ತಿತರರು ಮಕ್ಕಳಲ್ಲಿ ಜೇನು ಕೃಷಿ ಆಸಕ್ತಿಯನ್ನು ಮೂಡಿಸಿದ್ದರು. ದಸರಾ ರಜೆಯಲ್ಲಿ ಮಕ್ಕಳಿಗೆ ಜೇನು ಕೃಷಿ ತರಬೇತಿಯನ್ನು ನೀಡಲಾಗುತ್ತಿತ್ತು. ಅದರಿಂದಾಗಿ ಶಾಲೆಯಲ್ಲೇ ಜೇನು ಕೃಷಿಯ ಬಗ್ಗೆ ಅಶ್ವಿನ್ ಅವರಲ್ಲಿ ಆಸಕ್ತಿ ಕೆರಳಿಸಿತ್ತು.
1೦ನೇ ತರಗತಿಯಾದ ನಂತರ ಪುತ್ತೂರಿನಿಂದ ಜೇನು ಪೆಟ್ಟಿಗೆ ತಂದು ಹವ್ಯಾಸಕ್ಕಾಗಿ ಜೇನು ಸಾಕಾಣೆ ಆರಂಭಿಸಿದರು. ವಿದ್ಯಾಭ್ಯಾಸದ ಕಾರಣ ಮುಂದೆ ಜೇನು ಕೃಷಿಯನ್ನು ಮುಂದುವರಿಸಲು ಆಗಲಿಲ್ಲ. ಆನಂತರ ಸಹೋದರ ಅನಿಲ್ ಸಿಕ್ವೇರಾ ಅವರು ಅದೇ ಆಸಕ್ತಿಯನ್ನು ಬೆಳೆಸಿಕೊಂಡರು. ನಾಲ್ಕು ಪೆಟ್ಟಿಗೆ ಮನೆಯಲ್ಲಿತ್ತು. ಈ ನಡುವೆ ಜೇನು ಕುಟುಂಬಗಳು ಪೆಟ್ಟಿಗೆ ಬಿಟ್ಟು ಹೊರಹೋಗುವುದು ಮತ್ತೆ ಬಂದು ಮನೆಮಾಡುವುದು ಸಾಮಾನ್ಯವಾಗಿತ್ತು. ಬಿಕಾಂ ಪದವಿಯ ನಂತರ ಎಮ್‌ಬಿಎ ಮುಗಿಸಿ ಅಶ್ವಿನ್ ಮೂರು ವರ್ಷಗಳ ಕಾಲ ಕೆಎಂಎಫ್ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡಿದ್ದರು. ಆಗ ಜೇನುಪೆಟ್ಟಿಗೆಯ ನಿರ್ವಹಣೆಯನ್ನು ಮಾಡಲಾಗಿರಲಿಲ್ಲ. ಆದರೂ ಜೇನು ಕೃಷಿಯಲ್ಲಿನ ಆಸಕ್ತಿ ಕಡಿಮೆಯಾಗಿರಲಿಲ್ಲ. ಮನದ ಮೂಲೆಯಲ್ಲಿ ಜೇನು ಮನೆ ಮಾಡಿಯೇ ಇತ್ತು.
ನೌಕರಿ ಬಿಟ್ಟು ಜೇನುಕೃಷಿ ತರಬೇತಿಗಾಗಿ ಭಾಗಮಂಡಲಕ್ಕೆ ತೆರಳಿದರು. 4 ತಿಂಗಳ ಕಾಲ ತರಬೇತಿ ಪಡೆದುಕೊಂಡರು. ಆನಂತರ ಅಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಚಂದ್ರಶೆಖರ್ ಬೆಳ್ತಂಗಡಿ ತೋಟಗಾರಿಕೆ ಇಲಾಖೆಗೆ ವರ್ಗಾವಣೆಗೊಂಡು ಬಂದಾಗ ಅವರೊಂದಿಗೆ ಜೇನು ಕೃಷಿ ಸಹಾಯಕರಾಗಿ ಕಾರ್ಯನಿರ್ವಹಿಸಲು ಅವಕಾಶ ಒದಗಿತು. ನಾಲ್ಕೆöÊದು ವರ್ಷ ಸೇವೆ ಸಲ್ಲಿಸಿದ್ದ ಅವರಿಗೆ ಜೇನು ಕೃಷಿಯನ್ನು ಹೆಚ್ಚು ಹೆಚ್ಚು ನೆಚ್ಚಿಕೊಳ್ಳುವಂತೆ ಪ್ರೇರೇಪಿಸಿತು. 2009 ರಲ್ಲಿ ಆರಂಭವಾದ ಅವರ ಜೇನು ಕೃಷಿಗೆ ಹೊಸ ರೂಪ ದೊರೆತದ್ದು ಕೊರೊನಾ ಸಂದರ್ಭದಲ್ಲಿ. ಕೊರೊನಾದಿಂದ ಮನೆಯಲ್ಲೇ ಇರಬೇಕಾದ ಬೇಕಾದ ಅನಿವಾರ್ಯತೆ ಬಂದಾಗ ಜೇನು ಸಾಕಣೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡೆ ಎನ್ನುತ್ತಾರೆ ಅಶ್ವಿನ್ ಸಿಕ್ವೇರಾ.
ಪ್ರಸ್ತುತ ಅವರಲ್ಲಿ 4೦೦ ಪೆಟ್ಟಿಗೆಯಿದೆ.  ತಮ್ಮ  ತೋಟವಲ್ಲದೆ ನೆರೆಕೆರೆಯ ತೋಟ ಪರಿಸರಗಳಲ್ಲಿಯೂ ಜೇನು ಪೆಟ್ಟಿಗೆಯಿರಿಸಿ ಜೇನು ಸಾಕಣೆ ಮಾಡುತ್ತಿದ್ದಾರೆ.  ವರ್ಷಕ್ಕೆ 4-5 ಕೊಯಿಲು ತೆಗೆಯುವ  ಇವರು ಪೆಟ್ಟಿಗೆಯೊಂದರಿಂದ  ಒಮ್ಮೆಗೆ 2 ರಿಂದ 8 ಕೆಜಿ ವರೆಗೆ ಜೇನು ಪಡೆಯುತ್ತಾರೆ. ಜೇನು ಇಳುವರಿ ಹೂವು ಪರಾಗವನ್ನು ಅವಲಂಬಿಸಿರುತ್ತದೆ. ಮಕರಂದ ಹೆಚ್ಚಾದಾಗ ಜೇನು ತುಪ್ಪವೂ ಹೆಚ್ಚಿರುತ್ತದೆ. ಇಳುವರಿ ಹೆಚ್ಚು ಕಡಿಮೆಯಾಗುವುದಿದೆ ಎನ್ನುತ್ತಾರೆ ಅವರು.
ತೊಡುವೆ ಜೇನು ಅಲ್ಲದೆ ಮುಜೆಂಟಿ ಜೇನು ಸಾಕುತ್ತಿದ್ದಾರೆ. 4೦ ಪೆಟ್ಟಿಗೆಗಳಿವೆ. ಇದರಲ್ಲಿ ಜೇನಿನ ಪ್ರಮಾಣ ಕಡಿಮೆಯಾದರು ಮಾರುಕಟ್ಟೆ ಯಲ್ಲಿ ಉತ್ತಮ ಬೇಡಿಕೆಯಿದೆ. ಕಿಲೋವೊಂದಕ್ಕೆ ೩೦೦೦ವರೆಗೂ ಮಾರಾಟವಾಗುವುದಿದೆ.
ಮಾರುಕಟ್ಟೆ
ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಹುಡುಕುವುದೇ ದೊಡ್ಡ ಸಮಸ್ಯೆ. ಫಸಲು ಬಂದಾಗ ಬೆಲೆ ಇಲ್ಲ. ಬೆಲೆ ಇರುವಾಗ ಫಸಲು ಇರುವುದಿಲ್ಲ.  ಆದರೆ ಜೇನಿಗೆ ಅಂತಹ ಸಮಸ್ಯೆಯೇನಿಲ್ಲ. ಬೇಡಿಕೆಯೂ ಇದೆ. ಸ್ಥಿರವಾದ ಬೆಲೆಯೂ ಇದೆ. ಮನೆಗೆ ಬಂದು ಜೇನು ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿಲ್ಲ. ಜೇನಿನ ಉಪ ಉತ್ಪನ್ನವಾದ ಮೇಣವನ್ನು ಸಂಸ್ಕರಿಸಿ ಇತರ ಉತ್ಪನ್ನಗಳನ್ನು ತಯಾರಿಸಬಹುದಾದರೂ ಮೇಣವನ್ನು  ಸಂಸ್ಕರಿಸುವುದಿಲ್ಲ. ನೇರಾ ಮಾರಾಟ ಮಾಡುತ್ತಾರೆ
ಜೇನು ಕೃಷಿಯನ್ನು ಮಾಡಿ ಯಶಸ್ಸು ಪಡೆಯಬಹುದು. ಆಸಕ್ತರು ಜೇನು ಕೃಷಿಯಲ್ಲಿ  ತೊಡಗಿಕೊಂಡು ಸ್ವಾವಲಂಬಿಗಳಾಗಬಹುದು, ಸ್ವದ್ಯೋಗಗಳನ್ನು ಮಾಡಬಹುದು. ಕೆಲವೊಮ್ಮೆ ಜೇನು ನೊಣಗಳು  ಪೆಟ್ಟಿಗೆ ಬಿಟ್ಟು ಹೋದಾಗ ಕುಟುಂಬ ವಿಭಜನೆಯಾಗಿ ಹೋದಾಗ ನಿರಾಸೆಯಾಗುತ್ತದೆ.  ಸಮೃದ್ಧವಾಗಿ ಜೇನುಣಿಸುವ ಜೇನು ನೊಣಗಳನ್ನು ಮಳೆಗಾಲ ತಾವೇ ಆಹಾರ ನೀಡಿ ಸಾಕಬೇಕಾಗಿದೆ.
ಹಿಂದೊಮ್ಮೆ ತನ್ನಲ್ಲಿದ್ದ 6೦ ಪೆಟ್ಟಿಗೆಯಲ್ಲಿ ಬರೇ 17 ಪೆಟ್ಟಿಗೆಯ ಜೇನು ಮಾತ್ರ ಉಳಿಯಿತು. ಇಂಥ ಸಂದರ್ಭದಲ್ಲಿ ಆಗುವ ನಷ್ಟ ಜೇನು ಕೃಷಿಯೇ ಬೇಡ ಎಂದು ಬಿಟ್ಟುಬಿಟ್ಟರೆ ಎಲ್ಲವೂ ಕಳೆದುಕೊಂಡAತೆ.  ಆದ ನಷ್ಟವನ್ನು ಸಹಿಸಿಕೊಂಡು ಮುಂದುವರಿದರೆ ಒಳ್ಳೇದು.  ಜೇನು ಸಾಕಾಣೆ ಆಸಕ್ತಿ ಮಾತ್ರ ಇದ್ದರೆ ಸಾಲದು. ಜೇನು ಕುಟುಂಬ ನಿರ್ವಹಣೆಯ ಕೆಲಸ ಗೊತ್ತಿರಬೇಕು.  ಕೆಲಸದಾಳುಗಳನ್ನು ಹೆಚ್ಚು ಆವಲಂಬಿತರಾಗಬಾರದು. ನಾವೇ ಕೆಲಸ ಮಾಡಬೇಕು. ರೋಗಗಳ ಬಗ್ಗೆಯೂ ನಿಗಾ ವಹಿಸಬೇಕು. ಹೊಸದಾಗಿ ಜೇನು ಕೃಷಿ ಮಾಡುವವರು ಜೇನು ಸಾಕಾಣಿಕೆ ಮಾಡುವುದರಿಂದ ಎಷ್ಟು ಲಾಭ ಬರುತ್ತದೆ ಎಂಬ  ನಿರೀಕ್ಷೆ ಮಾಡಬಾರದು. ಬೇರೆ ಬೇರೆ ಕಾರಣಗಳಿಂದ ಆರಂಭದಲ್ಲಿ ನಷ್ಟವೂ ಉಂಟಾಗಬಹುದು.  ಲಾಭ ನಷ್ಟ ಸಹಜವಾದದು.್ದ ಅದನ್ನೆಲ್ಲಾ ಪರಿಗಣನೆಯನ್ನಿರಿಸಿಕೊಂಡು ಜೇನು ಕೃಷಿ ಮಾಡಬಹುದು. ನಾನು ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡಿರುವುದರಿಂದ ಜೇನು ಕೃಷಿ ಮಾರುಕಟ್ಟೆ ಮಾಡುವುದು ಕಷ್ಟವಾಗಲಿಲ್ಲ. ಅನುಕೂಲವಾಯಿತು ಎನ್ನುತ್ತಾರೆ ಅಶ್ವಿನ್. ಜೇನು ಕೃಷಿಯಿಂದ ಜೇನು ಕೃಷಿಕರಿಗಷ್ಟೇ ಪ್ರಯೋಜನವಲ್ಲ. ಪರೋಕ್ಷವಾಗಿ ಕೃಷಿ ಉತ್ಪನ್ನಗಳ ವೃದ್ಧಿಗೂ ಅನುಕೂಲ. ಪ್ರಕೃತಿಯ ಮರಗಿಡಗಳ ಫಲವಂತಿಕೆಗೂ ಸಹಕಾರಿ.
ಮಾಹಿತಿಗೆ 9008161784
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group