ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ನಲ್ಲಿ ಜಾನುವಾರು, ಕುಕ್ಕುಟ ಹಾಗೂ ಮತ್ಸ್ಯ ಮೇಳವು ಜನವರಿ 17,18,19ರಂದು ನಡೆಯಲಿದೆ
ಗ್ರಾಮೀಣ ಅಭಿವೃದ್ಧಿ ಮತ್ತು ಜೀವನೋಪಾಯ ಭದ್ರತೆಗಾಗಿ ಪಶು ಪಾಲನೆ, ಮೀನುಗಾರಿಕೆ ಎಂಬ ಘೋಷ ವಾಕ್ಯದೊಂದಿಗೆ ಮೂರು ದಿನಗಳ ಕಾಲ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ ಜಾನುವಾರು,ಕುಕ್ಕುಟ, ಮೀನು ತಳಿಗಳ, ಸಾಕು ಪ್ರಾಣಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಜಾನುವಾರು, ಕೋಳಿ ಮತ್ತು ಮೀನು ಸಾಕಾಣೆಯ ಹೊಸ ಹೊಸ ತಂತ್ರಜ್ಞಾನ ಹಾಗೂ ಪೂರಕ ಯಂತ್ರೋಪಕರಣ ಪರಿಕರಗಳನ್ನು ಈ ಮೇಳವು ಪರಿಚಯಿಸಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯುವ ಅಪೂರ್ವ ಮೇಳ ಇದಾಗಿದೆ