spot_img
Friday, October 18, 2024
spot_imgspot_img
spot_img
spot_img

ಅಡಿಕೆ ಮರದ ಬುಡದ ಕಳೆ ಹೊಡೆವಾಗ ಈ ಗಂಭೀರ ಸಂಗತಿಗಳು ನಿಮಗೆ ಗೊತ್ತಿರಲಿ!

ಬರಹ: ಪ್ರಬಂಧ ಅಂಬುತೀರ್ಥ
ಅಡಿಕೆ ಚಿಕ್ಕ ಸಸಿಮರಗಳ ಬುಡದಲ್ಲಿ ಕಳೆ ಮಿಷನ್ ನಲ್ಲಿ ಕಳೆ ಹೊಡೆಯುವಾಗ ರೋಪ್ ತಾಗಿದ ಪರಿಣಾಮವಾಗಿ ಅಡಿಕೆ ಮರದ ಕಾಂಡದ ಬುಡಕ್ಕೆ  ಗಾಯವಾದಲ್ಲಿ ಅದು ಮುಂದಿನ ದಿನಗಳಲ್ಲಿ ಹೀಗೆ ಸುಟ್ಟು ಹೋಗುತ್ತದೆ. ಈ ತರಹ ಸುಟ್ಟು ಕರಕಲಾಗಲು ಇನ್ನೂ ಎರಡು ಕಾರಣಗಳಿವೆ.
ಅಡಿಕೆ ಮರದ ಬುಡದಲ್ಲಿ ಗುದ್ದಲಿಯಲ್ಲಿ ಕಡಿದು ಬೇಸಾಯ ಮಾಡುವಾಗ ಗುದ್ದಲಿ ತಾಗಿದರೆ ನಂತರದ ದಿನಗಳಲ್ಲಿ ಆ ಗಾಯ ದೊಡ್ಡ ಆಗಿ ಹೀಗೆ ಸುಟ್ಟುಹೋದಂತಾಗುತ್ತದೆ‌. ಇದು ಅಡಿಕೆ ಸಸಿ ಮರ ಮಾತ್ರವಲ್ಲದೇ ದೊಡ್ಡ ಮರದ ವಿಚಾರದಲ್ಲೂ ಅಷ್ಟೇ, ಗುದ್ದಲಿ ಪೆಟ್ಟು ಬುಡದ ಕಾಂಡದ ಆರಂಭಕ್ಕೆ ಬಿದ್ದರೆ ಒಂದು ವರ್ಷದಲ್ಲಿ ಮರವೇ ಸತ್ತು ಹೋಗುವ ಅಪಾಯವಿರುತ್ತದೆ. ಅಕಸ್ಮಾತ್ತಾಗಿ ಮರ ಸಾದಿದ್ದಲ್ಲಿ ಬುಡ ಹೀಗೆ ಸುಟ್ಟು ಹೋದಂತಾಗುತ್ತದೆ.
ಅಡಿಕೆ ಮರಕ್ಕೆ ಸಂಜೆಯ ಇಳಿ ಬಿಸಿಲು ಹೊಡೆದಾಗಲೂ ಹೀಗೆಯೇ ಆಗುತ್ತದೆ. ಆದರೆ ಹಾಗೆ ಬಿಸಿಲಿನ ತೀಕ್ಣತೆಯಿಂದ ಹೊಡೆವಾಗ ಯಾವುದೋ ಒಂದು ನಿರ್ದಿಷ್ಟ ಭಾಗ ಮಾತ್ರ ಸುಡದು. ಒಂದು ಮೈ ಉದ್ದಕ್ಕೂ ಸುಡುತ್ತದೆ. ಈ ಚಿತ್ರದಲ್ಲಿ ಸುಟ್ಟ ಗುರುತು ಇಳಿ ಬಿಸಿಲಿನ ತೀಕ್ಣತೆ ಆದದ್ದಲ್ಲ. ಹೀಗೆ ಇಳಿಬಿಸಿಲಿನ ತೀಕ್ಷ್ಣತೆಗೆ ಸುಟ್ಟ ಅಡಿಕೆ ಮರವನ್ನು  ನಮ್ಮ ಮಲೆನಾಡಿನಲ್ಲಿ  ಸುಟುಗಲು ಮರ ಅಂತಾರೆ.‌
ಹಿಂದೆ ಕೊನೆಗಾರರು ಮರ ಹತ್ತುವ ಕಾಲದಲ್ಲಿ (ಈಗ ದೋಟಿ ಕಾಲ ಅಲ್ವ…? ಹಾಗಾಗಿ) ಇಂತಹ ಸುಟುಗಲು damage ಮರವನ್ನು ಹತ್ತುತ್ತಿರಲಿಲ್ಲ…!!
ಹಿಂದಿನವರು ಅಡಿಕೆ ತೋಟ ಮಾಡುವ ಜಾಗವನ್ನು ನೈಋತ್ಯ ಮಾರುತದ ದಿಕ್ಕು, ಇಳಿಬಿಸಿಲಿನ ತೀವ್ರತೆಯ ಬಿಸಿಲು ಹೊಡೆಯದಿರುವ ನೈಸರ್ಗಿಕ ಕಾಡು ಇಲ್ಲ ಪರ್ವತ ಗಳ ಮರೆ ಇರುವ ಭೂಮಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು . ಇಂತಹ ಭೂಮಿಯ ಅಡಿಕೆ ಕೃಷಿಯನ್ನು “ಸಾಂಪ್ರದಾಯಿಕ ಅಡಿಕೆ ಕೃಷಿ ” ಎನ್ನುವದು.
ಈ ತರಹ ಮರ ಸುಟ್ಟರೆ ವಾಸಿಯಾಗೋಲ್ಲ. ಇದಕ್ಕೆ ಯಾವುದೇ ಔಷಧ ವಿಲ್ಲ. ಇಳಿ ಬಿಸಿಲಿಗೆ ಕೆಲವರು ಸೋಗೆ ಹಾಳೆ ಕಟ್ಟಿದರೆ ಇನ್ನು ಕೆಲವರು ಸುಣ್ಣ ಹೊಡಿತಾರೆ. ಆದರೆ ಐವತ್ತು ಅರವತ್ತು ಅಡಿ ಎತ್ತರ ಬೆಳೆವ ಅಡಿಕೆ ಮರ ಕ್ಕೆ ಎಷ್ಟು ಎತ್ತರದ ತನಕ ಸುಣ್ಣ ಹೊಡೆಯಲು ಸಾದ್ಯ….? ಇದಕ್ಕೆ ಪಗಡೆ ಸಾಲು ಎಂಬ ಮಾದರಿಯ ಅಡಿಕೆ ಸಸಿಯನ್ನು ನೆಡುವ ಯೋಜನೆ ರೂಪಿಸಿ ಈ ಇಳಿ ಸಂಜೆಯ ಸೂರ್ಯನ ತೀಕ್ಷ್ಣ ಬಿಸಿಲು ಆರಂಭದ ಮರಕ್ಕೆ ಮಾತ್ರ ಬೀಳುವಂತೆ ತಡೆಯುತ್ತಾರೆ‌.
ಈ ಕಾಂಡಕ್ಕೆ ಆದ ಈ ಗಾಯದ ಸುಟ್ಟ ಗುರುತಿನ ಕರಕಲು ಕಲೆಯಿಂದ  ಮರ ತಕ್ಷಣ ಕ್ಕೆ ಸಾಯೋಲ್ಲ…!! ಆದರೆ  ಫಸಲು ಮಾಮೂಲಿ ಮರಕ್ಕಿಂತ  ತುಸು  ಹೆಚ್ಚೇ ಬರುತ್ತದೆ. ಆದರೆ ಯಾವತ್ತೋ ಒಂದು ದೊಡ್ಡ ಮಳೆ ಗಾಳಿ ಬಂದಾಗ ಮರ ಆ ಸುಟ್ಟ ಜಾಗಕ್ಕೆ ಮುರಿದು  ಬಿದ್ದು ಹೋಗುವ ಸಾಧ್ಯತೆ ಹೆಚ್ಚು…
ಅಡಿಕೆ ಮರ hard ಆದರೂ ಅಡಿಕೆ ಮರದ ಈ ಭಾಗ ಅತ್ಯಂತ ಮೃದು. ಈ‌ ಭಾಗಕ್ಕೆ ಗುದ್ದಲಿ ಪೆಟ್ಟು, ಕಳೆ ಮಿಷನ್ ರೋಪ್ ನ ಪೆಟ್ಟು , ಸೂರ್ಯನ ತೀಕ್ಷ್ಣ ಕಿರಣದ ತಾಪ ಇತ್ಯಾದಿಗಳನ್ನು ಸಹಿಸೋಲ್ಲ… ಆದ್ದರಿಂದ  ಅಡಿಕೆ ಮರದ ಬುಡದ ಕಳೆ ಹೊಡೆವಾಗ, ಅಗತೆ ಮಾಡುವಾಗ ಜಾಗೃತೆ ಇರಬೇಕು.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group