spot_img
Thursday, November 21, 2024
spot_imgspot_img
spot_img
spot_img

ಬೈಲಹೊಂಗಲದಲ್ಲಿ ನ.19 ರಿಂದ ಕೃಷಿಮೇಳ, ಜಾನುವಾರು ಜಾತ್ರೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಐತಿಹಾಸಿಕ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬೈಲಹೊಂಗಲದಲ್ಲಿ ನವೆಂಬರ್ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ಕೃಷಿ ಮೇಳ ಮತ್ತು ಜಾನುವಾರು ಜಾತ್ರೆ ನಡೆಯಲಿದೆ. ಈಶ ಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ ವಿ.ವಿ ಧಾರವಾಡ, ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಕೃಷಿ ಪರಿಕರ ಮಾರಾಟಗಾರರ ಸಂಘ, ರೋಟರಿ ಕ್ಲಬ್ ಬೈಲಹೊಂಗಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ)ಬೈಲಹೊಂಗಲ,ಗ್ರಾಮೀಣ ಜಾಗೃತ ನಾಗರಿಕ ವೇದಿಕೆ ಇವರ ಸಹಕಾರದೊಂದಿಗೆ ಬೃಹತ್ ಕೃಷಿಮೇಳ ಮತ್ತು ಜಾನುವಾರು ಜಾತ್ರೆ ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಇತಿಹಾಸದಲ್ಲಿ ಪ್ರಥಮ ಕೃಷಿ ಮಾರುಕಟ್ಟೆ ಸಮಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಜಾನುವಾರು ಜಾತ್ರೆ ಹಾಗೂ ಕೃಷಿ ಮೇಳದ ಪ್ರದರ್ಶನ ಮತ್ತು ಮಾರಾಟ ನೆರವೇರಲಿರುವುದು.

ಸಿರಿಧಾನ್ಯಗಳು, ಕೃಷಿ ಪರಿಕರಗಳು, ಆಧುನಿಕ ಕೃಷಿ ಯಂತ್ರೋಪಕರಣಗಳು, ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ ಸಾವಯುವ ಕೃಷಿ, ಜೇನು ಸಾಕಾಣಿಕೆ ಹಾಗೂ ಕೃಷಿ ಉಪಕಸುಬಗಳಾದ ರೇಷ್ಮೆ,ತೋಟಗಾರಿಕೆ, ಹೈನುಗಾರಿಕೆಗಳ ವಸ್ತು ಪ್ರದರ್ಶನ, ಮಾರಾಟವಿದೆ.

ಜಾನುವಾರು ಸಾಕಾಣಿಕೆ ಕೃಷಿಗೆ ಪೂರಕ. ಕೃಷಿಗೆ ಅವಶ್ಯಕವಾದ ಗೊಬ್ಬರಕ್ಕೆ, ಹೈನುಗಾರಿಕೆಗೆ ಜಾನುವಾರುಗಳು ಸಹಕಾರಿ. ಈ ಹಿನ್ನಲೆಯಲ್ಲಿ ಕೃಷಿ ವ್ಯವಸ್ಥೆಗೆ ಆಧಾರವಾದ ಜಾನುವಾರುಗಳ ಜಾತ್ರೆಯು ರೈತರ ಮನ ಸೆಳೆಯಲಿದೆ
ಜಾತ್ರೆಯಲ್ಲಿ 20-30 ದೇಶೀಯವಲ್ಲದೆ ಮಿಶ್ರ ತಳಿಯ ಆಕಳು, ಹೋರಿ, ಜೋಡೆತ್ತು, ಗೀರ್, ಹೆಚ್ಎಫ್ ತಳಿಗಳ ಆಕಳು ಎಮ್ಮೆ ಮತ್ತು ಕರುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಯಾಂತ್ರೀಕೃತ ಕೃಷಿಗೆ ಪೂರಕವಾದ ವೈವಿಧ್ಯಮಯವಾದ ಕೃಷಿ ಉಪಕರಣಗಳು ಹಾಗೂ ಇತರ ಮಾಹಿತಿಗಳ ವಸ್ತು ಪ್ರದರ್ಶನ ಮತ್ತು ಮಾರಾಟದ 200ಕ್ಕೂ ಹೆಚ್ಚಿನ ಮಳಿಗೆ ಹೊಂದಿದೆ. ರಾಜ್ಯದ ವಿವಿಧ ಮೂಲೆಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಕೃಷಿಕರು, ಕೃಷಿಯಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group