spot_img
Wednesday, March 12, 2025
spot_imgspot_img

ಅಡಿಕೆ ಮರಗಳನ್ನು ಕಾಡುವ ರೋಗಬಾಧೆ ತಡೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮುಖ್ಯ:ವಿಜ್ಞಾನಿ ಡಾ. ಬಿ.ಕೆ ವಿಶುಕುಮಾರ್ ಅವರೊಂದಿಗೆ ಕೃಷಿಬಿಂಬ ವಿಶೇಷ ಸಂದರ್ಶನ

ಅಡಿಕೆ ಬೆಳೆಗೆ ಬೇರು ಹುಳು, ಹಳದಿ ರೋಗ ಇತ್ತೀಚಿಗೆ ಹೆಚ್ಚುತ್ತಿರುವ ಎಲೆಚುಕ್ಕಿ ರೋಗಗಳಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಲಕ್ಷ ಲಕ್ಷ ಗಳಿಸುತ್ತಿದ್ದವರು ಸಾವಿರಕ್ಕೆ ತಲುಪಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರೋಗಬಾಧೆಯಿಂದ ರೈತರ ಆರ್ಥಿಕ ಸ್ಥಿತಿ ಆಯೋಮಯವಾಗಿದೆ. ರೋಗಗಳಿಗೆ ಔಷಧಿಯನ್ನು ಕಂಡುಹಿಡಿಯುವ ಪ್ರಯತ್ನಗಳನ್ನು ವಿಜ್ಞಾನಿಗಳು, ಪ್ರಯೋಗ ಶೀಲ ರೈತರು ಮಾಡುತ್ತಾ ಬಂದಿದ್ದಾರೆ. ಅಡಿಕೆ ರೋಗಗಳ ಕುರಿತಾದ ಸಂಶೋಧನೆಯಲ್ಲಿ ತೊಡಗಿಕೊಂಡವರಲ್ಲಿ ವಿಜ್ಞಾನಿ ಡಾ. ಬಿ.ಕೆ ವಿಶುಕುಮಾರ್ ಪ್ರಮುಖರು. ಅವರು ರೋಗ ಪೀಡಿತ ತೋಟಗಳನ್ನು ಸುತ್ತಿ ಸಮಸ್ಯೆಗಳನ್ನು ಮನಗಂಡಿದ್ದಾರೆ. ರೋಗ ನಿವಾರಕ ಪರಿಹಾರೋಪಾಯಗಳನ್ನು ರೈತರಿಗೆ ಸೂಚಿಸಿದ್ದಾರೆ.

ದ.ಕ ಜಿಲ್ಲೆಯ ಸುಳ್ಯ ತಾಲೂಕಿನವರಾದ ಡಾ. ಬಿ.ಕೆ. ವಿಶುಕುಮಾರ್ ಹಾಗೂ ಅವರ ಪತ್ನಿ ಡಾ. ವೀಣಾ ಟಿ.ಎಚ್ ಅವರು ವಿವಿಧ ಬೆಳೆಗಳಿಗೆ ಬೇಕಾದ ಲಘು ಪೋಷಕಾಂಶಗಳ ಸಂಯೋಜನೆ “ಮೈಕ್ರೋ ಪವರ್” ತಯಾರಿಸಿದ್ದು ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೊ, ಬಾಳೆ, ಗೇರು, ರಬ್ಬರ್ ಹಾಗೂ ಹಣ್ಣು ತರಕಾರಿ ಬೆಳೆಗಳಿಗೂ ಪರಿಣಾಮಕಾರಿಯಾದ ಲಘು ಪೋಷಕಾಂಶವಾಗಿದೆ. ಪರಿಸರ ಸ್ನೇಹಿ ಹಾಗೂ ಮರಗಿಡಗಳ ರೋಗನಿರೋಧಕ ಶಕ್ತಿ ಹೆಚ್ಚಿಸಿ ಬೆಳವಣಿಗೆ ಜೊತೆಗೆ ಅಧಿಕ ಇಳುವರಿ ತಂದುಕೊಡುವ “ಮೈಕ್ರೋಪವರ್” ಅತ್ಯುತ್ತಮ ಉತ್ಪನ್ನಗಳಲ್ಲಿ ಪ್ರಮುಖವಾದುದು. ಹಳದಿ ರೋಗ ಬಾಧಿತ ತೋಟಗಳ ಪುನಶ್ಚೇತನ ಕೆಲಸದಲ್ಲಿ ಡಾ. ಬಿ.ಕೆ. ವಿಶುಕುಮಾರ್ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ಪ್ರಯೋಗಗಳಲ್ಲಿ ಯಶಸ್ಸಿನ ಭರವಸೆ ಮೂಡಿಸಿದ್ದಾರೆ. ಅವರನ್ನು ಸಂದರ್ಶಿಸಿದ ಸಂದರ್ಭ ಹಂಚಿಕೊಂಡ ಮಾಹಿತಿ, ಅಭಿಪ್ರಾಯ ಇಲ್ಲಿದೆ.

ಹಳದಿ ರೋಗ ನಿಯಂತ್ರಣ

ವೈಜ್ಞಾನಿಕವಾಗಿ ಕೃಷಿ ಮಾಡಿದ ಉತ್ತಮ ತೋಟಗಳಲ್ಲಿ ಹಳದಿ ರೋಗ ತೀರಾ ಕಡಿಮೆ. ಇಲ್ಲವೇ ಇಲ್ಲವೆಂದಲ್ಲ. ಸಾವಯುವ ಕೃಷಿ ಎಂದು ಬರೇ ಕುರಿ, ಕೋಳಿ ಗೊಬ್ಬರ, ಸಗಣಿಯನ್ನು ಹಾಕಿದರೆ ಸಾಕಾಗದು. ಇವುಗಳಿಂದ ಗಿಡಮರ ಗಳಿಗೆ ಪೂರ್ಣ ಪ್ರಮಾಣದ ಪೋಷಕಾಂಶಗಳು ಸಿಗಲಾರವು. ಗಿಡಗಳಿಗೆ ಬೇಕಾದ ಪೋಷಕಾಂಶಗಳು ದೊರೆಯದೇ ಹೋದರೆ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಆಗ ಗಿಡಗಳು ಹೆಚ್ಚು ಹೆಚ್ಚು ರೋಗಕ್ಕೆ ತುತ್ತಾಗುತ್ತವೆ. ಹಳದಿ ರೋಗ ಬಂದು ಎರಡು ಮೂರು ವರ್ಷಗಳ ಒಳಗೆ ಕೃಷಿ ಮಾಡುತ್ತಾ ಇರುವಂತಹ ತೋಟಗಳನ್ನು ಪುನಶ್ಚೇತನಗೊಳಿಸಬಹುದು. ಹಳದಿ ರೋಗ ಪೀಡಿತ ತೋಟಗಳಲ್ಲಿ ಮರಗಳಿಗೆ ವೈರಸ್ ತಡೆಯಬಹುದಾದ ರೋಗನಿರೋಧಕ ಶಕ್ತಿಯನ್ನು ತುಂಬಬೇಕಾಗಿದೆ. ರೋಗಕ್ಕೆ ಕಾರಣ ಹಾಗೂ ಮಣ್ಣಿನ ಸತ್ವಗುಣಗಳನ್ನು ಆಧರಿಸಿ ಪೋಷಕಾಂಶಗಳನ್ನು ನೀಡುವುದು ಅವಶ್ಯಕ. ಹಳದಿ ರೋಗ ಬಂದ ತೋಟಗಳಲ್ಲಿ ಕೂಡಾ ರೋಗ ಭಾದೆಗೆ ತುತ್ತಾಗದೆ ಕೆಲವು ಆರೋಗ್ಯವಂತ ಮರಗಳನ್ನು ಕಾಣಬಹುದು. ಆ ಮರಗಳಿಗೆ ರೋಗ ಬಾಧೆ ತಟ್ಟದಿರುವುದಕ್ಕೆ ಕಾರಣಗಳು ಹಾಗೂ ಅದು ಹೊಂದಿರುವ ಸಾಮರ್ಥ್ಯವನ್ನು ಅರಿತು ಇತರ ಮರಗಳಿಗೂ ಲಘು ಪೋಷಕಾಂಶಗಳನ್ನು ಒದಗಿಸಿ ಗಿಡಮರಗಳನ್ನು ಸದೃಢಗೊಳಿಸಬಹುದು. ಗಿಡಮರಗಳಿಗೆ ತಗುಲಿದ ವೈರಸನ್ನು ಸಂಪೂರ್ಣವಾಗಿ ಒಮ್ಮೆಂದೊಮ್ಮೆಗೆ ಹೋಗಲಾಡಿಸಲು ಸಾಧ್ಯವಾಗದು. ಅದಕ್ಕಾಗಿ ಕೆಲಕಾಲ ಹಿಡಿಯಬಹುದು.

ಬೇರು ಹುಳುಗಳ ಬಾಧೆ

ಬೇರು ಹುಳುಗಳ ಬಾಧೆ ಅಡಿಕೆಗೆ ಮಾತ್ರವಲ್ಲ. ಇತರ ಗಿಡಮರಗಳಿಗೂ ಇದೆ. ಬೇರು ಹುಳು ಆಶ್ರಯಿಸಿದ ಹಾಗೂ ಅವುಗಳನ್ನು ಆಹಾರವಾಗಿ ಆಶ್ರಯಿಸಿದ್ದ ಪರಿಸರದ ಸಸ್ಯಗಳು ಕಣ್ಮರೆಯಾದಾಗ ಅಡಿಕೆ ಮರಗಳನ್ನೇ ಪರ್ಯಾಯವಾಗಿ ಆಯ್ದುಕೊಳ್ಳುವ ಸಾಧ್ಯತೆಗಳಿರುತ್ತದೆ. ಬೇರು ಹುಳುಗಳು ಮಳೆಗಾಲದ ಅವಧಿಯಲ್ಲಿ ಮಣ್ಣಿನ ಮೇಲ್ಪದರದಲ್ಲಿದ್ದರೆ ಆಗಸ್ಟ್ ಸಪ್ಟೆಂಬರ್ ನಂತರ ಮಣ್ಣಿನ ಒಳಪದರಿಗೆ ಸೇರಿಕೊಳ್ಳುತ್ತದೆ.

ಸುಮಾರು ಒಂದುವರೆ ಫೀಟ್ ಆಳಕ್ಕಿಳಿಯುತ್ತದೆ. ಇವುಗಳು ಅಡಿಕೆ ಮರದ ಬೇರುಗಳನ್ನೇ ಆಗಾರ ಮಾಡಿಕೊಂಡಾಗ ಮರಗಳಿಗೆ ಬೇರಿನ ಮೂಲಕ ಸಿಗಬೇಕಾದ ಆಹಾರದ ಕೊರತೆಯಾಗುತ್ತದೆ. ಇದರಿಂದ ಮರಗಳು ಸೊರಗುತ್ತವೆ. ನಿಧಾನವಾಗಿ ಸಾಯುತ್ತವೆ. ಮೊಟ್ಟೆ-ಹುಳು-ಚಿಟ್ಟೆಗಳಾಗುವ ವರೆಗಿನ ಅವುಗಳ ಜೀವನ ಚಕ್ರವನ್ನು ತುಂಡರಿಸಲು ಸಾಧ್ಯವಾದಲಿನೀ ಬಾಧೆ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಹೊಯ್ಗೆ ಮಿಶ್ರಿತ ಮಣ್ಣು ಇರುವಲ್ಲಿ ಇವುಗಳ ಬಾಧೆ ಹೆಚ್ಚಿರುತ್ತದೆ. ಬೇರುಹುಳಗಳು ಕಾಡುವ ತೋಟಕ್ಕೆ ಕೆಲವು ತಾಂತ್ರಿಕತೆಯ ಅನುಷ್ಠಾನ ಹಾಗೂ ಕೆಲ ಔಷಧಿಗಳ ಬಳಕೆಯಿಂದ ಸಂಪೂರ್ಣ ಹತೋಟಿಗೆ ತರಬಹುದು.

ಎಲೆಚುಕ್ಕಿ ಸಮಸ್ಯೆ

ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಎಲೆಚುಕ್ಕಿ ರೋಗ ಅಡಿಕೆಗೆ ಮಾರಕವಾಗುತ್ತಿದೆ. ಎಲೆಚುಕ್ಕಿ ರೋಗ ಶಿಲೀಂದ್ರಗಳಿAದ ಬರುವಂತದು.್ದ ಅವುಗಳಿಗೆ ಶಿಲೀಂದ್ರ ನಾಶಕಗಳ ಬಳಕೆಯೇ ತಾತ್ಕಾಲಿಕ ಪರಿಹಾರ. ಮರಗಳಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಇರುತ್ತದೆ. ಅವುಗಳಿಗೆ ಅಗತ್ಯ ಪೋμಕಾಂಶಗಳನ್ನು ಒದಗಿಸುವುದು ಮುಖ್ಯವಾಗುತ್ತದೆ. ಶೀತ ಪ್ರದೇಶ, ನೀರು ಬಸಿದು ಹೋಗಲು ಸಮರ್ಪಕ ಬಸಿಗಾಲುವೆ ಇಲ್ಲದಿರುವುದು, ಸಾವಯವದ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಏಕ ರೀತಿಯ ಸಾವಯುವ ಗೊಬ್ಬರ ಸುರಿಯುವಿಕೆಯು ಕಾರಣವಾಗಬಹುದು. ಇದರಿಂದ ಕ್ರಿಮಿಕೀಟಗಳ ಬಾಧೆ ಹೆಚ್ಚುತ್ತದೆ. ಹಿಂದೆ ತೋಟದ ಬದಿಗಳಲ್ಲಿ ಒಂದಿಷ್ಟು ಕಾಡುಗಳಿದ್ದವು. ಈಗ ಬಹುತೇಕ ಕಡೆಗಳಲ್ಲಿ ಕಾಡುಗಳು ಬರಿದಾಗಿವೆ.

ಈ ಪರಿಸರದಲ್ಲಿ ಅಡಿಕೆ ಹೆಚ್ಚಾಗಿರುವುದರಿಂದ ಅದನ್ನೇ ಆಶ್ರಯಿಸಿಕೊಂಡಿವೆ. ಶಿಲೀಂದ್ರ ರೋಗ ಅಡಿಕೆಯ ಸೋಗೆಯ ಮೇಲೆ ಕಂದು ಬಣ್ಣದ ಚುಕ್ಕೆಗಳಾಗಿ ಕಾಣಿಸಿಕೊಂಡು ತೀವ್ರವಾಗಿ ಬಾಧಿಸುವರಿಂದ ಸೋಗೆಯಲ್ಲಿನ ಹರಿತ್ತುಗಳನ್ನು ತಿಂದು ನಾಶಪಡಿಸುತ್ತವೆ. ಸೋಗೆಗಳು ಸುಟ್ಟಂತಾಗಿ ಗಿಡಗಳಿಗೆ ಬೇಕಾದ ಪೋಷಕಾಂಶ ಪೂರೈಕೆಯಾಗದೆ ಬಿಳುಚಿಕೊಳ್ಳತ್ತವೆ. ಇಂತಹ ಗಿಡಗಳಿಗೆ ಶಿಲೀಂದ್ರ ನಾಶಕಗಳ ಸಿಂಪರಣೆ ಹಾಗೂ ಲಘು ಪೋಷಕಾಂಶವನ್ನು ನೀಡುವುದು ಅವಶ್ಯ. ಒಂದು ವೇಳೆ ಕಡೆಗಣಿಸಿದರೆ, ಪರಿಹಾರೋಪಾಯ ಕಂಡುಕೊಳ್ಳದಿದ್ದರೆ ಇಡೀ ತೋಟಕ್ಕೆ ಆವರಿಸಿ ಇಳುವರಿಯ ಕಡಿಮೆಯಾಗಿ ಆರ್ಥಿಕ ಸಂಕಷ್ಟ ಎದುರಾದೀತು. ಮರಗಳು ಸಾಯಬಹುದು. ಆದುದರಿಂದ ಅಡಿಕೆ ಮರದ ಸೋಗೆಗೆ ಶಿಲೀಂದ್ರ ನಾಶಕಗಳ ಸಿಂಪಡಣೆ ಅತ್ಯವಶ್ಯಕ. ಬೋರ್ಡೊ ದ್ರಾವಣ ಸಿಂಪಡಿಸುವುದಲ್ಲದೆ ಅಡಿಕೆ ಮರಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಾಗಿದೆ. ಗೊಬ್ಬರ, ಲಘು ಪೋಷಕಾಂಶ, ನೀರು ನಿರ್ವಹಣೆಯಿಂದ ಹೆಚ್ಚಿನ ತೋಟಗಳ ಎಲೆಚುಕ್ಕಿ ರೋಗವನ್ನು ನಿಯಂತ್ರಿಸುವಲ್ಲಿ ಸಾಧ್ಯವಿದೆ. ಗಿಡಗಳಿಗೆ ಬೇಕಾದ ನೈಟ್ರೋಜನ್, ರಂಜಕ, ಪೊಟಾಷಿಯಂ ಪ್ರಮಾಣದ ಜೊತೆಗೆ ಲಘು ಪೋಷಕಾಂಶಗಳು ನೀಡುವುದು ಅಗತ್ಯ.

ಸಾವಯುವ ಗೊಬ್ಬರವಾಗಲಿ, ರಾಸಾಯನಿಕ ಗೊಬ್ಬರವಾಗಲಿ, ಆ ಮಣ್ಣಿನ ಸಾರಕ್ಕನುಗುಣವಾಗಿ ನೀಡಬೇಕು. ಹೆಚ್ಚಾದರೂ ಅಪಾಯಕಾರಿ. ರೋಗ ಬಾಧೆಗೆ ಆಹ್ವಾನ ನೀಡಿದಂತಾಗುತ್ತದೆ. ಇದರ ಜೊತೆಗೆ ಗಿಡಗಳಿಗೆ ಬೇಕಾದ ಲಘುಪೋಷಕಾಂಶಗಳನ್ನು ನೀಡುವುದು ಅತ್ಯಗತ್ಯ. ಲಘು ಪೋಷಕಾಂಶ ಕುರಿತಂತೆ ಬಹಳಷ್ಟು ಮಂದಿಗೆ ಮಾಹಿತಿ ಕೊರತೆ ಇದೆ. ಸಮಗ್ರ ಕೃಷಿಯತ್ತಲು ರೈತರು ಗಮನಹರಿಸಬೇಕು.

ಪೆರಾಜೆಯ ಬಂಗಾರಕೋಡಿ ಬಳಿ ಹಳದಿ ರೋಗ ಬಾಧಿತ ತೋಟದ ಪಕ್ಕದಲ್ಲಿಯೇ ೪೦೦ ಹೊಸ ಅಡಿಕೆ ಗಿಡಗಳನ್ನು ಪ್ರಾಯೋಗಿಕವಾಗಿ ನೆಡಲಾಗಿದೆ. ಈ ಗಿಡಗಳ ಬೆಳವಣಿಗೆ, ಅದಕ್ಕಿರುವ ರೋಗ ನಿರೋಧಕ ಶಕ್ತಿ ಮೊದಲಾದುಗಳ ಬಗ್ಗೆ ಅಧ್ಯಯನ ನಡೆಸಲಾಗುವುದು. ಹಳದಿ ರೋಗ ಬಂದ ತೋಟವನ್ನು ಸಂಪೂರ್ಣ ತೆಗೆದು ಅದೇ ಜಾಗದಲ್ಲಿ ಮುಂದಿನ ಮಳೆಗಾಲದ ಹೊತ್ತಿಗೆ ಹೊಸ ಗಿಡಗಳನ್ನು ನೆಟ್ಟು ಅದರಲ್ಲಿಯ ಸಾಧಕ ಬಾಧಕಗಳ ಅಧ್ಯಯನ ನಡೆಸಲಾಗುವುದು.

ಅವೆಂಚುರಾ ಆರ್ಗಾನಿಕಾ” ಸಂಸ್ಥೆಯ ಉತ್ಪಾದಿಸುವ ಲಘು ಪೋಷಕಾಂಶ ಸಂಯೋಜನೆಯ “ಮೈಕ್ರೋ ಪವರ್” ನೀರಿನಲ್ಲಿ ಕರಗುವ ಸಮತೋಲಿತ ಲಘು ಪೋಷಕಾಂಶಗಳ ಮಿಶ್ರಣವಾಗಿದೆ. ಪರಿಸರ ಸ್ನೇಹಿಯಾಗಿರುವ ಈ ಉತ್ಪನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮರಗಳ ಸಮರ್ಪಕ ಬೆಳವಣಿಗೆಯ ಜತೆಗೆ ಅಧಿಕ ಇಳುವರಿ ನೀಡುವಂತೆ ಮಾಡುವ ಉತ್ಪನ್ನವಾಗಿದೆ. ಹಳದಿರೋಗ ಬಾಧಿಸಿದ ಅಡಿಕೆ ಮರಗಳಿಗೆ ಪ್ರಯೋಗಿಸಿದಾಗ ಉತ್ತಮ ಫಲಿತಾಂಶ ಕಂಡಿದೆ. ಕುಬ್ಜ ಎಲೆ, ಕಾಯಿ ವಿಭಜನೆ ಮೊದಲಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅಡಿಕೆ, ತೆಂಗು, ಕೊಕ್ಕೊ, ಕಾಳುಮೆಣಸು ರಬ್ಬರ್, ಕಾಫಿ ಹಾಗೂ ಇತರ ತೋಟಗಾರಿಕೆ ಬೆಳೆಗಳಿಗೆ ಹೂವು, ತರಕಾರಿ,ಹಣ್ಣು ಮೊದಲಾದ ಬೆಳೆಗಳಿಗೆ ಲಘು ಪೋಷಕಾಂಶಗಳ ಅವಶ್ಯಕತೆಯನ್ನು ಪೂರೈಸುತ್ತದೆ. ಇವು ಹರಳುಗಳು ಹಾಗೂ ದ್ರವ ರೂಪದಲ್ಲಿಯೂ ಲಭ್ಯವಿದೆ. ಮಾಹಿತಿಗೆ  9886495008 9343197971

ಸಂದರ್ಶನ: ರಾಧಾಕೃಷ್ಣ ತೊಡಿಕಾನ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group