ಡಾ. ಜಿ. ಶರಶ್ಚಂದ್ರ ರಾನಡೆ
ಕರ್ನಾಟಕವು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತರಾಗಿರುವುದರಿAದ ಹವಮಾನ ಬದಲಾವಣೆಯಿಂದ ಗಂಭೀರವಾಗಿ ಪ್ರಭಾವಕ್ಕೊಳಗಾಗುವ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಸುಮಾರು ಶೇ.64 ರಷ್ಟು ಪ್ರದೇಶವು ಮಳೆ ಆಶ್ರಿತವಾಗಿದೆ. ಇದರಲ್ಲಿ ಶೇ.55 ರಷ್ಟು ಆಹಾರ ಧಾನ್ಯಗಳು ಮತ್ತು ಶೇ.75 ರಷ್ಟು ಎಣ್ಣೆ ಕಾಳುಗಳ ಉತ್ಪಾದನೆಯು ಮಳೆಯಾಶ್ರಿತ ಪ್ರದೇಶದ ಕೊಡುಗೆಯಾಗಿದೆ. ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರಿತ ಕೃಷಿಯಿಂದ ಸುಸ್ಥಿರ ಪರಿವರ್ತಿಸಲು 2014 ರಿಂದ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಕರ್ನಾಟಕ ಕೃಷಿ ಕ್ಷೇತ್ರವು 2024-25 ರಲ್ಲಿ ಶೇ. 4 ರಷ್ಟು ಬೆಳವಣಿಗೆಯನ್ನು ಕಂಡಿದೆ.
ಕರ್ನಾಟಕದಲ್ಲಿ 13.74 ಬಿಲಿಯನ್ ಜನರು ಕೃಷಿಯನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಭಿಸಿದ್ದಾರೆ, ಕರ್ನಾಟಕದ ಶೇ.66 ರಷ್ಟು ಮಂದಿ ಕೃಷಿಯನ್ನೇ ಅವಲಂಭಿಸಿದ್ದಾರೆ. ಗ್ರಾಮೀಣ ಭಾಗದ ಶೇಕಡ 7೦ರಷ್ಟು ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಕರ್ನಾಟಕದಲ್ಲಿ 107.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿಯನ್ನು ಮಾಡಲಾಗುತ್ತಿದೆ. 92 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪನ್ನ ಉತ್ಪಾದಿಸಲಾಗುತ್ತಿದೆ. ಕರ್ನಾಟಕದ 8೦ ಲಕ್ಷ ರೈತರಲ್ಲಿ ಶೇ.9೦ರಷ್ಟು ಜನರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ.2.5 ರಿಂದ 5 ಎಕರೆ ಜಮೀನು ಹೊಂದಿರುವವರನ್ನು ಅಂದರೆ ಒಂದರಿಂದ ಎರಡು ಹೆಕ್ಟೇರ್ ಜಮೀನು ಹೊಂದಿರುವವರನ್ನು ಸಣ್ಣ ರೈತರೆಂದು ಒಂದು ಹೆಕ್ಟೇರಿಗಿಂತ ಕಡಿಮೆ ಜಮೀನು(2.5 ಎಕರೆ) ಹೊಂದಿರುವವರನ್ನು ಅತಿ ಸಣ್ಣ ರೈತರೆಂದು ಪರಿಗಣಿಸಲಾಗುತ್ತದೆ.
ಕರ್ನಾಟಕದ ಸರಾಸರಿ ಭೂ ಹಿಡುವಳಿಯ ಪ್ರಮಾಣ 1.36 ಹೆಕ್ಟೇರ್ ಆಗಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರಲ್ಲಿ ಶೇಕಡ ೬೦ರಷ್ಟು ಜನರು ಮಳೆಯಾಶ್ರಿತ ಕೃಷಿಯನ್ನು ಮಾಡುತ್ತಿದ್ದಾರೆ. ಇವರ ನೆರವಿಗಾಗಿ ಕೃಷಿ ಭಾಗ್ಯ ಯೋಜನೆಯನ್ನು 2014-15 ರಿಂದ
20 21-22ರವರೆಗೆ ಮೊದಲ ಹಂತದಲ್ಲಿ ಜಾರಿಗೊಳಿಸಲಾಗಿತು.್ತ2023-24ನೇ ಸಾಲಿನಿಂದ ಈ ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ.
* ಬದು ನಿರ್ಮಾಣಕ್ಕೆ ಸಾಮಾನ್ಯ ರೈತರಿಗೆ ಶೇ.8೦, ಪರಿಶಿಷ್ಟ ಜಾತಿಪಂಗಡದವರಿಗೆ ಶೇ.9೦ ಸಹಾಯಧನ ಲಭ್ಯವಾಗುತ್ತದೆ.
* ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆಗಾಗಿ ಸಾಮಾನ್ಯ ವರ್ಗಕ್ಕೆ ಗರಿಷ್ಠ ಮಿತಿ 7,೦೦೦ ಕ್ಕೆ ಒಳಪಟ್ಟು ಶೇಕಡ 8೦ರಷ್ಟು ಸಹಾಯಧನ. ಪರಿಶಿಷ್ಟ ಜಾತಿ ಪಂಗಡಕ್ಕೆ ಗರಿಷ್ಠ 8,೦೦೦ ರೂಗೆ ಒಳಪಟ್ಟು ಶೇ.9೦ರಷ್ಟು ಸಹಾಯಧನವಿದೆ
* ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಲು ಸಾಮಾನ್ಯ ರೈತರಿಗೆ ಶೇಕಡ 4೦ರಷ್ಟು ಮತ್ತು ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇಕಡ ೫೦ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಕೃಷಿ ಹೊಂಡದ ರಚನೆಗಾಗಿ ಸಾಮಾನ್ಯ ರೈತರಿಗೆ ಶೇಕಡ 8೦ರಷ್ಟು ಮತ್ತು ಪ.ಜಾತಿ, ಪ. ಪಂಗಡವರಿಗೆ ಶೇಕಡ 9೦ರಷ್ಟು ಸಹಾಯಧನವನ್ನು ನೀಡಲಾಗುತ್ತದೆ
* ಕೃಷಿ ಹೊಂಡದಿಂದ ನೀರೆತ್ತಲು ಡೀಸೆಲ್, ಪೆಟ್ರೋಲ್ ಅಥವಾ 1೦ಹೆಚ್‌ಪಿ ಸೋಲಾರ್ ಪಂಪುಸೆಟ್ ಅಳವಡಿಕೆಗೆ ಗರಿಷ್ಟ 3೦,೦೦೦ ಮಿತಿಗೆ ಒಳಪಟ್ಟು ಸಾಮಾನ್ಯ ರೈತರಿಗೆ ಶೇ.8೦ ಮತ್ತು ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡ 9೦ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.
* ತುಂತುರು ಮತ್ತು ಹನಿ ನೀರಾವರಿ ಯೋಜನೆಯಲ್ಲಿ ಶೇ.9೦ರಷ್ಟು ಸಹಾಯಧನವನ್ನು ಎರಡು ವರ್ಗದ ರೈತರಿಗೆ ನೀಡಲಾಗುತ್ತದೆ.
ಕೃಷಿ ಯಾಂತ್ರೀಕರಣ ಯೋಜನೆ
ಕೃಷಿ ಯಾಂತ್ರೀಕರಣವು ಕೃಷಿಯ ಆಧುನಿಕರಣ ಪ್ರಮುಖ ಅಂಗವಾಗಿದೆ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾರ್ಮಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲು ಒತ್ತು ನೀಡುತ್ತಿದ್ದಾರೆ. ಕೃಷಿ ಯಂತ್ರೋಪಕರಣಗಳು ದುಬಾರಿಯಾಗುತ್ತಿರುವ ಕಾರಣ ಸರಕಾರವೇ ಸಹಾಯಧನವನ್ನು ನೀಡುತ್ತಿದೆ. ರೈತರು ಖರೀದಿಸುವ ಯಂತ್ರೋಪಕರಣ ವೆಚ್ಚದ ಶೇಕಡ 5೦ರಷ್ಟು ಸಹಾಯಧನವನ್ನಾಗಿ ಪಡೆಯುಬಹುದು. ರೈತರಿಗೆ ವೈಯಕ್ತಿಕವಾಗಿ ಸಹಾಯಧನ ಮಿತಿಯು 1 ಲಕ್ಷದಿಂದ 5 ಲಕ್ಷದವರೆಗೆ ಇರುತ್ತದೆ. ಇದು ಖರೀದಿಸಿದ ಉಪಕರಣಗಳನ್ನು ಅವಲಂಭಿಸಿದೆ.
ಪ್ರಮಾಣಿತ ಗುಣಮಟ್ಟದ ಬಿತ್ತನೆ ಬೀಜ ವಿತರಣೆ
ಎಲ್ಲಾ ವರ್ಗದ ರೈತರಿಗೆ ಮುಖ್ಯ ಬೆಳೆಗಳ ಹೈಬ್ರಿಡ್, ಅಧಿಕ ಇಳುವರಿ ತಳಿಗಳು ಹಾಗೂ ತಳಿಗಳ ಉತ್ತಮ ಗುಣಮಟ್ಟ ಪ್ರಮಾಣಿತ ಬಿತ್ತನೆ ಬೀಜಗಳನ್ನು ಮುಂಗಾರು ಹಾಗೂ ಹಿಂಗಾರು ಅಥವಾ ಬೇಸಿಗೆ ಹಂಗಾಮದಲ್ಲಿ ಸಾಮಾನ್ಯ ರೈತರಿಗೆ ಶೇಕಡ 5೦ ಮತ್ತು ಪರಿಶಿಷ್ಟ ಜಾತಿ-ಪಂಗಡ ರೈತರಿಗೆ ಶೇಕಡ 75ರಷ್ಟು ನೀಡಲಾಗುತ್ತಿದೆ. ಬೆಳೆಗಳನ್ನು ಬಾಧಿಸುವ ಕೀಟ, ರೋಗ, ಕಳೆ ನಿರ್ವಹಣೆಯನ್ನು ಕೈಗೊಳ್ಳಲು ರೈತರಿಗೆ ಶೇಕಡ 5೦ರಷ್ಟು ಸಹಾಯಧನವಿದೆ
ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ, ಸಾವಯುವ ಗೊಬ್ಬರ, ರಂಜಕ ಯುಕ್ತ ಸಾವಯುವ ಗೊಬ್ಬರ ಖಾದ್ಯವಲ್ಲದ ಎಣ್ಣೆ ರಹಿತ ಹಿಂಡಿಗೊಬ್ಬರ, ಬೇವು, ಜಿಪ್ಸಂ, ಸುಣ್ಣ, ಡೋಲಾಮೈಟ್, ಲಘು ಪೋಷಕಾಂಶ ಗೊಬ್ಬರಗಳನ್ನು ಸಾಮಾನ್ಯ ರೈತರಿಗೆ ಶೇಕಡ 5೦ ಮತ್ತು ಪರಿಶಿಷ್ಟ ಜಾತಿ-ಪಂಗಡದ ರೈತರಿಗೆ ಶೇ.75 ಸಹಾಯಧನದೊಂದಿಗೆ ವಿತರಿಸಲಾಗುತ್ತದೆ.
ಕೃಷಿ ಉತ್ಪನ್ನಗಳ ಸಂಸ್ಕರಣೆ
ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವ ಯಂತ್ರಗಳನ್ನು ರೈತರು ಮತ್ತು ಬಳಕೆದಾರರಿಗೆ ಒದಗಿಸುವ ಉದ್ದೇಶದಿಂದ ಕೃಷಿ ಸಂಸ್ಕರಣೆ ಘಟಕಗಳಾದ ಹಿಟ್ಟಿನ ಗಿರಣಿ, ಸಣ ್ಣರೈಸ್ ಮಿಲ್, ಎಣ್ಣೆ ತೆಗೆಯುವ ಯಂತ್ರ, ರಾಗಿ ಸ್ವಚ್ಛಗೊಳಿಸುವ ಯಂತ್ರ, ಬೆಲ್ಲದ ಗಾಣ ಮತ್ತು ರೈತರು ಸಕಾಲದಲ್ಲಿ ಉತ್ಪನ್ನಗಳನ್ನು ಒಣಗಿಸಲು ಸಾಮಾನ್ಯ ರೈತರಿಗೆ ಶೇ.5೦, ಪರಿಶಿಷ್ಟ ಜಾತಿ-ಪಂಗಡದ ರೈತರಿಗೆ ಶೇ.9೦ ಸಹಾಯಧನದೊಂದಿಗೆ ಘಟಕಗಳನ್ನು ಪೂರೈಸಲಾಗುತ್ತಿದೆ.
ಕೃಷಿ ಯಂತ್ರಧಾರೆ ಯೋಜನೆ
ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಯೋಜನೆ ಅಡಿ ಸಕಾಲದಲ್ಲಿ ಹಾಗೂ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳ ತಯಾರಿ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರವನ್ನು ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗಿದೆ.
ಸೂಕ್ಷ್ಮ ನೀರಾವರಿ ಯೋಜನೆ
ರೈತರಲ್ಲಿ ನೀರಿನ ಮಿತ ಬಳಕೆಯನ್ನು ಪ್ರೋತ್ಸಾಹಿಸಲು ತುಂತುರು/ ಹನಿ ನೀರಾವರಿ ಘಟಕಗಳನ್ನು ಸ್ಥಾಪಿಸಲು ಎಲ್ಲಾ ವರ್ಗದ ರೈತರಿಗೆ 2 ಹೆಕ್ಟೇರ್ ವಿಸ್ತೀರ್ಣಕ್ಕೆ ಸಾಮಾನ್ಯ ರೈತರಿಗೆ ಶೇ.9೦ ಸಹಾಯಧನ ಮತ್ತು 2ರಿಂದ 5 ಹೆಕ್ಟೇರ್ ವರೆಗೆ ಸಾಮಾನ್ಯ ರೈತರಿಗೆ ಶೇಕಡ 45 ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡ 9೦ರಷ್ಟು ಸಹಾಯಧನವನ್ನು ಒದಗಿಸಲಾಗುತ್ತದೆ.
ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಮನೆಬಾಗಿಲಿಗೆ
ಮುಂಗಾರು ಹಂಗಾಮ ಪೂರ್ವದಲ್ಲಿ ರೈತರಿಗೆ ಕೃಷಿಯನ್ನು ಹೆಚ್ಚು ಲಾಭದಾಯಕವನ್ನಾಗಿ ಮಾಡಲು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ, ಸಂವಾದ ಹಾಗೂ ವಿವಿಧ ಕೃಷಿ ಚಟುವಟಿಕೆಗಳ ಕುರಿತು ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಅರಿವು ಮೂಡಿಸುವುದು ಹಾಗೂ ಮಾಹಿತಿ ಒದಗಿಸುವುದು
ಕರ್ನಾಟಕ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಇವುಗಳಿಂದ ಅಥವಾ ಪ್ರಕೃತಿ ವಿಕೋಪದಿಂದ ರೈತರಿಗೆ ರಕ್ಷಣೆ ನೀಡಲು ಕೃಷಿ ವಿಮಾ ಸಂಸ್ಥೆಗಳ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೊಳಿಸಲಾಗಿದೆ. ಸಾಲ ಪಡೆಯುವ ರೈತರಿಗೆ ರಕ್ಷಣೆ ನೀಡಲು ಈ ಯೋಜನೆ ಕಡ್ಡಾಯವಾಗಿದ್ದು ಉಳಿದ ರೈತರಿಗೆ ಐಚ್ಛಿಕ. ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ
ಕೇಂದ್ರ ಸರ್ಕಾರ ಪಿಎಂ ಯೋಜನೆಯಡಿ ವಾರ್ಷಿಕವಾಗಿ 6,೦೦೦ರೂಗಳನ್ನು ಅರ್ಹ ರೈತ ಫಲಾನುಭವಿಗಳಿಗೆ ನೀಡಲಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಅಕ್ಕಿ, ದ್ವಿದಳ ಧಾನ್ಯ ಎಣ್ಣೆಕಾಳು ಬೆಳೆಗಳಲ್ಲಿ ಇಳುವರಿಯನ್ನು ಹೆಚ್ಚಿಸಲು ತಾಂತ್ರಿಕತೆಯನ್ನು ನೀಡಲು ಪ್ರತಿ ಹೆಕ್ಟೇರಿಗೆ ರೂ. 9೦೦೦ ಸಹಾಯಧನವನ್ನು ನೀಡಲಾಗುತ್ತದೆ. ಸಮಗ್ರ ಪೋಷಕಾಂಶ ಸಮಗ್ರ ಸಮಗ್ರ ಪೀಡೆ ನಿರ್ವಹಣೆ, ನೀರಾವರಿ ಸಾಧನೆಗಳು, ಸ್ಥಳೀಯ ಪ್ರೇರಕಗಳು ಹಾಗೂ ಕೃಷಿಯಂತ್ರೋಪಕರಣಗಳನ್ನು ಶೇ. 5೦ರ ಸಹಾಯಧನದಲ್ಲಿ ಒದಗಿಸಲಾಗುತ್ತಿದೆ.
ಕೃಷಿ ಸಂಜೀವಿನಿ
ಕೀಟ ರೋಗ ಮತ್ತು ಕಳೆ ಬಾಧೆ ಮತ್ತು ಮಣ್ಣಿನ ಪೋಷಕಾಂಶಗಳ ಕೊರತೆ ಹಾಗೂ ಸಮರ್ಪಕ ನಿರ್ವಹಣೆಗೆ ರೈತರ ತಾಕುಗಳಲ್ಲೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯ ಒದಗಿಸಲು ರೈತರ ಸಹಾಯವಾಣಿ ಸಂಖ್ಯೆ 155313 ಕ್ಕೆ ಉಚಿತ ಕರೆ ಮಾಡಿದ್ದಲ್ಲಿ ಕೃಷಿ ಸಂಜೀವಿನಿ ವಾಹನವು ಸಿಬ್ಬಂದಿಯೊಂದಿಗೆ ರೈತರ ತಾಕುಗಳಿಗೆ ಭೇಟಿ ನೀಡಿ ಸಲಹೆ ನೀಡಲಾಗುತ್ತದೆ.
ಕೃಷಿ ಪ್ರಶಸ್ತಿ
ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಲು ಮತ್ತು ಆರೋಗ್ಯಕರ ಸ್ಪರ್ಧಾ ಮನೋಭಾವವನ್ನು ಉಂಟು ಮಾಡಲು ರಾಜ್ಯ ಮಟ್ಟದಲ್ಲಿ 5೦,೦೦೦ ರೂ ಪ್ರಥಮ ಬಹುಮಾನ, ದ್ವಿತೀಯ 4೦,೦೦೦ರೂ, ತೃತೀಯ 35,೦೦೦ ಬಹುಮಾನ, ಜಿಲ್ಲಾಮಟ್ಟದಲ್ಲಿ ಪ್ರಥಮ 3೦,೦೦೦ ದ್ವಿತೀಯ 25,೦೦೦ ತೃತೀಯ 2೦,೦೦೦, ತಾಲೂಕು ಮಟ್ಟದಲ್ಲಿ ಪ್ರಥಮ ಹದಿನೈದು ಸಾವಿರ, ದ್ವಿತೀಯ ಹತ್ತು ಸಾವಿರ ಹಾಗೂ ತೃತೀಯ 5೦೦೦ ಬಹುಮಾನದ ಮೂಲಕ ಉತ್ತೇಜನ ನೀಡಲಾಗುವುದು.
ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ
ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಸಾವು ಅಥವಾ ಅಂಗವಿಕಲತೆ ಉಂಟಾದಲ್ಲಿ ವಿಮಾ ಸೌಲಭ್ಯದ ಪರಿಹಾರ ಧನ ನೀಡಲಾಗುವುದು. ರಾಜ್ಯದ 15 ರಿಂದ 6೦ ವರ್ಷ ಇರುವ ರೈತರು ಈ ಯೋಜನೆಯಲ್ಲಿ ವ್ಯಾಪ್ತಿಗೆ ಬರುತ್ತಾರೆ.
ಕೃಷಿ ಉತ್ಪನ್ನ ಅಡಮಾನ ಯೋಜನೆ
ಕೃಷಿ ಉತ್ಪನ್ನಗಳಿಗೆ ಉತ್ತಮ ಧಾರಣೆ ದೊರೆಯದೆ ಇದ್ದಾಗ ರೈತರು ಹತಾಶ ಬೆಲೆಯಲ್ಲಿ ಮಾರುವ ಸಂಕಷ್ಟದಿಂದ ಪಾರು ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅಡಮಾನ ಸಾಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಗರಿಷ್ಠ 2 ಲಕ್ಷ ರೂಗಳನ್ನು ಮಿತಿಗೆ ಒಳಪಟ್ಟ 180 ದಿನಗಳ ಅವಧಿಯವರೆಗೆ ಉತ್ಪನ್ನಗಳನ್ನು ಅಡವಿಟ್ಟು ರೈತರು ಸಾಲವನ್ನು ಪಡೆಯಬಹುದಾಗಿದೆ. ರೈತರು ಮೊದಲ 9೦ ದಿನಗಳಿಗೆ ಬಡ್ಡಿಯನ್ನು ನೀಡಬೇಕಾಗಿಲ್ಲ. ನಂತರ 25,೦೦ಗಳಿಗೆ ಶೇ.4 25,೦೦೦ ರೂಗಳಿಂದ 50,೦೦೦ರೂ.ಗಳಿಗೆ ಶೇ.6, 5೦ರಿಂದ 1 ಲಕ್ಷದ ವರೆಗೆ ಶೇ.8, ಮತ್ತು ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ಶೇ.1೦ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತಿದೆ.
ಕೃಷಿ ಸಹಾಯ ಧನ ಯೋಜನೆಗಳಿಂದ ರೈತರಿಗೆ ಅನುಕೂಲವಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತೆ ಸಾಧ್ಯವಾಗುತ್ತದೆ ಒಳಹರಿವಿನ ವೆಚ್ಚ ಕಡಿಮೆಯಾಗಿ ಉತ್ಪಾದನೆ ಹೆಚ್ಚುತ್ತದೆ. ನೇರ ಕೃಷಿ ಪದ್ಧತಿಗಳು ಜಾರಿಗೆ ಬಂದು ರಾಷ್ಟçದ ಜಿಡಿಪಿಯಲ್ಲಿ ಕೃಷಿಯ ಪಾಲು ಹೆಚ್ಚುತ್ತದೆ. ರಾಷ್ಟ್ರೀಯ ಪೋಷಕಾಂಶಗಳ ಭದ್ರತೆಯಾಗುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕಾಭಿವೃದ್ಧಿಯಾಗುತ್ತದೆ. ಕೃಷಿ ಉತ್ಪಾದಕತೆಯಲ್ಲಿ ಹೆಚ್ಚಳ ಮತ್ತು ಗ್ರಾಮೀಣ ಭಾಗದ ಜನರ ಆದಾಯದ ಅಸಮಾನತೆಯನ್ನು ಸಹಾಯಧನ ಯೋಜನೆ ಹೋಗಲಾಡಿಸುತ್ತದೆ