-ಪ್ರಬಂಧ ಅಂಬುತೀರ್ಥ
ದೇಶಾವರಿ ಅಡಿಕೆ ವಿಚಾರ ಮಾತನಾಡುವಾಗ ಗುಟ್ಕ ಪೂರ್ವ ಮತ್ತು ಗುಟ್ಕೋತ್ತರ ದ ಬಗ್ಗೆ ಮಾತನಾಡಬೇಕಾಗುತ್ತದೆ. ಗುಟ್ಕ ಪೂರ್ವ ಎಂದರೆ ಸುಮಾರು ನಲವತ್ತು ವರ್ಷಗಳ ಹಿಂದಿನ ಕಾಲದ ಅಡಿಕೆ ವ್ಯಾಪಾರ ವ್ಯವಸ್ಥೆ ಜ್ಞಾಪಕ ವಾಗುತ್ತದೆ. ಆಗ ಅಡಿಕೆ ಬಹುತೇಕ ತಿನ್ನುವ ಉದ್ದೇಶ ಕ್ಕೆ ಬಳಕೆಯಾಗುತ್ತಿತ್ತು. ಆಗ ನಾವೆಲ್ಲ ಚಿಕ್ಕವರಾಗಿದ್ವಿ. ಅಡಿಕೆ ಯಿಂದ ಬಣ್ಣ ತಯಾರಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದದ್ದನ್ನ ನಾವು ಕೇಳಿದ್ದೆವೆ. ನಂತರ ಗುಟ್ಕಾ ಬಂತು. ತೋಟಗಾರಿಕಾ ಕೃಷಿ ಉತ್ಪನ್ನವೊಂದಕ್ಕೆ ಇಷ್ಟೊಂದು ಸ್ಟಾರ್ ವಾಲ್ವು ಬಂದದ್ದು ಅಡಿಕೆ ಬೆಳೆ ಗೆ ಮಾತ್ರ. ದೇಶದಾದ್ಯಂತ ಯುವ ಜನರು ಗುಟ್ಕಾ ತಿನ್ನುವ ಹವ್ಯಾಸವನ್ನು ಮಾಡಿಕೊಂಡರು.
ಹಿಂದೆ ಎಲೆ ಅಡಿಕೆ ಸಂಚಿಯೋ , ಪೆಟ್ಟಿಗೆಯೋ ಅಥವಾ ಚೀಲವೋ ಇಟ್ಟುಕೊಂಡವರು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಎಲ್ಲೆಡೆ ಕಾಣಸಿಗುತ್ತಿದ್ದರು. ಮಲೆನಾಡಿಗರ ಬಹುತೇಕರ ಮನೆಯ ಟೇಬಲ್ ಮೇಲೆ ಜೀವಂತ ಎಲೆ ಅಡಿಕೆ ಪೆಟ್ಟಿಗೆ ಇರುತ್ತಿತ್ತು.
smart ಗುಟ್ಕಾ ಬಂದ ನಂತರ ಎಲೆ ಅಡಿಕೆ ಚೀಲ ಕಾಣೆಯಾಯಿತು. ಸಾಮಾನ್ಯವಾಗಿ ಅಡಿಕೆ ಬೆಳೆಗಾರರೇ ಸಾಂಪ್ರದಾಯಿಕ ಎಲೆ ಅಡಿಕೆ ಹಾಕೋದು ಕಾಣೋದು ಅಪರೂಪದಲ್ಲಿ ಅಪರೂಪ.
ನಲವತ್ತು ವರ್ಷಗಳ ಹಿಂದೆ ಮಲೆನಾಡಿನ ಭಾಗದವರು ಶಿವಮೊಗ್ಗ ಪಟ್ಟಣಕ್ಕೆ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಅಡಿಕೆ ವ್ಯಾಪಾರಕ್ಕೆ ಹೋಗುತ್ತಿದ್ದರು. ಮುಂದಿನ ಸೋಮವಾರ ಮಂಡಿಗೆ ವ್ಯಾಪಾರ ಕ್ಕೆ ಹೋಗಬೇಕು ಎಂದಾದರೆ ಈ ವಾರದಿಂದ ಅಡಿಕೆ ಬೆಳೆಗಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಶಿವಮೊಗ್ಗ ಪಟ್ಟಣದ ಹಳೇ ಪೋಸ್ಟ್ ಆಫೀಸ್ ಹತ್ತಿರ ಅಡಿಕೆ ಮಂಡಿಗಳಿದ್ದವು. ದತ್ತಾತ್ರಿ ಶಾಸ್ತ್ರಿಗಳ ಮಂಡಿ, ಸರ್ ಆಫ್ ಮಂಡಿ, ಜಯಲಕ್ಷ್ಮಿ ಮಂಡಿ, ಹೊಸೂಡಿ ವೆಂಕಟೇಶ ಶಾಸ್ತ್ರಿಗಳ ಮಂಡಿ, ಇಂತಹ ಹತ್ತಾರು ಮಂಡಿಗಳು ಆ ಕಾಲದಲ್ಲಿ ಅಡಿಕೆ ವ್ಯಾಪಾರ ವ್ಯವಸ್ಥೆಯ ಬೇರುಗಳಾಗಿದ್ದವು. ಮಲೆನಾಡಿನ ಅಡಿಕೆ ಬೆಳೆಗಾರರು ವಾರ ಗಟ್ಟಲೇ ಶಿವಮೊಗ್ಗದಲ್ಲೇ ಬೀಡು ಬಿಟ್ಟು ಅಡಿಕೆ ಮಾರಿ ಹಣ ತರುತ್ತಿದ್ದರು. ಆಗ ಅಡಿಕೆ ಅಷ್ಟು ಶ್ರೇಷ್ಠವಾಗಿ ತಯಾರಿಸಲಾಗುತ್ತಿತ್ತು.ಇರಲಿ ಈಗಿನ ಅಡಿಕೆ ಮಾರುಕಟ್ಟೆ ವಿಚಾರಕ್ಕೆ ಬರೋಣ. ಈಗಲೂ ಬಹಳಷ್ಟು ಮಂದಿ ವಿಶ್ಲೇಷಕರು ಅಡಿಕೆಯನ್ನ ಬಣ್ಣ ತಯಾರಿಕೆಗೆ ಬಳಸುತ್ತಾರೆ ಎನ್ನುತ್ತಾರೆ .ಆದರೆ ಇದು ಸತ್ಯ ವಾ.?
ಈ ಕೃತಕತೆಯ ಯುಗದಲ್ಲಿ ಎಲ್ಲಾ ಒರಿಜಿನಲ್ಗೂ ಕೃತಕತೆ ಬಂದಾಗ ಅಡಿಕೆ ಗೇಕೆ ಬಣ್ಣದ ಕೈಗಾರಿಕೆ ಅವಲಂಭಿತವಾಗಿದೆ . ಅಡಿಕೆಯಿಂದ ಬಣ್ಣ, ಅಡಿಕೆ ಟೀ, ಅಡಿಕೆ ಸೋಪು ಇತ್ಯಾದಿ ಗಳು ಅಡಿಕೆ ಉತ್ಪನ್ನ ದ 0.1 ಭಾಗವೂ ಬಳಕೆ ಇಲ್ಲ ಎನಿಸುತ್ತದೆ.
ಅಡಿಕೆ ಖರೀದಿದಾರ ಗುಟ್ಕೋದ್ಯಮಿ ಬಯಸೋದು ಅಡಿಕೆ ಬಾಳಿಕೆ ಮಾತ್ರ.ಕಳೆದ ಎರಡು ತಿಂಗಳ ಹಿಂದೆ ನಾವು ದಾಸ್ತಾನು ಇಟ್ಟಿದ್ದ ಆಕಸ್ಮಿಕವಾಗಿ ಹೂ ಬಂದಿದ್ದ ನಮ್ಮ ಅಡಿಕೆಯಲ್ಲಿ ಹೂ ಬರದ ಅಡಿಕೆಯನ್ನ ಆರಿಸಿ ಮೂಟೆ ಮಾಡಿ ಮಾರುಕಟ್ಟೆಗೆ ಕಳಿಸಿ ಮಾರಾಟಕ್ಕೆ ಬಿಟ್ಟಿ ದ್ದೆವು. ಆದರೆ ಆರಿಸಿದ ಒಳ್ಳೆಯ ಅಡಿಕೆ ಗೂ ವ್ಯಾಪಾರಿಗಳು ತೀರಾ ಕನಿಷ್ಠ ದರ ನಮೂದಿಸಿದ್ದರು ? ಏಕೆ ಹೀಗೆ ಮಾಡಿದರು ? ಅಡಿಕೆ ವ್ಯಾಪಾರಿ ಗಮನಿಸೋದು ಅಡಿಕೆ ಗಟ್ಟಿತನವನ್ನ. ಅಡಿಕೆ ಗುಟ್ಕಾಕ್ಕೆ ಫೇವರೇಟು ಆಗಿದ್ದು ಗುಟ್ಕಾ ಅಮಲುಕಾರಕ ಅಂಶಗಳನ್ನು ಸುದೀರ್ಘ ಕಾಲ ಹಿಡಿದಿಟ್ಟು ಕೊಳ್ಳುವ ಕಾರಣಕ್ಕೆ. ಈ ಅಂಶಗಳನ್ನು ಹೀರಿ ಕೊಳ್ಳಲು ಅಡಿಕೆ ಗಟ್ಟಿಯಾಗಿರಲೇ ಬೇಕು ಮತ್ತು ಪುಡಿ ಮಾಡುವ ಯಂತ್ರದಲ್ಲಿ ಹಾಕಿ ದಾಗ ಗುಟ್ಕಾ ತಯಾರಿಕನ ಇಚ್ಚೆಯ ಆಕಾರದಲ್ಲಿ ಪುಡಿಯಾಗಬೇಕು.
ಒಂದು ವರ್ಷದ ಹಿಂದೆ ನನಗೊಂದು ಬಂಡಲ್ ಗುಟ್ಕಾ ಪೌಚ್ ಸಿಕ್ಕಿತ್ತು. ಅದನ್ನ ಗುಟ್ಕಾ ತಿನ್ನುವವರೊಬ್ಬರಿಗೆ ನೀಡಿದೆ. ಅವರು ಅದನ್ನು ನೋಡಿ ಪೌಚ್ ಒಡೆದು ಉಫ್ ಮಾಡಿ ಈ ಪೌಚ್ ಹಳತಾಗಿ ಕಹಿ ವಿಷವಾಗಿದೆ , ಇದು ತಿನ್ನಲು ಬರೋಲ್ಲ ಎಂದು ಹೇಳಿದ್ದರು.
ಇದು ಅಡಿಕೆ ಗುಟ್ಕಾ ಸೀಕ್ರೆಟ್
ಗುಟ್ಕಾ ಗೆ ಅಡಿಕೆ ಬಿಟ್ಟರೆ ಇನ್ಯಾವ ಪರ್ಯಾಯ ಮಾದ್ಯಮ ವೂ ಇಲ್ಲ. ಬಹುಶಃ ನಲವತ್ತು ಐವತ್ತು ವರ್ಷಗಳ ಹಿಂದೆ ನೇರವಾಗಿ ತಿನ್ನುವ ಕಾಲದಲ್ಲಿ ಅಡಿಕೆ ಸುಮಾರು ಮೂವತ್ತು ನಲವತ್ತು ಮಾದರಿಯಲ್ಲಿ ಸಂಕಲವಾಗುತ್ತಿತ್ತು. ರಾಶಿ ಇಡಿಯಲ್ಲಿ ಒಂದಷ್ಟು ಬಗೆ, ಹಸ ಅಡಿಕೆ ಯಲ್ಲಿ ಸುಮಾರು ಹದಿನೆಂಟು ಬಗೆ , ಬೆಟ್ಟೆ ಅಡಿಕೆ ಮಾದರಿಯಲ್ಲಿ ಮತ್ತೊಂದಷ್ಟು ಬಗೆ ಅಡಿಕೆ ಸಂಕಲನ ವಾಗಿ ಖರೀದಿದಾರರು ಖರೀದಿಸಿ ಕೊಂಡೊಯ್ಯುತ್ತಿದ್ದರು. ಮಲೆನಾಡು + ಕರಾವಳಿಯ ಸಾಂಪ್ರದಾಯಿಕ ಅಡಿಕೆ ದೇಶದಾದ್ಯಂತ ಆ ಯಾ ಭಾಗದ ಅಡಿಕೆ ತಿನ್ನುವ ಗ್ರಾಹಕರ ಬೇಡಿಕೆಗನುಗುಣವಾಗಿ ಮಾರಾಟವಾಗುತ್ತಿತ್ತು.
ಈಗ ದೇಶದಾದ್ಯಂತ ನೇರವಾಗಿ ಅಡಿಕೆ ತಿನ್ನುವ ಜನರೇ ಕಡಿಮೆಯಾಗಿದ್ದಾರೆ. ಅಡಿಕೆ ಗುಟ್ಕಾದ ಮೇಲೆ ಅವಲಂಬಿಸಿದೆ.
ಅಡಿಕೆಗೇಕೆ ಬಣ್ಣ ಹಾಕುತ್ತಾರೆ…?
ಅಡಿಕೆ ಬೆಳೆಯದ ಖರೀದಿದಾರರನ್ನ ಆಕರ್ಷಿಸುವ ಹೊರತಾಗಿ ಬೇರೇನೂ ಇಲ್ಲ. ಗೊರಬಲು ಪಾಲಿಷರ್ ನ ಬೋಳು ಬೆರಕೆ ರಾಶಿ ಇಡಿ ಯಾಕೆ ರಿಜೆಕ್ಟ್ ಆಗುತ್ತಿದೆ…? ಹಸಿ ಸುಲಿದ ಅಡಿಕೆ ಕೆಂಪಡಿಕೆ ಗುಟ್ಕಾ ರಾಸಾಯನಿಕ ಗಳನ್ನು ಹೀರುವ ಹಾಗೆ ಒಣ ಚಾಲಿಯಾಗಬಹುದಾದ ಅಡಿಕೆಯ ಪುಡಿ ಹೀರದು.ನೀವು ಈ ಗೊರಬಲು ಪಾಲಿಷರ್ ಅಡಿಕೆ ಯನ್ನು ಗಮನಿಸಿ ನೋಡಿ. ಈ ಅಡಿಕೆಗೆ ಒತ್ತಾಯ ಮಾಡಿ ಬಣ್ಣ ಹಾಕಲಾಗಿರುತ್ತದೆ . ಈ ಅಡಿಕೆಯನ್ನ ಕತ್ತರಿಸಿ ನೋಡಿ ಮತ್ತು ರಾಶಿ ಇಡಿ ಅಡಿಕೆಯನ್ನ ಕತ್ತರಿಸಿ ನೋಡಿ…. ವ್ಯತ್ಯಾಸ ನಿಮಗೇ ಗೊತ್ತಾಗುತ್ತದೆ.
ಗುಟ್ಕಾ ತಯಾರಿಕೆ ಒಂದು ರಾಸಾಯನಿಕ ಕ್ರಿಯೆ. ಯಾವುದೇ ಉತ್ಪನ್ನ ತಯಾರಿಕೆ ಯಾಗಲು ಒಂದು ಸರಿಯಾದ ಸಂಯೋಜನೆಯಾಗಬೇಕು. ಒಂದು ರವೆ ಉಪ್ಪಿಟ್ಟು ಮಾಡಲು ಅಡಿಗೆ ಮನೆಯಲ್ಲಿ ಕಚ್ಚಾ ರವೆಯನ್ನ ನೇರವಾಗಿ ಉಪ್ಪಿಟ್ಟು ಮಾಡಲು ಬಳಸದೇ ಹುರಿದು ಉಪ್ಪಿಟ್ಟು ಮಾಡಲು ಬಳಸಿದಂತೆ ಗುಟ್ಕ ತಯಾರಿಕೆ ಕೂಡ ಹೀಗೆಯೇ ತಯಾರಾಗುತ್ತದೆ. ಉಪ್ಪಿನಕಾಯಿ ತಯಾರಿಸಲು ಮಾವಿನ ಮಿಡಿ ನಂ ಒನ್. ಗುಟ್ಕಾ ತಯಾರಿಕೆಗೆ ಅಡಿಕೆಯೇ ನಂ ಒನ್. ಅಡಿಕೆ ಈ ನಲವತ್ತು ವರ್ಷಗಳ ಹಿಂದಿನಂತೆ ನೇರವಾಗಿ ತಿನ್ನುವ ಜನರಿದ್ದರೆ ಇವತ್ತು ಹಸ ಮಾದರಿಯ ಅಡಿಕೆಗೆ ಒಂದೂವರೆ ಲಕ್ಷ ರೂಪಾಯಿ ಇರುತ್ತಿತ್ತು. ಬೆಟ್ಟೆ ಮಾದರಿಯ ಅಡಿಕೆ ಗೂ ರಾಶಿ ಇಡಿ ಅಡಿಕೆಗೂ ಬೆಲೆ ಅಜಗಜಾಂತರ ವ್ಯತ್ಯಾಸ ಇರುತ್ತಿತ್ತು. ಅಡಿಕೆ ಯ ಬಗೆ ಬಗೆಯ ಮಾದರಿಗೆ ಬೆಲೆ ಇಲ್ಲ…!! ಅಡಿಕೆ ಗಟ್ಟಿತನವೇ ಅಡಿಕೆ ಯ ಬೇಡಿಕೆಯ ಆಧಾರ.
ಬೂತಾನ್ ಆಮದು ಅಡಿಕೆ ಕಥೆ ಏನು…?
ಈ ಅಡಿಕೆಯನ್ನ ಖೂಳ ವ್ಯಾಪಾರಿಗಳು ಕಲಬೆರಕೆ ಮಾಡಲು ಬಳಸುತ್ತಿದ್ದಾರೆ. ಇದೊಂದು ದೊಡ್ಡ ಜಾಲ.
ತಯಾರಕಾ ಸದ್ಯ ಅಡಿಕೆ ನೇರವಾಗಿ ಖರೀದಿಸುತ್ತಿಲ್ಲ. ಈ ಖರೀದಿ ದಲ್ಲಾಳಿ ಗಳು ಅಡಿಕೆ ವ್ಯಾಪಾರ ಮಾಡುತ್ತಿರುವು ದರಿಂದ ಈ ಮಾರುಕಟ್ಟೆ ಅಲ್ಲೋಲ ಕಲ್ಲೋಲ ಆಗುತ್ತಿದೆ.
ಈ ಅಡಿಕೆ ಮಾರುಕಟ್ಟೆ ಕುಸಿತ ಅನಾಹುತ ವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ ಇತ್ತೀಚಿನ ದಿನಗಳಲ್ಲಿ ಅಡಿಕೆ ರಿಜೆಕ್ಟ್ ಆಗುತ್ತಿದೆ ಏಕೆ?ಒಂದು ವೇಳೆ ಗುಟ್ಕಾ ತಯಾರಕನೇ ಮಾರುಕಟ್ಟೆಗೆ ಬಂದು ಖರೀದಿ ಮಾಡು ವವನಾಗಿದ್ದರೆ ಅವನು ಈ ಬೆರಕೆ , ಕಳಪೆ ಅಡಿಕೆಯನ್ನ ಕರ್ನಾಟಕದಿಂದ ಕಾನ್ಪುರ ಕ್ಕೆ ಕೊಂಡೊಯ್ಯಲು ಮಂಡೆ ಕೆಟ್ಟಿದೆಯ.
ಅಡಿಕೆ ಉತ್ಪನ್ನ ಸದ್ಯ ಗುಟ್ಕಾ ಕ್ಕೆ ಹೊರತಾಗಿ ಗಂಭೀರ ಪ್ರಮಾಣದಲ್ಲಿ ಬೇರಾವುದೇ ಬಗೆಯ ಉತ್ಪನ್ನ ಗಳಿಗೆ ಬಳಕೆಯಾಗುತ್ತಿಲ್ಲ…!!!! ಬಹಳ ದೊಡ್ಡ ಪ್ರಮಾಣದಲ್ಲಿ ಗುಟ್ಕಾ ಮಾರುಕಟ್ಟೆ ವ್ಯವಸ್ಥೆ ಇದೆ. ಹಾಗಾಗಿ ಅಡಿಕೆಗೆ ಗುಟ್ಕಾದ ಮೂಲಕ ಅಥವಾ ಗುಟ್ಕಾ ಕಾರಣಕ್ಕೆ ಬೇಡಿಕೆಯಿದೆ. ಅಡಿಕೆ ಬ್ಯಾನು, ಗುಟ್ಕಾಬ್ಯಾನು, ಅಡಿಕೆ ಕ್ಯಾನ್ಸರ್ ಕಾರಕ ಇತರ ನಾಟಕಗಳು ಈ ಅಡಿಕೆ ಮದ್ಯವರ್ತಿ ದಲ್ಲಾಳಿಯ ಕಿತಾಪತಿ.
ಈ ವಿದೇಶಿ ಕಳ್ಳ ಅಡಿಕೆ ಕೂಡ ಈ ಅಡಿಕೆ ಮದ್ಯವರ್ತಿ ದಲ್ಲಾಳಿಗಳ ಕಿತಪಾತಿ… ಒಂದಲ್ಲ ಒಂದು ದಿನ ಅಪಾಯಕಾರಿ ಬಣ್ಣ, ಕಳಪೆ ಅಡಿಕೆ ಯನ್ನು ಹಂತ ಹಂತವಾಗಿ ಬೆರಸಿ ಸಂಪೂರ್ಣವಾಗಿ ಅಡಿಕೆ ಬೇಡಿಕೆಗೇ ಪ್ರಹಾರ ನೀಡಲಿದ್ದಾರೆ….!!! ಈ ಕಳ್ಳ ಬೆಕ್ಕಿಗೆ ಘಂಟೆ ಕಟ್ಟುವವರಾರು…?