spot_img
Tuesday, September 8, 2026
spot_imgspot_img

ಮತ್ತೆ ಬಂತು ಕೃಷಿಕರ ಸಂಭ್ರಮದ ಹಬ್ಬ ಧಾರವಾಡ ಕೃಷಿಮೇಳ, ಯಾವಾಗ ಶುರು? ಈ ಸಲ ಏನು ವಿಶೇಷ?

ಧಾರವಾಡ: ರೈತರು, ಕೃಷಿ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆಪ್ಟೆಂಬರ್ 25ರಿಂದ 28ರವರೆಗೆ ನಾಲ್ಕು ದಿನಗಳ ಕೃಷಿಮೇಳ–2026 ಆಯೋಜಿಸಲಾಗಿದೆ.

ಈ ಬಾರಿ ‘ಸಶಕ್ತ ಮಹಿಳೆ–ಸುಸ್ಥಿರ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ಕೃಷಿಮೇಳ ನಡೆಯಲಿದ್ದು, ಕೃಷಿ ಮತ್ತು ಆಹಾರ ವ್ಯವಸ್ಥೆಯಲ್ಲಿ ಮಹಿಳೆಯರು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಗುರುತಿಸಿ ಮೇಳವನ್ನು ಮಹಿಳಾ ರೈತರಿಗೆ ಸಮರ್ಪಿಸಲಾಗಿದೆ.

ಆಧುನಿಕ ಕೃಷಿ ತಂತ್ರಜ್ಞಾನಗಳ ಪರಿಚಯ

ಕೃಷಿಮೇಳದಲ್ಲಿ ಸುಸ್ಥಿರ ಹಾಗೂ ನೈಸರ್ಗಿಕ ಕೃಷಿ, ಸಾವಯವ ಕೃಷಿ, ಸಮಗ್ರ ಬೆಳೆ ನಿರ್ವಹಣೆ, ಪೋಷಕಾಂಶ ನಿರ್ವಹಣೆ, ಪೀಡೆಗಳ ನಿಯಂತ್ರಣ ಮತ್ತು ಹಿಂಗಾರು ಬೆಳೆಗಳ ತಾಂತ್ರಿಕತೆ ಸೇರಿದಂತೆ ಹಲವು ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ.

‘ಬೀಜದಿಂದ ಮಾರುಕಟ್ಟೆವರೆಗೆ’ ಎಂಬ ಪರಿಕಲ್ಪನೆಯಡಿ ಬೀಜ ಮೇಳ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಕುರಿತ ಪ್ರದರ್ಶನ ಹಾಗೂ ಮಾಹಿತಿ ವ್ಯವಸ್ಥೆ ಇರಲಿದೆ. ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ಪಡೆಯುವ ವಿಧಾನಗಳ ಬಗ್ಗೆಯೂ ರೈತರಿಗೆ ಮಾರ್ಗದರ್ಶನ ದೊರೆಯಲಿದೆ.

ಮಹಿಳಾ ರೈತರಿಗೆ ವಿಶೇಷ ಆದ್ಯತೆ

ಈ ಬಾರಿಯ ಕೃಷಿಮೇಳದ ಪ್ರಮುಖ ಆಕರ್ಷಣೆ ಮಹಿಳಾ ರೈತರಿಗೆ ನೀಡಿರುವ ವಿಶೇಷ ಆದ್ಯತೆ. ಮಹಿಳಾ ಸ್ವಸಹಾಯ ಸಂಘಗಳ ಸಾಧನೆಗಳು, ಸಾಧಕ ರೈತ ಮಹಿಳೆಯರೊಂದಿಗೆ ಸಂವಾದ ಹಾಗೂ ಕೃಷಿಯಲ್ಲಿ ಮಹಿಳೆಯರ ಪಾತ್ರವನ್ನು ಪರಿಚಯಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಡ್ರೋನ್, ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ

ಆಧುನಿಕ ಕೃಷಿ ತಂತ್ರಜ್ಞಾನಗಳ ಜತೆಗೆ ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನವೂ ಇರಲಿದ್ದು, ಅವುಗಳ ಬಳಕೆ ಹಾಗೂ ತಂತ್ರಜ್ಞಾನಗಳ ಕುರಿತು ರೈತರು ನೇರವಾಗಿ ತಿಳಿದುಕೊಳ್ಳಬಹುದು.

ನೀರು, ಮಣ್ಣು ಮತ್ತು ಕೃಷಿ ಅರಣ್ಯಕ್ಕೆ ಒತ್ತು

ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ತಂತ್ರಜ್ಞಾನ, ಕೃಷಿ ಅರಣ್ಯ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ವಿಶೇಷ ಪ್ರದರ್ಶನ ಮತ್ತು ಮಾಹಿತಿ ವ್ಯವಸ್ಥೆ ಇರಲಿದೆ.

ಪಶು ಸಂಗೋಪನೆಗೂ ಆದ್ಯತೆ

ಕೃಷಿಯೊಂದಿಗೆ ಪಶು ಸಂಗೋಪನೆಗೂ ಕೃಷಿಮೇಳದಲ್ಲಿ ಆದ್ಯತೆ ನೀಡಲಾಗಿದೆ. ಪಶು ಸಂಗೋಪನಾ ತಂತ್ರಜ್ಞಾನ, ಜಾನುವಾರುಗಳ ಪ್ರದರ್ಶನ, ಮೇವಿನ ಬೆಳೆಗಳ ತಾಂತ್ರಿಕತೆ ಹಾಗೂ ಜಾನುವಾರುಗಳಿಗೆ ಸಂಬಂಧಿಸಿದ ವಿವಿಧ ಮಳಿಗೆಗಳು ಗಮನ ಸೆಳೆಯಲಿವೆ.

ಫಲ–ಪುಷ್ಪ ಪ್ರದರ್ಶನ, ಕೀಟ ಪ್ರಪಂಚ ವಿಶೇಷ ಆಕರ್ಷಣೆ

ಮೇಳದಲ್ಲಿ ಹೈಟೆಕ್ ತೋಟಗಾರಿಕೆ, ಫಲ–ಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಆಕರ್ಷಣೆಗಳು ಇರಲಿವೆ. ವಿಶೇಷವಾಗಿ ‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನವೂ ಆಯೋಜಿಸಲಾಗಿದೆ. ಸಮುದಾಯ ವಿಜ್ಞಾನ ತಂತ್ರಜ್ಞಾನಗಳು, ರೈತರ ಆವಿಷ್ಕಾರಗಳು ಹಾಗೂ ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಂಡವರ ಪರಿಚಯಕ್ಕೂ ವೇದಿಕೆ ಕಲ್ಪಿಸಲಾಗುತ್ತಿದೆ.

ಕೃಷಿ ತಜ್ಞರೊಂದಿಗೆ ನೇರ ಸಮಾಲೋಚನೆ

ಕೃಷಿಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಕೃಷಿ ತಜ್ಞರೊಂದಿಗೆ ನೇರ ಸಮಾಲೋಚನೆಯೂ ಒಂದಾಗಿದೆ. ರೈತರು ತಮ್ಮ ಕೃಷಿ ಸಂಬಂಧಿತ ಸಮಸ್ಯೆಗಳು ಹಾಗೂ ಪ್ರಶ್ನೆಗಳನ್ನು ತಜ್ಞರೊಂದಿಗೆ ಚರ್ಚಿಸಿ ಪರಿಹಾರ ಮತ್ತು ಸಲಹೆ ಪಡೆಯಲು ಅವಕಾಶವಿದೆ.

ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ರೈತರು ಹಾಗೂ ರೈತ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತದೆ.

ವಿವಿಧ ವಿಭಾಗಗಳ ಮಳಿಗೆಗಳು

ಕೃಷಿ ವಸ್ತು ಪ್ರದರ್ಶನದಲ್ಲಿ ಹೈಟೆಕ್ ಮಳಿಗೆಗಳು, ಸಾಮಾನ್ಯ ಮಳಿಗೆಗಳು, ಕೃಷಿ ಯಂತ್ರೋಪಕರಣ ಮಳಿಗೆಗಳು, ಆಹಾರ ಮಳಿಗೆಗಳು, ಜಾನುವಾರು ಪ್ರದರ್ಶನ ಮಳಿಗೆಗಳು ಹಾಗೂ ಕ್ಷೇತ್ರ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.

ಇದರ ಮೂಲಕ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಉತ್ಪನ್ನಗಳು, ತಂತ್ರಜ್ಞಾನಗಳು ಹಾಗೂ ಚಟುವಟಿಕೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಲಾಗುತ್ತದೆ.

ಮಳಿಗೆ ಸ್ಥಾಪಿಸಲು ಅವಕಾಶ

ಕೃಷಿಮೇಳದಲ್ಲಿ ಮಳಿಗೆ ಸ್ಥಾಪಿಸಲು ಆಸಕ್ತಿ ಹೊಂದಿರುವವರು 8277478507 ಅಥವಾ 0836-2214497 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. ರೈತರು, ಕೃಷಿ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಎಲ್ಲರೂ ಕೃಷಿಮೇಳದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೃಷಿ ವಿಶ್ವವಿದ್ಯಾಲಯ ಮನವಿ ಮಾಡಿದೆ.

ಈ ಲೇಖನಗಳನ್ನೂ ಓದಿ

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group