ಕೃಷಿಬಿಂಬ ಸುದ್ದಿ-ವಿಜಯಪುರ: ಕೃಷಿ ವಿವಿ ಧಾರವಾಡದ ವಿಜಯಪುರ ಆವರಣದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಮೇಳವು ಜನವರಿ 4 ರಿಂದ 6ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಬೆಳೆಗಳ ಕ್ಷೇತ್ರ ಭೇಟಿ,ವಿಚಾರ ಸಂಕಿರಣ ಮತ್ತು ಕೃಷಿ ವಸ್ತು ಪ್ರದರ್ಶನ, ಕೃಷಿ ಯಂತ್ರೋಪಕರಣಗಳು, ವೈಜ್ಞಾನಿಕ ಕೃಷಿ ಪದ್ಧತಿಗಳು, ಕೃಷಿ ಪೂರಕ ಉತ್ಪನ್ನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ವಿಜಯಪುರ, ಬಾಗಲಕೋಟೆ ಅಲ್ಲದೆ ನೆರೆಯ ಜಿಲ್ಲೆಗಳ ಕೃಷಿಕರು ಪಾಲ್ಗೊಳ್ಳಲಿದ್ದಾರೆ.






