ನೈಸರ್ಗಿಕವಾಗಿ ಗಿಡಮರಗಳು ಭೂಮಿಯಲ್ಲಿರುವ ಸಾರವನ್ನು ಹೀರಿ ಬೆಳೆಯುತ್ತದೆ. ಆದರೆ ಕೃಷಿಕರು ಬೆಳೆಯುವ ಆಹಾರ ಧಾನ್ಯ, ವಾಣಿಜ್ಯ ಬೆಳೆಗಳು ಹಾಗೂ ಸಾಂಬಾರ ಬೆಳೆಗಳು ಹಾಗೆ ಬೆಳೆದರೂ ನಿರೀಕ್ಷಿತ ಫಸಲು ಪಡೆಯಲು ಸಾಧ್ಯವಾಗದು. ನೈಸರ್ಗಿಕ ಕೃಷಿ ಹೊರತಾಗಿ ಸಾವಯುವ ಕೃಷಿ, ಸಾವಯುವ ಮತ್ತು ರಾಸಾಯನಿಕ ಕೃಷಿ ಹಾಕುವ ಗೊಬ್ಬರದ ಮೇಲೆ ಅವಲಂಬಿತ ವಾಗಿದೆ. ಗಿಡಗಳಿಗೆ ಪೋಷಕಾಂಶದ ಜೊತೆಗೆ ಆವಶ್ಯಕ ಲಘು ಪೋಷಕಾಂಶಗಳನ್ನು ನೀಡಿದಾಗ ಗಿಡಗಳು ಸಮೃದ್ಧವಾಗಿ ಬೆಳೆಯುವುದಲ್ಲದೆ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಬಾಳೆಹೊನ್ನೂರಿನಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಕಾಫಿ ಬೆಳೆಗೆ ಅನುಕೂಲವಾದ ದ್ವಿತೀಯ ಮತ್ತು ಸೂಕ್ಷ್ಮ ಪೋಷಕಾಂಶಗಳ ಹೊಸ ಸಂಯೋಜನೆ “ಸಿ.ಸಿ.ಆರ್.ಐ.ಕಾಫಿ ಸ್ಪೆಷಲ್ ” ಬಿಡುಗಡೆ ಮಾಡಿದೆ. ಕಾಫಿ ಸ್ಪೆಷಲ್ ಕಾಫಿ ಎಲೆಗಳ ಮೇಲೆ ಸಿಂಪಡಿಸಬಹುದಾದ ಸೂಕ್ಷ್ಮ ಪೋಷಕಾಂಶ. ದ್ವಿತೀಯ ಸೂಕ್ಷ್ಮ ಪೋಷಕಾಂಶಗಳಲ್ಲಿ ಅಗತ್ಯವಾದ ಐದು ಪೋಷಕಾಂಶಗಳನ್ನು ಈ ಕಾಫಿ ಸ್ಪೆಷಲ್ ನಲ್ಲಿ ಸಂಯೋಜಿಸಲಾಗಿದೆ. ಇದು ಕಾಫಿ ಗಿಡಗಳ ಪೋಷಕಾಂಶ ಕೊರತೆಯನ್ನು ನಿವಾರಿಸಬಲ್ಲುದು. ಕಾಫಿ ಹಣ್ಣು ಬೆಳೆಯುವ ಅವಧಿಯಲ್ಲಿ ಎಲೆಗಳ ಮೇಲೆ ಸಿಂಪಡಿಸುವುದರಿಂದ ಉತ್ತಮ ಗುಣಮಟ್ಟದ ಹಣ್ಣು ಹಾಗೂ ಹೆಚ್ಚು ಉತ್ತಮ ಇಳುವರಿ ಪಡೆಯಲು ಸಾಧ್ಯ






