spot_img
Sunday, December 21, 2025
spot_imgspot_img
spot_img

ಡಿ. 20 – ಡಿ. 22 ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ

ಚಿಕ್ಕಮಗಳೂರು ಜಿಲ್ಲೆ ಕಾಫಿ ನಾಡು, ಕಾಫಿಯ ಕೇಂದ್ರ ಬಿಂದು. ಕಾಫಿಯ ಇತಿಹಾಸದಲ್ಲಿ ತನ್ನದೇ ಆದ ಮೆರುಗು ಪಡೆದುಕೊಂಡಿದೆ. ಚಿಕ್ಕಮಗಳೂರು, ಕೊಡಗು,ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಮಾತ್ರ ಮಹತ್ವ ಪಡೆದಿದ್ದ ಕಾಫಿ ಕೃಷಿ  ದಕ್ಷಿಣ ಕನ್ನಡ, ಉತ್ತರ ಕನ್ನಡ ಅಲ್ಲದೆ ಬಯಲು ನಾಡಿಗೂ ವಿಸ್ತರಿಸಿಕೊಂಡಿದೆ. ಹೊಸ ಸಾಧ್ಯತೆಯತ್ತ ತೆರೆದುಕೊಳ್ಳುತ್ತಿದೆ. ಆಯಾ ಪ್ರದೇಶಗಳಿಗೆ ಅನುಕೂಲವಾದ ತಳಿಗಳ ಸಂಶೋಧನೆ ಅಗತ್ಯತೆ ಹಿಂದಿಗಿಂತ ಈಗ ಹೆಚ್ಚಿದೆ. ದೂರದರ್ಶಿತ್ವ ಮತ್ತು ಕಾಫಿಯ ನೆಲೆ ಬೆಳೆಗಳನ್ನು ಉಳಿಸುವ ಬೆಳೆಸುವ ಸಮೃದ್ಧಿಗೊಳಿಸುವ ಹಿನ್ನಲೆಯಲ್ಲಿ  ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ 1925ರಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ. ಬಾಳೆಹೊನ್ನೂರಿನ ಸೀಗೋಡಿನಲ್ಲಿರುವ ಈ ಕೇಂದ್ರಕ್ಕೆ ಇದೀಗ ನೂರು ವರ್ಷ. ಶತಮಾನದ ಸಂಭ್ರಮ .

ನೂರು ವರ್ಷದ ಹರುಷದಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ಡಿಸೆಂಬರ್ 20ರಿಂದ ಡಿಸೆಂಬರ್ 22 ರವರೆಗೆ ಮೂರು ದಿನಗಳ ಶತಮಾನೋತ್ಸವವನ್ನು ಹಮ್ಮಿಕೊಂಡಿದೆ. ಸಂಶೋಧನಾ ಕೇಂದ್ರವು ಈ  ನೂರು ವರ್ಷಗಳಲ್ಲಿ ಹಲವು ಮಜಲುಗಳನ್ನು ದಾಟಿದೆ. ಕಾಫಿ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಿದೆ. ಸಂಸ್ಥೆಯು ಈವರೆಗೆ 16 ತಳಿಗಳನ್ನು ಅಭಿವೃದ್ಧಿಗೊಳಿಸಿ   ಉತ್ಕೃಷ್ಟ ಗುಣಮಟ್ಟ, ಹೆಚ್ಚು ಇಳುವರಿ, ರೋಗ ನಿರೋಧಕ ಶಕ್ತಿಯುಳ್ಳ ತಳಿಗಳನ್ನು ಬೆಳೆಗಾರರಿಗೆ ನೀಡಿದೆ. ಕಾಫಿ ಕೃಷಿಯ ವಿವಿಧ ಆಯಾಮಗಳ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳುತ್ತಾ ಬಂದಿದೆ.

ಹೊಸ ತಳಿ ಲೋಕಾರ್ಪಣೆ: ಶತಮಾನೋತ್ಸವದ ಸಂದರ್ಭದಲ್ಲಿ ಎರಡು ಹೊಸ ತಳಿಗಳನ್ನು ಲೋಕಾರ್ಪಣೆ ಮಾಡಲಿದೆ. ಅದಲ್ಲದೆ ಕಾಫಿ ಮೌಲ್ಯ ವರ್ಧನೆಗೆ ಪೂರಕವಾದ 7 ಹೊಸ ತಂತ್ರಜ್ಞಾನವನ್ನು ಈ ಸಂದರ್ಭದಲ್ಲಿ ಪರಿಚಯಿಸಲಿದೆ. ಕಾಫಿ ಉತ್ಪಾದನೆಯನ್ನು 7 ಲಕ್ಷ ಟನ್ ಗಳಿಗೆ ಹೆಚ್ಚಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

ಈ ಮಹಾ ಸಂಭ್ರಮದಲ್ಲಿ ಕಾಫಿ ಉದ್ಯಮ-ವ್ಯವಹಾರಕ್ಕೆ ಸಂಬಂಧಿಸಿದ 150ಕ್ಕೂ ಮಳಿಗೆಗಳಿದ್ದರೆ ರೈತರಿಗೆ ಉಪಯುಕ್ತವಾದ ಕೃಷಿ ಸಂಬಂಧಿತವಾದ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಲಾಗಿದೆ.

ರೈತ ಜಾತ್ರೆಯಾಗಿ ಪರಿಗಣಿತವಾದ ಈ ಶತಮಾನೋತ್ಸವದ ಮೂರು ದಿನಗಳಲ್ಲಿ ಕಾಫಿ ಬೆಳೆಗಳಿಗೆ ಸಂಬಂಧಿಸಿದ 10ಕ್ಕೂ ಹೆಚ್ಚು ವಿಚಾರ ಗೋಷ್ಠಿಗಳು ನಡೆಯಲಿವೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನಿ ಗಳು, ಸಂಶೋಧಕರು, ಪ್ರಗತಿಪರ ಕೃಷಿಕರು ವಿಚಾರ ವಿನಿಮಯ ಸಂವಾದಲ್ಲಿ ಭಾಗವಹಿಸಲಿರುವರು.

ಕರ್ನಾಟಕವಲ್ಲದೆ ಹೊರರಾಜ್ಯಗಳಿಂದಲೂ ಕಾಫಿ ಬೆಳೆಗಾರರು, ಕೃಷಿ ಆಸಕ್ತರು ಆಗಮಿಸಲಿದ್ದು 50,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group