ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಹಾಗೂ ತೋಟಗಾರಿಕೆ ಕೃಷಿ ಹಾಗೂ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಡಿಸೆಂಬರ್ 21, 22, 23ರ ವರೆಗೆ ತೋಟಗಾರಿಕೆ ಮೇಳವು ನಡೆಯಲಿದೆ. ಮೌಲ್ಯವರ್ಧನೆ ಹಾಗೂ ರಫ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ ಎಂಬ ಧ್ಯೇಯೋದ್ದೇಶದೊಂದಿಗೆ ಹಮ್ಮಿಕೊಂಡಿರುವ ಈ ತೋಟಗಾರಿಕಾ ಮೇಳವನ್ನು ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ, ಮೌಲ್ಯವರ್ಧನೆ ಮತ್ತು ರಫ್ತಿಗಾಗಿ ನಿಖರ ತೋಟಗಾರಿಕೆ,ಉತ್ಪಾದಕ ಮತ್ತು ಖರೀದಿದಾರರ ಸಮನ್ವಯ ಸಂವಾದ, ತೋಟಗಾರಿಕಾ ಉತ್ಪನ್ನಗಳ ರಫ್ತು ಸಮಾವೇಶ, ಹೈನುಗಾರಿಕೆ, ಮೀನುಗಾರಿಕೆ ಭೌಗೋಳಿಕ ಮಾನ್ಯತೆ ಪಡೆದ ತೋಟಗಾರಿಕೆ ಬೆಳೆಗಳ ಪ್ರದರ್ಶನ, ತೋಟಗಾರಿಕಾ ನವೋದ್ಯಮಗಳ ಸಮುಚ್ಚಯ,ಕೃಷಿ ಯಂತ್ರೋಪಕರಣ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ರೈತರು, ಕೃಷಿ ಆಸಕ್ತರು ಪಾಲ್ಗೊಳ್ಳಲಿದ್ದಾರೆ






