ಮಂಡ್ಯ:ಕೃಷಿವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ ಇದರ ವತಿಯಿಂದ ಮಂಡ್ಯದ ವಿ.ಸಿ ಫಾರಂನಲ್ಲಿ ಡಿಸೆಂಬರ್ 5, 6, 7ರಂದು ಮೂರು ದಿನಗಳ ಕಾಲ ಕೃಷಿ ಮೇಳ ನಡೆಯಲಿದೆ
ಸಮಗ್ರ ಕೃಷಿ, ಸಾವಯುವ ಮತ್ತು ನೈಸರ್ಗಿಕ ಕೃಷಿ, ದೇಸಿ ತಳಿಗಳ ಪ್ರಾತ್ಯಕ್ಷಿಕೆ, ಕೃಷಿ ವಸ್ತು ಪ್ರದರ್ಶನ, ನೂತನ ತಳಿಗಳು ಮತ್ತು ತಂತ್ರಜ್ಞಾನಗಳು, ಕಾಫಿ ಮತ್ತು ಸಾಂಬಾರ್ ಬೆಳೆಗಳ ತಂತ್ರಜ್ಞಾನ, ಹೈಟೆಕ್ ತೋಟಗಾರಿಕೆ, ಸಿರಿಧಾನ್ಯ ಮೇಳ, ಅರಣ್ಯ ಕೃಷಿ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳು, ರೇಷ್ಮೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ, ಮೀನು ಸಾಕಾಣೆ, ಸಾವಯುವ ಬೆಲ್ಲ ,ಔಷಧಿ ಸಸ್ಯಗಳ ಪ್ರಾತ್ಯಕ್ಷಿಕೆ, ಫಲಪುಷ್ಪ ಪ್ರದರ್ಶನ, ಜೈವಿಕ ಇಂಧನ ಹಾಗೂ ಕೃಷಿಗೆ ಪೂರಕ ಮಾಹಿತಿ ಮಾರ್ಗದರ್ಶನ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ
ಮಂಡ್ಯದಲ್ಲಿ ಡಿಸೆಂಬರ್ 5 ರಿಂದ 7 ಕೃಷಿಮೇಳ






