ಹೆಬ್ರಿ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆ ವತಿಯಿಂದ ಹೆಬ್ರಿಯಲ್ಲಿ ನವೆಂಬರ್ 21ರಿಂದ 23 ವರೆಗೆ ಮೂರು ದಿನಗಳ ಕಾಲ ತೋಟಗಾರಿಕಾ ಸಸ್ಯ ಮೇಳವು ಹೆಬ್ರಿ ಪ್ರವಾಸಿ ಮಂದಿರದ ಬಳಿ ನಡೆಯಲಿದೆ. ಸಸ್ಯ ಪ್ರದರ್ಶನ ಮತ್ತು ಮಾರಾಟ ವಸ್ತು ಪ್ರದರ್ಶನ , ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ.






