spot_img
Thursday, November 20, 2025
spot_imgspot_img
spot_img

ಬೆಂಗಳೂರು ಕೃಷಿ ವಿ.ವಿ : 60ರ ಸಂಭ್ರಮ, ಹಲವು ವೈಶಿಷ್ಟ್ಯಗಳ ಕೃಷಿ ಮೇಳ ನವೆಂಬರ್ 13-16

ಬೆಂಗಳೂರು: ಪ್ರಸ್ತುತ 6೦ ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಈ ಭಾರಿಯ ಕೃಷಿಮೇಳ ಹಲವು ವೈಶಿಷ್ಟತೆಗಳಿಂದ ಕೂಡಿದೆ. ಸುಧಾರಿತ ಪದ್ಧತಿಗಳನ್ನು ಸಮರ್ಪಕವಾಗಿ ಅಳವಡಿಸಿ ರೂಪಿಸಿರುವ ಪ್ರಾತ್ಯಕ್ಷಿಕೆ ಕ್ಷೇತ್ರಗಳಿಗೆ ಭೇಟಿ ನೀಡಿ ವೈವಿಧ್ಯಮಯ ವಿಷಯಗಳ ಪ್ರತ್ಯಕ್ಷ ಅನುಭವ ಪಡೆಯುವ ವಿಧಾನವೇ ಕೃಷಿ ಮೇಳ.
ಇದರಲ್ಲಿ ಕ್ಷೇತ್ರ ಸಂದರ್ಶನ, ತಜ್ಞರೊಂದಿಗೆ ಚರ್ಚೆ, ವಸ್ತು ಪ್ರದರ್ಶನ ಮುಂತಾದವುಗಳು ಅಡಕವಾಗಿವೆ. ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನಿರಂತರವಾಗಿ ಆಚರಿಸುತ್ತಾ ರೈತರು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಕೃಷಿ ತಾಂತ್ರಿಕತೆಯ ಜ್ಞಾನದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಡುತ್ತಾ ಬಂದಿದೆ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ 1966 ರಲ್ಲಿ ಪ್ರಾರಂಭವಾದ ಕ್ಷೇತ್ರೋತ್ಸವವು ಕಾಲಾನುಕ್ರಮದಲ್ಲಿ ಕೃಷಿ ಮೇಳವಾಗಿ ಪರಿವರ್ತನೆಗೊಂಡು ಅತ್ಯಂತ ಜನಪ್ರಿಯಗೊಂಡಿದೆ. ರೈತಾಪಿ ವರ್ಗದ ಮಹಾ ಜಾತ್ರೆಯಾಗಿ ರೂಪುಗೊಂಡಿದೆ. ಈ ವರ್ಷ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಕೃ.ವಿ.ವಿ, ಬೆಂಗಳೂರಿನ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳವನ್ನು ನವೆಂಬರ್ 13-16 ರವರೆಗೆ ನಾಲ್ಕು ದಿನಗಳ ಕಾಲ“ಸಮೃದ್ಧಕೃಷಿ – ವಿಕಸಿತ ಭಾರತ” (ನೆಲ, ಜಲ ಮತ್ತು ಬೆಳೆ)ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ.
 ಬಿಡುಗಡೆಗೆ ಶಿಫಾರಸ್ಸು ಮಾಡಲಾದ ನೂತನ ತಳಿಗಳು 
2024-25 ರಲ್ಲಿ ಧಾನ್ಯ ಜೋಳ, ಕಪ್ಪು ಅರಿಶಿಣ ಮತ್ತು ಅರಿಶಿಣ ಬೆಳೆಯಲ್ಲಿ ತಲಾ ಒಂದರಂತೆ ಮೂರು ಅಧಿಕ ಇಳುವರಿ ನೀಡುವ ತಳಿ ಹಾಗೂ ಸೂರ್ಯಕಾಂತಿ ಮತ್ತು ಹರಳು ಬೆಳೆಯಲ್ಲಿ ತಲಾ ಒಂದರಂತೆ ಎರಡು ಸಂಕರಣ ತಳಿ ಸೇರಿದಂತೆ ಒಟ್ಟು 5 ತಳಿಗಳನ್ನು ರೈತ ಸಮುದಾಯ ಹಾಗೂ ಇತರೆ ಪಾಲುದಾರರಿಗೋಸ್ಕರ ಬಿಡುಗಡೆ ಮಾಡಲಾಗಿದೆ.
 ಧಾನ್ಯ ಜೋಳದ ತಳಿ ಸಿಎನ್‌ಜಿಎಸ್-1:ಸಿಎನ್‌ಜಿಎಸ್-1, ಮದ್ಯಮ ಎತ್ತರದ ಮಧ್ಯಮಾವಧಿ ತಳಿಯಾಗಿದ್ದು 1೦೦ ರಿಂದ 105 ದಿನಗಳಿಗೆ ಕಟಾವಿಗೆ ಬರಲಿದೆ. ಸರಿ ಸುಮಾರು 39 ರಿಂದ 42 ಕ್ವಿಂಟಾಲ್‌ಧಾನ್ಯದ ಇಳುವರಿ ಮತ್ತು 3೦ ರಿಂದ 33 ಟನ್ ಮೇವಿನ ಇಳುವರಿಯನ್ನು ಪ್ರತಿ ಹೆಕ್ಟರ್‌ಗೆ ನೀಡಲಿದ್ದುಕಟಾವಿನ ಸಮಯದಲ್ಲೂ ಸಹ ಗಿಡವು ಹಸಿರಿನಿಂದ ಕೂಡಿರುತ್ತದೆ. ವಲಯ-೬ಕ್ಕೆ ಶಿಫಾರಸ್ಸು ಮಾಡಲಾಗಿದೆ.
 ಸೂರ್ಯಕಾಂತಿ ಸಂಕರಣತಳಿ ಕೆಬಿಎಸ್‌ಹೆಚ್-88:ಕೆಬಿಎಸ್‌ಹೆಚ್-88 ಅಲ್ಪಾವಧಿ ಸಂಕರಣ ತಳಿಯಾಗಿದ್ದು (84-86 ದಿನಗಳು), ಕೇದಿಗೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿರುತ್ತದೆ. ಈ ಸಂಕರಣ ತಳಿಯು ಶೇ.19 ಅಧಿಕ ಬೀಜದ ಇಳುವರಿ (22-24 ಕ್ವಿಂ/ಹೆ) ಮತ್ತು ಶೇ.28 ಅಧಿಕಎಣ್ಣೆಯ ಇಳುವರಿ  ನೀಡುತ್ತದೆ. ವಲಯ 5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.
 ಹರಳು ಸಂಕರಣ ತಳಿ ಬಿಸಿಹೆಚ್-162 :ಒಣ ಬೇಸಾಯಕ್ಕೆ ಸೂಕ್ತವಾದ ಮಧ್ಯಮಾವಧಿ ಸಂಕರಣ ತಳಿಯಾಗಿದ್ದು, ಹೆಚ್ಚಿನ ಇಳುವರಿಯೊಂದಿಗೆ ಹೆಚ್ಚಿನಎಣ್ಣೆಅಂಶವನ್ನು (ಶೇ47-48) ಹೊಂದಿದೆ. ಮುಳ್ಳು ಸಹಿತ ಕಾಯಿಗಳುಳ್ಳ ಗಿಡಗಳ ಕಾಂಡವು ಹಸಿರು ವರ್ಣದ್ದಾಗಿದ್ದು, ಕಾಂಡ ಮತ್ತುಎಲೆಯ ಕೆಳಭಾಗದಲ್ಲಿ ಬೂದಿ ಮುಚ್ಚಣಿಕೆಯನ್ನು ಕಾಣಬಹುದು. ಪ್ರಥಮ ಗೊಂಚಲು ಮಾಗಲು 95-100 ದಿನಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಕಾಳು ಸಿಡಿಯುವಿಕೆಗೆ ನಿರೋಧಕತೆಯನ್ನು ಹೊಂದಿರುತ್ತದೆ. ಹೆಚ್ಚಿನ ಪರಿಣಾಮಕಾರಿ ಗೊನೆಗಳ ಸಂಖ್ಯೆ ಮತ್ತು ಪ್ರತಿ ಗೊನೆಗಳಲ್ಲಿ ಕಡಿಮೆಗಂಡು ಹೂಗಳ ಸಂಖ್ಯೆಯನ್ನು ಹೊಂದಿರುವಕಾರಣ ಹೆಚ್ಚಿನ ಇಳುವರಿ ನೀಡುತ್ತದೆ. ವಲಯ-5ಕ್ಕೆ ಶಿಫಾರಸ್ಸು ಮಾಡಲಾಗಿದೆ.
 ಕಪ್ಪು ಅರಿಶಿಣ ತಳಿ ಸಿಹೆಚ್‌ಎನ್‌ಬಿಟಿ-1:ಈ ತಳಿಯು ಮಧ್ಯಮಗಿಡದಎತ್ತರ ಹೆಚ್ಚಿನ ಎಲೆಗಳು ಮತ್ತುಉತ್ತಮ ಹರವು ಹೊಂದಿದ್ದುಉತ್ತಮ ಭೌತಿಕ ಗುಣಲಕ್ಷಣಗಳನ್ನು (ಸಂಸ್ಕರಣಾ ಸಾಮಾರ್ಥ್ಯ:>2೦%) ಹೊಂದಿದೆ. ಗೆಡ್ಡೆಗಳು ದಪ್ಪವಾಗಿದ್ದುಉತ್ಕೃಷ್ಟ ನೀಲಿ ತಿರುಳು ಬಣ್ಣವನ್ನು ಹೊಂದಿದ್ದುಅಧಿಕತಾಜಾ ಗೆಡ್ಡೆಗಳ ಇಳುವರಿಯನ್ನು (8-10 ಟನ್/ಹೆ) ನೀಡುತ್ತದೆ. ಈ ತಳಿಯು ಸುಮಾರು 255 ರಿಂದ 265 ದಿನಗಳಲ್ಲಿ ಕಟಾವಿಗೆ ಬರುತ್ತದೆ. ವಲಯ-6 ಕ್ಕೆ ಶಿಫಾರಸ್ಸು ಮಾಡಲಾಗಿದೆ.
 ಅರಿಶಿಣ ತಳಿ ಐಐಎಸ್‌ಆರ್ ಪ್ರತಿಭಾ:ಈ ತಳಿಯು ಸುಮಾರು 240 ರಿಂದ 245 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಅಧಿಕತಾಜಾ ಗೆಡ್ಡೆಗಳ ಇಳುವರಿ (34-36 ಟನ್/ಹೆ) ಮತ್ತುಉತ್ತಮಗುಣಮಟ್ಟ (ಸಂಸ್ಕರಣಾ ಸಾಮಾರ್ಥ್ಯ: >ಶೇ.2೦, ಅಧಿಕಕರ್ಕುಮಿನ್ ಅಂಶ: >ಶೇ.5) ಹೊಂದಿದೆ. ಗೆಡ್ಡೆಗಳು ದಪ್ಪವಾಗಿದ್ದು ಮಾಡಲಾಗಿದೆ. ಉತ್ಕೃಷ್ಟ ಕೆಂಪು ಹಳದಿ ಬಣ್ಣದ ತಿರುಳು ಹೊಂದಿದೆ. ವಲಯ-6ಕ್ಕೆ ಶಿಫಾರಸ್ಸು
 ವಿಶೇಷ ಆಕರ್ಷಣೆಗಳು
 ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ  ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು
 ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ  ರೇಷ್ಮೆಕೃಷಿ
 ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ  ಔಷಧೀಯ ಮತ್ತು ಸುಗಂಧದ್ರವ್ಯ ಸಸ್ಯಗಳು
 ಸಿರಿ ಧಾನ್ಯಗಳು ಮತ್ತು ಅವುಗಳ ಮಹತ್ವ  ಜಲಾನಯನ ನಿರ್ವಹಣೆ
 ಸಾವಯವ ಕೃಷಿ ಪದ್ಧತಿಗಳು  ಸಮಗ್ರಕೀಟ, ರೋಗ ಹಾಗೂ ಪೋಷಕಾಂಶಗಳ ನಿರ್ವಹಣೆ
 ಮಣ್ಣುರಹಿತ ಕೃಷಿ  ಮಾರುಕಟ್ಟೆ ನೈಪುಣ್ಯತೆ ಮಾಹಿತಿ
 ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ  ಹನಿ ಮತ್ತುತುಂತುರು ನೀರಾವರಿ ಪದ್ಧತಿಗಳು
 ಮಳೆ ಹಾಗೂ ಮೇಲ್ಛಾವಣಿ ನೀರಿನಕೊಯ್ಲು  ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ
 ಕೋಯ್ಲತ್ತರ ತಾಂತ್ರಿಕತೆಗಳು, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ  ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ
 ಕೃಷಿಯಲ್ಲಿ ನೂತನ ಮಾಹಿತಿತಂತ್ರಜ್ಞಾನ  ಜೈವಿಕ ಹಾಗೂ ನವೀಕರಿಸಲ್ಪಡುವಇಂಧನ
 ಕೃಷಿ ಪರಿಕರಗಳ ಹಾಗೂ ಪಕಟಣೆಗಳ ಮಾರಾಟ ವ್ಯವಸ್ಥೆ  ರೈತರ ಕೃಷಿ ತಾಂತ್ರಿಕ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ
ವಿಶೇಷ ಆಕರ್ಷಣೆಗಳು
ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು, ನೂತನವಾಗಿ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ, ರೇಷ್ಮೆ ಕೃಷಿ, ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ ಪ್ರಾತ್ಯಕ್ಷಕೆ, ಔಷಧೀಯ ಮತ್ತು ಸುಗಂಧ ದ್ರವ್ಯಗಳ ಸಸ್ಯಗಳು, ಸಿರಿಧಾನ್ಯಗಳು ಮತ್ತು ಅದರ ಮಹತ್ವ, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಕೀಟ, ರೋಗ ಹಾಗೂ ಪೋಷಕಾಂಶಗಳ ನಿರ್ವಹಣೆ, ಮಣ್ಣು ರಹಿತ ಕೃಷಿ, ಮಾರುಕಟ್ಟೆ ನೈಪುಣ್ಯತೆ, ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ, ಹನಿ ಮತ್ತು ತುಂತುರು ನೀರಾವರಿ, ಮಳೆ ಹಾಗೂ ಮೇಲ್ಛಾವಣಿ ನೀರಿನ ಕೊಯ್ಲು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲೋತ್ತರ ತಾಂತ್ರಿಕತೆಗಳು, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ, ಪಶು ಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ಕೃಷಿ ಪ್ರವಾಸೋದ್ಯಮ ಹಾಗೂ ರೈತರ ತಾಂತ್ರಿಕ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ಈ ಸಂದರ್ಭದಲ್ಲಿ ದೊರೆಯಲಿದೆ.
ಕೃಷಿ ಸಾಧಕರಿಗೆ ಪುರಸ್ಕಾರ
 ರಾಜ್ಯ ಮಟ್ಟದ ಪ್ರಶಸ್ತಿಗಳು: ಕೃಷಿಯಲ್ಲಿಉತ್ತಮ ಸಾಧನೆ ಮಾಡಿದ ರೈತರಿಗೆ ಮಾಜಿ ಪ್ರಧಾನ ಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಡಾ: ಎಂ.ಹೆಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ, ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಡಾ: ಆರ್. ದ್ವಾರಕೀನಾಥ್ ಅತ್ಯುತ್ತಮ ರೈತಪ್ರಶಸ್ತಿ ಮತ್ತುಡಾ: ಆರ್. ದ್ವಾರಕೀನಾಥ್‌ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುವುದು
ಜಿಲ್ಲಾ ಮಟ್ಟದ ಪ್ರಶಸ್ತಿಗಳು
ಜಿಲ್ಲಾ ಮಟ್ಟದ ಪ್ರಗತಿ ಪರ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ 6 ಜಿಲ್ಲೆಗಳಲ್ಲಿ ಪ್ರಗತಿಪರ ರೈತ ಪ್ರಶಸ್ತಿ ಮತ್ತು ಪ್ರಗತಿಪರ ರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿ ಪರ ರೈತ ಮತ್ತು ರೈತ ಮಹಿಳೆಯರಿಗೆ ನೀಡಲಾಗುವುದು.
ತಾಲ್ಲೂಕು ಮಟ್ಟದ ಪ್ರಶಸ್ತಿಗಳು
ತಾಲ್ಲೂಕು ಮಟ್ಟದ ಪ್ರಗತಿಪರಯುವರೈತ ಪ್ರಶಸ್ತಿ ಮತ್ತು ಯುವ ರೈತ ಮಹಿಳಾ ಪ್ರಶಸ್ತಿ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ 35 ತಾಲ್ಲೂಕುಗಳಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಮತ್ತು ಪ್ರಗತಿಪರ ಯುವ ರೈತ ಮಹಿಳಾ ಪ್ರಶಸ್ತಿಗಳನ್ನು
ನೀಡಲಾಗುವುದು.
ಕೃಷಿ ವಸ್ತು ಪ್ರದರ್ಶನ
ಸುಮಾರು 7೦೦ ಮಳಿಗೆಗಳಲ್ಲಿ ಕೃ.ವಿ.ವಿ, ಬೆಂಗಳೂರಿನ ಮಳಿಗೆಗಳ, ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳು/ಸಂಸ್ಥೆಗಳು, ಅಭಿವೃದ್ಧಿ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳ ಮಳಿಗೆಗಳು, ಕೃಷಿ ಇಂಜಿನಿಯರಿಂಗ್ ಮತ್ತು ಪಶುಸಂಗೋಪನೆ ಮಳಿಗೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುವುದು. ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ತಜ್ಞ ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಭೌತಿಕವಾಗಿ ಮತ್ತು ಜೂಮ್ ಸಭೆ ಮೂಲಕ ನೇರ ಪರಿಹಾರ, ಪ್ರಾತ್ಯಕ್ಷಿಕಾ ತಾಕುಗಳು, ಮಳಿಗೆಗಳು ಮತ್ತು  ಕೃಷಿ ಮೇಳದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು,  ನೂತನವಾಗಿ ಬಿಡುಗಡೆಯಾದ ವಿವಿಧ  ಬೆಳೆ ತಳಿಗಳ ಪ್ರಾತ್ಯಕ್ಷಿಕೆ,  ತೋಟಗಾರಿಕೆ ಬೆಳೆಗಳ ಮತ್ತು  ನಿಖರ ಕೃಷಿ ಪ್ರಾತ್ಯಕ್ಷಿಕೆ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳು ಹಾಗೂ ಮಹತ್ವ, ಔಷಧೀಯ ಮತ್ತು ಸುಗಂಧ ದ್ರವ್ಯ  ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ, ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು, ಮಳೆ ಹಾಗೂ ಮೇಲ್ಛಾವಣಿ  ನೀರಿನ ಕೋಯ್ಲು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ, ಮಾರುಕಟ್ಟೆ ನೈಪುಣ್ಯತೆ ಮಾಹಿತಿ, ಹವಾಮಾನ ಚತುರ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ ಮಾಡಲಾಗುವುದು.
ಕೃಷಿಮೇಳ-೨೦೨೫ರ ವಿಶೇಷ ಆಕರ್ಷಣೆ
 ಕೃಷಿ ಪ್ರವಾಸೋದ್ಯಮ
ಕೃಷಿ ಪ್ರವಾಸೋದ್ಯಮ ಒಂದು ಹೊಸ ಪರಿಕಲ್ಪನೆ. ಗ್ರಾಮೀಣ ಪ್ರದೇಶಗಳಲ್ಲಿರುವ ಪಾರಂಪರಿಕ ಕೃಷಿ ಪದ್ಧತಿಗಳು, ದೈನಂದಿನ ಕೃಷಿ ಚಟುವಟಿಕೆಗಳನ್ನು, ಗ್ರಾಮೀಣ ಕಲೆ ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ-ತೊಡುಗೆ ಮುಂತಾದವುಗಳನ್ನು ನಗರವಾಸಿಗಳಿಗೆ ಪರಿಚಯಿಸಲು ಪ್ರವಾಸಿಗರನ್ನು ಕೃಷಿ ಭೂಮಿಗೆ ಕರೆತರುವುದು ಮತ್ತು ಅವರಿಗೆ ಕೃಷಿ ಆಧಾರಿತ ಚಟುವಟಿಕೆಗೆಗಳನ್ನು ತೋರಿಸುವುದು ಮತ್ತು ಭಾಗವಹಿಸಲು ಅವಕಾಶ ನೀಡುವುದು, ಆಸಕ್ತರಿಗೆ ಪರಿಚಯಿಸುವ ಮೂಲಕ ಆದಾಯವನ್ನು ಕಂಡುಕೊಳ್ಳುವ ಉದ್ದೇಶ ಕೃಷಿ ಪ್ರವಾಸೋದ್ಯಮದ್ದಾಗಿದೆ.
ಪ್ರವಾಸಿಗರು ಕೃಷಿಕರ ಹೊಲ ಗದ್ದೆಗಳಿಗೆ ಭೇಟಿ ನೀಡಿ ಕೃಷಿ ಪರಿಸರದ ನೈಜ ಅನುಭವವನ್ನು ಪಡೆಯುವ ಮೂಲಕ ಗ್ರಾಮೀಣ ಸೊಗಡನ್ನು ಸವಿಯುವ ಸದಾವಕಾಶ ಇದಾಗಿದೆ. ಆದಾಗ್ಯೂ ಎಲ್ಲೊ ಒಂದುಕಡೆ ಈ ಕೃಷಿ ಪ್ರವಾಸೋದ್ಯಮವನ್ನು ವಾಣಿಜ್ಯ ದೃಷ್ಠಿಕೋನದಿಂದ ನೋಡುವ ಪ್ರಯತ್ನಗಳು ಇನ್ನಷ್ಟೇ ಆರಂಭವಾಗಬೇಕಾಗಿದ್ದು ಇದಕ್ಕೆ ಸಾಂಸ್ಥಿಕ ಚೌಕಟ್ಟನ್ನು ನೀಡುವ ಹೊಸ ಕಾರ್ಯಕ್ರಮಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮುಂದಾಗಿದೆ.
ಹಳ್ಳಿ ಮನೆ ವೈಶಿಷ್ಟ್ಯ:
ಸುಮಾರು 3 ಎಕರೆ ಪ್ರದೇಶದಲ್ಲಿ ಈಗಾಗಲೇ ಹಳ್ಳಿ ಮನೆ ನಿರ್ಮಿಸಲಾಗಿದ್ದು, ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ನಗರ ವಾಸಿಗಳಲ್ಲಿ ಅದರಲ್ಲಿಯೂ ಮಕ್ಕಳಿಗೆ ಹಿಂದಿನ ದಿನಗಳಲ್ಲಿ ಬಳಸುತ್ತಿದ್ದ ಸೇರು, ಪಾವು, ಚಟಾಕಿ, ಬೀಸು ಕಲ್ಲು, ಹೊರಳು, ಒನಕೆಗಳು, ಮೊರಗಳು, ಮಡಿಕೆಗಳು, ಸಡ್ಡೆಗಳು, ಗೊಟ್ಟಗಳು, ಮಂಕರಿಗಳು, ಕಣಜಗಳು ಮುಂತಾದ ೫೦ಕ್ಕೂ ಹೆಚ್ಚು ಪಾರಂಪರಿಕ ಪರಿಕರಗಳನ್ನು ಒಂದೇ ಜಾಗದಲ್ಲಿ ನೋಡುವ ಹಾಗೂ ಅಂದಿನ ಉಪಯೋಗಗಳನ್ನು, ಬಳಕೆಯ ವಿಧಾನಗಳನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆ ಕೃಷಿ ಬೆಳೆಗಳ ಪಾರಂಪರಿಕ ದೇಸಿ ತಳಿಗಳ ಹಾಗೂ ಸಾಂಪ್ರದಾಯಿಕ ಹಣ್ಣು ತರಕಾರಿ ಬೀಜಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೇ, ಪಾರಂಪರಿಕ ಬೇಸಾಯ ಪದ್ಧತಿಗಳಾದ ಕೆಸರುಗದ್ದೆ ಚಟುವಟಿಕೆಗಳು, ಉಳುಮೆ, ಬಿತ್ತನೆ, ಕೊಯ್ಲು, ಒಕ್ಕಣಿ ಮುಂತಾದವುಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಸಾಕ್ಷೀಕರಿಸಬಹುದಾಗಿದೆ. ಅಷ್ಟೇ ಅಲ್ಲದೆ ನೋಡುಗರಲ್ಲಿ ಆಸಕ್ತಿ ಮೂಡಿಸುವ ಎತ್ತಿನ ಗಾಡಿ ಸವಾರಿ, ಹಾಲು ಕರೆಯುವುದು, ಬೆರಣಿ ತಟ್ಟುವುದು, ರಾಗಿ ಬೀಸುವುದು, ಮೀನು ಹಿಡಿಯುವುದು, ಭತ್ತ ಕುಟ್ಟುವುದು ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ. ಇದಲ್ಲದೇ ಹಿಂದಿನ ದಿನಗಳಲ್ಲಿ ಗ್ರಾಮೀಣ ಜೀವನದ ಭಾಗವಾಗಿದ್ದ ಎಣ್ಣೆ-ಗಾಣ, ಆಲೆಮನೆ, ಕುಲುಮೆ, ನೇಯ್ಗೆ, ಬುಟ್ಟಿ ಹೆಣೆಯುವಿಕೆ, ಮಡಿಕೆ ತಯಾರಿಸುವುದು, ಹಗ್ಗ ನೇಯುವುದು, ನೇಗಿಲು ತಯಾರಿಕೆ ಮುಂತಾದ ಸಾಂಪ್ರದಾಯಿಕ ಕಸುಬುಗಳನ್ನು ಪರಿಚಯಿಸಲು ಈ ಕೃಷಿ ಪ್ರವಾಸೋದ್ಯಮ ಮಾದರಿ ಸಜ್ಜಾಗಿದೆ.
ಈ ಕೃಷಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಈ ತಾಕಿನ ಅಂಚುಗಳಲ್ಲಿ ಕಾವಲು ಗೋಪುರಗಳ ನಿರ್ಮಾಣ, ಸಾಂಪ್ರದಾಯಿಕ ತೂಗುಯ್ಯಾಲೆಗಳು, ಅಲ್ಲಲ್ಲಿ ದೃಷ್ಠಿ ಗೊಂಬೆಗಳನ್ನು ಸೃಷ್ಠಿ ಮಾಡಲಾಗಿದೆ.ಇದಕ್ಕೆ ಪೂರಕವಾಗಿ ದೇಸಿ ಜಾನುವಾರುಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದ್ದು, ಇವುಗಳನ್ನು ಪಾರಂಪರಿಕ ಕೊರಳು ಘಂಟೆಗಳು, ಕೊಂಬಿನ ಅಲಂಕಾರ ಇತ್ಯಾದಿಗಳಿಂದ ಸಿಂಗರಿಸಿ ನೋಡುಗರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.
ಕೀಟ ವಿಸ್ಮಯ
ಇದೇ ಮೊದಲ ಬಾರಿಗೆ “ಕೀಟವಿಸ್ಮಯ” ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಮಕ್ಕಳಿಗೆ ಮತ್ತು ಕೃಷಿ ಆಸಕ್ತರಿಗೆ ಆಕರ್ಷಣೆಯಾಗಲಿದೆ. ಕೃಷಿಕರಿಗೆ, ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವೈವಿಧ್ಯಮಯ ಕೀಟ ಪ್ರಪಂಚದ ಪರಿಚಯ, ಆಕರ್ಷಕ ಕೀಟಗಳ ಸಜೀವ ಪ್ರದರ್ಶನ, ಕೀಟಗಳ ಮಾದರಿಗಳ ಪ್ರದರ್ಶನ, ಕೀಟಗಳ ಜೀವನಚಕ್ರ, ವಂಶಾಭಿವೃದ್ಧಿ, ವಾಸಸ್ಥಾನ, ಸಾಮಾಜಿಕ ನಡವಳಿಕೆ, ಉಪಯುಕ್ತ ಮತ್ತು ಫಲಪ್ರದ ಕೀಟಗಳ ಪರಿಚಯ, ಇನ್ಸೆಕ್ಟ್÷್ಸಕೆಫೆ (ಆಹಾರವಾಗಿ ಕೀಟ), ಕೃಷಿ ಬೆಳೆಗಳನ್ನು ಬಾಧಿಸುತ್ತಿರುವ ಹಾನಿಕಾರಿಕ ಕೀಟಗಳು, ಹಾನಿಯ ಲಕ್ಷಣ ಹಾಗೂ ನಿರ್ವಹಣಾ ತಾಂತ್ರಿಕತೆಗಳ ಪ್ರದರ್ಶನ, ಕೀಟ ಆಧಾರಿತ ರೋಗ ಚಿಕಿತ್ಸೆ, ವಿಧಿ ವಿಜ್ಞಾನದಲ್ಲಿ ಕೀಟ ಶಾಸ್ತçದ ಬಳಕೆ ಮೊದಲಾದ ವಿಷಯಗಳ ಬಗ್ಗೆ ಪರಿಚಯಿಸಲಾಗುವುದು.
 ಮತ್ಸö್ಯ ಲೋಕ: ಭಾರತೀಯ, ಸ್ಥಳೀಯ ಅಲಂಕಾರಿಕ ಮೀನು, ಭಾರತೀಯ ಗೆಂಡೆ ಮೀನು, ದೇಸಿ – ಪಾರಂಪರಿಕ ಮೀನು ಮರಿಗಳು, ಕರ್ನಾಟಕ ನಾಡ ಮೀನು, ಸಿಹಿ ನೀರು ಮುತ್ತಿನ ಕೃಷಿ ಹಾಗೂ ಸುಧಾರಿತ ಮೀನು ತಳಿಗಳ ಪ್ರದರ್ಶನ ಮತ್ತು ಮಾರಾಟವನ್ನು ಒಳಗೊಂಡಿರುತ್ತದೆ.
ವಿಶೇಷ ಸವಲತ್ತುಗಳು: * ಜಿ.ಕೆ.ವಿ.ಕೆಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಉಚಿತ ಸಾರಿಗೆ ವ್ಯವಸ್ಥೆ. * ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ. * ಉಚಿತ ಪ್ರವೇಶ * ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group