ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಮತ್ತು ಸಮಾವೇಶ ಆಗಸ್ಟ್ 10ರಂದು ಪುತ್ತೂರಿನ ದರ್ಬೆ ಬಳಿಯ ಸುಭದ್ರಾ ಸಭಾಮಂದಿರದಲ್ಲಿ ನಡೆಯಲಿದೆ
ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿ ಅಧ್ಯಕ್ಷತೆ ವಹಿಸಲಿರುವರು
ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿಗಳಾದ ಡಾ. ವೇಣುಗೋಪಾಲ್, 7ಬೀನ್ ಟೀಮ್ ನ ಮುಖ್ಯಸ್ಥರಾದ ಡಾ. ಎಚ್.ಎಸ್. ಧರ್ಮರಾಜ್ ಸಕಲೇಶಪುರ, ಶ್ರೀ ಸಿದ್ಧಿ ಅಗ್ರಿ ಕಂಪನಿ ಪ್ರೈವೇಟ್ ಲಿಮಿಟೆಡ್ ಇಂದೂರಿನ ಪೆರುವೋಡಿ ನಾರಾಯಣ ಭಟ್ ವಿವಿಧ ವಿಷಯ ಮಂಡನೆ ಮಾಡಲಿರುವರು
ಅಡಿಕೆ ಮತ್ತು ಕಾಳುಮೆಣಸು ಕೃಷಿಕ ಸುರೇಶ್ ಬಲ್ನಾಡ್, ಪ್ರಗತಿಪರ ಕಾಳುಮೆಣಸು ಕೃಷಿಕ ಡಾ. ವೇಣುಗೋಪಾಲ ಕಳೇಯತ್ತೋಡಿ, ದೂಪದ ಮರದಲ್ಲಿ ಕಾಳುಮೆಣಸು ಕೃಷಿ ಮಾಡಿದ ಅನಂತ ರಾಮಕೃಷ್ಣ ಪಳ್ಳತ್ತಡ್ಕ, ಅಡಿಕೆ ಮರವೇರುವ ಯಂತ್ರ ಅವಿಷ್ಕರಿಸಿದ ಕೋಮಲೆ ಗಣಪತಿ ಭಟ್, ಅಡಿಕೆ ಮತ್ತು ಕಾಳುಮೆಣಸು ಕೃಷಿಕ ಅರವಿಂದ ಮುಳ್ಳಂಕೊಚ್ಚಿ, ಕಾಳುಮೆಣಸು ಕಸಿ ಕಟ್ಟಿ ಬೆಳೆಸಿದ ಕೃಷಿಕೆ ಶ್ರೀಮತಿ ಸ್ವಪ್ನಾ ಸೇಡಿಯಾಪು ಅತಿಥಿಗಳಾಗಿ ಭಾಗವಹಿಸಲಿರುವರು. ಅಡಿಕೆ,ಕಾಳುಮೆಣಸು,ಕಾಫಿ ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ದಂಪತಿಗಳನ್ನು ಈ ಸಂದರ್ಭಗಳಲ್ಲಿ ಸನ್ಮಾನಿಸಲಾಗುವುದು.