ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗವು ಮೇ 24 ಮತ್ತು 25ರಂದು ಮಂಗಳೂರಿನ ಬಾಳಂ ಭಟ್ ಸಭಾಭವನದಲ್ಲಿ ಹಲಸು ಹಬ್ಬ ಆಯೋಜಿಸಿದೆ. ವೈವಿಧ್ಯಮಯ ತಳಿಯ ಹಲಸು ಪ್ರದರ್ಶನ ಮತ್ತು ಮಾರಾಟ, ಹಲಸಿನ ಖಾದ್ಯಗಳು, ಹಣ್ಣಿನ ಮೌಲ್ಯ ವರ್ಧಿತ ಉತ್ಪನ್ನಗಳು, ಸಿರಿಧಾನ್ಯಗಳು, ದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಈ ಹಲಸು ಹಬ್ಬದಲ್ಲಿ ವಿವಿಧ 9 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.